ದುನಿಯಾ ವಿಜಯ್ ಲ್ಯಾಂಡ್‌ಲಾರ್ಡ್‌ಗೆ ಸಿಎಂ ಅಷ್ಟೇ ಅಲ್ಲ ಡಿಸಿಎಂ ಬೆಂಬಲ ಕೂಡ ಸಿಕ್ಕಿದೆ. ಸಂಚಲನ ಮೂಡಿಸಿರೋ ಸಿನಿಮಾದ ಕುರಿತು ಡಿಕೆಶಿ ಹೇಳಿದ್ದೇನು..? ಸಿನಿಮಾ ನೋಡಿದ ದೊಡ್ಮನೆ ದೊರೆ ಶಿವಣ್ಣ ಹಾಗೂ ರಚಿತಾ ಏನಂದ್ರು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
- ಲ್ಯಾಂಡ್‌ಲಾರ್ಡ್ ಮೆಚ್ಚಿದ ಶಿವಣ್ಣ, ರಚ್ಚು.. DCM ಹೇಳಿದ್ದೇನು?
- ಸಿಎಂ ರೀತಿ ಡಿಸಿಎಂ ಕೂಡ ನೋಡ್ತಾರಂತೆ ‘ಲ್ಯಾಂಡ್‌ಲಾರ್ಡ್’
- ಕಥೆ, ಪಾತ್ರಗಳು ಹಾಗೂ ಪರ್ಫಾಮೆನ್ಸ್‌ನ ಕೊಂಡಾಡಿದ ಶಿವಣ್ಣ
- ಗ್ಯಾರಂಟಿ ನ್ಯೂಸ್ ಜೊತೆ ನಿಂಗವ್ವ ರಚಿತಾ ಎಕ್ಸ್‌ಕ್ಲೂಸಿವ್ ಟಾಕ್
ಸಿನಿಮಾ ಬರೀ ಕಲಾವಿದರು, ತಂತ್ರಜ್ಞರಿಗೆ ಸೀಮಿತ ಆಗಬಾರದು. ಜನಕ್ಕೆ ರೀಚ್ ಆಗಬೇಕು. ಆಗಲೇ ಅದ್ರ ಉದ್ದೇಶ ಸಫಲವಾಗುತ್ತೆ. ಸದ್ಯ ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ ಹಾಗೂ ರಚಿತಾ ರಾಮ್ ಅವರ ಲ್ಯಾಂಡ್‌ಲಾರ್ಡ್ ಅಂತಹ ಸಿನಿಮಾಗಳ ಸಾಲಿನಲ್ಲಿ ನಿಂತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್. ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಸಾಕಷ್ಟು ಮಂದಿ ರಾಜಕಾರಣಿಗಳು ಸಿನಿಮಾದ ಬಗ್ಗೆ ಮಾತನಾಡ್ತಿದ್ದಾರೆ. ಕೆಲವರು ಸಿನಿಮಾ ನೋಡಿದ್ದಾರೆ. ಕೆಲವರು ನೋಡುವ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ಲ್ಯಾಂಡ್‌ಲಾರ್ಡ್ ಸಿನಿಮಾನ ಎಲ್ಲರೂ ನೋಡಬೇಕು. ಅಂಬೇಡ್ಕರ್ ಒಂದು ಜಾತಿಗೆ ಸೀಮಿತ ಆದವರಲ್ಲ. ಹಾಗಾಗಿ ಇಂತಹ ಚಿತ್ರಗಳು ಬರಬೇಕು ಅಂತ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ಇನ್ನೂ ನಿನ್ನೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಸಿನಿಮಾ ನೋಡಿ, ಸುಮಾರು 6 ನಿಮಿಷಗಳಷ್ಟು ರಿವ್ಯೂನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ನನಗೆ ವೇದ ಸಿನಿಮಾ ನೆನಪಾಯ್ತು. ತಂದೆ-ಮಗಳ ವಿಷಯ ಬಂದಾಗ ಎಂದ ಶಿವಣ್ಣ ಚಿತ್ರದ ಕಥೆ, ಪಾತ್ರಗಳು, ಅವರುಗಳ ಪರ್ಫಾಮೆನ್ಸ್‌ನ ಕೊಂಡಾಡಿದ್ರು.
ಸಿನಿಮಾಗಳ ಶೂಟಿಂಗ್, ಕಿರುತೆರೆ, ಪಬ್ಲಿಸಿಟಿ ಓಡಾಟಗಳ ನಡುವೆ ತಮ್ಮದೇ ಎರಡು ಸಿನಿಮಾಗಳು ಒಂದೇ ದಿನ ಒಟ್ಟೊಟ್ಟಿಗೆ ರಿಲೀಸ್ ಆಗಿದ್ರೂ ನೋಡಲಾಗದ ರಚಿತಾ, ಇಂದು ಜಿಟಿ ಮಾಲ್‌ನಲ್ಲಿ ಲ್ಯಾಂಡ್‌ಲಾರ್ಡ್ ವೀಕ್ಷಿಸಿದ್ರು. ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಮಾತನಾಡಿದ ರಚ್ಚು, ಪಾತ್ರಕ್ಕೆ ಸಿಕ್ಕಿರೋ ಪ್ರಶಂಸೆ ಹಾಗೂ ಪೈರಸಿ ಬಗ್ಗೆ ಮುಕ್ತವಾಗಿ ಮಾತನಾಡಿದ್ರು.
ನಿಜಕ್ಕೂ ಈ ಸಿನಿಮಾ ಇಷ್ಟೆಲ್ಲಾ ಸೌಂಡ್ ಮಾಡ್ತಿದೆ ಅಂದ್ರೆ ಅದಕ್ಕೆ ಪ್ರಮುಖ ಕಾರಣ ಜಡೇಶ್ ಕೆ ಹಂಪಿ ಕಥೆ & ನಿರ್ದೇಶನ. ಮಾಸ್ತಿ ಅವ್ರ ನ್ಯಾಚುರಲ್ ಡೈಲಾಗ್ಸ್. ಸಾರಥಿ ಫಿಲಂಸ್ ಕ್ವಾಲಿಟಿ ಪ್ರೊಡಕ್ಷನ್ ವ್ಯಾಲ್ಯೂಸ್. ಕಮರ್ಷಿಯಲ್ ಸ್ಟಾರ್‌ಡಮ್‌ನ ಪಕ್ಕಕ್ಕಿಟ್ಟು ಸಾಂವಿಧಾನಿಕ ಅಂಶಗಳ ಮಹತ್ವ ಸಾರಲು ಇಂತಹ ಪಾತ್ರಗಳಿಗೆ ಜೀವ ತುಂಬಿರೋ ವಿಜಯ್, ರಾಜ್ ಹಾಗೂ ರಚಿತಾ ಸೆಂಟರ್ ಆಫ್ ಅಟ್ರ್ಯಾಕ್ಷನ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





