• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಬೃಂದಾವಿಹಾರಿ’: ಅರಮನೆಯ ಆವರಣದಲ್ಲಿ ಐದನೇ ಗೀತೆ ಅದ್ಧೂರಿ ಲಾಂಚ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 25, 2026 - 1:17 pm
in ಸಿನಿಮಾ
0 0
0
Untitled design (51)

ಬೃಂದಾವಿಹಾರಿ ಬತ್ತಳಿಕೆಯಿಂದ ಮತ್ತೊಂದು ಪ್ರೇಮ ನಿವೇದನೆಯ ಗೀತೆ ಹೊರಬಂದಿದೆ. ಯೆಸ್.. ರಾಗ, ತಾಳ, ಭಾಷೆ ಮೀರಿದ ಭಾವ ಈ ‘ಬೃಂದಾವಿಹಾರಿ’ಯ ಪ್ರೀತಿ ಅನ್ನೋದು ಇದ್ರಿಂದ ಪ್ರೂವ್ ಆಗಿದೆ. ಅಂದಹಾಗೆ ಈ ಬಾರಿ ಪ್ಯಾಲೇಸ್ ಗ್ರೌಂಡ್‌‌ನಲ್ಲಿ ಬಿಗ್ ಇವೆಂಟ್ ಮೂಲಕ ಈ ಹಾಡು ಲಾಂಚ್ ಆಗಿದ್ದು ವಿಶೇಷ. ದಸರಾ ಧಮಾಕ ಮಾಡೋಕೆ ಬರ್ತಿರೋ ಗೋಲ್ಡನ್ ಮೆಗಾಸ್ಟಾರ್ ಗಣೇಶ್‌ರ ಎಮೋಷನಲ್ ಫ್ಯಾಮಿಲಿ ಡ್ರಾಮಾದ ಕಲರ್‌‌‌ಫುಲ್ ಖಬರ್ ನಿಮಗಾಗಿ.

  • ರಾಗ, ತಾಳ, ಭಾಷೆ ಮೀರಿದ ಭಾವ.. ‘ಬೃಂದಾವಿಹಾರಿ’ ಪ್ರೀತಿ
  • ಅರಮನೆಯ ಆವರಣದಲ್ಲಿ ಐದನೇ ಗೀತೆ ಅದ್ಧೂರಿ ಲಾಂಚ್
  • ಈ ಹಾಡಿನ ಸಾಹಿತ್ಯಕ್ಕೆ ಕವಿರತ್ನ ತೆಗೆದುಕೊಂಡಿದ್ದು 60 ದಿನ
  • ದಸರಾಗೆ ಗೋಲ್ಡನ್ ಮೆಗಾಸ್ಟಾರ್ ಫ್ಯಾಮಿಲಿ ಡ್ರಾಮಾ ತೆರೆಗೆ

ಬೃಂದಾವಿಹಾರಿ.. ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಹಾಗೂ ಶ್ರೀನಿವಾಸ್ ರಾಜು ಕಾಂಬೋನ ಎರಡನೇ ಸಿನಿಮಾ. ಕೃಷ್ಣಂ ಪ್ರಣಯ ಸಖಿಯಂತೆ ಈ ಬಾರಿಯೂ ಮ್ಯೂಸಿಕ್ ವಿತ್ ಎಮೋಷನ್ಸ್ ಜೊತೆ ಆಟ ಆಡೋಕೆ ಬರ್ತಿದ್ದಾರೆ ಗಣಿ. ಸಮೃದ್ಧಿ ಮಂಜುನಾಥ್ ಈ ಸಿನಿಮಾನ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ನಾಲ್ಕು ಹಾಡುಗಳು ಈಗಾಗ್ಲೇ ಚಿತ್ರಪ್ರೇಮಿಗಳ ಕಣ್ಮನ ತಣಿಸಿವೆ. ಇದೀಗ ಐದನೇ ಹಾಡು ಕೂಡ ಹೊರಬಂದಿದೆ. ಯೆಸ್.. ಒಂದೇ ಒಂದು ಅನ್ನೋ ಈ ಪ್ರೇಮ ನಿವೇದನೆಯ ಗೀತೆ ಅರಮನೆ ಆವರಣದಲ್ಲಿ ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ.

RelatedPosts

‘ಕಾಮನ್‌ ಮ್ಯಾನ್‌’‌ CM ಆದ್ರು.. ಚಿತ್ರಪ್ರೇಮಿಗಳು ಏನಂದ್ರು?

ಮೈಸೂರಿನ ‘ಪಚ್ಚ’ನ ಮಾಸ್ ಜರ್ನಿ ಇಂದಿನಿಂದ ಜಿಯೋಹಾಟ್‌‌ಸ್ಟಾರ್‌ನಲ್ಲಿ

‘ಚಿತು’ ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಟ್ರಬಲ್‌ನಲ್ಲಿ ಫಹದ್ ಫಾಸಿಲ್..ಕಾಟ ಕೊಟ್ಟ ಮಗು ಯಾರು?

ADVERTISEMENT
ADVERTISEMENT

ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವ್ರ ಪತ್ನಿ ಪದ್ಮ ಮಂಜುನಾಥ್ ಬಿಡುಗಡೆ ಮಾಡಿದ ಈ ಹಾಡಿಗೆ ಕವಿರತ್ನ ಡಾ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಪೋಣಿಸಿದ್ದು, ಮುತ್ತುಗಳನ್ನ ಜೋಡಿಸಿದಂತಿದೆ ಪದಪುಂಜ. ಅದಕ್ಕಾಗಿ ಅವರು ಬರೋಬ್ಬರಿ 2 ತಿಂಗಳು ಸಮಯ ತೆಗೆದುಕೊಂಡು ಈ ಹಾಡನ್ನ ರಚಿಸಿದ್ದಾರೆ. ಕೆ ಎಸ್ ಚಿತ್ರ ಹಾಗೂ ಜಸ್ಕರಣ್ ಸಿಂಗ್ ಕಂಠದಲ್ಲಿ ಅಷ್ಟೇ ಸೊಗಸಾಗಿ ಮೂಡಿಬಂದಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿಮಗೆ ಎ ಆರ್ ರೆಹಮಾನ್‌‌ರ ಸಿಗ್ನೇಚರ್ ಮ್ಯೂಸಿಕ್‌‌ನ ನೆನಪಿಸುವಂತಿದೆ.

ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಹಾಗೂ ದೇವಿಕಾ ಭಟ್ ಹೆಜ್ಜೆ ಹಾಕಿರೋ ಈ ಹಾಡು ಅಕ್ಷರಶಃ ರಾಧಾ-ಕೃಷ್ಣರ ಪ್ರೇಮ ನಿವೇದನೆಯ ಕನ್ನಡಿಯಂತಿದೆ. ಅಕ್ಟೋಬರ್ 16ರಂದು ನಾಡಹಬ್ಬ ದಸರಾ ವಿಶೇಷ ಈ ಚಿತ್ರ ತೆರೆಗೆ ಬರಲಿದೆ.  ಈ ಕುರಿತು ಮಾತನಾಡಿದ ಗಣೇಶ್.. ಈ ಹಾಡನ್ನು ನೋಡಿದವ್ರು ನೀವು ತುಂಬಾ ಮುದ್ದಾಗಿ ಕಾಣುತ್ತೀರಾ ಹಾಗೂ ಅಭಿನಯ ಕೂಡ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನಾನು ಎಲ್ಲವನ್ನು ಪ್ರೀತಿಯಿಂದ ಮಾಡುತ್ತೇನೆ. ಆದ್ರೆ ಅದು ತೆರೆಯ ಮೇಲೆ ಚೆನ್ನಾಗಿ ಕಾಣಲು ನೀವೆಲ್ಲಾ ನನ್ನ ಮೇಲಿಟ್ಟಿರುವ ಪ್ರೀತಿಯೇ ಕಾರಣ. ಆ ಪ್ರೀತಿ ಸದಾ ಇರಲಿ ಎಂದರು.

ಕ್ರಿಕೆಟ್‌‌‌ನಿಂದ ನಮ್ಮ ನಡುವೆ ಸ್ನೇಹ ಆರಂಭವಾಯಿತು. ನನ್ನನ್ನು ಚಿತ್ರರಂಗಕ್ಕೆ ಕರೆತಂದವರು ಗಣೇಶ್ ಅವ್ರೇ. ಈಗ ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರಕ್ಕೆ ಅವರೇ ನಾಯಕರಾಗಿರುವುದು ಬಹಳ ಖುಷಿಯಾಗಿದೆ. ಬೃಂದಾವಿಹಾರಿ  ಒಂದೊಳ್ಳೆ ಕೌಟುಂಬಿಕ ಚಿತ್ರ. ಹಾಡುಗಳು ಒಂದಕ್ಕಿಂತ ಒಂದು ಅದ್ಭುತ. ಇಂದು ನಮ್ಮ ಸಮೃದ್ಧಿ ಸಂಸ್ಥೆಗೆ ಹದಿನೈದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಈ ಹಾಡು ಕೂಡ ಬಿಡುಗಡೆಯಾಗಿರುವುದು ಬಹಳ ಸಂತೋಷವಾಗಿದೆ. ಈ ಹಾಡನ್ನು ನಾನು ನಮ್ಮ ಸಮೃದ್ಧಿ ಸಂಸ್ಥೆಯ ಎಲ್ಲರಿಗೂ ಅರ್ಪಿಸುತ್ತೇನೆ ಅಂದ್ರು ನಿರ್ಮಾಪಕರು.

ಸಾಮಾನ್ಯವಾಗಿ 16ರಿಂದ 60 ವಯಸ್ಸಿನವರೆಗೂ ಎಲ್ಲಾ ಹೆಂಗಸರು ತಾವು ಪ್ರೀತಿಸುವ ಗಂಡಸರನ್ನು ಕೇಳುವ ಪ್ರಶ್ನೆ, ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಾ..? ಎಂದು. ಅವರೆಲ್ಲರ ಪ್ರಶ್ನೆಗೆ ಉತ್ತರವಾಗಿ ಈ ಹಾಡು ಮೂಡಿಬಂದಿದೆ ಅಂದ್ರು ಡೈರೆಕ್ಟರ್.

ಈ ಚಿತ್ರ ಒಂಥರಾ ಮ್ಯೂಸಿಕಲ್ ಮ್ಯಾರಥಾನ್. ಯಾಕಂದ್ರೆ ಬರೋಬ್ಬರಿ ಏಳು ಹಾಡುಗಳಿವೆ. ವಿಶೇಷ ಅಂದ್ರೆ ಎಲ್ಲಾ ಹಾಡುಗಳನ್ನು ದ್ವಿರುಕ್ತಿ ಬಳಸಿ ಬರೆದಿದ್ದಾರೆ ನಾಗೇಂದ್ರ ಪ್ರಸಾದ್. “ರಾಮ ರಾಮ”, ” ರಾಧೆ ರಾಧೆ” ಹೀಗೆ.‌ ಪ್ರಸ್ತುತ “ಒಂದೇ ಒಂದು” ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ತೆರೆಯ ಮೇಲೆ ನೋಡಿದ ಮೇಲೆ ಮನಸ್ಸು ತುಂಬಿ ಬಂದಿದೆ ಎಂದು ಗೀತರಚನೆಕಾರರಾದ ವಿ. ನಾಗೇಂದ್ರ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ರು.

ಅದ್ಧೂರಿಯಾಗಿ ಅನಾವರಣವಾದ ಈ ಒಂದೇ ಒಂದು ಹಾಡಿನ ಕೆಲವು ಸಾಲುಗಳನ್ನು ಹಾಡುವ ಮೂಲಕ‌ ಗಾಯಕ ಜಸ್ಕರಣ್ ಸಿಂಗ್ ಅಲ್ಲಿ ನೆರೆದಿದ್ದ ಜನಸಮೂಹವನ್ನು ರಂಜಿಸಿದ್ದು ಹೈಲೈಟ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಜ್ಞಾನೇಶ್ (3)

ಹೊಸ ಟಾಟಾ ಏರಿಸ್ ಸೆಡಾನ್ ಬಿಡುಗಡೆ: ಬೆಲೆ ಎಷ್ಟು?

by ಕವಿತಾ
September 25, 2026 - 3:03 pm
0

ಜ್ಞಾನೇಶ್ (2)

‘ಕಾಮನ್‌ ಮ್ಯಾನ್‌’‌ CM ಆದ್ರು.. ಚಿತ್ರಪ್ರೇಮಿಗಳು ಏನಂದ್ರು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 25, 2026 - 2:33 pm
0

ಜ್ಞಾನೇಶ್ (1)

ಪತಿ-ಪತ್ನಿ ಆತ್ಮಹತ್ಯೆಗೆ ಶರಣು: ಪೊಲೀಸರ ಕಿರುಕುಳ ಶಂಕೆ

by ಕವಿತಾ
September 25, 2026 - 2:27 pm
0

ಜ್ಞಾನೇಶ್

CEC ಜ್ಞಾನೇಶ್ ಕುಮಾರ್‌ಗೆ ರಾಜೀನಾಮೆ ಕೊಡದಿದ್ರೆ ಹೋರಾಟ: CJP ಆಗ್ರಹ

by ಕವಿತಾ
September 25, 2026 - 2:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಜ್ಞಾನೇಶ್ (2)
    ‘ಕಾಮನ್‌ ಮ್ಯಾನ್‌’‌ CM ಆದ್ರು.. ಚಿತ್ರಪ್ರೇಮಿಗಳು ಏನಂದ್ರು?
    September 25, 2026 | 0
  • Untitled design (38)
    ಮೈಸೂರಿನ ‘ಪಚ್ಚ’ನ ಮಾಸ್ ಜರ್ನಿ ಇಂದಿನಿಂದ ಜಿಯೋಹಾಟ್‌‌ಸ್ಟಾರ್‌ನಲ್ಲಿ
    September 25, 2026 | 0
  • Untitled design 2026 09 24T180700.683
    ‘ಚಿತು’ ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
    September 24, 2026 | 0
  • Untitled design 2026 09 24T175527.636
    ಟ್ರಬಲ್‌ನಲ್ಲಿ ಫಹದ್ ಫಾಸಿಲ್..ಕಾಟ ಕೊಟ್ಟ ಮಗು ಯಾರು?
    September 24, 2026 | 0
  • Untitled design 2026 09 24T170342.590
    ರೆಟ್ರೋ ಲವ್..ರಣಬಾಲಿಗೆ ಏಂದಯ್ಯ ಸಾಮಿ ಎಂದ ರಶ್ಮಿಕಾ
    September 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version