ಈ ಬಾರಿಯ ದಸರಾ ಹಬ್ಬಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಗೋಲ್ಡನ್ ಧಮಾಕಾ ಫಿಕ್ಸ್. ಪರಭಾಷೆ ಸಿನಿಮಾಗಳ ಆಕ್ರಮಣದ ನಡುವೆ, ಕನ್ನಡಿಗರನ್ನ ಥಿಯೇಟರ್‌ಗೆ ಸೆಳೆಯಲು ಬೃಂದಾವಿಹಾರಿ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಬರ್ತಿದ್ದಾರೆ. ಕೃಷ್ಣಂ ಪ್ರಣಯ ಸಖಿ ಬಿಗ್ ಹಿಟ್ ಬಳಿಕ ಶ್ರೀನಿವಾಸ್ ರಾಜು ನಿರ್ದೇಶನದ ಈ ಫ್ಯಾಮಿಲಿ ಎಂಟರ್‌ಟೈನರ್.. ಗಣೇಶನ ಹಬ್ಬದಂತಿಒರಲಿದ್ದು, ಫ್ಯಾಮಿಲಿ ಆಡಿಯೆನ್ಸ್‌ಗೆ ಫುಲ್ ಮೀಲ್ಸ್ ಗ್ಯಾರಂಟಿ.
- ಬೃಂದಾವಿಹಾರಿ ಫ್ಯಾಮಿಲಿ ಮೀಲ್ಸ್.. ಇದು ಗಣೇಶನ ಹಬ್ಬ ಗುರು
- ‘ಮೀರಾ’ ಜೊತೆ ಭಾವನೆಗಳ ಸರದಾರ ‘ಮಾಧವ’ನಾಗಿ ಗಣಿ ..!
- ಗಣೇಶ್-ಶ್ರೀನಿವಾಸ್ ಗೋಲ್ಡನ್ ಹಿಟ್ ಕಾಂಬೋ ಕಮಿಂಗ್..!
- ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ
ದಂಡುಪಾಳ್ಯ ಖ್ಯಾತಿಯ ಶ್ರೀನಿವಾಸ್ ರಾಜು ಕೃಷ್ಣಂ ಪ್ರಣಯ ಸಖಿ ಮೂಲಕ ತಮ್ಮ ರಫ್ ಅಂಡ್ ಟಫ್ ಇಮೇಜ್ ಸೈಡಿಗಿಟ್ಟು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ನೀಡಿದ್ರು. ಖಾಲಿ ಹೊಡೆಯುತ್ತಿದ್ದ ಥಿಯೇಟರ್‌ಗಳಿಗೆ ಪ್ರೇಕ್ಷಕರನ್ನು ಸೆಳೆದು, ಗಣೇಶ್‌ಗೆ ಭರ್ಜರಿ ಸಕ್ಸಸ್ ತಂದುಕೊಟ್ಟಿದ್ದರು. ಈಗ ಅದೇ ಸೂಪರ್ ಹಿಟ್ ಕಾಂಬಿನೇಷನ್ ಬೃಂದಾವಿಹಾರಿ ಸಿನಿಮಾ ಮೂಲಕ ಮರಳಿ ಚಾರ್ಮ್ ತರಲು ರೆಡಿಯಾಗಿದೆ.
ಸಮೃದ್ಧಿ ಮಂಜುನಾಥ್ ನಿರ್ಮಾಣದ ಈ ಚಿತ್ರದಲ್ಲಿ ಮಾಲವಿಕಾ ಶರ್ಮಾ ಹಾಗೂ ದೇವಿಕಾ ಭಟ್ ಗಣೇಶ್‌ಗೆ ಜೋಡಿಯಾಗಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದ ಏಳು ಹಾಡುಗಳು ಚಿತ್ರದಲ್ಲಿದ್ದು, ಈಗಾಗಲೇ ಜೀವ ಜೀವ, ರಾಧಾ ರಾಧಾ ಹಾಗು ರಾಮ ರಾಮ ಟ್ರ್ಯಾಕ್‌ಗಳು ಚಾರ್ಟ್‌ಬಸ್ಟರ್ ಆಗಿ ಧೂಳೆಬ್ಬಿಸಿವೆ. ಇನ್ನು ಗಣೇಶ್ ಇಲ್ಲಿ ಭಾವನೆಗಳಿಗೆ ಬೆಲೆ ಕೊಡುವ ಮಾಧವ ಅನ್ನೋ ಪಾತ್ರದಲ್ಲಿ ಮಿಂಚಿದ್ದಾರೆ. ವಿಶೇಷ ಅಂದರೆ ಕೃಷ್ಣಂ ಪ್ರಣಯ ಸಖಿ ಮಾದರಿಯಲ್ಲೇ ಈ ಚಿತ್ರಕ್ಕೂ ಯಾವುದೇ ಟ್ರೈಲರ್ ರಿಲೀಸ್ ಮಾಡುತ್ತಿಲ್ಲ. ಹಾಡುಗಳನ್ನೇ ಇನ್ವಿಟೇಷನ್ ಮಾಡಿ, ರಕ್ತಪಾತವಿಲ್ಲದ ಅಪ್ಪಟ ಫೀಲ್-ಗುಡ್ ಕೌಟುಂಬಿಕ ಕಥೆಯನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಅನೇಕ ರೋಚಕ ಸಂಗತಿಗಳನ್ನು ಹಂಚಿಕೊಂಡಿದೆ. ಅಕ್ಟೋಬರ್ 16ರಂದು ರಾಜ್ಯಾದ್ಯಂತ ತೆರೆಕಾಣಲಿರೋ ಬೃಂದಾವಿಹಾರಿ, ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಕೃಷ್ಣಂ ಪ್ರಣಯ ಸಖಿ ಮಾದರಿಯ ಮ್ಯಾಜಿಕ್ ರಿಪೀಟ್ ಮಾಡೋದಂತೂ ಗ್ಯಾರಂಟಿ ಎಂದು ಚಿತ್ರತಂಡ ಭರವಸೆ ನೀಡಿದೆ.
ಕೀರ್ತಿ ಪಾಟೀಲ್ , ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





