ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಇಂದಿಗೂ ನಟ ಸಲ್ಮಾನ್ ಖಾನ್ ಕಾನೂನು ಸಂಕಷ್ಟದಲ್ಲಿರೋ ವಿಷಯ ಎಲ್ಲರಿಗೂ ತಿಳಿದೇ ಇದೆ. ಅಂಥದ್ರಲ್ಲಿ ರಾಷ್ಟ್ರ ಪಕ್ಷಿಯ ಗರಿಗಳನ್ನ ಕಟ್ಟಿಕೊಂಡು ಮನಬಂದಂತೆ ಕುಣಿದು, ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್‌ಗೋಸ್ಕರ ಹಾಕಿದ್ರೆ ಸುಮ್ನೆ ಬಿಡ್ತಾರೆಯೇ..? ನೋ ವೇ ಚಾನ್ಸೇ ಇಲ್ಲ. ಸದ್ಯ ಬಿಗ್‌ಬಾಸ್ ಸ್ಪರ್ಧಿಗಳಾದ ಕಿಶನ್ ಬಿಳಗಲಿ ನವಿಲುಗರಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದು, ನಟಿ ನಿವೇದಿತಾ ಗೌಡಗೂ ಡ್ರಿಲ್ ಶುರುವಾಗಿದೆ. ಈ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
- ನವಿಲುಗರಿ ಕೇಸ್.. ಕಿಶನ್ ತಪ್ಪೊಪ್ಪಿಗೆ.. ನಿವಿಗೂ ಫುಲ್ ಡ್ರಿಲ್
- ನಿವೇದಿತಾ ಗೌಡ ಕೂಡ ವಿಡಿಯೋ ಮೂಲಕ ಕ್ಷಮೆ ಯಾಚನೆ
- ಸಲ್ಲೂನೇ ಬಿಟ್ಟಿಲ್ಲ.. ಬಿಗ್‌ಬಾಸ್ ಸ್ಟಾರ್ಸ್‌ನ ಬಿಡುತ್ತಾ ಕಾನೂನು?
- ನವಿಲುಗರಿ ಶೋಧದಲ್ಲಿ ಫಾರೆಸ್ಟ್ ಕ್ರೈಂ ಸೆಲ್.. ರೈನ್‌ಲ್ಯಾಂಡ್ ಟ್ರಸ್ಟ್‌ಗೆ ಅಭಿನಂದನೆ
ಅದ್ಯಾಕೋ ಱಪರ್ ಚಂದನ್ ಶೆಟ್ಟಿ ಮಾಜಿ ಪತ್ನಿ ನಿವೇದಿತಾ ಗೌಡ ಟೈಮ್ ಸರಿಯೇ ಹೋಗ್ತಿಲ್ಲ ಅನಿಸ್ತಿದೆ. ಒಂದ್ಕಡೆ ಡಿವೋರ್ಸ್ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಆಡಿಕೊಳ್ಳೋರಿಗೆ ಆಹಾರ ಆಗಿಬಿಟ್ಟಿದ್ರು. ಆದ್ರೀಗ ಅದ್ರಿಂದ ಹೊರಬಂದು ಹೊಸ ಜೀವನ ಆರಂಭಿಸಿದ್ದ ನಿವಿಗೆ ನವಿಲುಗರಿ ಕೇಸ್ ತಗ್ಲಾಕ್ಕೊಂಡಿದೆ. ಹೌದು.. ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಳ್ಳೋದು ಅಂದ್ರೆ ಇದೇ ಅನಿಸುತ್ತೆ. ಸದಾ ಸೋಶಿಯಲ್ ಮೀಡಿಯಾ ಅಟೆನ್ಷನ್ ನಿರೀಕ್ಷಿಸೋ ನಿವೇದಿತಾ, ಅಂಥದ್ದೇ ಒಂದು ಕಾರ್ಯ ಮಾಡಲು ಹೋಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಟ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಮ್ ಡ್ಯಾನ್ಸರ್ ಕಿಶನ್ ಬಿಳಗಲಿ ಕಾನ್ಸೆಪ್ಟ್ ಬೇಸ್ಡ್ ಡ್ಯಾನ್ಸ್ ವಿಡಿಯೋಸ್ ಮಾಡೋದ್ರಲ್ಲಿ ಎತ್ತಿದ ಕೈ. ಪ್ರತೀ ಬಾರಿ ಕಿಶನ್ ಚಿತ್ರರಂಗದ ಒಬ್ಬೊಬ್ಬ ನಟಿಮಣಿಯ ಜೊತೆ ಸ್ಟೆಪ್ ಹಾಕ್ತಾರೆ. ರೊಮ್ಯಾನ್ಸ್ ಮಾಡ್ತಾರೆ. ಈ ಬಾರಿ ನಟಿ ನಿವೇದಿತಾ ಗೌಡರನ್ನ ಆಸರಿಸಿಕೊಂಡಿದ್ರು. ಆದ್ರೆ ಈ ಸಲ ಅವ್ರ ರೀಲ್ಸ್‌ನಲ್ಲಿ ನವಿಲುಗರಿ ಹೊದ್ದುಕೊಂಡ ಕಾಸ್ಟ್ಯೂಮ್ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿತ್ತು. ಅದು ರೈನ್‌ಲ್ಯಾಂಡ್ ಟ್ರಸ್ಟ್‌ನ ಉದಯ್ ಸಾಗರ್ ಕಣ್ಣಿಗೂ ಬಿತ್ತು.
ರಾಷ್ಟ್ರ ಪಕ್ಷಿ ನವಿಲು ಗರಿಗಳಿಂದ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯ್ತು. ಸಾಕಷ್ಟು ಟೀಕೆಗಳು ವ್ಯಕ್ತವಾದವು. ಈ ಹಿನ್ನೆಲೆಯಲ್ಲಿ ಆ್ಯಕ್ಟಿವಿಸ್ಟ್, ಜರ್ನಲಿಸ್ಟ್ ಕೂಡ ಆಗಿರೋ ಉದಯ್ ಸಾಗರ್, ತಮ್ಮ ರೈನ್‌ಲ್ಯಾಂಡ್ ಟ್ರಸ್ಟ್‌ನಿಂದ ಫಾರೆಸ್ಟ್ ಕ್ರೈಂ ಸೆಲ್‌ಗೆ ದೂರು ನೀಡಿದ್ರು. ನವಿಲುಗರಿಗಳ ಮೂಲದ ಬಗ್ಗೆ ತನಿಖೆ ನಡೆಸಿ. ಸೂಕ್ತ ಕ್ರಮ ಜರುಗಿಸಬೇಕು ಅಂತ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ರಾಜ್ಯ ಅರಣ್ಯ ಅಪರಾಧ ನಿಯಂತ್ರಣ ಕೋಶ ಅಂದ್ರೆ ಫಾರೆಸ್ಟ್ ಕ್ರೈಂ ಸೆಲ್‌ನಿಂದ ವಿಚಾರಣೆ ನಡೆಸಿ, ನಂತ್ರ ಅದನ್ನ ಹೆಚ್ಚಿನ ತನಿಖೆಗಾಗಿ ಕಗ್ಗಲಿಪುರ RFOಗೆ ಹಸ್ತಾಂತರಿಸಲಾಗಿದೆ.
ನೋಟಿಸ್ ಪಡೆದಿದ್ದ ನಟ ಕಿಶನ್ ವಿಚಾರಣೆಗೆ ಹಾಜರಾಗಿ, ಆ ನವಿಲುಗರಿಗಳನ್ನ ಫ್ಯಾಷನ್ ಶಾಪ್‌ವೊಂದರಿಂದ ಪಡೆದಿರೋದಾಗಿ ಹೇಳಿ, ತಪ್ಪೊಪ್ಪಿಗೆ ಸ್ಟೇಟ್‌ಮೆಂಟ್ ನೀಡಿದ್ರು. ಅದ್ರ ಬೆನ್ನಲ್ಲಿ ನಿವೇದಿತಾ ಕೂಡ ವಿಚಾರಣೆಗೆ ಬಂದು ಕ್ಷಮೆ ಕೋರಿದ್ದಾರೆ.
ಇನ್ನೂ ಅರಣ್ಯಾಧಿಕಾರಿಗಳು ಆ ಫ್ಯಾಷನ್ ಶಾಪ್ ಮಾಲೀಕರನ್ನೂ ತನಿಖೆ ನಡೆಸಿ, ನವಿಲುಗರಿಗಳ ಮೂಲದ ಜಾಡು ಶೋಧಿಸಲು ಮುಂದಾಗಿದ್ದಾರೆ. ಇದ್ರಿಂದ ಯಾಱರಿಗೆ ಸಂಕಷ್ಟ ಕಾದಿದೆಯೋ ಗೊತ್ತಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಇದ್ದುಕೊಂಡೇ.. ರಾಷ್ಟ್ರಪಕ್ಷಿಯ ರೆಕ್ಕೆ ಪುಕ್ಕಗಳನ್ನೇ ಕಿತ್ತು ಹೀಗೆ ಫ್ಯಾಷನ್, ರೀಲ್ಸ್, ವೀವ್ಸ್‌ಗಾಗಿ ಬಳಸೋ ಇಂತಹ ಅವಿವೇಕಿಗಳನ್ನ ಬಿಟ್ಟುಬಿಟ್ರೆ, ಮುಂದೊಂದು ದಿನ ನವಿಲುಗಳ ಸಂತತಿ ಏನಾಗಬೇಡ ನೀವೇ ಹೇಳಿ. ಇನ್ನೂ ಈ ಬಗ್ಗೆ ಮೊದಲು ಧ್ವನಿ ಎತ್ತಿ, ಕೇಸ್ ಫೈಲ್ ಮಾಡಿದ ಆ್ಯಕ್ಟಿವಿಸ್ಟ್ ಉದಯ್ ಸಾಗರ್ ಹಾಗೂ ರೈನ್‌ಲ್ಯಾಂಡ್ ಟ್ರಸ್ಟ್‌ಗೆ ಜನ ಅಭಿನಂದನೆಗಳನ್ನ ಸಲ್ಲಿಸುತ್ತಿರೋದು ವಿಶೇಷ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





