ನೂರಾರು ಹೆಣ್ಣು ಮಕ್ಕಳ ಜೊತೆ ಆಟ ಆಡಿದ ಕಾಮುಕ ಪ್ರಜ್ವಲ್ ರೇವಣ್ಣ ಸದ್ಯ ಜೈಲು ಪಾಲಾಗಿರೋದು ಗೊತ್ತೇಯಿದೆ. ಪ್ರಜ್ವಲ್ ಕೇಸ್‌ಗೆ ಸಂಬಂಧಿಸಿದಂತೆ ಈ ಹಿಂದೆ ಪೆನ್‌ಡ್ರೈವ್ ಅನ್ನೋ ಸಿನಿಮಾ ಬಂದಿತ್ತು. ಇದೀಗ ಮತ್ತೊಂದು ಸಿನಿಮಾ ಕೂಡ ಅದೇ ಪ್ರಕರಣವನ್ನು ಹೋಲುವ ಕಂಟೆಂಟ್‌ನಿಂದ ಸಂಚಲನ ಮೂಡಿಸಿದೆ. ಅದೇ ಫ್ಲರ್ಟ್. ಯಾರು ಯಾರನ್ನ ಫ್ಲರ್ಟ್ ಮಾಡಿದ್ರು..? ನೀವೇ ನೋಡಿ.
ಪ್ರಜ್ವಲ್ ಕೇಸ್‌ಗೆ ಸಿನಿಮಾ ರೂಪ.. ಇದು ‘ಫ್ಲರ್ಟ್’ ಕಥೆ
ನೂರಾರು ಮಂದಿ ಸಂತ್ರಸ್ತೆಯರು.. ಕೋರ್ಟ್ ಡ್ರಾಮಾ..!
ಪ್ರಜ್ವಲ್ ರೇವಣ್ಣ.. ನೂರಾರು ಹೆಣ್ಣು ಮಕ್ಕಳ ಜೊತೆ ಲೈಂಗಿಕ ಕ್ರಿಯೆ ಇಟ್ಟುಕೊಂಡು, ಅದನ್ನ ವಿಡಿಯೋ ಮಾಡಿಕೊಳ್ಳುವ ಮೂಲಕ ವಿಕೃತ ಮೆರೆದಿದ್ದ ಯುವ ರಾಜಕಾರಣಿ. ಅದೇ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಜ್ವಲ್‌ಗೆ ಕೋರ್ಟ್ ಜೀವಾವಧಿ ಶಿಕ್ಷೆ ಕೂಡ ನೀಡಿ ಆಗಿದೆ. ಇದೀಗ ಅದೇ ಪ್ರಜ್ವಲ್ ರೇವಣ್ಣನ ನೈಜ ಘಟನೆಗಳಿಗೆ ಹತ್ತಿರ ಆಗಿರೋ ಅಂಶಗಳಿಂದ ಕೂಡಿದ ಸಿನಿಮಾವೊಂದು ತೆರೆಗೆ ಬರೋಕೆ ಸಜ್ಜಾಗ್ತಿದೆ.
ಯೆಸ್.. ಈ ಫ್ಲರ್ಟ್ ಸಿನಿಮಾನ ಲಕ್ಷ್ಮೀ ಬಾರಮ್ಮ ಸೀರಿಯಲ್ ಹಾಗೂ ಬಿಗ್‌ಬಾಸ್ ಖ್ಯಾತಿಯ ಚಂದನ್ ನಟಿಸಿ, ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ನೂರಾರು ಮಂದಿಗೆ ಮೋಸ ಮಾಡಿದ್ದಾನೆ ಅಂತ ನಾಯಕನಟನ ಪೆನ್‌ಡ್ರೈವ್ ಇಟ್ಕೊಂಡು, ಕೋರ್ಟ್‌ಗೆ ಹೋಗುವ ಪ್ರಕರಣದ ಕುರಿತ ಕಂಪ್ಲೀಟ್ ಕೋರ್ಟ್ ಡ್ರಾಮಾ ಇದಾಗಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಹೀರೋ ಮೋಸ ಮಾಡಿದ್ನಾ ಅಥ್ವಾ ಅವರೇ ಈತನ ಮೇಲೆ ಫ್ಲರ್ಟ್ ಮಾಡ್ತಾ ಕೇಸ್ ಮಾಡಿದ್ರಾ ಅನ್ನೋದು ಮುಖ್ಯ ಆಗುತ್ತೆ.
ಈ ಹಿಂದೆ ‘ಪೆನ್‌ಡ್ರೈವ್’.. ಈಗ ಚಂದನ್ ‘ಫ್ಲರ್ಟ್’ ಚಿತ್ರ
ಬೆಳ್ಳಿತೆರೆಗೆ ಸೆನ್ಸೇಷನಲ್ ನೈಜ ಘಟನೆ.. ಸುದೀಪ್ ಗಾಯನ
ಇಂಟರೆಸ್ಟಿಂಗ್ ವಿಷ್ಯ ಏನಪ್ಪಾಂದ್ರೆ ಇತ್ತೀಚೆಗೆ ಸಂಚನಲ ಮೂಡಿಸಿದ್ದ ಪ್ರಜ್ವಲ್ ರೇವಣ್ಣ ಕೇಸ್‌ನ ಹೋಲುವಂತಿರೋ ಈ ಫ್ಲರ್ಟ್ ಮೂವಿಗೆ ಬಾದ್‌ಷಾ ಕಿಚ್ಚ ಸುದೀಪ್ ಕೂಡ ಹಾಡಿದ್ದಾರೆ. ದರ್ಶನ್ ಜೊತೆ ಸೊಂಟ ಬಳುಕಿಸಿದ್ದ ನಟಿ ನಿಮಿಕಾ ರತ್ನಾಕರ್ ಈ ಚಿತ್ರದ ನಾಯಕಿ. ಅಲ್ಲದೆ, ಹಾಸ್ಯ ಕಲಾವಿದ ಗಿರಿ, ಹಿರಿಯ ನಟಿ ಶ್ರುತಿ, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲಾ, ಅಕ್ಷಿತಾ ಬೋಪಯ್ಯ, ಮೂಗು ಸುರೇಶ್ ಸೇರಿದಂತೆ ಬಹುದೊಡ್ಡ ತಾರಾಗಣ ಇದರಲ್ಲಿದೆ. ಪ್ರಜ್ವಲ್ ಕಥೆಯಂತಿರೋ ಈ ಚಿತ್ರದ ರಿಲೀಸ್‌ಗೆ ಆಕ್ಷೇಪ ವ್ಯಕ್ತವಾಗುತ್ತಾ ಅನ್ನೋದು ನಿರೀಕ್ಷಿಸಬೇಕಿದೆ.





