ರಾಕಿಂಗ್ ಸ್ಟಾರ್ ಟಾಕ್ಸಿಕ್‌ನ ಕಣ್ತುಂಬಿಕೊಳ್ಳೋಕೆ ಕಾತರದಿಂದ ಕಾಯ್ತಿದ್ದ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ಯಶ್ ಮತ್ತೊಮ್ಮೆ ಶಾಕ್ ನೀಡಿದ್ದಾರೆ. ಯೆಸ್.. ಒನ್ಸ್ ಅಗೈನ್ ಪೋಸ್ಟ್‌ಪೋನ್ ಆಗಿದೆ ಟಾಕ್ಸಿಕ್ ರಿಲೀಸ್. ಹಾಗಾದ್ರೆ ಜೂನ್ 4ಕ್ಕೆ ಬರ್ತಿಲ್ವಾ ಟಾಕ್ಸಿಕ್ ಅಂದ್ರೆ ನೋ ವೇ.. ಚಾನ್ಸೇ ಇಲ್ಲ. ಅದಕ್ಕೆ ಸೆಲ್ಫ್ ಮೇಡ್ ಶಹಜಾದ ಕೊಟ್ಟ ಉತ್ತರ ಏನು..? ಮತ್ತೆ ಮುಂದೂಡಿದ್ಯಾಕೆ ಅನ್ನೋ ಕ್ಯೂರಿಯಾಸಿಟಿಗೆ ಈ ಸ್ಟೋರಿ ನೋಡಿ.
- ಟಾಕ್ಸಿಕ್ ಮತ್ತೆ ಪೋಸ್ಟ್‌ಪೋನ್.. ಜೂ-4ಕ್ಕಿಲ್ಲ ರಿಲೀಸ್
- ಫ್ಯಾನ್ಸ್‌ಗೆ ಭಾರೀ ನಿರಾಸೆ.. ಪತ್ರ ಬರೆದ ರಾಕಿಂಗ್ ಸ್ಟಾರ್
- ಟಾಕ್ಸಿಕ್ ಗುಣಮಟ್ಟ ಹೆಚ್ಚಿಸೋಕೆ ಸಮಯ ಬೇಕೆಂದ ನಟ
- ಇದು ಭಾರತೀಯ ಚಿತ್ರರಂಗಕ್ಕೆ ಯಶ್ ಕೊಡ್ತಿರೋ ಗಿಫ್ಟ್
ಟಾಕ್ಸಿಕ್ ಟಾಕ್ಸಿಕ್ ಟಾಕ್ಸಿಕ್.. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಬಾರಿ ರಿಲೀಸ್ ಪೋಸ್ಟ್‌ಪೋನ್ ಆಗಿದೆ. ಹೌದು.. ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಗ್ಲೋಬಲ್ ಮಾರ್ಕೆಟ್‌ನಲ್ಲಿ ಸಂಚಲನ ಮೂಡಿಸಿದ್ದು, ಅದ್ಯಾಕೋ ಸಿನಿಮಾ ಬಿಗ್ ಸ್ಕ್ರೀನ್‌ಗೆ ಬರೋಕೆ ಒಳ್ಳೆಯ ಸಮಯ ಕೂಡಿ ಬರ್ತಾನೇ ಇಲ್ಲ. ಕನ್ನಡದಲ್ಲೇ ತಯಾರಾಗಿರೋ ಹಾಲಿವುಡ್ ಶೈಲಿಯ ಸಿನಿಮಾಗೆ ಒನ್ಸ್ ಅಗೈನ್ ಪೋಸ್ಟ್‌ಪೋನ್ ಆಗಿದೆ. ಇದ್ರಿಂದ ಯಶ್ ಫ್ಯಾನ್ಸ್ ಜೊತೆ ಚಿತ್ರಪ್ರೇಮಿಗಳೆಲ್ಲಾ ಭಾರೀ ನಿರಾಸೆಗೊಂಡಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಯಶ್ ಜಂಟಿಯಾಗಿ ನಿರ್ಮಾಣ ಮಾಡಿರೋ ಟಾಕ್ಸಿಕ್, ಸ್ಯಾಂಪಲ್ಸ್‌ನಿಂದ ಹಲ್‌ಚಲ್ ಎಬ್ಬಿಸಿತ್ತು. ಈ ಚಿತ್ರ 2025ರ ಏಪ್ರಿಲ್ 10ರಂದೇ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದ್ರೆ ಮೇಕಿಂಗ್ ತಡವಾದ ಹಿನ್ನೆಲೆ 2026ರ ಮಾರ್ಚ್ 19ಕ್ಕೆ ರಿಲೀಸ್ ಮುಂದೂಡಲಾಗಿತ್ತು. ಆ ನಂತ್ರ ಜೂನ್ 4ಕ್ಕೆ ಮತ್ತೆ ಪೋಸ್ಟ್‌ಪೋನ್ ಆಗಿತ್ತು. ಇದೀಗ ಜೂನ್ 4ಕ್ಕೆ ಕೂಡ ಸಿನಿಮಾ ಬರ್ತಿಲ್ಲ ಅಂದ್ರೆ ನೀವು ನಂಬಲೇಬೇಕು.
ಟಾಕ್ಸಿಕ್ ಬಿಡುಗಡೆ ಮಗದೊಮ್ಮೆ ಮುಂದೂಡಲ್ಪಟ್ಟಿರೋ ವಿಷಯವನ್ನ ಖುದ್ದು ಯಶ್ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ವಿಶೇಷ ಪತ್ರ ಬರೆಯೋ ಮೂಲಕ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಹೌದು.. ಇದು ಬಹುದೊಡ್ಡ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಗ್ಲೋಬಲ್ ಆಡಿಯೆನ್ಸ್‌ಗೆ ತಲುಪಿಸೋ ನಿಟ್ಟಿನಲ್ಲಿ ಒಂದಷ್ಟು ಕೊಲ್ಯಾಬೊರೇಷನ್ಸ್ ಮಾಡಿಕೊಳ್ಳಲಾಗ್ತಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ಅಮೆರಿಕಾದ ಲಾಸ್ ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್ ಗ್ಲೋಬಲ್ ವೇದಿಕೆಯಲ್ಲಿ ಯಶ್ ನಮ್ಮ ಭಾರತವನ್ನ ಪ್ರತಿನಿಧಿಸಿದ್ರು.
ಅಲ್ಲಿ ಟಾಕ್ಸಿಕ್ ಚಿತ್ರದ 10 ನಿಮಿಷದ ವಿಡಿಯೋ ಕೂಡ ಪ್ರದರ್ಶಿಸಲಾಗಿತ್ತು. ನಟ ಯಶ್ ಸಿನಿಮಾದ ಕಾಲಘಟ್ಟ, ಲೊಕೇಷನ್, ಬ್ಯಾಕ್‌ಡ್ರಾಪ್, ಕಥೆ ಸೇರಿದಂತೆ ಸಾಕಷ್ಟು ವಿಷಯಗಳನ್ನ ಮುಕ್ತವಾಗಿ ಹಂಚಿಕೊಂಡಿದ್ರು. ಅಲ್ಲಿ ಅವರಿಗೆ ಆಗ ಸಿಕ್ಕ ಆ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಸಿನಿಮಾನ ದೊಡ್ಡ ಮಟ್ಟದಲ್ಲಿ ನೋಡುಗರಿಗೆ ತಲುಪಿಸೋ ಉಮೇದು ಹೆಚ್ಚಿಸಿದೆ. ಹಾಗಾಗಿಯೇ ಚಿತ್ರದ ಕ್ವಾಲಿಟಿಯನ್ನ ಹೆಚ್ಚಿಸೋಕೆ ಕಾಲಾವಕಾಶ ಬೇಕಿದೆ ಅಂತ ಯಶ್ ಆ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ.. ಇದು ಭಾರತೀಯ ಚಿತ್ರರಂಗಕ್ಕೆ ನನ್ನ ಗಿಫ್ಟ್ ಕೂಡ ಹೌದು ಎಂದಿದ್ದಾರೆ. ನನ್ನ ಮೇಲೆ ಭರವಸೆ ಇಡಿ.. ಇದು ನೀವೆಲ್ಲಾ ಹೆಮ್ಮೆ ಪಡುವಂತಹ ಭಾರತೀಯ ಚಿತ್ರವಾಗಿ ಹೊರಹೊಮ್ಮಲಿದೆ ಅಂತ ಬಹಳ ಆತ್ಮವಿಶ್ವಾಸದಿಂದ ಪೋಸ್ಟ್ ಮೂಲಕ ತಮ್ಮ ಅಭಿಪ್ರಾಯ ಹಾಗೂ ಭಾವನೆಗಳನ್ನ ಹೊರಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಸೋ.. ಸದ್ಯ ಜೂನ್ 4ಕ್ಕೆ ಟಾಕ್ಸಿಕ್ ಬರ್ತಿಲ್ಲ. ಆದಷ್ಟು ಬೇಗ ಹೊಚ್ಚ ಹೊಸ ರಿಲೀಸ್ ಡೇಟ್‌ನ ಯಶ್ ಹಾಗೂ ಕೆವಿಎನ್ ಅನೌನ್ಸ್ ಮಾಡಲಿದ್ದಾರಂತೆ.
- OTT ಡೀಲ್ 110 ಕೋಟಿ.. ಟೀಂ ನಿರೀಕ್ಷೆ 250 ಕೋಟಿ..!!
- ಅರಮನೆ ಕಟ್ಟೋಕೆ ಜಾಸ್ತಿನೇ ಸಮಯ ಬೇಕೆಂದಿದ್ದ ಯಶ್
ಯೆಸ್.. ಮೂಲಗಳ ಪ್ರಕಾರ ಈಗಾಗ್ಲೇ ಟಾಕ್ಸಿಕ್ ಓಟಿಟಿ ರೈಟ್ಸ್ 110 ಕೋಟಿ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿವೆ. ಆದ್ರೆ ಟೀಸರ್‌ಗಳ ರಿಲೀಸ್ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಹಾಲಿವುಡ್‌ನಿಂದ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಚಿತ್ರತಂಡ ಇದೀಗ 250 ಕೋಟಿ ರೂಪಾಯಿ ಬೃಹತ್ ಮೊತ್ತವನ್ನ ಓಟಿಟಿ ಹಕ್ಕುಗಳಿಗಾಗಿ ಡಿಮ್ಯಾಂಡ್ ಮಾಡ್ತಿದೆ ಎನ್ನಲಾಗ್ತಿದೆ.
ಒಂದು ವೇಳೆ 250 ಕೋಟಿ ಡಿಮ್ಯಾಂಡ್ ಮಾಡೋದ್ರಲ್ಲಿ ಟೀಂದು ತಪ್ಪಿಲ್ಲ ಅನಿಸ್ತಿದೆ. ಯಾಕಂದ್ರೆ ಪ್ರಾಡಕ್ಟ್‌ಗೆ ತಕ್ಕನಾದ ರೇಟ್ ಫಿಕ್ಸ್ ಮಾಡೋದ್ರಲ್ಲಿ ತಪ್ಪೇ ಇಲ್ಲ. ಇದಲ್ಲದೆ ಈ ಹಿಂದೆ ಕೆಜಿಎಫ್ ಬಂದಾಗಲೂ ಯಶ್ ಒಂದು ಮಾತು ಹೇಳಿದ್ರು. ಸಾಮಾನ್ಯವಾಗಿ ಮನೆ ಕಟ್ಟೋಕೆ ಅಂದ್ರೇನೇ ಸಮಯ ಹಿಡಿಯುತ್ತೆ. ಅಂಥದ್ರಲ್ಲಿ ಅರಮನೆ ಕಟ್ಟೋಕೆ ಸ್ವಲ್ಪ ಜಾಸ್ತಿನೇ ಕಾಲಾವಕಾಶ ಬೇಕಾಗುತ್ತೆ ಎಂದಿದ್ರು. ಅದರ ಅರ್ಥ ಒಳ್ಳೆಯ ಸಿನಿಮಾ, ಜಗ ಮೆಚ್ಚುವ ಚಿತ್ರ ಮಾಡೋಕೆ ಜಾಸ್ತಿ ಟೈಂ ಬೇಕು ಅನ್ನೋದು. ಟಾಕ್ಸಿಕ್ ವಿಚಾರದಲ್ಲೂ ಅದೇ ಆಗ್ತಿದೆ. ಲೇಟ್ ಆದಷ್ಟೂ ಕಾತುರತೆ ಹೆಚ್ಚಾಗಲಿದೆ. ಅದು ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





