ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಪಾಲಿಟಿಕ್ಸ್‌ಗೆ ಬರೋದು ಕನ್ಫರ್ಮ್. ಸಾಕಷ್ಟು ರಾಜಕಾರಣಿಗಳ ನಂಟಿರೋ ದಚ್ಚುಗೆ, ಚುನಾವಣಾ ಪ್ರಚಾರ ಕೂಡ ಹೊಸತೇನಲ್ಲ. ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇರೋ ದಾಸ ದರ್ಶನ್, ಯಾವ ಪಾರ್ಟಿ ಮೂಲಕ ರಾಜಕೀಯಕ್ಕೆ ಧುಮುಕ್ತಾರೆ..? ಯಾವಾಗ ಪಾಲಿಟಿಕ್ಸ್ ಎಂಟ್ರಿ ಅನ್ನೋ ಈ ಎಕ್ಸ್‌ಕ್ಲೂಸಿವ್ ಧಮಾಕೇದಾರ್ ಸ್ಟೋರಿ ನೋಡಿ.
ನಾನು ಅಧಿಕಾರದ ಆಸೆಯಿಂದ ಬಂದಿಲ್ಲ. ಅಧಿಕಾರನೇ ಆಸೆ ಪಟ್ಟು ನನ್ನ ಇಲ್ಲಿ ಕರೆಸಿಕೊಂಡಿದೆ. ಇನ್ಮುಂದೆ ಅಧಿಕಾರನೂ ನಂದೇನೇ. ಆಜ್ಞೆನೂ ನಂದೇನೇ. ನನ್ನ ಫೇಸ್ ಮಾಡ್ಬೇಕು ಅಂದ್ರೆ, ಗುಂಡಿಗೆಯಲ್ಲಿ ಧಮ್ ಇರ್ಬೇಕು. ಈ ಡೈಲಾಗ್‌ನ ಖುದ್ದು ನಟ ದರ್ಶನ್ ಅವರೇ 2019ರಲ್ಲಿ ಹೇಳಿದ್ರು. ಆದ್ರೆ ಅದು ಒಡೆಯ ಚಿತ್ರಕ್ಕಾಗಿ. ಹೌದು.. ಎಂ ಡಿ ಶ್ರೀಧರ್ ನಿರ್ದೇಶನ ಹಾಗೂ ಎನ್ ಸಂದೇಶ್ ನಿರ್ಮಾಣದ ಒಡೆಯ ಚಿತ್ರದಲ್ಲಿ ಹೀರೋ ಆಗಿ ಈ ಡೈಲಾಗ್ ಹೊಡೆದಿದ್ರು ಡಿಬಾಸ್.
ಆದ್ರೀಗ ಅದನ್ನ ನಿಜ ಮಾಡ್ತಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರ್ತಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ನಟ ದರ್ಶನ್ ತುಂಬಾ ಬದಲಾಗಿದ್ದಾರೆ. ಸಿನಿಮಾ, ಫ್ಯಾಮಿಲಿ, ಒಂದಷ್ಟು ನಿಗದಿತ ಆಪ್ತ ವಲಯ, ಫ್ಯಾನ್ಸ್.. ಇಷ್ಟೇ ಆಗೋಗಿದೆ ದಾಸನ ಲೈಫ್. ಆದ್ರೆ ಮೂಲಗಳ ಪ್ರಕಾರ ದಚ್ಚು, ಪಾಲಿಟಿಕ್ಸ್‌ಗೆ ಬರೋ ಸೂಚನೆಯಿದೆ.
ಅಂದಹಾಗೆ ಡಿಬಾಸ್ ದರ್ಶನ್‌ಗೆ ಪಾಲಿಟಿಕ್ಸ್ ಹೊಸತಿರಬಹುದು. ಆದ್ರೆ ಪೊಲಿಟಿಷಿಯನ್ಸ್ ಹಾಗೂ ಪಾಲಿಟಿಕ್ಸ್‌ಗೆ ದರ್ಶನ್ ಹೊಸಬರಲ್ಲ. ರಾಜಕಾರಣದ ಕ್ಷೇತ್ರ ದಚ್ಚುಗೆ ತುಂಬಾ ಚೆನ್ನಾಗಿಯೇ ಗೊತ್ತು. ಯಾಕಂದ್ರೆ ಅವ್ರ ಆಪ್ತರೆಲ್ಲಾ ಬಹುತೇಕ ಮಂದಿ ಪಾಲಿಟಿಕ್ಸ್‌ನಲ್ಲಿದ್ದಾರೆ. ಸದಾ ಅವರೊಂದಿಗೆ ಒಡನಾಟ ಕೂಡ ದರ್ಶನ್‌ಗಿದೆ. ಅಲ್ಲದೆ, ಚುನಾವಣಾ ಪ್ರಚಾರಗಳು ಕೂಡ ದಾಸನಿಗೆ ಹೊಸತೇನಲ್ಲ. ಬಹುದೊಡ್ಡ ಅಭಿಮಾನಿ ಬಳಗ ಹೊಂದಿರೋ ನಟ ಆಗಿರೋದ್ರಿಂದ, ಅವ್ರು ಯಾವ ಪಾರ್ಟಿಗೆ ಬರ್ತೀನಿ ಅಂದ್ರೂ ರೆಡ್ ಕಾರ್ಪೆಟ್ ಹಾಸುತ್ತಾರೆ. ಇನ್ನು ಮಂಡ್ಯ ಎಂಪಿ ಎಲೆಕ್ಷನ್‌ನಲ್ಲಿ ಮದರ್ ಇಂಡಿಯಾ ಸುಮಲತಾ ಗೆಲುವಿನ ಅಸಲಿ ರೂವಾರಿಗಳಲ್ಲಿ ದರ್ಶನ್ ಕೂಡ ಒಬ್ರು ಅನ್ನೋದು ಓಪನ್ ಸೀಕ್ರೆಟ್.
ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರೋ ದರ್ಶನ್‌ಗೆ ಪವರ್ ಕೂಡ ಕೈಯಲ್ಲಿದ್ರೆ, ಅದನ್ನ ಮತ್ತಷ್ಟು, ಮಗದಷ್ಟು ಎಫೆಕ್ಟೀವ್ ಆಗಿ ಮಾಡಬಲ್ಲರು ಅನ್ನೋದು ಅವ್ರ ಫ್ಯಾನ್ಸ್ ಹಾಗೂ ಕನ್ನಡಿಗರ ಆಶಯ. ಸೋ.. ಅವ್ರನ್ನ ರಾಜಕಾರಣಕ್ಕೆ ಸೆಳೆಯುವ ಪ್ರಯತ್ನಗಳು ಮೊದಲಿನಿಂದಲೂ ನಡೆಯುತ್ತಿವೆಯಾದ್ರೂ ಇಲ್ಲಿಯರೆಗೆ ಗ್ರೀನ್ ಸಿಗ್ನಲ್ ಮಾತ್ರ ಕೊಟ್ಟಿಲ್ಲ. ಇದೀಗ ಇತ್ತೀಚೆಗೆ ದರ್ಶನ್ ವೈಯಕ್ತಿಕ ಬಾಳಲ್ಲಿ ಆದಂತಹ ಬೆಳವಣಿಗೆಗಳಿಂದ ಪಾಲಿಟಿಕ್ಸ್ ಹಾಗೂ ಪೊಲಿಟಿಕಲ್ ಪವರ್ ಬೇಕು ಅನಿಸಿದ್ದರೂ ಅಚ್ಚರಿಯಿಲ್ಲ.
ಯೆಸ್.. ದರ್ಶನ್ ಈಗ ಅಧಿಕೃತ ಸಿಎಂ. ಆದ್ರೆ ರಿಯಲ್ ಆಗಿ ಅಲ್ಲ. ರೀಲ್‌ನಲ್ಲಿ ಅನ್ನೋದು ವಿಶೇಷ. ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಾಣ ಮಾಡ್ತಿರೋ ಡೆವಿಲ್ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇಲ್ಲಿಯವರೆಗೂ ರಿವೀಲ್ ಆಗಿರೋ ಟೀಸರ್ ಝಲಕ್‌ಗಳಿಂದ ದರ್ಶನ್ ಪಾತ್ರ ಏನಿರಬಹುದು ಅನ್ನೋ ಕ್ಯೂರಿಯಾಸಿಟಿ ಇತ್ತು. ಆದ್ರೀಗ ಅದಕ್ಕೊಂದು ಕ್ಲ್ಯಾರಿಟಿ ಸಿಕ್ಕಿದೆ.
ಡೆವಿಲ್ ಸಿನಿಮಾದ ಶೂಟಿಂಗ್ ಸೆಟ್‌ನಿಂದ ಸ್ಟಿಲ್ ಫೋಟೋವೊಂದು ಸೋರಿಕೆ ಆಗಿದೆ. ಅದರ ಪ್ರಕಾರ ಡೆವಿಲ್ ಚಿತ್ರದಲ್ಲಿ ದರ್ಶನ್ ಪಾತ್ರ ಮುಖ್ಯಮಂತ್ರಿ. ಹೌದು.. ಕರುನಾಡ ಪ್ರಜಾಪಕ್ಷದಿಂದ ಸಿಎಂ ಆಗಿರೋ ದಾಸನ ಹೆಸರು ಶ್ರೀ ಧನುಷ್ ರಾಜಶೇಖರ್. ಈ ಫೋಟೋ ಸೋರಿಕೆ ಆಗಿ ಚಿತ್ರತಂಡಕ್ಕೆ ಟೆನ್ಷನ್ ಆದ್ರೆ, ಫ್ಯಾನ್ಸ್ ಮಾತ್ರ ನಮ್ ಡಿಬಾಸ್ ಸಿಎಂ ಅಂತ ಸಂಭ್ರಮಿಸ್ತಿದ್ದಾರೆ. ಮುಂದೊಂದು ದಿನ ಇದನ್ನ ನಟ ದರ್ಶನ್ ನಿಜವಾಗಿಸಿದ್ರೂ ಅಚ್ಚರಿಯಿಲ್ಲ ಅನ್ನೋದು ಹಲವರ ಮಾತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





