ಬ್ಲಾಕ್ ಬಸ್ಟರ್ ಹಿಟ್ ಅಯೋಗ್ಯ ಚಿತ್ರದ ಸೀಕ್ವೆಲ್ ಅಯೋಗ್ಯ-2. ಆಗಸ್ಟ್ ಮೊದಲ ವಾರ ಮಸ್ತ್ ಮನರಂಜನೆ ಕೊಡೋಕೆ ಬರ್ತಿರೋ ಅಭಿನಯ ಚತುರ ಸತೀಶ್ ಹಾಗೂ ರಚಿತಾ ರಾಮ್ ಜೋಡಿ ಮೋಡಿ ಮಾಡಲಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಹುಡ್ಗೀರ್ ಡೇಂಜರಸ್ ಸಾಂಗ್ ಹಿಟ್ ಆಗಿದ್ದು, ಅದ್ರ ಮೇಕಿಂಗ್ ಮಸ್ತ್ ಕಿಕ್ ಕೊಡ್ತಿದೆ. ಅದ್ರ ಝಲಕ್ ಇಲ್ಲಿದೆ, ನೋಡಿ.. ಎಂಜಾಯ್ ಮಾಡಿ.
- ಹುಡ್ಗೀರ್ ಡೇಂಜರಸ್.. ‘ಅಯೋಗ್ಯ’ ಮೇಕಿಂಗ್ ಮಸಲತ್ತು
- ಊರು, ಕೇರಿ ಎಲ್ಲೆಲ್ಲೂ ಟೀಂ ಅಯೋಗ್ಯ ಶೂಟಿಂಗ್ ಸೂಪರ್
- ಆ-7ಕ್ಕೆ ತೆರೆ ಮೇಲೆ ಸತೀಶ್-ರಚಿತಾ.. ಮನರಂಜನೆ ಖಚಿತ..!
- ಹುಬ್ಬಳ್ಳಿ ಆಯ್ತು.. ಬೆಂಗಳೂರಲ್ಲಿ ಟ್ರೈಲರ್ ಲಾಂಚ್ ಇವೆಂಟ್
ಅಯೋಗ್ಯ-2.. ಬರೋಬ್ಬರಿ ಎಂಟು ವರ್ಷಗಳ ನಂತ್ರ ಬರ್ತಿರೋ ಅಯೋಗ್ಯ ಸಿನಿಮಾದ ಸೀಕ್ವೆಲ್. ಪಕ್ಕಾ ಹಳ್ಳಿ ಸೊಗಡು, ಸೊಬಗಿನಲ್ಲಿ ತಯಾರಾಗಿರೋ ಈ ಸಿನಿಮಾ ಒನ್ಸ್ ಅಗೈನ್ ನೋಡುಗರನ್ನ ಮಂತ್ರಮುಗ್ಧಗೊಳಿಸೋದ್ರಲ್ಲಿ ಅನುಮಾನವೇ ಇಲ್ಲ. ಹೌದು.. ನೀನಾಸಂ ಸತೀಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿ ಈ ಬಾರಿಯೂ ಮೋಡಿ ಮಾಡಲಿದ್ದು ಸದ್ಯ ರಿಲೀಸ್ ಆಗಿರೋ ಮೂರೂ ಸಾಂಗ್ಸ್ ಹಿಟ್ ಲಿಸ್ಟ್ ಸೇರಿವೆ.
ಮಹೇಶ್ ಕುಮಾಸ್ ಎಸ್ ಆ್ಯಕ್ಷನ್ ಕಟ್ ಹೇಳಿರೋ ಈ ಚಿತ್ರಕ್ಕೆ ಮುನೇಗೌಡ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತದ ಆಲ್ಬಮ್‌ಗೆ ಬಹದ್ದೂರ್ ಚೇತನ್ ಸಾಹಿತ್ಯ ರಚಿಸಿದ್ದಾರೆ. ಆಗಸ್ಟ್ 7ಕ್ಕೆ ಸಿನಿಮಾ ಗ್ರ್ಯಾಂಡ್ ಆಗಿ ತೆರೆಗೆ ಬರ್ತಿದ್ದು, ಹುಡ್ಗೀರ್ ಡೇಂಜರಸ್ ಸಾಂಗ್‌ನ ಮೇಕಿಂಗ್ ರಿವೀಲ್ ಮಾಡಿದೆ ಚಿತ್ರತಂಡ. ಊರು, ಕೇರಿಗಳಲ್ಲಿ ಚಿತ್ರಿಸಿರೋ ಈ ಹಾಡಿನ ಮೇಕಿಂಗ್ ನೋಡಿದ್ರೆ ಗೊತ್ತಾಗುತ್ತೆ ಚಿತ್ರತಂಡ ಎಷ್ಟೆಲ್ಲಾ ಎಫರ್ಟ್ ಹಾಕಿದೆ ಅನ್ನೋದು.
ನಂದಿನಿ ಪಾತ್ರಧಾರಿ ರಚಿತಾರನ್ನ ಮದ್ವೆ ಆಗುವ ಸಿದ್ದೇಗೌಡ ಸತೀಶ್, ಗ್ರಾಮ ಪಂಚಾಯ್ತಿ ಸದದ್ಯ ಆಗಿಬಿಡ್ತಾರೆ. ಆದ್ರೆ ಇಲ್ಲಿ ಇದೀಗ ಬಚ್ಚೇಗೌಡರನ್ನ ಎದುರಿಸಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಗ್ತಾರಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ. ಮೇಕಿಂಗ್ ಮೆಚ್ಚುವಂತಿದ್ದು, ನೋಡುಗರಿಗೆ ಅದ್ರಲ್ಲೂ ಹಳ್ಳಿ ಜನಕ್ಕೆ ಈ ಸಿನಿಮಾ ಬೇಗ ಕನೆಕ್ಟ್ ಆಗಲಿದೆ. ಮಂಡ್ಯದ ಕಬ್ಬಿನ ಗದ್ದೆಗಳು, ಆಲೆ ಮನೆ, ಗ್ರಾಮ ಪಂಚಾಯ್ತಿ ಕಾರ್ಯಾಲಯ, ಕೆರೆ, ಕಟ್ಟೆಗಳು, ಗ್ರಾಮಗಳ ಬೀದಿ ಬೀದಿಗಳಲ್ಲಿ ಚಿತ್ರಿಸಿರೋ ಈ ಚಿತ್ರ ಬಹಳ ಸಹಜ ಹಾಗೂ ಸ್ವಾಭಾವಿಕತೆಯಿಂದ ಕೂಡಿದೆ.
ಹುಡ್ಗೀರ್ ಡೇಂಜರಸ್ ಸಾಂಗ್‌ಗೆ ರಾಬರ್ಟ್ ಸಂತು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದು, ಆಫ್ ಸ್ಕ್ರೀನ್‌ನಲ್ಲಿ ಟೀಂ ಮಾಡಿರೋ ಕಂಪ್ಲೀಟ್ ಕರಸತ್ತು ಈ ಮೇಕಿಂಗ್ ವಿಡಿಯೋಗಳಲ್ಲಿ ಅನಾವರಣಗೊಂಡಿದೆ. ಅಭಿನಯ ಚತುರ ಸತೀಶ್ ಹಾಗೂ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಜೊತೆ ಹಾಡಲ್ಲಿ ನಟ ಶಿವರಾಜ್ ಕೆ ಆರ್ ಪೇಟೆ ಹಾಗೂ ಗಿರಿ ಕೂಡ ಗಮನ ಸೆಳೆಯಲಿದ್ದಾರೆ. ನುರಿತ ಡ್ಯಾನ್ಸರ್ಸ್ ರೀತಿ ಇವರುಗಳು ಸ್ಟೆಪ್ ಹಾಕಿರೋ ಪರಿ ಇಲ್ಲಿ ನೋಡೋಕೆ ಸಖತ್ ಮಜಾ ಕೊಡ್ತಿದೆ. ಅಂದಹಾಗೆ ಈ ಹಾಡನ್ನ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಅಫಿಶಿಯಲಿ ಲಾಂಚ್ ಮಾಡಲಾಗಿತ್ತು. ಇದೀಗ ರಿಲೀಸ್‌ಗೂ ಮುನ್ನ ಟ್ರೈಲರ್ ಲಾಂಚ್ ಜೊತೆ ಪ್ರೀ-ರಿಲೀಸ್ ಇವೆಂಟ್‌ನ ಬೆಂಗಳೂರಿನಲ್ಲೇ ಅದ್ಧೂರಿಯಾಗಿ ನಡೆಸಲು ಟೀಂ ಪ್ಲ್ಯಾನ್ ಮಾಡಿಕೊಂಡಿದ್ದು, ಸದ್ಯದಲ್ಲೇ ಡೇಟ್ & ಟೈಂ ಅನೌನ್ಸ್ ಆಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





