ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಹಾಗೂ ಮೋಸ್ಟ್ ವರ್ಸಟೈಲ್ ಆ್ಯಕ್ಟರ್.. ಲೆಫ್ಟಿನೆಂಟ್ ಕರ್ನಲ್.. ಪದ್ಮಶ್ರೀ ಪುರಸ್ಕೃತ ನಾನಾ ಪಾಟೇಕರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಬಹುದೊಡ್ಡ ದೇಶಪ್ರೇಮಿ, ಅಷ್ಟೇ ಸರಳ ಜೀವಿ ಕೂಡ ಆಗಿದ್ದ ಬಾಲಿವುಡ್ ಲೆಜೆಂಡ್‌ಗೆ ಏನಾಗಿತ್ತು..? ಕನ್ನಡ ಚಿತ್ರರಂಗದ ಜೊತೆ ಅವರ ನಂಟೇನು..? ಕಾರ್ಗಿಲ್ ಯುದ್ಧ, ಹಳ್ಳಿಗಳ ದೇಣಿಗೆ, ರೈತರಿಗೆ ನೆರವು, ನಾಮ್ ಫೌಂಡೇಶನ್ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
- ಕ್ರಾಂತಿವೀರ, ಲೆಫ್ಟಿನೆಂಟ್ ಕರ್ನಲ್, ಪದ್ಮಶ್ರೀ ನಾನಾ ವಿಧಿವಶ
- 90% ಹಣ ರೈತರಿಗೆ ದೇಣಿಗೆ.. 4 ಬರಪೀಡಿತ ಹಳ್ಳಿಗಳ ದತ್ತು..!
- ನಾಮ್ ಫೌಂಡೇಶನ್.. ಐ ಕೇರ್ ಐ ಸಪೋರ್ಟ್ ಅಭಿಯಾನ
- ಹಿಂದಿ-ಮರಾಠಿ ಚಿತ್ರರಂಗದ ಲೆಜೆಂಡ್.. ಕನ್ನಡದಲ್ಲೂ ನಟಿಸಿದ್ರು
75 ವರ್ಷದ ಹಿರಿಯ ಹಾಗೂ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ನಾನಾ ಪಾಟೇಕರ್ ಯುಗಾಂತ್ಯವಾಗಿದೆ. ಹೌದು.. ಗೋವಾದ ಪಣಜಿ ಬಳಿ ಇರೋ ಡೋನಾ ಪೌಲಾದ ತಮ್ಮ ಫ್ಲ್ಯಾಟ್‌ನಲ್ಲಿ ಇಂದು ಮುಂಜಾನೆ 5.20ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯ್ತು.. ಆದ್ರೆ ಜವರಾಯ ಅಷ್ಟರಲ್ಲಾಗಲೇ ತಮ್ಮ ದರ್ಪವನ್ನ ಈ ಮಾನವತಾವಾದಿ, ರಾಷ್ಟ್ರಪ್ರೇಮಿ ಮೇಲೆ ತೋರಿ ಆಗಿತ್ತು. ಹಾಗಾಗಿ ಇಹಲೋಕ ತ್ಯಜಿಸೋ ಮೂಲಕ ಬಾರದೂರಿಗೆ ಪಯಣ ಬೆಳೆಸಿದ್ದಾರೆ ಭಾರತೀಯ ಚಿತ್ರರಂಗದ ಕಂಡ ಲೆಜೆಂಡ್ ನಾನಾ ಪಾಟೇಕರ್.
ಹಿಂದಿ ಹಾಗೂ ಮರಾಠಿ ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದ ನಾನಾ ಪಾಟೇಕರ್ ನಮ್ಮ ಸೌತ್‌ಗೂ ಚಿರಪರಿಚಿತರು. ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಲೀಲಾಜಾಲವಾಗಿ ಅದಕ್ಕೆ ಜೀವ ತುಂಬುತ್ತಿದ್ದರು. ಅದರಲ್ಲೂ ಸಹಜ ಹಾಗೂ ಸ್ವಾಭಾವಿಕ ನಟನೆಯಿಂದ ಗುರ್ತಿಸಿಕೊಂಡಿದ್ದ ನಾನಾಜೀ.. ಬರೀ ನಟನೆಗಷ್ಟೇ ಸೀಮಿತ ಆಗಿರಲಿಲ್ಲ. ಒಳ್ಳೆಯ ಬರಹಗಾರ, ನಿರ್ಮಾಪಕರೂ ಹೌದು.
ಅಂದಹಾಗೆ ನಾನಾ ಪಾಟೇಕರ್ ಅಗಲಿಕೆಗೆ ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಸಂತಾಪ ಸೂಚಿಸುತ್ತಿದ್ದಾರೆ. ಅದಕ್ಕೆ ಅವರು ಚಿತ್ರರಂಗಕ್ಕಾಗಿ ಸಲ್ಲಿಸಿದ ಸೇವೆಗಾಗಿ ಅಷ್ಟೇ ಅಲ್ಲ. ನಾನಾ ಪಾಟೇಕರ್ ಅಪ್ಪಟ ದೇಶಪ್ರೇಮಿ. ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಕೂಡ ಹೌದು.
1999ರ ಕಾರ್ಗಿಲ್ ಯುದ್ಧದಲ್ಲಿ ದೇಶ ಸೇವೆ ಮಾಡಿದ್ದಾರೆ ನಾನಾಜೀ. ಹೌದು.. LOCನಲ್ಲಿ ರಿಯಲ್ ಯೋಧರ ಜೊತೆ ತಾನೂ ಕೂಡ ಶತ್ರುಗಳ ಜೊತೆ ಕಾದಾಡಿದ್ದಾರೆ, ಹೋರಾಡಿದ್ದಾರೆ. ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಟ ನಾನಾ ಪಾಟೇಕರ್ ಸೇನೆ ಸೇರೋಕೆ ನೋ ಅಂದಿದ್ರಂತೆ. ಆದ್ರೆ ಅವರು ಪ್ರಹಾರ್ ಸಿನಿಮಾಗಾಗಿ ಬರೋಬ್ಬರಿ 3 ವರ್ಷಗಳ ಕಾಲ ಮರಾಠ ಲೈಟ್ ಇನ್‌ಫೆಂಟ್ರಿಯಲ್ಲಿ ಆರ್ಮಿ ಜೊತೆ ತರಬೇತಿ ಪಡೆದಿದ್ದರು. ಅದನ್ನೇ ರೀಸನ್ ಕೊಟ್ಟು ಕೊನೆಗೂ ಭಾರತ-ಪಾಕ್ LOC ಗಡಿಯಲ್ಲಿ ಕೆಲಸ ಮಾಡಿದ್ರು. ಯೋಧರ ಜೊತೆ ಬಂದೂಕು ಹಿಡಿದು ಗಡಿ ಕಾದಿದ್ದಾರೆ. ಬೇಸ್ ಆಸ್ಪತ್ರೆಯಲ್ಲೂ ಎರಡ್ಮೂರು ವಾರಗಳ ಕಾಲ ಕೆಲಸ ಮಾಡಿ ಭೇಷ್ ಅನಿಸಿಕೊಂಡಿದ್ರು.
ಅದಾದ ಬಳಿಕ ಅವರು ದೇಶಪ್ರೇಮ ಹೆಚ್ಚಿಸೋ ಅಂತಹ ಪೇಟ್ರಿಯಾಟಿಕ್ ಮೂವಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ರು. ಅಂದಹಾಗೆ ನಮ್ಮ ಕನ್ನಡಿಗರಿಗೂ ಚಿರಪರಿಚಿತ ಈ ಬಾಲಿವುಡ್ ನಾನಾಜೀ. ಯಾಕಂದ್ರೆ 2010ರಲ್ಲಿ ತೆರೆಕಂಡ ಲೂಸ್‌ಮಾದ ಯೋಗಿ ನಟನೆಯ ಯಕ್ಷ ಚಿತ್ರದಲ್ಲಿ ಯೋಗೇಶ್ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಿದ್ರು. ಮಕ್ಕಳನ್ನ ಎಷ್ಟು ಶಿಸ್ತಾಗಿ ಬೆಳೆಸಬೇಕು ಅನ್ನೋದನ್ನ ಆ ಪಾತ್ರದ ಮೂಲಕ ಪ್ರೇಕ್ಷಕರಿಗೆ ಮನದಟ್ಟು ಮಾಡಿದ್ರು.
ಪರಿಂದಾ, ಕ್ರಾಂತಿವೀರ್, ನಟಸಾಮ್ರಾಟ್, ಪ್ರಹಾರ್, ಅಗ್ನಿಸಾಕ್ಷಿ ನಾನಾ ಪಾಟೇಕರ್ ನಟನೆಯ ಎವರ್‌ಗ್ರೀನ್ ಸಿನಿಮಾಗಳು. ಅವರ ಕಲಾ ಸೇವೆಗೆ 2013ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದ್ದು ವಿಶೇಷ. ನಾನಾಜೀ ಮನೋಜ್ಞ ಅಭಿನಯಕ್ಕೆ ಒಂದಲ್ಲ ಎರಡಲ್ಲ ಮೂರು ನ್ಯಾಷನಲ್ ಅವಾರ್ಡ್ಸ್, 4 ಫಿಲ್ಮ್ ಫೇರ್ ಹಾಗೂ ಎರಡು ಬಾರಿ ಮಹಾರಾಷ್ಟ್ರ ಸ್ಟೇಟ್ ಫಿಲ್ಮ್ ಅವಾರ್ಡ್‌ಗಳು ಕೂಡ ಲಭಿಸಿವೆ. ನಟ ರಜನಿಕಾಂತ್ ಜೊತೆ ಕಾಲಾ ಸಿನಿಮಾದಲ್ಲಿ ಖಡಕ್ ಖಳನಾಯಕನಾಗಿಯೂ ಬಣ್ಣ ಹಚ್ಚಿದ್ರು. ಹಾಗಾಗಿಯೇ ತಲೈವಾ ಅವರ ಬಗ್ಗೆ ಒಂದು ಪೋಸ್ಟ್ ಕೂಡ ಹಾಕಿದ್ದಾರೆ.
- ಸೂಕ್ಷ್ಮ ಹಾಗೂ ಸಂವೇದನಾಶೀಲ ವ್ಯಕ್ತಿ ನಾನಾ ಪಾಟೇಕರ್
- ಗ್ರಾಮೀಣ ಜನತೆ ಹಾಗೂ ರೈತರಿಗಾಗಿ ಮಿಡಿದಿದ್ದ ಜೀವವದು
ಯೆಸ್.. ನಾನಾ ಪಾಟೇಕರ್ ತಮ್ಮ ಸಿನಿಮಾಗಳಲ್ಲಿ ದುಡಿದ ರೆಮ್ಯುನರೇಷನ್ ಹಣವನ್ನೆಲ್ಲಾ ಸಮಾಜ ಸೇವೆಗಾಗಿಯೇ ಮುಡಿಪಾಗಿಟ್ಟವರು. ದುಡಿದ ಸುಮಾರು 90 ಪರ್ಸೆಂಟ್ ಹಣವನ್ನ ಗ್ರಾಮೀಣ ಪ್ರದೇಶದ ಜನ ಹಾಗೂ ಸಂಕಷ್ಟದಲ್ಲಿರೋ ರೈತರಿಗಾಗಿಯೇ ಮೀಸಲಿಟ್ಟವರು. ನಾಮ್ ಫೌಂಡೇಶನ್ ಅನ್ನೋ ಸಂಸ್ಥೆ ಕಟ್ಟಿ, ಆ ಮೂಲಕ ಕಡು ಬಡತನದಲ್ಲಿರೋ ಹಾಗೂ ಬರಪೀಡಿತ ಹಳ್ಳಿಗಳನ್ನ ದತ್ತು ಪಡೆದು, ಐ ಕೇರ್ ಐ ಸಪೋರ್ಟ್ ಅನ್ನೋ ಅಭಿಯಾನದ ಮೂಲಕ ಅವ್ರ ಬೆನ್ನೆಲುಬಾಗಿ ನಿಂತವರು.
ಅದೆಷ್ಟೋ ಮಂದಿ ರೈತ ಕುಟುಂಬಗಳು ಇಂದು ಜೀವಂತವಾಗಿ ಇರೋಕೆ ಕಾರಣೀಭೂತರಾಗಿರೋ ನಾನಾ ಪಾಟೇಕರ್.. ತಮಗೆ ಬಂದ ಅವಾರ್ಡ್‌ಗಳ ಹಣ ಕೂಡ ರೈತರಿಗಾಗಿಯೇ ನೀಡುತ್ತಿದ್ದರು. ಕೃತಕತೆಯೇ ತುಂಬಿರೋ ಈ ಸಿನಿಮಾ ಜಗತ್ತಿನಲ್ಲಿ ನೀತಿ, ನಿಜಾಯ್ತಿಯಿಂದ ಬದುಕಿದ ಮಹಾನ್ ಕಲಾವಿದ.. ಅಪ್ಪಟ ಮನುಷ್ಯ ಈ ನಾನಾ ಪಾಟೇಕರ್. ಅವರ ನಡೆ, ನುಡಿ, ಆಚಾರ, ಬದುಕು, ಕಲೆ, ಆದರ್ಶಗಳು, ಸಮಾಜಸೇವೆ ಎಲ್ಲವೂ ವರ್ಣನಾತೀತ. ಇಂತಹ ಮಹಾನ್ ವ್ಯಕ್ತಿ ಹಾಗೂ ಚಿತ್ರರಂಗದ ಶಕ್ತಿ ಇನ್ನಿಲ್ಲ ಅನ್ನೋದು ನಿಜಕ್ಕೂ ದೇಶಕ್ಕೆ ತುಂಬಲಾರದ ನಷ್ಟ. ಈ ಶ್ರೇಷ್ಠ ವ್ಯಕ್ತಿತ್ವಕ್ಕೆ ಶಾಂತಿ ಸಿಗಲಿ.. ಅವರ ಅಗಲಿಕೆ ನೋವನ್ನ ಭರಿಸೋ ಶಕ್ತಿ ಭಗವಂತ ಅವ್ರ ಕುಟುಂಬಕ್ಕೆ ದಯಪಾಲಿಸಲಿ ಅಂತ ಪ್ರಾರ್ಥಿಸೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
