ಕಾಲಿವುಡ್ ಸ್ಟಾರ್ ಜಯಂ ರವಿಗೆ ಪತ್ನಿ ಆರತಿ ಕೋರ್ಟ್‌ನಲ್ಲಿ ಬಿಗ್ ಶಾಕ್ ನೀಡಿದ್ದಾರೆ. ಡಿವೋರ್ಸ್ ಕೊಡ್ತೀನಿ. ಆದ್ರೆ ತಿಂಗಳಿಗೆ 40 ಲಕ್ಷ ಜೀವನಾಂಶ ಕೊಡಿ ಎಂದಿದ್ದಾರೆ. ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಸಂಚಲನ ಮೂಡಿಸಿದೆ.
- ತಿಂಗಳಿಗೆ 40 ಲಕ್ಷ ಜೀವನಾಂಶ.. ಜಯಂ ರವಿಗೆ ಶಾಕ್
- ಡಿವೋರ್ಸ್ ಕೊಟ್ಟ ಪತ್ನಿಯಿಂದ ನಟನಿಗೆ ಚೆಕ್‌ಮೇಟ್
- ಸಿಂಗರ್ ಜೊತೆ ಲವ್ವಿ ಡವ್ವಿ.. ಧರ್ಮಪತ್ನಿಗೆ ಗುಡ್ ಬೈ..!
ಕೆನಿಷಾ ಫ್ರಾನ್ಸಿಸ್.. ಸೈಕಾಲಜಿಸ್ಟ್ ಕಮ್ ಗಾಯಕಿ. 600ಕ್ಕೂ ಅಧಿಕ ಸ್ಟೇಜ್ ಶೋಗಳನ್ನ ನಡೆಸಿರೋ ಈ ಬೆಂಗಳೂರು ಮೂಲದ ಚೆಲುವೆಯಿಂದ ಖ್ಯಾತ ತಮಿಳುನಟ ಜಯಂ ರವಿಗೆ ಸಂಕಷ್ಟ ಶುರುವಾಗಿದೆ. ಹೌದು.. ಈಕೆಗಾಗಿ ಪತ್ನಿಗೆ ಡಿವೋರ್ಸ್ ಕೊಡೋಕೆ ಸಿದ್ಧವಾಗಿದ್ದ ಪೊನ್ನಿಯಿನ್ ಸೆಲ್ವನ್ ಫೇಮ್ ಜಯಂ ರವಿ, ಸೋಶಿಯಲ್ ಮೀಡಿಯಾದಲ್ಲಿ ಏಕಾಏಕಿ ಪತ್ನಿಗೆ ವಿಚ್ಚೇದನ ಘೋಷಿಸಿದ್ದರು.
ಆದ್ರೆ ಈ ಮ್ಯಾಟರ್ ನಂಗೆ ಗೊತ್ತೇಯಿಲ್ಲ ಅಂತ ಉಲ್ಟಾ ಸ್ಟೇಟ್‌ಮೆಂಟ್ ಕೊಡೋ ಮೂಲಕ ಜಯಂ ರವಿ ಪತ್ನಿ ಆರತಿ ಮಾಧ್ಯಮಗಳ ಮುಂದೆ ಅಚ್ಚರಿ ಮೂಡಿಸಿದ್ದರು. ಇದೀಗ ಇವರಿಬ್ರೂ ಫ್ಯಾಮಿಲಿ ಕೋರ್ಟ್ ಮೂಲಕ ಪರಸ್ಪರ ಒಪ್ಪಿ ಡಿವೋರ್ಸ್ ಪಡೆಯುತ್ತಿದ್ದಾರೆ. ನಿನ್ನೆ ಕೋರ್ಟ್‌ಗೆ ಹಾಜರಾಗಿದ್ದ ಇಬ್ಬರೂ ವಿಚ್ಚೇದನಕ್ಕೆ ಒಪ್ಪಿದ್ದು, ಇಲ್ಲಿ ಪತ್ನಿ ಆರತಿ ಪತಿಯಿಂದ ಪ್ರತೀ ತಿಂಗಳು ಬರೋಬ್ಬರಿ 40 ಲಕ್ಷ ರೂಪಾಯಿ ಜೀವನಾಂಶ ಕೇಳಿದ್ದಾರಂತೆ.
ಅಷ್ಟು ದೊಡ್ಡ ಮೊತ್ತದ ಹಣವನ್ನು ನಿರೀಕ್ಷೆ ಮಾಡಿರೋ ಆರತಿ ನಡೆಗೆ ಜಯಂ ರವಿ ಅಷ್ಟೇ ಅಲ್ಲ, ಚಿತ್ರಪ್ರೇಮಿಗಳು ಕೂಡ ಶಾಕ್ ಆಗಿದ್ದಾರೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಮತ್ತೆ ತಮ್ಮ ಜೀವನವನ್ನು ಸರಿಪಡಿಸಿಕೊಳ್ಳೋ ಪ್ರಮೇಯವೇ ಇಲ್ಲ ಅಂತ ವಿಚ್ಚೇದನದ ನಿರ್ಧಾರಕ್ಕೆ ಬಂದ ಬಳಿಕ, ಪತ್ನಿ ಆರತಿ ಈ ಡಿಮ್ಯಾಂಡ್ ಇಟ್ಟಿದ್ದಾರಂತೆ. ತಿಂಗಳಿಗೆ 4.8 ಕೋಟಿ ರೂಪಾಯಿ ದೊಡ್ಡ ಮೊತ್ತದ ಜೀವನಾಂಶ ಇದಾಗಲಿದ್ದು, ಇದಕ್ಕೆ ಜಯಂ ರವಿ ಪ್ರತಿಕ್ರಿಯೆ ಹೇಗಿರುತ್ತೆ ಅಂತ ಎಲ್ಲರೂ ಕಾತರರಾಗಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್