• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಬ್ಬಬ್ಬಾ..ಧನ್ವೀರ್ ಎಷ್ಟು ವಿಕೃತ ಗೊತ್ತಾ? 100% ಸೈಕೋಪಾಥ್

ಇದು ದರ್ಶನ್ ಶಿಷ್ಯ ಧನ್ವೀರನ ಕರಾಳ ಹಾಗೂ ಕ್ರೂರತ್ವ ಮುಖ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 28, 2026 - 2:13 pm
in ಸಿನಿಮಾ
0 0
0
Your paragraph text (98)

ಸಿನಿಮಾಗಳಲ್ಲಿ ನಾವು ಸೈಕೋಪಾಥ್‌‌ಗಳನ್ನ ನೋಡಿರ್ತೀವಿ. ಆದ್ರೆ ಸಿನಿಮಾ ಸ್ಟಾರ್‌‌ಗಳೇ ಸೈಕೋಪಾಥ್‌‌ಗಳ ರೀತಿ ಆಡೋದನ್ನ ನೋಡಿರಲ್ಲ. ಧನ್ವೀರ್ ಗೌಡ ಅನ್ನೋ ಬಡ್ಡಿಂಗ್ ಕಲಾವಿದ ರಿಯಲ್ ಲೈಫ್‌‌ನಲ್ಲಿ ಸಿಕ್ಕಾಪಟ್ಟೆ ವಿಕೃತಿ ಮೆರೆದು ಬಿಟ್ಟಿದ್ದಾನೆ. ಅಬ್ಬ್ಬಬ್ಬಾ.. ಆತ ಹುಡ್ಗರಿಗೆ ಟಾರ್ಚರ್ ಕೊಟ್ಟಿರೋ ವಿಡಿಯೋಗಳು ನೋಡಿದ್ರೆ ಪೊಲೀಸರು ಆತನನ್ನ ಇನ್ನೂ ಯಾಕೆ ಅರೆಸ್ಟ್ ಮಾಡಿಲ್ಲ ಅನ್ನೋ ಅನುಮಾನ ಕಾಡುತ್ತೆ. ಇಷ್ಟಕ್ಕೂ ಅಂಥದ್ದೇನು ಮಾಡಿದ ಈ ಮಹಾನುಭಾವ ಅಂತೀರಾ..? ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ…

  • ಅಬ್ಬಬ್ಬಾ.. ಧನ್ವೀರ್ ಎಷ್ಟು ವಿಕೃತ ಗೊತ್ತಾ? 100% ಸೈಕೋಪಾಥ್
  • ಇದು ದರ್ಶನ್ ಶಿಷ್ಯ ಧನ್ವೀರನ ಕರಾಳ ಹಾಗೂ ಕ್ರೂರತ್ವ ಮುಖ

ಪ್ರತಿಯೊಬ್ಬ ವ್ಯಕ್ತಿಗೂ ಎರಡೆರಡು ಮುಖಗಳಿರುತ್ತಂತೆ. ಕಲಾವಿದರುಗಳು ಕೂಡ ಅದರಿಂದ ಹೊರತಾಗಿಲ್ಲ. ಯಾಕಂದ್ರೆ ಸಿನಿಮಾಗಳಲ್ಲಿ ತೆರೆ ಮೇಲೆ ಪಾತ್ರಕ್ಕೆ ತಕ್ಕನಾಗಿ ಒಳ್ಳೆಯ ಹಾಗೂ ಕೆಟ್ಟ.. ಎರಡೂ ಬಗೆಯ ಪಾತ್ರಗಳನ್ನ ಮಾಡ್ತಾರೆ. ಆದ್ರೆ ಅವರುಗಳು ರಿಯಲ್ ಲೈಫ್‌‌ನಲ್ಲಿ ಬೇರೆಯದ್ದೇ ರೀತಿಯಲ್ಲಿ ಇರ್ತಾರೆ. ಹಾಗಾಗಿ ಪಾತ್ರಗಳಿಂದ ಅವ್ರ ಕ್ಯಾರೆಕ್ಟರ್‌‌ಗಳನ್ನ ಜಡ್ಜ್ ಮಾಡೋಕೆ ಆಗಲ್ಲ. ಹಾಗಂತ ಅದು ಎಲ್ಲರಿಗೂ ಅನ್ವಿಯಿಸುವುದೂ ಇಲ್ಲ. ಕೆಲವರು ಸಿನಿಮಾಗೆ ಬಣ್ಣ ಹಚ್ಚಿದಂತೆ ನಿಜ ಜೀವನಕ್ಕೂ ಮುಖವಾಡ ಹಾಕಿಕೊಂಡೇ ಸಮಾಜವನ್ನ ಯಾಮಾರಿಸ್ತಾ ಇರ್ತಾರೆ. ಅಂಥವ್ರ ಸಾಲಿಗೆ ಡಿಬಾಸ್ ದರ್ಶನ್ ಶಿಷ್ಯ ಧನ್ವೀರ್ ಗೌಡ ಸೇರಿಕೊಂಡಿದ್ದಾನೆ.

RelatedPosts

“ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ಇಷ್ಟವಿಲ್ಲ”; ಪತ್ನಿ ವಿಜಯಲಕ್ಷ್ಮೀ ಮಾತಿಗೆ ನಕ್ಕು ಹೌದ ಪುಟ್ಟ ಎಂದ ದರ್ಶನ್‌

ಚಂದನ್ ಶೆಟ್ಟಿ ‘ಮೈಮಾಟ’ ಸಾಂಗ್‌ಗೆ ಕೌಂಟರ್ ಕೊಟ್ರಾ ನಿವೇದಿತಾ? ಲವ್ ಲೈಫ್‌ನ ಪಾಸ್ಟ್‌ನ ಘೋಸ್ಟ್ ಯಾರು..?

‘ಕಲಾವಿದನ ಕುಟುಂಬವನ್ನೂ ಗೌರವಿಸಿ’: ಧನ್ವೀರ್‌‌ಗೆ ನಟಿ ಅಶ್ವಿನಿಗೌಡ ಟಾಂಗ್..?

“ಧಮ್ ಇದ್ರೆ ನಾನು ಹೊರಗೆ ಬಂದ್ಮೇಲೆ ಮಾತಾಡಲಿ”: ಜೈಲಿನಿಂದಲೇ ಧನ್ವೀರ್‌ಗೆ ದರ್ಶನ್ ವಾರ್ನಿಂಗ್

ADVERTISEMENT
ADVERTISEMENT

ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಅನ್ನುವಂತೆ.. ನಟ ದರ್ಶನ್ ಜೊತೆ ಇದ್ದುಕೊಂಡೇ.. ಆತನ ಶಿಷ್ಯ ಧನ್ವೀರ್ ಕೂಡ ಅದೇ ನಡೆ, ನುಡಿ, ಆಚಾರ, ವಿಚಾರ ಕಲಿತುಬಿಟ್ಟಿದ್ದಾನೆ. ಸಿನಿಮಾಗಳಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳೋದ್ರ ಜೊತೆಗೆ ನಿಜ ಜೀವನದಲ್ಲೂ ತಾನೊಬ್ಬ ಮಾಸ್ ಹೀರೋ ಅನ್ನೋದನ್ನ ಪ್ರೂವ್ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದಂತಾಗಿದೆ. ಧನ್ವೀರ್ ಮಾತು ಎಷ್ಟು ಅಸಭ್ಯ, ಅಸಹ್ಯ ಅನ್ನೋದನ್ನ ಆತನ ಆಡಿಯೋ ಕ್ಲಿಪ್ಸ್ ಮೂಲಕ ಇಡೀ ಕರುನಾಡಿಗೆ ಗೊತ್ತಾಗಿದೆ. ಇದೀಗ ಆತನ ನಡೆಯನ್ನ ಪ್ರಶ್ನಿಸುವಂತಹ ಆತನ ಫಾರ್ಮ್‌ಹೌಸ್‌‌ನಲ್ಲಿ ಚಿತ್ರಿತಗೊಂಡ ವಿಕೃತ ವಿಡಿಯೋಗಳು ಅಕ್ಷರಶಃ ಧನ್ವೀರ್ ದನಕಾಯೋದಕ್ಕೂ ಲಾಯಕ್ಕಿಲ್ಲ ಅನ್ನೋದನ್ನ ಹೇಳ್ತಿವೆ. ಅರೇ ಅಂಥದ್ದೇನು ಮಾಡ್ದ ಗುರು ಅಂತ ಹುಬ್ಬೇರಿಸೋಕೂ ಮುನ್ನ ಈ ವಿಡಿಯೋಗಳನ್ನ ಒಂದೊಂದಾಗೇ ನೋಡ್ಕೊಂಡ್ ಬನ್ನಿ.

ವಿಡಿಯೋ ನಂ.1
  • ಚಡ್ಡಿ ಕಿತ್ತು, ಗುಪ್ತಾಂಗ ನೋಡಿ.. ಮಜಾ ತಗೊಳೋ ಶೋಕಿ

ನಮ್ಮನ್ನ ನಂಬಿ ಜೊತೆಗಿದ್ದಾರೆ ಹುಡುಗರು ಅಂದ್ರೆ ಅವರನ್ನ ಸೋದರ ಸಮಾನತೆಯಿಂದ ನೋಡಿಕೊಳ್ಳೋದು ಮೊದಲ ಕರ್ತವ್ಯವಾಗಬೇಕು. ಆದ್ರೆ ಈ ದನ ಕಾಯೋ ಧನ್ವೀರ್ ಮಾಡಿದ್ದನ್ನ ನೀವೇ ನೋಡಿ. ಜೊತೆಗಿರೋ ಪಾಪದ ಹುಡುಗನ ಚಡ್ಡಿ ಕಿತ್ತು, ಆತನ ಗುಪ್ತಾಂಗ ನೋಡಿ ಮಜಾ ತಗೊಳ್ತಿದ್ದಾನೆ. ಅದೆಂಥಾ ವಿಕೃತಿ ಗುರು..? ಯಪ್ಪಾ.. ಇದನ್ನ ವಿಡಿಯೋ ಮಾಡಿಸಿದ ಧನ್ವೀರ್ ಮನಸ್ಥಿತಿ ಎಷ್ಟು ಕುಲಗೆಟ್ಟೋಗಿದೆ ಅಂತ ನೀವೇ ಊಹಿಸಿಕೊಳ್ಳಿ.

ವಿಡಿಯೋ ನಂ.2
  • ಹಗ್ಗದಿಂದ ಹಲ್ಲೆ.. ಅಂಗಲಾಚಿ ಬೇಡಿಕೊಂಡ್ರೂ ಬಿಡದೆ ಧಮ್ಕಿ

ಏನ್ ನಿಂದು..? ತಪ್ಪು ಮಾಡಿದ್ದೀಯ.. ಎರಡೂ ಕೈ ತೆಗಿ, ಬೆರಳು ಮಡಿಚು ಅಂತ ಹಗ್ಗ ತೆಗೆದು ಫಾರ್ಮ್ ಹೌಸ್‌‌‌ನಲ್ಲಿ ಕೆಲಸ ಮಾಡುವ ಪಾಪದ ಹುಡುಗನ ಮೇಲೆ ಹಲ್ಲೆ ಮಾಡಿದ್ದಾನೆ ಧನ್ವೀರ್. ಅಣ್ಣಾ ಪ್ಲೀಸ್ ಅಣ್ಣಾ.. ಬಿಟ್ಟುಬಿಡಣ್ಣಾ.. ನಾ ತಪ್ಪು ಮಾಡಿದ್ರೆ ಎಕ್ಕಡದಲ್ಲಿ ಹೊಡೆಯಣ್ಣಾ ಅಂತ ಅಂಗಲಾಚಿ ಪರಿ ಪರಿಯಾಗಿ ಬೇಡಿಕೊಂಡ್ರೂ ಬಿಡದೆ ಹಲ್ಲೆ ಮಾಡಿದ್ದಾನೆ ಧನ್ವೀರ್ ಅನ್ನೋ ಈ ಭೂಪ.

ವಿಡಿಯೋ ನಂ.3
  • ನೈಟ್ರೋಜನ್ ಕಂಟೈನರ್‌‌ನಿಂದ ನೈಟ್ರೋಜನ್ ಹಾಕಿ ವಿಕೃತಿ

ಸಾಮಾನ್ಯವಾಗಿ ರೈತರು ತಮ್ಮ ಬೆಳೆಗಳು ಹಾಳಾಗದಂತೆ ಪೆಸ್ಟಿಸೈಡ್ಸ್ ಬಳಸ್ತಾರೆ. ಅವುಗಳನ್ನ ಶೇಖರಿಸಿ ಇಡಲು ನೈಟ್ರೋಜನ್ ಕಂಟೈನರ್‌‌ ಬಳಸ್ತಾರೆ. ಧನ್ವೀರ್ ಕೂಡ ತಮ್ಮ ಫಾರ್ಮ್ ಹೌಸ್‌‌ನಲ್ಲಿ ಅಂಥದ್ದೇ ಒಂದು ಕಂಟೈನರ್ ತಂದಿಟ್ಟಿದ್ದಾರೆ. ಅದ್ರಿಂದ ಸಿಕ್ಕಾಪಟ್ಟೆ ಕೋಲ್ಡ್ ಆಗಿರೋ ಆ ನೈಟ್ರೋಜನ್‌ನ ತೆಗೆದು ಹುಡುಗನ ಮೈ ಮೇಲೆ ಹಾಕಿಸಿದ್ದಾನೆ. ಅದೂ ಆ ಹುಡ್ಗ ಎದ್ದು ಓಡಿ ಹೋಗಬಾರದು ಅಂತ ಕೈಯಲ್ಲಿ ಬೆತ್ತ ಹಿಡಿದು ಏಯ್ ಕೂತ್ಕೋ ಅಂತ ಆವಾಜ್ ಬೇರೆ ಹಾಕ್ತಿದ್ದಾನೆ ಈ ಸೈಕೋಪಾಥ್ ದನ ವೀರ.

ವಿಡಿಯೋ ನಂ.4
  • 42.8% ರಾ ಆಲ್ಕೋಹಾಲ್ ಕುಡಿಸಿ ದರ್ಪ.. ಧಿಮಾಕು

ಪಾರ್ಟಿ ಎಲ್ಲರೂ ಮಾಡ್ತಾರೆ. ಆದ್ರೆ ಅದು ಹದ್ದು ಮೀರದಂತೆ ಇದ್ರೆ ಚೆಂದ. ಖುಷಿ, ದುಃಖಕ್ಕೆ ಮಾಡೋ ಪಾರ್ಟಿಗಳಲ್ಲಿ ಅತಿರೇಕದ ವರ್ತನೆಗಳು ಎಷ್ಟು ಮಟ್ಟಿಗೆ ಸರಿ ನೀವೇ ಹೇಳಿ. ಧನ್ವೀರ್ ಅಂತಹ ಪಾರ್ಟಿಗಳಲ್ಲಿ ತಮ್ಮ ಹುಡುಗರಿಗೆ ರಾ ಆಲ್ಕೋಹಾಲ್ ಕುಡಿಸಿ, ಲಿವರ್ ಡ್ಯಾಮೇಜ್ ಮಾಡಿದ್ದಾನೆ. ಹೌದು.. 42.8 ಪರ್ಸೆಂಟ್‌‌ಗೂ ಅಧಿಕ ಆಲ್ಕೋಹಾಲ್ ಕಂಟೆಂಟ್ ಇರೋ ಬ್ಲಾಕ್ & ವೈಟ್ ಬ್ಲೆಂಡೆಡ್ ಸ್ಕಾಚ್ ಕುಡಿಸುವ ವಿಡಿಯೋಗಳು ನೋಡುಗರ ಹುಬ್ಬೇರಿಸುವಂತಿವೆ. ಅದೂ ಇಬ್ಬರಿಗಲ್ಲ ಇಬ್ಬರಿಗಲ್ಲ.. ಆಲ್ಮೋಸ್ಟ್ ಅಲ್ಲಿರೋ ಎಲ್ಲಾ ಹುಡ್ಗರಿಗೂ ಅನ್ನೋದೇ ಬಿಗ್ ಶಾಕಿಂಗ್.

ನೋಡಿದ್ರಲ್ಲಾ ಈತ ನೋಡೋಕಷ್ಟೇ ತೆರೆ ಮೇಲೆ ಹೀರೋ. ನಿಜ ಜೀವನದಲ್ಲಿ ಅಕ್ಷರಶಃ ಡೆವಿಲ್ ಗುರು. ದೆವ್ವ ಮೈಮೇಲೆ ಬಂದವ್ನ ರೀತಿ ಆಡ್ತಾನೆ ಅನ್ನೋದಕ್ಕೆ ಇಲ್ಲಿರೋ ವಿಕೃತ ವಿಡಿಯೋಗಳೇ ಸಾಕ್ಷಿ. ಇಂತಹ ಶೋಕಿಗಳು ಈ ಶೋಕ್ದಾರನಿಗೆ ಬೇಕಾ..? ಹೊರಗೆ ಬಂದಿರೋದು ಇಷ್ಟೇ ವಿಡಿಯೋಗಳು. ಇನ್ನೂ ಹೊರಕ್ಕೆ ಬರಬೇಕಿರೋ ವಿಡಿಯೋಗಳು ಎಷ್ಟಿವೆಯೋ ಏನೋ ದೇವರೇ ಬಲ್ಲ.

  • ಮಾಡಿದ್ದು ಐದೇ ಸಿನಿಮಾ.. ಆದ್ರೆ ಕೇಸ್‌‌ಗಳು ಮಾತ್ರ 7ಕ್ಕೂ ಅಧಿಕ
  • ಬಜಾರ್ ಸ್ಟಾರ್ ಬದುಕು ಕೊನೆಗೂ ಬಂದೇ ಬಿಡ್ತು ಬಜಾರ್‌ಗೆ..!!

ಡಿಬಾಸ್ ದರ್ಶನ್ ಹೆಸರು ಹೇಳಿಕೊಂಡು ಬಂದ ಮಾತ್ರಕ್ಕೆ ಯಾರ ಕೈಯಲ್ಲೂ ದರ್ಶನ್ ಆಗೋಕೆ ಆಗಲ್ಲ. ಇನ್‌ಫ್ಯಾಕ್ಟ್ ರೆಬೆಲ್ ಸ್ಟಾರ್ ಆಗೋಕೆ ಹೋದ ದಾಸನಿಗೇ ಅದು ಸಾಧ್ಯವಾಗಲಿಲ್ಲ. ಅದೇ ರೀತಿ ಮೊದ ಮೊದಲು ದಾಸ ಅಭಿಮಾನಿಯಾಗಿ ಪರಿಚಯ ಆದ ಧನ್ವೀರ್, ಕೊನೆಗೆ ದಚ್ಚು ಬಲಗೈ ಭಂಟನಾದ. ರಕ್ತ ಹಂಚಿಕೊಂಡು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ರೂ ಸಹ.. ಒಡಹುಟ್ಟಿದವರ ರೇಂಜ್‌ಗೆ ದರ್ಶನ್ ಜೊತೆ ಪೋಸ್ ಕೊಟ್ಟ ಧನ್ವೀರ್. ಆದ್ರೆ ಇಷ್ಟು ಬೇಗ ಈತನ ಮುಖವಾಡ ಬಟಾ ಬಯಲಾಗುತ್ತೆ ಅಂತ ಬಹುಶಃ ಧನ್ವೀರ್‌ಗೇ ಗೊತ್ತಿರಲಿಲ್ಲ ಅನಿಸುತ್ತೆ. ವಿಧಿಯ ಆಟದಲ್ಲಿ ಗೊಂಬೆ ಆಗಿಬಿಟ್ಟ.

ಅಂದಹಾಗೆ ಧನ್ವೀರ್ ಮಾಡಿರೋದು ಐದೇ ಐದು ಸಿನಿಮಾ. ಅದ್ರಲ್ಲಿ ಒಂದೂ ಹಿಟ್ ಮೂವಿ ಇಲ್ಲ. ಬಾಡಿ ಅಲ್ಲಾಡಿಸದೆ ರೋಬೋ ರೀತಿ ನಟಿಸ್ತೀನಿ ಅಂದ್ರೆ ಪ್ರೇಕ್ಷಕರು ಒಪ್ಪೋಕೆ ಸಾಧ್ಯವೇ. ನೋ ವೇ.. ಚಾನ್ಸೇ ಇಲ್ಲ. ಧನು ಮಾಡಿದ ಸಿನಿಮಾಗಳ ಸಂಖ್ಯೆಗಿಂತ ಆತನ ಮೇಲೆ ಬಿದ್ದಿರೋ ಕೇಸ್‌‌ಗಳ ಸಂಖ್ಯೆಯೇ ಜಾಸ್ತಿ ಇವೆ. ಹೌದು.. ಒಂದಲ್ಲ ಎರಡಲ್ಲ ಬರೋಬ್ಬರಿ ಏಳೆಂಟು ಕೇಸ್‌‌ಗಳು ಧನ್ವೀರ್ ಮೇಲೆ ದಾಖಲಾಗಿವೆ. ಅವುಗಳಲ್ಲಿ ED ಹಾಗೂ IT ಕೇಸ್‌‌ಗಳು ಕೂಡ ಇವೆ ಅನ್ನೋದು ಅಚ್ಚರಿಯ ಸಂಗತಿ.

10 ಕೋಟಿ ರೂಪಾಯಿ ಅಕ್ರಮ ನಗದು ವ್ಯವಹಾರ ಮಾಡಿರೋ ವಿಚಾರ ED & IT ಕೇಸ್ ದಾಖಲಾಗಿದೆ. ಹೈಕೋರ್ಟ್ ವಕೀಲ ಪ್ರಶಾಂತ್ ಮೆಥಲ್ ನಟ ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವೆ ಕಾನೂನು ಬಾಹಿರವಾಗಿ ₹9 ರಿಂದ ₹10 ಕೋಟಿ ಮೊತ್ತದ ನಗದು ವ್ಯವಹಾರ ನಡೆದಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ(ED) ಹಾಗೂ ಆದಾಯ ತೆರಿಗೆ ಇಲಾಖೆ(IT)ಗೆ ದೂರು ನೀಡಿದ್ದಾರೆ. ದರ್ಶನ್ ಅವರ ಕಾನೂನು ಹೋರಾಟ ಅಂದ್ರೆ ಲಾಯರ್ ಫೀಸ್ ಹೆಸರಿನಲ್ಲಿ ಈ ಹಣದ ವರ್ಗಾವಣೆ ನಡೆದಿದೆ ಎನ್ನಲಾಗಿದ್ದು, ತನಿಖೆಗೆ ಒತ್ತಾಯಿಸಲಾಗಿದೆ.

ಆರ್ ಆರ್ ನಗರ ಪೊಲೀಸ್ ಸ್ಟೇಷನ್‌‌ನಲ್ಲಿ ಕೊಲೆ ಬೆದರಿಕೆ ಹಾಗೂ ನಿಂದನೆ ಪ್ರಕರಣ ದಾಖಲು. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವ್ರ ಆಪ್ತ ಹಾಗೂ ಮ್ಯಾನೇಜರ್ ನಾಗರಾಜ್ ಎಂಬುವವರಿಗೆ ಧನ್ವೀರ್ ಫೋನ್ ಮಾಡಿ ತೀವ್ರವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಅಂತ ಆರೋಪಿಸಿ ಕೇಸ್ ಫೈಲ್ ಮಾಡಲಾಗಿದೆ. ಬಸವೇಶ್ವರನಗರ ಠಾಣೆಯಲ್ಲಿ ಮತ್ತೊಂದು ಬೆದರಿಕೆ ದೂರು ದಾಖಲು. ಹೌದು.. ಧನ್ವೀರ್ ತಂದೆ ರಾಜಾಜಿನಗರ ಠಾಣೆಯಲ್ಲಿ ನೀಡಿದ್ದ ದೂರಿಗೆ ಕೌಂಟರ್ ಆಗಿ ಭೋಜರಾಜ್ ರೈ ಎಂಬುವವರು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಧನ್ವೀರ್ ಅವರ ಮೊಬೈಲ್ ಸಂಖ್ಯೆಯಿಂದ ತಮಗೆ ‘ನಿನ್ನ ಲೊಕೇಶನ್ ಕಳುಹಿಸು’ ಅಂತ ಬೆದರಿಕೆ ಸಂದೇಶಗಳು ಬಂದಿವೆ ಎಂದು ಅವರು ಆರೋಪಿಸಿದ್ದಾರೆ.

ಬ್ಯಾಟರಾಯನಪುರ ಠಾಣೆಯಲ್ಲಿ ವಂಚನೆ ಮತ್ತು ಕಾರು ಜಪ್ತಿ ಆರೋಪದಡಿ ಕೇಸ್. ಗೌರವ್ ಎಂಬ ವ್ಯಕ್ತಿ ಧನ್ವೀರ್ ವಿರುದ್ಧ ವಂಚನೆ ದೂರು ದಾಖಲಿಸಿದ್ದು, ಫ್ಲೈಟ್ ಟಿಕೆಟ್ ಬುಕಿಂಗ್‌ಗಾಗಿ ಖರ್ಚು ಮಾಡಿದ್ದ 5 ಲಕ್ಷ ರೂಪಾಯಿ ಹಣವನ್ನ ವಾಪಸ್ ನೀಡದೆ ವಂಚಿಸಿದ್ದಾರೆ ಎಂದಿದ್ದಾರೆ. ಅಲ್ಲದೆ ಶಶಿ ಎಂಬುವವರಿಗೆ ಸೇರಿದ ಕಾರನ್ನು ಹಿಂದಿರುಗಿಸದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಅಂತ ಆ ದೂರಿನಲ್ಲಿ ಆರೋಪಿಸಲಾಗಿದೆ.

ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಸಚಿವ ಜಮೀರ್ ಅಹ್ಮದ್ ಹಾಗೂ ನಟ ಝೈದ್ ಖಾನ್‌ಗೆ ನಿಂದಿಸಿರೋ ಆರೋಪದಡಿ ಮತ್ತೊಂದು ಕೇಸ್ ಫೈಲ್ ಆಗಿದೆ. ಇತ್ತೀಚಿನ ಗಲಾಟೆಯ ನಡುವೆ ಕರ್ನಾಟಕ ಸರ್ಕಾರದ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ನಿಂದಿಸಿದ ಆರೋಪದ ಮೇಲೆ ಈ ದರ್ಶನ್ ಶಿಷ್ಯ ಮತ್ತೊಂದು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಇವೆಲ್ಲಾ ಸಾಲದು ಅಂತ ಜೈಲಿನ ವಿಡಿಯೋ ಸೋರಿಕೆ ಪ್ರಕರಣದಲ್ಲಿ ಸಿಸಿಬಿ ಕೂಡ ಧನ್ವೀರ್ ಹಿಂದೆ ಬಿದ್ದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಹಾಗೂ ಆರೋಪಿಗಳಿಗೆ ರಾಜಾತಿಥ್ಯ ನೀಡಲಾದ ದೃಶ್ಯಗಳು ಹಾಗೂ ವಿಡಿಯೋಗಳು ಸೋರಿಕೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸಿಬಿ ಪೊಲೀಸರು ಧನ್ವೀರ್‌‌ನ ಲಾಕ್ ಮಾಡ್ತಿದ್ದಾರೆ. ಇವುಗಳ ಜೊತೆಗೆ ಈಗ ಧನ್ವೀರ್ ತನ್ನ ಹುಡುಗರಿಗೆ ಫಾರ್ಮ್ ಹೌಸ್‌‌ನಲ್ಲಿ ನೀಡಿರೋ ಟಾರ್ಚರ್ ವಿಡಿಯೋಗಳು ಪೊಲೀಸರೇ ಸುಮೋಟೋ ಕೇಸ್ ಹಾಕಿ ತನಿಖೆ ನಡೆಸುವಂತಾಗಿದೆ. ಒಟ್ಟಾರೆ ಬಜಾರ್ ಸ್ಟಾರ್ ಬದುಕು ಬಜಾರ್‌ಗೆ ಬಂದಿರೋದು ಸುಳ್ಳಲ್ಲ.

  • ದುರಹಂಕಾರಿ ಧನ್ವೀರ್‌‌ ಖೇಲ್ ಖತಂ.. ನಾಟಕ್ ಬಂದ್ ಗುರು.!
  • ಪ್ರೂಫ್ ಇದ್ರೆ ಪ್ರೆಸ್‌‌ ಮುಂದೆ ಬರ್ಲಿ.. ಹೆದರ್ಕೊಂಡ್ ಎಸ್ಕೇಪ್ ಏಕೆ?

ಮಾತು ಆಡಿದ್ರೆ ಹೋಯ್ತು.. ಮುತ್ತು ಹೊಡೆದ್ರೆ ಹೋಯ್ತು ಅಂತಾರೆ. ಆದ್ರೆ ಧನ್ವೀರ್‌‌ಗೆ ಬಾಯಿ ಮೊದಲೇ ಸರಿ ಇಲ್ಲ. ಕೈ ಆದ್ರೂ ಶುದ್ಧವಾಗಿದೆಯೇ ಅಂತ ನೋಡಿದ್ರೆ ಅದೂ ಗಲೀಜು. ಒಟ್ಟಾರೆ ವಿಜಯಲಕ್ಷ್ಮೀ ದರ್ಶನ್, ಝೈದ್ ಖಾನ್, ಜಮೀರ್ ಖಾನ್, ಸಿಎಂ ಡಿಕೆಶಿ, ಪ್ರಧಾನಿ ಮೋದಿ, ಅಭಿಷೇಕ್ ಅಂಬರೀಶ್, ಸುಮಲತಾ.. ಹೀಗೆ ಎಲ್ಲರಿಂದ ನಿಷ್ಟುರಕ್ಕೆ ಒಳಗಾಗಿದ್ದಾನೆ. ಎಲ್ಲಕ್ಕಿಂತ ಮಿಗಿಲಾಗಿ ನೇರವಾಗಿ ಡಿಬಾಸ್ ದರ್ಶನ್ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಪ್ರೂಫ್ ಇದ್ರೆ ಆತ ನೇರವಾಗಿ ಮೀಡಿಯಾ ಮುಂದೆ ಬರಲಿ. ವಿಜಯಲಕ್ಷ್ಮೀ ಮೇಲೆ ಮಾಡಿರೋ ಎಲ್ಲಾ ಆರೋಪಗಳಿಗೆ ದಾಖಲೆ ಒದಗಿಸಲಿ.

ಅದು ಬಿಟ್ಟು ಹೇಡಿಯಂತೆ ಹೆದರಿಕೊಂಡು ಓಡಾಡ್ತಿರೋದು ಏಕೆ..? ಮಾಧ್ಯಮಗಳ ಕ್ಯಾಮೆರಾಗಳಿಂದ ದೂರ ಓಡ್ತಿರೋದಾದ್ರೂ ಯಾಕೆ..? ಒಟ್ಟಿನಲ್ಲಿ ದುರಹಂಕಾರಿ  ಧನ್ವೀರನ ಖೇಲ್ ಖತಂ ಆಗಿದೆ. ಇನ್ಮೇಲೆ ಆತನ ಎಲ್ಲಾ ನಾಟಕ ಬಂದ್ ಆಗೋದು ಗ್ಯಾರಂಟಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 10 28T143820.018

“ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ಇಷ್ಟವಿಲ್ಲ”; ಪತ್ನಿ ವಿಜಯಲಕ್ಷ್ಮೀ ಮಾತಿಗೆ ನಕ್ಕು ಹೌದ ಪುಟ್ಟ ಎಂದ ದರ್ಶನ್‌

by ಶಾಲಿನಿ ಕೆ. ಡಿ
October 28, 2026 - 2:41 pm
0

Your paragraph text (98)

ಅಬ್ಬಬ್ಬಾ..ಧನ್ವೀರ್ ಎಷ್ಟು ವಿಕೃತ ಗೊತ್ತಾ? 100% ಸೈಕೋಪಾಥ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 28, 2026 - 2:13 pm
0

ಎಷ್ಟಿದೆ

ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿ ಎಷ್ಟಿದೆ? ಇಲ್ಲಿದೆ ಇಂದಿನ ದರ ವಿವರ

by ಶಾಲಿನಿ ಕೆ. ಡಿ
October 28, 2026 - 1:43 pm
0

Untitled Design 2026 10 28T131540.904

ಮೆಂಟೋಸ್ ತಿಂದ್ರೆ ಇಂಥಾ ಬಿರುಗಾಳಿ ಏಳುತ್ತಾ? ನಕ್ಕು ನಗಿಸುತ್ತೆ ‘ಫ್ರೆಶ್ ಆಕ್ಷನ್’ ಕ್ಯಾಂಡಿಯ ಹೊಸ ಜಾಹೀರಾತು!

by ಶಾಲಿನಿ ಕೆ. ಡಿ
October 28, 2026 - 1:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 28T143820.018
    “ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ಇಷ್ಟವಿಲ್ಲ”; ಪತ್ನಿ ವಿಜಯಲಕ್ಷ್ಮೀ ಮಾತಿಗೆ ನಕ್ಕು ಹೌದ ಪುಟ್ಟ ಎಂದ ದರ್ಶನ್‌
    October 28, 2026 | 0
  • Untitled Design 2026 10 28T125359.339
    ಚಂದನ್ ಶೆಟ್ಟಿ ‘ಮೈಮಾಟ’ ಸಾಂಗ್‌ಗೆ ಕೌಂಟರ್ ಕೊಟ್ರಾ ನಿವೇದಿತಾ? ಲವ್ ಲೈಫ್‌ನ ಪಾಸ್ಟ್‌ನ ಘೋಸ್ಟ್ ಯಾರು..?
    October 28, 2026 | 0
  • Untitled Design 2026 10 28T101955.566
    ‘ಕಲಾವಿದನ ಕುಟುಂಬವನ್ನೂ ಗೌರವಿಸಿ’: ಧನ್ವೀರ್‌‌ಗೆ ನಟಿ ಅಶ್ವಿನಿಗೌಡ ಟಾಂಗ್..?
    October 28, 2026 | 0
  • “ಧಮ್ ಇದ್ರೆ ನಾನು ಹೊರಗೆ ಬಂದ್ಮೇಲೆ ಮಾತಾಡಲಿ” ಜೈಲಿನಿಂದಲೇ ಧನ್ವೀರ್ ಗೆ ದರ್ಶನ್ ವಾರ್ನಿಂಗ್
    “ಧಮ್ ಇದ್ರೆ ನಾನು ಹೊರಗೆ ಬಂದ್ಮೇಲೆ ಮಾತಾಡಲಿ”: ಜೈಲಿನಿಂದಲೇ ಧನ್ವೀರ್‌ಗೆ ದರ್ಶನ್ ವಾರ್ನಿಂಗ್
    October 27, 2026 | 0
  • Untitled Design 2026 10 27T181437.191
    ಧನ್ವೀರ್ ವಿವಾದದ ಬೆನ್ನಲ್ಲೇ ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮೀ, ಝೈದ್ ಖಾನ್
    October 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version