ಆಸ್ಕರ್ ಅವಾರ್ಡ್ಸ್.. ವಿಶ್ವ ಸಿನಿದುನಿಯಾದಲ್ಲಿ ಚಿತ್ರರಂಗದ ಮಂದಿಗೆ ನೀಡುವ ಅತ್ಯಂತ ಶ್ರೇಷ್ಠವಾದ ಪ್ರಶಸ್ತಿ. ಪ್ರತೀ ವರ್ಷದಂತೆ ಈ ವರ್ಷವೂ ಆಸ್ಕರ್ ಅಕಾಡೆಮಿ ಅವಾರ್ಡ್ ಫಂಕ್ಷನ್ ನಡೆಯಲಿದೆ. ಹೌದು.. 97ನೇ ಆಸ್ಕರ್ ಅವಾರ್ಡ್ ಸೆರಮನಿಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಮಾರ್ಚ್ 3ರಂದು ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 5.30ಕ್ಕೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಬಹಳ ಅದ್ಧೂರಿಯಾಗಿ ನಡೆಯಲಿದೆ.
ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿರೋ ಹಾಲಿವುಡ್ ನ ಡಾಲ್ಬಿ ಥಿಯೇಟರ್ ನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ವಿಶ್ವದ ನೂರಾರು ರಾಷ್ಟ್ರಗಳಿಂದ ನಾಮಿನೇಟ್ ಆಗಿರೋ ಸಿನಿಮಾಗಳು ಪ್ರಶಸ್ತಿಗಳನ್ನ ಪಡೆದುಕೊಳ್ಳಲಿವೆ. ಅಂದಹಾಗೆ ಈ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೋಡಲು ಬಯಸುವವರು ಎಲ್ಲಿ ನೋಡಬಹುದು ಗೊತ್ತಾ..? ಅದಕ್ಕೆ ಗ್ಯಾರಂಟಿ ನ್ಯೂಸ್ ಕೊಡ್ತಿದೆ ಪಕ್ಕಾ ಮಾಹಿತಿ. ಯೆಸ್.. ಸ್ಟಾರ್ ಮೂವೀಸ್, ಸ್ಟಾರ್ ಮೂವೀಸ್ ಸೆಲೆಕ್ಟ್ ವಾಹಿನಿಗಳಲ್ಲಿ ಲೈವ್ ನೋಡುವ ಅವಕಾಶವಿದೆ. ಇನ್ ಕೇಸ್ ಅವೆರಡೂ ಚಾನೆಲ್ ಗಳು ತಮ್ಮ ಮನೆಯಲ್ಲಿ ಬಾರದಿದ್ರೆ, ಮತ್ತೊಂದು ಅವಕಾಶ ಕೂಡ ಇದೆ. ಅದೇ ಜಿಯೋ ಹಾಟ್ ಸ್ಟಾರ್. ಹೌದು.. ಕ್ರಿಕೆಟ್ ರೀತಿ ಜಿಯೋ ಹಾಟ್ ಸ್ಟಾರ್ ನಲ್ಲಿ ಈ ಆಸ್ಕರ್ ಅವಾರ್ಡ್ ಸೆರಮನಿಯನ್ನ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ.
ಕಳೆದ ವರ್ಷ ರಾಜಮೌಳಿ ನಿರ್ದೇಶನದ, ಕೀರವಾಣಿ ಸಂಗೀತ ಸಂಯೋಜನೆಯ, ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜಾ ಜೋಡಿಯ ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಸಾಂಗ್ ಅಸ್ಕರ್ ಅಂಗಳದಲ್ಲಿ ಘಾಟು ಮೂಡಿಸಿತ್ತು. ಈ ಬಾರಿಯೂ ಕೂಡ ಭಾರತದಿಂದ ಒಂದಷ್ಟು ಚಿತ್ರಗಳು ನಾಮಿನೇಟ್ ಆಗಿದ್ದು, ಆ ಪೈಕಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ ಅಹುಜಾ ಅನ್ನೋ ಶಾರ್ಟ್ ಫಿಲ್ಮ್. ಅಂದಹಾಗೆ ಈ ಅಹುಜಾ ಕಿರುಚಿತ್ರ ಲೈವ್ ಆ್ಯಕ್ಷನ್ ಬೇಸ್ಡ್ ಕಥಾನಕ ಹೊಂದಿದ್ದು, ಹಾಲಿವುಡ್ ಸೊಸೆಯಾಗಿರೋ ನಮ್ಮ ಭಾರತೀಯಳಾದ ಪ್ರಿಯಾಂಕಾ ಚೋಪ್ರಾ ಹೋಮ್ ಪ್ರೊಡಕ್ಷನ್ ನಲ್ಲಿ ತಯಾರಾಗಿದೆ.
ಅಲ್ಲದೆ ಸೂರ್ಯ ನಟನೆಯ ಕಂಗುವ, ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ, ಸ್ವತಂತ್ರ್ಯ ವೀರ್ ಸಾವರ್ಕರ್, ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್, ಗರ್ಲ್ಸ್ ವಿಲ್ ಬಿ ಗರ್ಲ್ಸ್, ಬೆಂಗಾಳಿಯ ಪುತುಲ್ ಹೀಗೆ ಸಾಕಷ್ಟು ಭಾರತೀಯ ಚಿತ್ರಗಳು ರೇಸ್ ನಲ್ಲಿ ಸದ್ದು ಮಾಡಿದ್ದವು.