• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಪತ್ನಿಯಿಂದ ದೂರ, ನಟಿಯರ ಜೊತೆ ಸಂಬಂಧ: ನಾನಾ ಪಾಟೇಕರ್‌ ನಿಜಜೀವನದ ನೋವಿನ ಕಥೆ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 8, 2026 - 2:49 pm
in Flash News, ಸಿನಿಮಾ
0 0
0
Your paragraph text 2026 10 08T144752.348

ಭಾರತೀಯ ಚಿತ್ರರಂಗದ ಅತ್ಯಂತ ವಿಭಿನ್ನ ಹಾಗೂ ಶಕ್ತಿಶಾಲಿ ನಟರಲ್ಲಿ ಒಬ್ಬರಾಗಿದ್ದ ನಾನಾ ಪಾಟೇಕರ್‌ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಕ್ಟೋಬರ್ 8ರ ಮುಂಜಾನೆ ಗೋವಾದ ಡೊನಾ ಪೌಲಾದಲ್ಲಿರುವ ನಿವಾಸದಲ್ಲಿ ಅವರು ಅಸ್ವಸ್ಥರಾಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸುಮಾರು 45 ನಿಮಿಷಗಳ ಕಾಲ CPR ಸೇರಿದಂತೆ ತುರ್ತು ಚಿಕಿತ್ಸೆಯನ್ನು ನೀಡಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಸುಮಾರು 5.20ಕ್ಕೆ ಅವರ ನಿಧನವನ್ನು ದೃಢಪಡಿಸಲಾಯಿತು.

ಆದರೆ ಪರದೆ ಮೇಲೆ ಕಠಿಣ, ಗಂಭೀರ ಹಾಗೂ ಶಕ್ತಿಯುತ ಪಾತ್ರಗಳಿಗೆ ಹೆಸರಾಗಿದ್ದ ನಾನಾ ಪಾಟೇಕರ್‌ ಅವರ ವೈಯಕ್ತಿಕ ಬದುಕು ಕೂಡ ಹಲವು ಏಳು-ಬೀಳುಗಳಿಂದ ಕೂಡಿತ್ತು.

RelatedPosts

ಬೃಂದಾವಿಹಾರಿ: ಅ-10 ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ಪ್ರೀ ರಿಲೀಸ್ ಇವೆಂಟ್

ಕ್ರಾಂತಿವೀರ, ಲೆಫ್ಟಿನೆಂಟ್ ಕರ್ನಲ್, ಪದ್ಮಶ್ರೀ ನಾನಾ ಪಾಟೇಕರ್‌ ವಿಧಿವಶ

ಸರ್ಕಾರಿ ಗೌರವದೊಂದಿಗೆ ನಟ ನಾನಾ ಪಾಟೇಕರ್ ಅಂತ್ಯಕ್ರಿಯೆ; ಮಹಾರಾಷ್ಟ್ರ ಸರ್ಕಾರ ಘೋಷಣೆ

‘ಭಾವಾಂತರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ತನ್ವಿ ರಾವ್

ADVERTISEMENT
ADVERTISEMENT
ತಂದೆಯ ಸಾವು, ಬಾಲ್ಯದ ಕಷ್ಟ

ನಾನಾ ಪಾಟೇಕರ್ ಅವರ ಮೂಲ ಹೆಸರು ವಿಶ್ವನಾಥ ಪಾಟೇಕರ್. ಮಹಾರಾಷ್ಟ್ರದ ಮುರುದ್-ಜಂಜೀರಾದಲ್ಲಿ ಜನಿಸಿದ ಅವರು ಬಾಲ್ಯದಲ್ಲೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದರು. ತಂದೆಯ ಅಗಲಿಕೆ ಅವರ ಜೀವನದ ದೊಡ್ಡ ಆಘಾತವಾಗಿತ್ತು. ನಾಟಕಗಳ ಮೇಲಿನ ಆಸಕ್ತಿಯಿದ್ದ ಅವರ ತಂದೆಯೇ ನಾನಾ ಅವರಲ್ಲಿ ಅಭಿನಯದ ಆಸಕ್ತಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಂತರ ನಾನಾ ಅವರ ತಾಯಿ ನಿರ್ಮಲಾ ಪಾಟೇಕರ್ ಅವರ ಜೀವನದಲ್ಲಿ ಅತ್ಯಂತ ಆಪ್ತ ವ್ಯಕ್ತಿಯಾಗಿದ್ದರು. 2019ರಲ್ಲಿ 99ನೇ ವಯಸ್ಸಿನಲ್ಲಿ ಅವರು ನಿಧನರಾದರು.

ಪತ್ನಿಯಿಂದ ಪ್ರತ್ಯೇಕ ಜೀವನ

1978ರಲ್ಲಿ ನಾನಾ ಪಾಟೇಕರ್‌ ನೀಲಕಾಂತಿ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು—ದುರ್ವಾಸ ಮತ್ತು ಮಲ್ಹಾರ್. ದುರ್ವಾಸ ಕೇವಲ ಎರಡು ವರ್ಷ ವಯಸ್ಸಿನಲ್ಲೇ ಅನಾರೋಗ್ಯದಿಂದ ಮೃತಪಟ್ಟರು. ಮಗನನ್ನು ಕಳೆದುಕೊಂಡ ನೋವು ನಾನಾ ಅವರ ಬದುಕಿನ ಅತ್ಯಂತ ಕಠಿಣ ಘಟನೆಗಳಲ್ಲಿ ಒಂದಾಗಿತ್ತು.

ನಾನಾ ಮತ್ತು ನೀಲಕಾಂತಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ವರದಿಗಳಿವೆ. ಆದರೆ ಇಬ್ಬರೂ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿರಲಿಲ್ಲ ಎಂದು ವರದಿಗಳು ತಿಳಿಸಿವೆ.

ನಟಿಯರ ಜೊತೆ ಸಂಬಂಧದ ಚರ್ಚೆ

ನಾನಾ ಪಾಟೇಕರ್ ಅವರ ವೈಯಕ್ತಿಕ ಜೀವನದಲ್ಲಿ ಕೆಲವು ನಟಿಯರ ಹೆಸರುಗಳೂ ಸುದ್ದಿಯಾಗಿದ್ದವು. ವಿಶೇಷವಾಗಿ ಮನಿಷಾ ಕೊಯಿರಾಲಾ ಅವರೊಂದಿಗೆ ಅವರ ಸಂಬಂಧದ ಬಗ್ಗೆ ಹಲವು ವರ್ಷಗಳಿಂದ ವರದಿಗಳು ಪ್ರಕಟವಾಗಿವೆ. ಆಯೆಷಾ ಝುಲ್ಕಾ ಅವರೊಂದಿಗೂ ಸಂಬಂಧವಿತ್ತು ಎಂಬ ವರದಿಗಳು ಹರಿದಾಡುತ್ತಿದ್ದವು. ಆದರೆ ತಮ್ಮ ವೈಯಕ್ತಿಕ ಸಂಬಂಧಗಳ ಬಗ್ಗೆ ಅವರು ಎಂದೂ ಬಹಿರಂಗವಾಗಿ ಮಾತನಾಡಲಿಲ್ಲ. ಎರಡನೇ ಮದುವೆಯೂ ಆಗಲಿಲ್ಲ.

ಧೂಮಪಾನ ತ್ಯಜಿಸಿದ್ದ ನಾನಾ

ಒಂದು ಕಾಲದಲ್ಲಿ ನಾನಾ ಪಾಟೇಕರ್‌ ಚೈನ್ ಸ್ಮೋಕರ್ ಆಗಿದ್ದರು. ಆದರೆ ತಮ್ಮ 56ನೇ ವಯಸ್ಸಿನಲ್ಲಿ ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು ಎಂದು ಕೆಲ ವರದಿಗಳು ತಿಳಿಸುತ್ತವೆ.

ಸಿನಿಮಾಗಿಂತ ಹೊರಗೂ ಸೈನಿಕನ ನಂಟು

ನಾನಾ ಪಾಟೇಕರ್ ಅವರ ಜೀವನದ ಮತ್ತೊಂದು ಅಪರೂಪದ ಅಧ್ಯಾಯ ಭಾರತೀಯ ಸೇನೆಯೊಂದಿಗಿನ ಅವರ ನಂಟು. ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಚಿತ್ರಕ್ಕಾಗಿ ಅವರು ಸುದೀರ್ಘ ಸೈನಿಕ ತರಬೇತಿ ಪಡೆದಿದ್ದರು. ಬಳಿಕ ಟೆರಿಟೋರಿಯಲ್ ಆರ್ಮಿಯೊಂದಿಗೂ ಅವರು ಸೇವಾ ನಂಟು ಹೊಂದಿದ್ದರು.

1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ವಿಶೇಷ ಅನುಮತಿಯೊಂದಿಗೆ ಭಾರತೀಯ ಸೈನಿಕರೊಂದಿಗೆ ಯುದ್ಧಭೂಮಿ ಪ್ರದೇಶದಲ್ಲಿ ಸಮಯ ಕಳೆದಿದ್ದರು. ಈ ಅವಧಿಯಲ್ಲಿ ಸೈನಿಕರೊಂದಿಗೆ ಇದ್ದು ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾಗಿ ವರದಿಗಳಿವೆ. ನಂತರ ಅವರು ಟೆರಿಟೋರಿಯಲ್ ಆರ್ಮಿಯಿಂದ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿ ನಿವೃತ್ತರಾದರು.

‘ಗಮನ್’ನಿಂದ ದಿಗ್ಗಜ ನಟನಾಗುವವರೆಗೆ

1978ರ ‘ಗಮನ್’ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ನಾನಾ ಪಾಟೇಕರ್‌, ‘ಪರಿಂಡಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ಖಾಮೋಶಿ’, ‘ಅಬ್ ತಕ್ ಛಪ್ಪನ್’, ‘ಅಪಹರಣ್’, ‘ರಾಜನೀತಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಮರೆಯಲಾಗದ ಅಭಿನಯ ನೀಡಿದರು. ‘ವೆಲ್ಕಮ್’ ಮತ್ತು ‘ವೆಲ್ಕಮ್ ಬ್ಯಾಕ್’ ಸಿನಿಮಾಗಳಲ್ಲಿನ ಉದಯ್ ಶೆಟ್ಟಿ ಪಾತ್ರದ ಮೂಲಕ ಹಾಸ್ಯದಲ್ಲೂ ತಮ್ಮದೇ ಛಾಪು ಮೂಡಿಸಿದರು.

ಅವರಿಗೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದ್ದವು. 2013ರಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿತ್ತು.

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 10 08T151911.705

ಬೃಂದಾವಿಹಾರಿ: ಅ-10 ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ಪ್ರೀ ರಿಲೀಸ್ ಇವೆಂಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 8, 2026 - 3:23 pm
0

Your paragraph text 2026 10 08T144752.348

ಪತ್ನಿಯಿಂದ ದೂರ, ನಟಿಯರ ಜೊತೆ ಸಂಬಂಧ: ನಾನಾ ಪಾಟೇಕರ್‌ ನಿಜಜೀವನದ ನೋವಿನ ಕಥೆ!

by ಶಾಲಿನಿ ಕೆ. ಡಿ
October 8, 2026 - 2:49 pm
0

Your paragraph text 2026 10 08T141650.240

ಕ್ರಾಂತಿವೀರ, ಲೆಫ್ಟಿನೆಂಟ್ ಕರ್ನಲ್, ಪದ್ಮಶ್ರೀ ನಾನಾ ಪಾಟೇಕರ್‌ ವಿಧಿವಶ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 8, 2026 - 2:18 pm
0

Your paragraph text 2026 10 08T133731.222

ಆಪತ್ಬಾಂಧವ NDRF ಯೋಧರ ಮಾನಸಿಕ ಆರೋಗ್ಯಕ್ಕಾಗಿ ‘ಪ್ರಾಜೆಕ್ಟ್ ನಿರ್ಮಲ್’ ಜಾರಿ, ಏನಿದು ಯೋಜನೆ?

by ಶಾಲಿನಿ ಕೆ. ಡಿ
October 8, 2026 - 1:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 08T124535.197
    ದರ್ಶನ್‌ಗೆ ಮತ್ತೆ ಶಾಕ್: ಪ್ರದೋಶ್ ಮಾಫಿ ಸಾಕ್ಷಿ ತಡೆಯುವ ಯತ್ನ ವಿಫಲ, ಸುಪ್ರೀಂನಲ್ಲೂ ಅರ್ಜಿ ವಜಾ
    October 8, 2026 | 0
  • Untitled design 2026 10 08T092722.226
    ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; ಗರ್ಭಿಣಿ ಸೇರಿ ಮೂವರು ಸಾವು, 8 ಜನರಿಗೆ ಗಾಯ
    October 8, 2026 | 0
  • Untitled design 2026 10 08T080056.975
    17,000 ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ಮುಂಭಾಗ ಜಖಂ
    October 8, 2026 | 0
  • Your paragraph text 2026 10 07T183709.173
    ದೆಹಲಿಯಲ್ಲಿ 5 ಅಡಿ ಅಂತಸ್ತಿನ ಕಟ್ಟಡ ಕುಸಿತ; ಹಲವರು ಸಿಲುಕಿರುವ ಶಂಕೆ
    October 7, 2026 | 0
  • Your paragraph text 2026 10 07T180503.171
    ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾದ ಹೆನ್ರಿ ಕಗನ್, ಕೆನ್ಸೊ ಸೊವಾಯಿ
    October 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version