• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕ್ರಾಂತಿವೀರ, ಲೆಫ್ಟಿನೆಂಟ್ ಕರ್ನಲ್, ಪದ್ಮಶ್ರೀ ನಾನಾ ಪಾಟೇಕರ್‌ ವಿಧಿವಶ

90% ಹಣ ರೈತರಿಗೆ ದೇಣಿಗೆ.. 4 ಬರಪೀಡಿತ ಹಳ್ಳಿಗಳ ದತ್ತು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 8, 2026 - 2:18 pm
in ಸಿನಿಮಾ
0 0
0
Your paragraph text 2026 10 08T141650.240

ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಹಾಗೂ ಮೋಸ್ಟ್ ವರ್ಸಟೈಲ್ ಆ್ಯಕ್ಟರ್.. ಲೆಫ್ಟಿನೆಂಟ್ ಕರ್ನಲ್.. ಪದ್ಮಶ್ರೀ ಪುರಸ್ಕೃತ ನಾನಾ ಪಾಟೇಕರ್‌ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಬಹುದೊಡ್ಡ ದೇಶಪ್ರೇಮಿ, ಅಷ್ಟೇ ಸರಳ ಜೀವಿ ಕೂಡ ಆಗಿದ್ದ ಬಾಲಿವುಡ್ ಲೆಜೆಂಡ್‌ಗೆ ಏನಾಗಿತ್ತು..? ಕನ್ನಡ ಚಿತ್ರರಂಗದ ಜೊತೆ ಅವರ ನಂಟೇನು..? ಕಾರ್ಗಿಲ್ ಯುದ್ಧ, ಹಳ್ಳಿಗಳ ದೇಣಿಗೆ, ರೈತರಿಗೆ ನೆರವು, ನಾಮ್ ಫೌಂಡೇಶನ್ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.

  • ಕ್ರಾಂತಿವೀರ, ಲೆಫ್ಟಿನೆಂಟ್ ಕರ್ನಲ್, ಪದ್ಮಶ್ರೀ ನಾನಾ ವಿಧಿವಶ
  • 90% ಹಣ ರೈತರಿಗೆ ದೇಣಿಗೆ.. 4 ಬರಪೀಡಿತ ಹಳ್ಳಿಗಳ ದತ್ತು..!
  • ನಾಮ್ ಫೌಂಡೇಶನ್‌‌..  ಐ ಕೇರ್ ಐ ಸಪೋರ್ಟ್ ಅಭಿಯಾನ
  • ಹಿಂದಿ-ಮರಾಠಿ ಚಿತ್ರರಂಗದ ಲೆಜೆಂಡ್.. ಕನ್ನಡದಲ್ಲೂ ನಟಿಸಿದ್ರು

75 ವರ್ಷದ ಹಿರಿಯ ಹಾಗೂ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ನಾನಾ ಪಾಟೇಕರ್ ಯುಗಾಂತ್ಯವಾಗಿದೆ. ಹೌದು.. ಗೋವಾದ ಪಣಜಿ ಬಳಿ ಇರೋ ಡೋನಾ ಪೌಲಾದ ತಮ್ಮ ಫ್ಲ್ಯಾಟ್‌‌‌ನಲ್ಲಿ ಇಂದು ಮುಂಜಾನೆ 5.20ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯ್ತು.. ಆದ್ರೆ ಜವರಾಯ ಅಷ್ಟರಲ್ಲಾಗಲೇ ತಮ್ಮ ದರ್ಪವನ್ನ ಈ ಮಾನವತಾವಾದಿ, ರಾಷ್ಟ್ರಪ್ರೇಮಿ ಮೇಲೆ ತೋರಿ ಆಗಿತ್ತು. ಹಾಗಾಗಿ ಇಹಲೋಕ ತ್ಯಜಿಸೋ ಮೂಲಕ ಬಾರದೂರಿಗೆ ಪಯಣ ಬೆಳೆಸಿದ್ದಾರೆ ಭಾರತೀಯ ಚಿತ್ರರಂಗದ ಕಂಡ ಲೆಜೆಂಡ್ ನಾನಾ ಪಾಟೇಕರ್.

RelatedPosts

ಪತ್ನಿಯಿಂದ ದೂರ, ನಟಿಯರ ಜೊತೆ ಸಂಬಂಧ: ನಾನಾ ಪಾಟೇಕರ್‌ ನಿಜಜೀವನದ ನೋವಿನ ಕಥೆ!

ಸರ್ಕಾರಿ ಗೌರವದೊಂದಿಗೆ ನಟ ನಾನಾ ಪಾಟೇಕರ್ ಅಂತ್ಯಕ್ರಿಯೆ; ಮಹಾರಾಷ್ಟ್ರ ಸರ್ಕಾರ ಘೋಷಣೆ

‘ಭಾವಾಂತರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ತನ್ವಿ ರಾವ್

ದರ್ಶನ್‌ಗೆ ಮತ್ತೆ ಶಾಕ್: ಪ್ರದೋಶ್ ಮಾಫಿ ಸಾಕ್ಷಿ ತಡೆಯುವ ಯತ್ನ ವಿಫಲ, ಸುಪ್ರೀಂನಲ್ಲೂ ಅರ್ಜಿ ವಜಾ

ADVERTISEMENT
ADVERTISEMENT

ಹಿಂದಿ ಹಾಗೂ ಮರಾಠಿ ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದ ನಾನಾ ಪಾಟೇಕರ್ ನಮ್ಮ ಸೌತ್‌ಗೂ ಚಿರಪರಿಚಿತರು. ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಲೀಲಾಜಾಲವಾಗಿ ಅದಕ್ಕೆ ಜೀವ ತುಂಬುತ್ತಿದ್ದರು. ಅದರಲ್ಲೂ ಸಹಜ ಹಾಗೂ ಸ್ವಾಭಾವಿಕ ನಟನೆಯಿಂದ ಗುರ್ತಿಸಿಕೊಂಡಿದ್ದ ನಾನಾಜೀ.. ಬರೀ ನಟನೆಗಷ್ಟೇ ಸೀಮಿತ ಆಗಿರಲಿಲ್ಲ. ಒಳ್ಳೆಯ ಬರಹಗಾರ, ನಿರ್ಮಾಪಕರೂ ಹೌದು.

ಅಂದಹಾಗೆ ನಾನಾ ಪಾಟೇಕರ್ ಅಗಲಿಕೆಗೆ ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಸಂತಾಪ ಸೂಚಿಸುತ್ತಿದ್ದಾರೆ. ಅದಕ್ಕೆ ಅವರು ಚಿತ್ರರಂಗಕ್ಕಾಗಿ ಸಲ್ಲಿಸಿದ ಸೇವೆಗಾಗಿ ಅಷ್ಟೇ ಅಲ್ಲ. ನಾನಾ ಪಾಟೇಕರ್ ಅಪ್ಪಟ ದೇಶಪ್ರೇಮಿ. ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಕೂಡ ಹೌದು.

1999ರ ಕಾರ್ಗಿಲ್ ಯುದ್ಧದಲ್ಲಿ ದೇಶ ಸೇವೆ ಮಾಡಿದ್ದಾರೆ ನಾನಾಜೀ. ಹೌದು.. LOCನಲ್ಲಿ ರಿಯಲ್ ಯೋಧರ ಜೊತೆ ತಾನೂ ಕೂಡ ಶತ್ರುಗಳ ಜೊತೆ ಕಾದಾಡಿದ್ದಾರೆ, ಹೋರಾಡಿದ್ದಾರೆ. ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಟ ನಾನಾ ಪಾಟೇಕರ್ ಸೇನೆ ಸೇರೋಕೆ ನೋ ಅಂದಿದ್ರಂತೆ. ಆದ್ರೆ ಅವರು ಪ್ರಹಾರ್ ಸಿನಿಮಾಗಾಗಿ ಬರೋಬ್ಬರಿ 3 ವರ್ಷಗಳ ಕಾಲ ಮರಾಠ ಲೈಟ್ ಇನ್‌‌ಫೆಂಟ್ರಿಯಲ್ಲಿ ಆರ್ಮಿ ಜೊತೆ ತರಬೇತಿ ಪಡೆದಿದ್ದರು. ಅದನ್ನೇ ರೀಸನ್ ಕೊಟ್ಟು ಕೊನೆಗೂ ಭಾರತ-ಪಾಕ್ LOC ಗಡಿಯಲ್ಲಿ ಕೆಲಸ ಮಾಡಿದ್ರು. ಯೋಧರ ಜೊತೆ ಬಂದೂಕು ಹಿಡಿದು ಗಡಿ ಕಾದಿದ್ದಾರೆ. ಬೇಸ್ ಆಸ್ಪತ್ರೆಯಲ್ಲೂ ಎರಡ್ಮೂರು ವಾರಗಳ ಕಾಲ ಕೆಲಸ ಮಾಡಿ ಭೇಷ್ ಅನಿಸಿಕೊಂಡಿದ್ರು.

ಅದಾದ ಬಳಿಕ ಅವರು ದೇಶಪ್ರೇಮ ಹೆಚ್ಚಿಸೋ ಅಂತಹ ಪೇಟ್ರಿಯಾಟಿಕ್ ಮೂವಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ರು. ಅಂದಹಾಗೆ ನಮ್ಮ ಕನ್ನಡಿಗರಿಗೂ ಚಿರಪರಿಚಿತ ಈ ಬಾಲಿವುಡ್ ನಾನಾಜೀ. ಯಾಕಂದ್ರೆ  2010ರಲ್ಲಿ ತೆರೆಕಂಡ ಲೂಸ್‌ಮಾದ ಯೋಗಿ ನಟನೆಯ ಯಕ್ಷ ಚಿತ್ರದಲ್ಲಿ ಯೋಗೇಶ್ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಿದ್ರು. ಮಕ್ಕಳನ್ನ ಎಷ್ಟು ಶಿಸ್ತಾಗಿ ಬೆಳೆಸಬೇಕು ಅನ್ನೋದನ್ನ ಆ ಪಾತ್ರದ ಮೂಲಕ ಪ್ರೇಕ್ಷಕರಿಗೆ ಮನದಟ್ಟು ಮಾಡಿದ್ರು.

ಪರಿಂದಾ, ಕ್ರಾಂತಿವೀರ್, ನಟಸಾಮ್ರಾಟ್, ಪ್ರಹಾರ್, ಅಗ್ನಿಸಾಕ್ಷಿ ನಾನಾ ಪಾಟೇಕರ್ ನಟನೆಯ ಎವರ್‌‌ಗ್ರೀನ್ ಸಿನಿಮಾಗಳು. ಅವರ ಕಲಾ ಸೇವೆಗೆ 2013ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದ್ದು ವಿಶೇಷ. ನಾನಾಜೀ ಮನೋಜ್ಞ ಅಭಿನಯಕ್ಕೆ ಒಂದಲ್ಲ ಎರಡಲ್ಲ ಮೂರು ನ್ಯಾಷನಲ್ ಅವಾರ್ಡ್ಸ್‌, 4 ಫಿಲ್ಮ್ ಫೇರ್ ಹಾಗೂ ಎರಡು ಬಾರಿ ಮಹಾರಾಷ್ಟ್ರ ಸ್ಟೇಟ್ ಫಿಲ್ಮ್ ಅವಾರ್ಡ್‌‌ಗಳು ಕೂಡ ಲಭಿಸಿವೆ. ನಟ ರಜನಿಕಾಂತ್ ಜೊತೆ ಕಾಲಾ ಸಿನಿಮಾದಲ್ಲಿ ಖಡಕ್ ಖಳನಾಯಕನಾಗಿಯೂ ಬಣ್ಣ ಹಚ್ಚಿದ್ರು. ಹಾಗಾಗಿಯೇ ತಲೈವಾ ಅವರ ಬಗ್ಗೆ ಒಂದು ಪೋಸ್ಟ್ ಕೂಡ ಹಾಕಿದ್ದಾರೆ.

  • ಸೂಕ್ಷ್ಮ ಹಾಗೂ ಸಂವೇದನಾಶೀಲ ವ್ಯಕ್ತಿ ನಾನಾ ಪಾಟೇಕರ್
  • ಗ್ರಾಮೀಣ ಜನತೆ ಹಾಗೂ ರೈತರಿಗಾಗಿ ಮಿಡಿದಿದ್ದ ಜೀವವದು

ಯೆಸ್.. ನಾನಾ ಪಾಟೇಕರ್ ತಮ್ಮ ಸಿನಿಮಾಗಳಲ್ಲಿ ದುಡಿದ ರೆಮ್ಯುನರೇಷನ್ ಹಣವನ್ನೆಲ್ಲಾ ಸಮಾಜ ಸೇವೆಗಾಗಿಯೇ ಮುಡಿಪಾಗಿಟ್ಟವರು. ದುಡಿದ ಸುಮಾರು 90 ಪರ್ಸೆಂಟ್ ಹಣವನ್ನ ಗ್ರಾಮೀಣ ಪ್ರದೇಶದ ಜನ ಹಾಗೂ ಸಂಕಷ್ಟದಲ್ಲಿರೋ ರೈತರಿಗಾಗಿಯೇ ಮೀಸಲಿಟ್ಟವರು. ನಾಮ್ ಫೌಂಡೇಶನ್ ಅನ್ನೋ ಸಂಸ್ಥೆ ಕಟ್ಟಿ, ಆ ಮೂಲಕ ಕಡು ಬಡತನದಲ್ಲಿರೋ ಹಾಗೂ ಬರಪೀಡಿತ ಹಳ್ಳಿಗಳನ್ನ ದತ್ತು ಪಡೆದು, ಐ ಕೇರ್ ಐ ಸಪೋರ್ಟ್ ಅನ್ನೋ ಅಭಿಯಾನದ ಮೂಲಕ ಅವ್ರ ಬೆನ್ನೆಲುಬಾಗಿ ನಿಂತವರು.

ಅದೆಷ್ಟೋ ಮಂದಿ ರೈತ ಕುಟುಂಬಗಳು ಇಂದು ಜೀವಂತವಾಗಿ ಇರೋಕೆ ಕಾರಣೀಭೂತರಾಗಿರೋ ನಾನಾ ಪಾಟೇಕರ್.. ತಮಗೆ ಬಂದ ಅವಾರ್ಡ್‌‌ಗಳ ಹಣ ಕೂಡ ರೈತರಿಗಾಗಿಯೇ ನೀಡುತ್ತಿದ್ದರು. ಕೃತಕತೆಯೇ ತುಂಬಿರೋ ಈ ಸಿನಿಮಾ ಜಗತ್ತಿನಲ್ಲಿ ನೀತಿ, ನಿಜಾಯ್ತಿಯಿಂದ ಬದುಕಿದ ಮಹಾನ್ ಕಲಾವಿದ.. ಅಪ್ಪಟ ಮನುಷ್ಯ ಈ ನಾನಾ ಪಾಟೇಕರ್. ಅವರ ನಡೆ, ನುಡಿ, ಆಚಾರ, ಬದುಕು, ಕಲೆ, ಆದರ್ಶಗಳು, ಸಮಾಜಸೇವೆ ಎಲ್ಲವೂ ವರ್ಣನಾತೀತ. ಇಂತಹ ಮಹಾನ್ ವ್ಯಕ್ತಿ ಹಾಗೂ ಚಿತ್ರರಂಗದ ಶಕ್ತಿ ಇನ್ನಿಲ್ಲ ಅನ್ನೋದು ನಿಜಕ್ಕೂ ದೇಶಕ್ಕೆ ತುಂಬಲಾರದ ನಷ್ಟ. ಈ ಶ್ರೇಷ್ಠ ವ್ಯಕ್ತಿತ್ವಕ್ಕೆ ಶಾಂತಿ ಸಿಗಲಿ.. ಅವರ ಅಗಲಿಕೆ ನೋವನ್ನ ಭರಿಸೋ ಶಕ್ತಿ ಭಗವಂತ ಅವ್ರ ಕುಟುಂಬಕ್ಕೆ ದಯಪಾಲಿಸಲಿ ಅಂತ ಪ್ರಾರ್ಥಿಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 10 08T144752.348

ಪತ್ನಿಯಿಂದ ದೂರ, ನಟಿಯರ ಜೊತೆ ಸಂಬಂಧ: ನಾನಾ ಪಾಟೇಕರ್‌ ನಿಜಜೀವನದ ನೋವಿನ ಕಥೆ!

by ಶಾಲಿನಿ ಕೆ. ಡಿ
October 8, 2026 - 2:49 pm
0

Your paragraph text 2026 10 08T141650.240

ಕ್ರಾಂತಿವೀರ, ಲೆಫ್ಟಿನೆಂಟ್ ಕರ್ನಲ್, ಪದ್ಮಶ್ರೀ ನಾನಾ ಪಾಟೇಕರ್‌ ವಿಧಿವಶ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 8, 2026 - 2:18 pm
0

Your paragraph text 2026 10 08T133731.222

ಆಪತ್ಬಾಂಧವ NDRF ಯೋಧರ ಮಾನಸಿಕ ಆರೋಗ್ಯಕ್ಕಾಗಿ ‘ಪ್ರಾಜೆಕ್ಟ್ ನಿರ್ಮಲ್’ ಜಾರಿ, ಏನಿದು ಯೋಜನೆ?

by ಶಾಲಿನಿ ಕೆ. ಡಿ
October 8, 2026 - 1:42 pm
0

Your paragraph text 2026 10 08T132322.237

ಸರ್ಕಾರಿ ಗೌರವದೊಂದಿಗೆ ನಟ ನಾನಾ ಪಾಟೇಕರ್ ಅಂತ್ಯಕ್ರಿಯೆ; ಮಹಾರಾಷ್ಟ್ರ ಸರ್ಕಾರ ಘೋಷಣೆ

by ಶಾಲಿನಿ ಕೆ. ಡಿ
October 8, 2026 - 1:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 08T144752.348
    ಪತ್ನಿಯಿಂದ ದೂರ, ನಟಿಯರ ಜೊತೆ ಸಂಬಂಧ: ನಾನಾ ಪಾಟೇಕರ್‌ ನಿಜಜೀವನದ ನೋವಿನ ಕಥೆ!
    October 8, 2026 | 0
  • Your paragraph text 2026 10 08T132322.237
    ಸರ್ಕಾರಿ ಗೌರವದೊಂದಿಗೆ ನಟ ನಾನಾ ಪಾಟೇಕರ್ ಅಂತ್ಯಕ್ರಿಯೆ; ಮಹಾರಾಷ್ಟ್ರ ಸರ್ಕಾರ ಘೋಷಣೆ
    October 8, 2026 | 0
  • Your paragraph text 2026 10 08T131120.199
    ‘ಭಾವಾಂತರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ತನ್ವಿ ರಾವ್
    October 8, 2026 | 0
  • Your paragraph text 2026 10 08T124535.197
    ದರ್ಶನ್‌ಗೆ ಮತ್ತೆ ಶಾಕ್: ಪ್ರದೋಶ್ ಮಾಫಿ ಸಾಕ್ಷಿ ತಡೆಯುವ ಯತ್ನ ವಿಫಲ, ಸುಪ್ರೀಂನಲ್ಲೂ ಅರ್ಜಿ ವಜಾ
    October 8, 2026 | 0
  • Your paragraph text 2026 10 08T111410.350
    ಕನ್ನಡದ ‘ಯಕ್ಷ’ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ದಿಗ್ಗಜ ನಾನಾ ಪಾಟೇಕರ್
    October 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version