ಮಲಯಾಳಂನ ದೃಶ್ಯಂ ಸೀರೀಸ್ ಸಿನಿಮಾಗಳು ಪ್ಯಾನ್ ಇಂಡಿಯಾ ಹಲ್‌ಚಲ್ ಎಬ್ಬಿಸಿದ ಪರಿ ಎಂಥದ್ದು ಅಂತ ನಿಮಗೆಲ್ಲಾ ಗೊತ್ತೇಯಿದೆ. ಆದ್ರೀಗ ಐದು ವರ್ಷಗಳ ನಂತ್ರ ದೃಶ್ಯಂ ಮೂರನೇ ಭಾಗ ಬರ್ತಿದೆ. ಅದೇ ದೃಶ್ಯಂ ಸರಣಿಯ ಎಂಡ್ ಗೇಮ್ ಆಗಿರಲಿದ್ದು, ರಿಲೀಸ್ ಡೇಟ್ ಫೈನಲ್ ಆಗಿದೆ. ಮೋಹನ್‌ಲಾಲ್ ಫ್ಯಾನ್ಸ್‌ಗೆ ಖುಷ್ ಆಗಿದ್ದು, ಎದೆ ನಡುಗಿಸೋ ಆ ಭಯಾನಕ ರಹಸ್ಯಗಳ ಅನಾವರಣಗೊಳಿಸೋ ಕೊನೆಯ ಅಧ್ಯಾಯದ ಕಹಾನಿ ನಿಮ್ಮ ಮುಂದೆ.
2013ರಲ್ಲಿ ತೆರೆಕಂಡ ಕ್ರೈಂ ಥ್ರಿಲ್ಲರ್ ದೃಶ್ಯಂ ಚಿತ್ರ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿತು. ಕಾರಣ ಅದರ ಕಥೆ, ನಿರ್ದೇಶನ, ಪಾತ್ರಗಳ ನಿರೂಪಣೆ ಹಾಗೂ ಮೇಕಿಂಗ್. ಹೌದು.. ಮೋಹನ್‌ಲಾಲ್ ಹಾಗೂ ಮೀನಾ ನಟಿಸಿದ್ದ ಈ ಸಿನಿಮಾಗೆ ಜೀತು ಜೋಸೆಫ್ ಆ್ಯಕ್ಷನ್ ಕಟ್ ಹೇಳಿದ್ರು. ಅದು ಹಿಟ್ ಆಗ್ತಿದ್ದಂತೆ ತೆಲುಗು, ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೆಲ್ಲಾ ಇದು ರಿಮೇಕ್ ಆಗಿ ಸೂಪರ್ ಹಿಟ್ ಆಯ್ತು. ನಂತ್ರ ದೃಶ್ಯಂ-2 ಕೂಡ ಬಂದಾಯ್ತು.

ಜಾರ್ಜ್ ಕುಟ್ಟಿ ಕಂಬ್ಯಾಕ್..ದೃಶ್ಯಂ-3 ದಿ ಎಂಡ್ ಗೇಮ್‌ಗೆ ಮುಹೂರ್ತ ಫಿಕ್ಸ್
ಮೇ 21ಕ್ಕೆ ದೃಶ್ಯಂ ಸೀರೀಸ್ ಕೊನೆಯ ಅಧ್ಯಾಯ ಅನಾವರಣ..!

ಇದೀಗ ದೃಶ್ಯಂ ಸೀರೀಸ್‌ನ ಮೂರನೇ ಸಿನಿಮಾ ದೃಶ್ಯಂ-3 ಸರದಿ. ಯೆಸ್.. ದೃಶ್ಯಂ-2 ಕ್ಲೈಮ್ಯಾಕ್ಸ್‌ನಲ್ಲೇ ಮೂಳೆಗಳನ್ನ ಸುಟ್ಟಿ ಹಾಕೋ ಮೂಲಕ ಯಾವುದೇ ಕುರುಹುಗಳಿಲ್ಲದಂತೆ ಕೇಸ್‌ನ ಹಳ್ಳ ಹಿಡಿಸಿದ್ರು ಜಾರ್ಜ್ ಕುಟ್ಟಿ. ಆದ್ರೀಗ ಅದೇ ಜಾರ್ಜ್ ಕುಟ್ಟಿ ಆ ಡಾರ್ಕ್ ಸೀಕ್ರೆಟ್ಸ್‌ನ ಬಯಲು ಮಾಡೋಕೆ ಎಂಡ್ ಗೇಮ್ ಆಡೋಕೆ ಬರ್ತಿದ್ದಾರೆ. ಇದೇ ಮೇ 21ರಂದು ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ ದೃಶ್ಯಂ-3. ಇದು ದೃಶ್ಯಂ ಸರಣಿಯ ಕಟ್ಟ ಕಡೆಯ ಸಿನಿಮಾ ಕೂಡ ಹೌದು.

ಗತ ಅನ್ನೋದು ಯಾವಾಗ್ಲೂ ಸೈಲೆಂಟ್ ಆಗಿ ಇರಲ್ಲ ಅನ್ನೋ ಟ್ಯಾಗ್‌ಲೈನ್ ಹೊಂದಿರೋ ಈ ದೃಶ್ಯಂ-3, ಕೆಲವು ರಹಸ್ಯಗಳು ಗೌಪ್ಯವಾಗಿರೋದೇ ಉತ್ತಮ ಅನಿಸುತ್ತೆ. ಆದ್ರೆ ಇಲ್ಲಿ ರಸಹ್ಯಗಳೇ ಇಲ್ಲ. ಅಂದು ಬಯಲಾಗದೇ ಇರೋ ವಿಷಯಗಳೆಲ್ಲಾ ಈಗ ಬಯಲಾಗ್ತಿವೆ ಅನ್ನೋದನ್ನ ಟೀಸರ್ ಮೂಲಕ ಬಿಟ್ಟುಕೊಟ್ಟಿತ್ತು. ಆದ್ರೆ ಜಾರ್ಜ್ ಕುಟ್ಟಿ ಪಾತ್ರಕ್ಕೆ ಜೀವ ತುಂಬಿರೋ ಮೋಹನ್‌ಲಾಲ್ ಕೊನೆಗೆ ಖಾಕಿ ಬಲೆಗೆ ಸಿಲುಕಿಕೊಂಡುಬಿಡ್ತಾರಾ..? ತನ್ನ ಕುಟುಂಬವನ್ನು ಆ ದುಃಸ್ವಪ್ನದಿಂದ ಪಾರು ಮಾಡೋಕೆ ಆಗಲ್ವಾ..? ಜೈಲು ಪಾಲಾಗ್ತಾರಾ..? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿವೆ.

ಗತ ಎಂದಿಗೂ ಸೈಲೆಂಟ್ ಆಗಿರಲ್ಲ..ರಟ್ಟಾಗಲಿದೆ ಕೊಲೆ ಗುಟ್ಟು..!
ಸುಟ್ಟಾಗಿತ್ತು ಮೂಳೆ..ಜೀತು ಜೋಸೆಫ್ ಕ್ಲೈಮ್ಯಾಕ್ಸ್ ಅಲ್ಟಿಮೇಟ್

ಇನ್ನೂ ಮಲಯಾಳಂ ಒರಿಜಿನಲ್ ಮೂವಿ ಮೇ 20ಕ್ಕೆ ತೆರೆಗೆ ಬಂದ್ರೆ, ಆ ಸೀರೀಸ್ ಹಿಂದಿಯಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗೋಕೆ ಕಾರಣ ಅಜಯ್ ದೇವಗನ್. ಸದ್ಯ ದೇವಗನ್ ಕೂಡ ದೃಶ್ಯಂ-3 ಮಾಡಿದ್ದು, ಅದು ಅಕ್ಟೋಬರ್ 2ರಂದು ಪ್ರೇಕ್ಷಕರ ಮುಂದೆ ಬರ್ತಿದೆ. ಈ ಕ್ರೈಂ ಥ್ರಿಲ್ಲರ್ ಮೂವಿಗಳು ಇದೇ ಬಗೆಯ ಸಾಲು ಸಾಲು ಕ್ರೈಂಗಳಿಗೆ ನಾಂದಿ ಹಾಡಿದ್ದು ಕೂಡ ನಿಮಗೆಲ್ಲಾ ಗೊತ್ತೇಯಿದೆ. ಆದ್ರೆ ದೃಶ್ಯಂ-3 ಕ್ಲೈಮ್ಯಾಕ್ಸ್ ಮತ್ತೆಷ್ಟು ಅಪರಾಧಗಳಿಗೆ ಮುನ್ನುಡಿ ಬರೆಯುತ್ತೋ ಅನ್ನೋ ಆತಂಕ ಕೂಡ ಪ್ರೇಕ್ಷಕರಲ್ಲಿದೆ.





