ಪೆದ್ದಿ ನಂತ್ರ ಪಕ್ಕದ ಟಾಲಿವುಡ್‌ನಲ್ಲಿ ಕೂರ್ಮಾವತಾರ ತಾಳಿದ್ದಾರೆ ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್. ಯೆಸ್.. ಮಹಾವಿಷ್ಣುವಿನ ದಶಾವತಾರಗಳಲ್ಲಿ ಇದು ಎರಡನೇ ಅವತಾರ ಆಗಿದ್ದು, ಡಿವೈನ್ ಫೀಲ್ ಜೊತೆ ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ಆಗಿದೆ ಟೀಸರ್. ಹಾಗಾದ್ರೆ ಶಿವಣ್ಣ ಜೊತೆ ಬೇರೆ ಯಾರೆಲ್ಲಾ ಸ್ಕ್ರೀನ್ ಶೇರ್ ಮಾಡಿದ್ದಾರೆ..? ಸ್ಟೋರಿಲೈನ್ ಏನು ಅನ್ನೋದ್ರ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ…
- ಕೂರ್ಮಾವತಾರ ತಾಳಿದ ಶಿವಣ್ಣ.. ಪೆದ್ದಿ ನಂತ್ರ ಶಿವಣ್ಣ ರಾಕ್ಸ್
- ಮಹಾವಿಷ್ಣುವಿನ ದಶಾವತಾರಗಳಲ್ಲಿ 2ನೇ ಅವತಾರ ಆಮೆ..!
- ಶಿವಣ್ಣ ಜೊತೆ ಸಾಯಿಕುಮಾರ್, ರಾಜ್ ತರುಣ್, ವರಲಕ್ಷ್ಮೀ
- ಸನಾತನದ ಟಚ್.. ಡಿವೈನ್ ಫೀಲ್.. ಶಿವಣ್ಣ ರುದ್ರ ತಾಂಡವ
ಕೂರ್ಮಾವತಾರ್.. ಪಕ್ಕದ ಟಾಲಿವುಡ್‌ನಲ್ಲಿ ತಯಾರಾಗ್ತಿರೋ ಮಿಸ್ಟರಿ ಥ್ರಿಲ್ಲರ್ ಸಿನಿಮಾ. ಅಫ್‌ಕೋರ್ಸ್ ಇದೊಂದು ಡಿವೈನ್ ಫೀಲ್ ಕೊಡುವ ಚಿತ್ರವೂ ಆಗಿದ್ದು, ಟೀಸರ್ ನೋಡುಗರ ಹುಬ್ಬೇರಿಸುವಂತಿದೆ. ಟೈಟಲ್ ಹೇಳುವಂತೆ ಇದು ಮಹಾವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಆಮೆಯ ಅವತಾರ ಆಗಿದ್ದು, ಅದೇ ಕಥಾನಕ ಇಟ್ಕೊಂಡು ಸಿನಿಮಾ ಮಾಡ್ತಿದೆ ಚಿತ್ರತಂಡ. ಇಂಟರೆಸ್ಟಿಂಗ್ ಅಂದ್ರೆ ಈ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ನಮ್ಮ ದೊಡ್ಮನೆ ದೊರೆ, ಕರುನಾಡ ಚಕ್ರವರ್ತಿ, ಲಿವಿಂಗ್ ಲೆಜೆಂಡ್ ಡಾ ಶಿವರಾಜ್‌ಕುಮಾರ್.
ನರೇಂದ್ರ ಕೊಂಡ ಅರ್ಪಿಸುವ, ಪಂಚವಕ್ತ್ರ ಪಿಕ್ಚರ್ಸ್ ಹಾಗೂ ರುಕ್ವಿನಾ ಸ್ಟುಡಿಯೋಸ್ ಬ್ಯಾನರ್‌ಗಳಡಿ ಪೂಜಿತಾ ಕೆ. ಮತ್ತು ಸೇವಿತಾ ಕೆ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಹರ್ಷವರ್ಧನ್ ಕಡಿಯಾಲ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೈದ್ರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಟೀಸರ್ ಲಾಂಚ್ ಇವೆಂಟ್‌ಗೆ ನಿರ್ಮಾಪಕ ದಿಲ್ ರಾಜು ಆಗಮಿಸಿ ಟೀಂಗೆ ಶುಭ ಕೋರಿದ್ರು. ಸದ್ಯದಲ್ಲೇ ಶಿವಣ್ಣ ಜೊತೆ ಸಿನಿಮಾ ಮಾಡೋ ಹಿಂಟ್ ಕೂಡ ನೀಡಿದ್ರು.
ನಾನು ಈ ಹಿಂದೆ ಬಾಲಕೃಷ್ಣ ಅವ್ರ ಗೌತಮೀಪುತ್ರ ಶಾತಕರ್ಣಿ ಹಾಗೂ ಇತ್ತೀಚೆಗೆ ರಾಮ್ ಚರಣ್ ಅಭಿನಯದ ಪೆದ್ದಿ ಸಿನಿಮಾದಲ್ಲಿ ನಟಿಸಿದ್ದೇನೆ. ಈಗ ಕೂರ್ಮಾವತಾರದಂತಹ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರ್ತಿರೋದು ಖುಷಿ ತಂದಿದೆ. ನಾನು ಯಾವತ್ತೂ ಹೊಸಬರು-ಹಳಬರು ಅಂತ ಭೇದ ಭಾವ ಮಾಡಲ್ಲ. ಕಥೆ ಮತ್ತು ನಿರ್ದೇಶಕರ ಮೇಲಿನ ನಂಬಿಕೆಯೇ ನನ್ನ ಆಯ್ಕೆ. ಈ ಚಿತ್ರದಲ್ಲಿ ಗೆಳೆಯ ಸಾಯಿಕುಮಾರ್ ಅವರೊಂದಿಗೆ ಮತ್ತೊಮ್ಮೆ ತೆರೆ ಹಂಚಿಕೊಂಡಿರುವುದು ವಿಶೇಷ ಅನುಭವ ನೀಡಿದೆ ಅಂದಿದ್ದಾರೆ ಶಿವಣ್ಣ.
ಈ ಚಿತ್ರದಲ್ಲಿ ಶಿವಣ್ಣ, ಇರುಮುಡಿ ಚಿತ್ರದಿಂದ ಸಂಚಲನ ಮೂಡಿಸಿರೋ ನಟ ಸಾಯಿಕುಮಾರ್ ಜೊತೆ ವರಲಕ್ಷ್ಮಿ ಶರತ್‌ಕುಮಾರ್, ರಾಜ್ ತರುಣ್, ಶಿವಾಜಿ, ಆತಿರಾ ರಾಜ್, ರಾಜಾ ರವೀಂದ್ರ, ಬಾಲನಟಿ ಲೌಕ್ಯ ಸಾಯಿ, ಸಪ್ತಗಿರಿ, ತಾಗುಬೋತು ರಮೇಶ್, ಶತ್ರು, ವಿಟಿವಿ ಗಣೇಶ್, ಗೆಟಪ್ ಶ್ರೀನು, ಮಹೇಶ್ ವಿಟ್ಟಾ.. ಹೀಗೆ ಬಹುದೊಡ್ಡ ತಾರಾಗಣವಿದೆ. ಜಗದೀಶ್ ಕ್ಯಾಮೆರಾ ಕೈಚಳಕ, ನಮ್ಮ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದ್ದು, ಗ್ರಾಫಿಕ್ಸ್ ಹಾಗೂ ಸ್ಪೆಷಲ್ ಎಫೆಕ್ಟ್ಸ್‌ನಿಂದ ಸಖತ್ ಇಂಪ್ರೆಸ್ಸೀವ್ ಆಗಿದೆ ಟೀಸರ್ ಝಲಕ್. ಸತಾನತದ ಟಚ್ ನೀಡಿರೋದ್ರಿಂದ ಇದು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ಕನೆಕ್ಟ್ ಕೂಡ ಆಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





