• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪ್ರಜ್ವಲ್ v/s ರಾಜ್ ಬಿ ಶೆಟ್ಟಿ..‘ಕರಾವಳಿ’ ಟ್ರೈಲರ್ ರಣಕೇಕೆ ಗುರು

ಅಂದು ರಿಷಬ್ ಕಾಂತಾರ.. ಇಂದು ಪ್ರಜ್ಜು-ರಾಜ್ ಶೆಟ್ಟಿ ಕರಾವಳಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 7, 2026 - 4:51 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
ಶ (2)

ಕರಾವಳಿ ಸಂಸ್ಕೃತಿಗೆ ಕೇರ್ ಆಫ್ ಅಡ್ರೆಸ್ ಆಗಿತ್ತು ಕಾಂತಾರ. ಆದ್ರೀಗ ಕರಾವಳಿ ಸಿನಿಮಾದಲ್ಲಿ ಅದರ ಸಾಕಷ್ಟು ಆಚಾರ, ವಿಚಾರಗಳನ್ನ ಬಿಗ್‌‌ಸ್ಕ್ರೀನ್‌ಗೆ ತರಲಾಗ್ತಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಕಾಂಬೋನಲ್ಲಿ ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದೆ. ಆದ್ರೆ ಹೀರೋ ವಾಯ್ಸ್ ಮಿಸ್ ಆಗಿದೆ ಅನ್ನೋದೇ ಅಚ್ಚರಿ. ಹೌದು.. ಪ್ರಜ್ಜು ವಾಯ್ಸ್ ನಾಪತ್ತೆ ಆಗಿದ್ದು, ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಹಾಗಾದ್ರೆ ಟ್ರೈಲರ್ ಹೇಗಿದೆ..? ಏನು ಈ ವಿವಾದ ಅನ್ನೋದಕ್ಕೆ ಈ ಸ್ಟೋರಿ ನೋಡಿ..

  • ಪ್ರಜ್ವಲ್ v/s ರಾಜ್ ಶೆಟ್ಟಿ.. ‘ಕರಾವಳಿ’ ಟ್ರೈಲರ್ ರಣಕೇಕೆ ಗುರು
  • ಅಂದು ರಿಷಬ್ ಕಾಂತಾರ.. ಇಂದು ಪ್ರಜ್ಜು-ರಾಜ್ ಶೆಟ್ಟಿ ಕರಾವಳಿ
  • ಕಿಚ್ಚನ ಹುಡ್ಗ ಗುರುದತ್ ಗಾಣಿಗ ಬಹುದೊಡ್ಡ ಡ್ರೀಮ್ ಪ್ರಾಜೆಕ್ಟ್‌‌
  • ನೆಕ್ಸ್ಟ್ ಲೆವೆಲ್ ಮೇಕಿಂಗ್.. ಮೈಂಡ್ ಬ್ಲೋಯಿಂಗ್ ದೃಶ್ಯವೈಭವ

ಇದು ಇದೇ ಜುಲೈ 24ಕ್ಕೆ ಥಿಯೇಟರ್‌ಗೆ ಎಂಟ್ರಿ ಕೊಡೋಕೆ ಸಜ್ಜಾಗಿರೋ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಕರಾವಳಿ ಚಿತ್ರದ ಟ್ರೈಲರ್. ಈ ಹಿಂದೆ ಅಂಬಿ ನಿಂಗ್ ವಯಸ್ಸಾಯ್ತೋ ಅನ್ನೋ ಸಿನಿಮಾನ ನಿರ್ದೇಶನ ಮಾಡಿದ್ದ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಿರೋ ಎರಡನೇ ಸಿನಿಮಾ. ಅಂದು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್‌ಗೆ ನಿರ್ದೇಶನ ಮಾಡಿದ್ದ ಗುರು, ಇಂದು ಕೂಡ ಮಲ್ಟಿ ಸ್ಟಾರ್ಸ್ ಜೊತೆಗೇ ಕರಾವಳಿ ಸಿನಿಮಾನ ಕಟ್ಟಿದ್ದಾರೆ.

RelatedPosts

ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!

ಪಾಲಿಟಿಕ್ಸ್‌ಗೆ ತಾರಕ್..? ತಿರುಪತಿಯಲ್ಲಿ RAW-NTR ಅಲೆ

ಲವ್ ಜಿಹಾದ್ ವಿವಾದ: ಆಮಿರ್ ಖಾನ್ ಕೊಂದವರಿಗೆ 5 ಕೋಟಿ ಬಹುಮಾನ ಘೋಷಿಸಿದ ಪರಮಹಂಸ ಆಚಾರ್ಯ

ADVERTISEMENT
ADVERTISEMENT

ಯೆಸ್.. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಾಜ್ ಬಿ ಶೆಟ್ಟಿ ಲೀಡ್‌‌ನಲ್ಲಿರೋ ಕರಾವಳಿ ಸಿನಿಮಾದಲ್ಲಿ ಕಂಬಳಕ್ಕೆ ಸಜ್ಜಾಗೋ ಕೋಣ, ಅದ್ರ ತಯಾರಿ, ಅದರ ಸುತ್ತಮುತ್ತ ನಡೆಯೋ ರಾಜಕೀಯ, ಪಿತೂರಿಗಳ ಕುರಿತ ಕಥಾನಕವಿದೆ. ರಿಷಬ್ ಶೆಟ್ಟಿ ಕಾಂತಾರ ಚಿತ್ರಗಳ ಮೂಲಕ ಕರಾವಳಿ ದೈವ ಸಂಸ್ಕೃತಿಯನ್ನ ಪರಿಚಯಿಸಿದ್ರು. ಆದ್ರೀಗ ಗುರುದತ್ ಗಾಣಿಗ ಈ ಕರಾವಳಿ ಚಿತ್ರದಿಂದ ಅಲ್ಲಿನ ಮತ್ತಷ್ಟು ಮಹತ್ವದ ಆಚಾರ ವಿಚಾರಗಳಿಗೆ ಕನ್ನಡಿ ಹಿಡಿಯೋ ಕಾರ್ಯ ಮಾಡಿದ್ದಾರೆ. ಅದ್ರ ಪ್ರತಿಫಲವೇ ಈ ಕರಾವಳಿ.

ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದ್ದು, ಒಂದೊಂದು ಫ್ರೇಮ್ ಕೂಡ ಸಖತ್ ರಿಚ್ ಆಗಿ ಮೂಡಿಬಂದಿದೆ. ಸಿನಿಮಾಟೋಗ್ರಫಿ, ಬ್ಯಾಗ್ರೌಂಡ್ ಮ್ಯೂಸಿಕ್ ಸಿನಿಮಾದ ತೂಕ ಹೆಚ್ಚಿಸಿದ್ದು, ಒಂದೊಂದು ಪಾತ್ರ ಕೂಡ ಅದರದ್ದೇ ಆದ ಮಹತ್ವ ಪಡೆದಿವೆ. ಹೀಗೂ ಸಿನಿಮಾ ಮೇಕಿಂಗ್ ಮಾಡಬಹುದು ಅನ್ನೋದನ್ನ ಗುರು ತೋರಿಸಿಕೊಟ್ಟಿದ್ದಾರೆ. ಇಷ್ಟು ದಿನ ಕ್ಯಾರೆಕ್ಟರ್ ಟೀಸರ್‌‌ಗಳು ರಿವೀಲ್ ಆಗಿದ್ದವು. ಆದ್ರೀಗ ಟ್ರೈಲರ್‌ನಿಂದ ಕರಾವಳಿಯ ಆಳ, ಅಂತರಾಳ ಅನಾವರಣಗೊಂಡಿದೆ. ಅಸಲಿ ಸಿನಿಮಾ ಜುಲೈ 24ಕ್ಕೆ ಬೆಳ್ಳಿಪರದೆ ಮೇಲೆ ತೆರೆದುಕೊಳ್ಳಲಿದೆ.

ಬಾದ್‌ಷಾ ಕಿಚ್ಚ ಸುದೀಪ್ ಗರಡಿಯಲ್ಲಿ ಪಳಗಿರೋ ಗುರುದತ್ ಗಾಣಿಗ, ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಬಂಡವಾಳ ಹೂಡಿ ತಾವೇ ನಿರ್ಮಾಣ ಕೂಡ ಮಾಡಿರೋದು ಇಂಟರೆಸ್ಟಿಂಗ್.

  • ಟ್ರೈಲರ್ ಲಾಂಚ್ ಇವೆಂಟ್‌ಗೆ ಪ್ರಜ್ಜು ಗೈರು.. ಏನ್ ಗುರು ಇದು?
  • ಹೀರೋ ವಾಯ್ಸ್ ನಾಪತ್ತೆ.. ಫ್ಯಾನ್ಸ್ ಗಲಾಟೆ.. ಏನಿದು ವಿವಾದ?
  • ನಟ ಪ್ರಜ್ವಲ್‌ಗೆ 25 ಲಕ್ಷ ಬಾಕಿ.. ಡಬ್ಬಿಂಗ್ ಆರ್ಟಿಸ್ಟ್ ಬಳಿ ಡಬ್
  • ರಕ್ಷಣಾ ವೇದಿಕೆ ಎಂಟ್ರಿ.. ಪ್ರಜ್ಜು ಅನುಪಸ್ಥಿತಿಯಲ್ಲೂ ಪಂಕ್ಷನ್..!!

ಯೆಸ್.. ಕರಾವಳಿ ಚಿತ್ರದ ನಾಯಕನಟ ಪ್ರಜ್ವಲ್ ದೇವರಾಜ್ ಅನುಪಸ್ಥಿತಿಯಲ್ಲೇ ಟ್ರೈಲರ್ ಲಾಂಚ್ ಇವೆಂಟ್ ಜರುಗಿದ್ದು ಅಚ್ಚರಿ. ಅಷ್ಟೇ ಅಲ್ಲ, ಎಂಎಂಬಿ ಕಪಾಲಿಯಲ್ಲಿ ಟ್ರೈಲರ್ ಲಾಂಚ್ ಇವೆಂಟ್ ವೇಳೆ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಹಾಗೂ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಗುರುದತ್ ಗಾಣಿಗ ನಡುವೆ ಮಾತಿಕ ಚಕಮಕಿ ಕೂಡ ಜೋರಾಗೇ ನಡೀತು. ಅದಕ್ಕೆ ಕಾರಣ ಟ್ರೈಲರ್‌‌ನಲ್ಲಿ ಹೀರೋ ವಾಯ್ಸ್ ನಾಪತ್ತೆ. ಬದಲಿಗೆ ಮತ್ಯಾರದ್ದೋ ವಾಯ್ಸ್ ಇಟ್ಕೊಂಡು ಚಿತ್ರತಂಡ ಡಬ್ಬಿಂಗ್ ಮಾಡಿ ಮುಗಿಸಿ ರಿಲೀಸ್ ಮಾಡಿದೆ.

ಯಾವಾಗ ಟ್ರೈಲರ್‌‌ನಲ್ಲಿ ತನ್ನ ವಾಯ್ಸ್ ಇಲ್ಲ ಅಂತ ಗೊತ್ತಾಯ್ತೋ ಆಗ ಪ್ರಜ್ವಲ್ ಸಹಜವಾಗಿಯೇ ಇವೆಂಟ್‌ಗೆ ಗೈರಾಗಿಬಿಟ್ಟಿದ್ದಾರೆ. ಆದ್ರೆ ಇದಕ್ಕೆಲ್ಲಾ ಕಾರಣ ಆಗಿರೋದು 25 ಲಕ್ಷ ರೂಪಾಯಿ ಹಣ ಅನ್ನೋದು ಮಾತ್ರ ಪಕ್ಕಾ. ಹೌದು.. ಒಂದು ಕೋಟಿ 25 ಲಕ್ಷ ರೆಮ್ಯುನರೇಷನ್‌ಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಅದ್ರಂತೆ ಒಂದು ಕೋಟಿ ಹೀರೋ ಪ್ರಜ್ವಲ್‌ಗೆ ಗುರು ಪಾವತಿಸಿದ್ರು. ಉಳಿದ 25 ಲಕ್ಷ ಹಣ ನೀಡಿದ್ರೆ ಡಬ್ಬಿಂಗ್ ಮಾಡಿಕೊಡೋದಾಗಿ ಹೇಳಿದ್ರಂತೆ ಪ್ರಜ್ವಲ್. ಆದ್ರೆ ಬಜೆಟ್ ಎಕ್ಸೀಡ್ ಆಗಿರೋ ಹಿನ್ನೆಲೆ ಮೊದಲು ಡಬ್ಬಿಂಗ್ ಮಾಡಿಕೊಡಿ. ನಂತ್ರ ಹಣ ನೀಡ್ತೀವಿ ಅಂದಿದ್ದಾರೆ ನಿರ್ಮಾಪಕ ಗುರು. ಈ ಮಾತುಕಥೆ ವಿಫಲವಾದ ಹಿನ್ನೆಲೆ ಇಷ್ಟೆಲ್ಲಾ ರಾದ್ಧಾಂತ ನಡೆದು ಹೋಗಿದೆ.

ಅಸಂಖ್ಯಾತ ಪ್ರಜ್ವಲ್ ದೇವರಾಜ್ ಫ್ಯಾನ್ಸ್ ಜೊತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಕೂಡ ಈ ಗಲಾಟೆಗೆ ಎಂಟ್ರಿ ಕೊಟ್ಟಿತ್ತು. 20 ವರ್ಷಗಳಿಂದ ಚಿತ್ರರಂಗದ ಸೇವೆ ಸಲ್ಲಿಸುತ್ತಾ ಬರ್ತಿರೋ ಡೈನಾಮಿಕ್ ಹೀರೋ ದೇವರಾಜ್ ಮಗನ ಸಿನಿಮಾಗೆ ಚಿತ್ರತಂಡ ಹೀಗೆ ಡಬ್ಬಿಂಗ್ ಆರ್ಟಿಸ್ಟ್ ಮೂಲಕ ವಾಯ್ಸ್ ಡಬ್ ಮಾಡಿಸಿರೋದ್ರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರೋದು ತಪ್ಪೇನಿಲ್ಲ.

ಇನ್ನೂ ಈ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ ನಟ ಪ್ರಜ್ವಲ್ ದೇವರಾಜ್, ಫಿಲ್ಮ್ ಮೇಕರ್ ಗುರುದತ್ ಗಾಣಿಗ ನಡೆ ಕುರಿತು ಬೇಸರ ವ್ಯಕ್ತಪಡಿಸಿದ್ರು. ನನ್ನ ವಾಯ್ಸ್ ಇಲ್ಲದೆ ಟ್ರೈಲರ್ ಲಾಂಚ್ ಮಾಡ್ತಿರೋದು ನೋಡಿ ನನಗೆ ಶಾಕ್ ಆಯ್ತು. ಸಂಭಾವನೆ ಹಣ ನೀಡದೆ ಡಬ್ಬಿಂಗ್ ಹೇಗೆ ಮಾಡಲು ಸಾಧ್ಯ..? ಈ ಹಿಂದಿನ ಸಿನಿಮಾ ವೀರಂಗೆ ಕೈಯಿಂದ ಲಕ್ಷಾಂತರ ರೂಪಾಯಿ ಹಾಕಿ ಕೈ ಸುಟ್ಟಿಕೊಂಡಿದ್ದೇನೆ. ಹಾಗಾಗಿ ನನಗೆ ಸಂಭಾವನೆ ಮುಖ್ಯ. ನನಗೂ ಕಮಿಟ್ಮೆಂಟ್ಸ್ ಇದೆ ಅಂದ್ರು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್.

  • ಸಮಸ್ಯೆ ಬಗೆಹರಿಸೋಕೆ ನಟ ರಾಜ್ ಬಿ ಶೆಟ್ಟಿ ಹರಸಾಹಸ..!
  • ಒಟ್ಟಿಗೆ ಸಾಗೋ ಮನೋಭಾವ ಇಲ್ಲ.. ಇಂಡಸ್ಟ್ರಿ ಉದ್ಧಾರ ಆಗಲ್ಲ

ಅಂದಹಾಗೆ ಇದು ಮಲ್ಟಿಸ್ಟಾರ್ ಚಿತ್ರವಾದ್ದರಿಂದ ಸಹಜವಾಗಿಯೇ ರಾಜ್ ಬಿ ಶೆಟ್ಟಿ ಹಾಗೂ ಪ್ರಜ್ವಲ್ ನಡುವೆ ಏನಾದ್ರೂ ಮನಸ್ತಾಪವಾ ಅನ್ನೋ ಮಾತು ಬರುತ್ತೆ. ಅದಕ್ಕೆ ನೋ ಅಂತಲೇ ಅನ್ನಬಹುದು. ಹೌದು.. ಸಿನಿಮಾಗಿಂತ ದೊಡ್ಡದು ನನಗೆ ಏನೂ ಇಲ್ಲ ಎಂದ ರಾಜ್ ಬಿ ಶೆಟ್ಟಿ, ನಾನು ಕೂಡ ಪ್ರಜ್ವಲ್ ಜೊತೆ ಮಾತನಾಡುವ ಪ್ರಯತ್ನದಲ್ಲಿದ್ದೇನೆ ಎಂದರು. ಅಷ್ಟೇ ಅಲ್ಲ.. ಈ ಬೆಳವಣಿಗೆಗೆ ಬೇಸರ ವ್ಯಕ್ತಪಡಿಸಿದೆ ಶೆಟ್ರು, ನಮ್ಮ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ. ಒಟ್ಟಿಗೆ ಸಾಗುವ ಮನೋಭಾವವೂ ಇಲ್ಲ. ಹೀಗಿದ್ರೆ ಇಂಡಸ್ಟ್ರಿ ಉದ್ಧಾರ ಆಗಲ್ಲ ಎಂದರು.

ಒಟ್ಟಾರೆ ತನಗಾದ ಅಪಮಾನವನ್ನು ಕಲಾವಿದರ ಸಂಘ ಹಾಗೂ ಫಿಲ್ಮ್ ಚೇಂಬರ್‌ಗೆ ಪತ್ರ ಬರೆಯೋ ಮೂಲಕ ವ್ಯಕ್ತಪಡಿಸೋಕೆ ಸಜ್ಜಾಗಿದ್ದಾರೆ ಪ್ರಜ್ವಲ್. ಇತ್ತ ರಾಜ್ ಬಿ ಶೆಟ್ಟಿ ನಿರ್ದೇಶಕ ಗುರು ಹಾಗೂ ಪ್ರಜ್ವಲ್‌ ನಡುವೆ ಸಂಧಾನ ಮಾಡಿಸೋ ಸಾಧ್ಯತೆಯಿದೆ. ಆದ್ರೆ ಇಂತಹ ಜಗಳಗಳಿಂದ ಸಿನಿಮಾ ಬಡವಾಗಬಾರದು. ಸಾಲ ಮಾಡಿ ಬಡ್ಡಿಗೆ ತಂದು ಬಂಡವಾಳ ಹಾಕಿರೋ ಅನ್ನದಾತ ಬೀದಿಗೆ ಬರಬಾರದು ಅನ್ನೋದಷ್ಟೇ ನಮ್ಮ ಆಶಯ. ಸಮಸ್ಯೆ ಆದಷ್ಟು ಬೇಗ ಇತ್ಯರ್ಥ ಆಗಲಿ. ಪ್ರಜ್ವಲ್ ವಾಯ್ಸ್‌ನಲ್ಲೇ ಸಿನಿಮಾ ಬಿಡುಗಡೆ ಆದ್ರೆ ಉತ್ತಮ ಬೆಳವಣಿಗೆ. ಇಲ್ಲವಾದ್ರೆ ಭವಿಷ್ಯದಲ್ಲಿ ಇಂತಹ ಮತ್ತಷ್ಟು ಘಟನೆಗಳಿಗೆ ಚಿತ್ರರಂಗ ಸಾಕ್ಷಿ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (65)

ಬಿಡದಿ ಟೌನ್‌ಶಿಪ್‌ಗೆ 2 ತಿಂಗಳ ಬ್ರೇಕ್: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

by ಕವಿತಾ
July 15, 2026 - 3:27 pm
0

ಷ್ಯ (21)

ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 3:09 pm
0

ಷ್ಯ (19)

CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 2:41 pm
0

ಷ್ಯ (16)

ಪಾಲಿಟಿಕ್ಸ್‌ಗೆ ತಾರಕ್..? ತಿರುಪತಿಯಲ್ಲಿ RAW-NTR ಅಲೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 2:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಷ್ಯ (21)
    ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ
    July 15, 2026 | 0
  • ಷ್ಯ (19)
    CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!
    July 15, 2026 | 0
  • ಷ್ಯ (16)
    ಪಾಲಿಟಿಕ್ಸ್‌ಗೆ ತಾರಕ್..? ತಿರುಪತಿಯಲ್ಲಿ RAW-NTR ಅಲೆ
    July 15, 2026 | 0
  • ಷ್ಯ (15)
    ಲವ್ ಜಿಹಾದ್ ವಿವಾದ: ಆಮಿರ್ ಖಾನ್ ಕೊಂದವರಿಗೆ 5 ಕೋಟಿ ಬಹುಮಾನ ಘೋಷಿಸಿದ ಪರಮಹಂಸ ಆಚಾರ್ಯ
    July 15, 2026 | 0
  • Untitled design (64)
    ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಗೆ ಬೆದರಿಕೆ ಆರೋಪ; ಮತ್ತಿಬ್ಬರಿಗಾಗಿ ಹುಡುಕಾಟ
    July 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version