ಸಂಗೀತ ಸಾರಸತ್ವ ಲೋಕದ ದಂತಕಥೆ.. ಕರ್ನಾಟಿಕ್ ಸಂಗೀತದ ಮೇರು ಶಿಖರ.. ಭಾರತೀಯ ಕ್ಲಾಸಿಕಲ್ ಮ್ಯೂಸಿಕ್‌ನ ಯೂನಿವರ್ಸಿಟಿ ಎಂ. ಎಸ್. ಸುಬ್ಬುಲಕ್ಷ್ಮೀ ಬಯೋಪಿಕ್ ಬೆಳ್ಳಿತೆರೆ ಬೆಳಗುವ ಸಮಯವಿದು. ಇಡೀ ಸೌತ್ ದುನಿಯಾ ಸೇರಿ ಆ ಲೆಗಸಿಯನ್ನ ಬಿಗ್‌ಸ್ಕ್ರೀನ್‌ಗೆ ತರ್ತಿದ್ದು, ಕನ್ನಡತಿ ರಶ್ಮಿಕಾ ಆ ಟೈಟಲ್ ರೋಲ್‌ಗೆ ಜೀವ ತುಂಬುತ್ತಿದ್ದಾರೆ. ಕಮಲ್ ಹಾಸನ್ ಕ್ಲಾಪ್ ಮಾಡಿ ಶುಭ ಕೋರಿದ ಆ ಸಿನಿಮಾದ ಲಾಂಚ್ ಇವೆಂಟ್ ಹೈಲೈಟ್ಸ್ ಇಲ್ಲಿದೆ ನೋಡಿ.
- ಬೆಳ್ಳಿತೆರೆಗೆ ಸಂಗೀತ ಲೋಕದ ದಂತಕಥೆ M S ಸುಬ್ಬುಲಕ್ಷ್ಮೀ..!!
- ರಶ್ಮಿಕಾಗೆ ಕಮಲ್ ಹಾಸನ್ ಕ್ಲಾಪ್.. ರಾಕ್‌ಲೈನ್ ನಿರ್ಮಾಣ
- ಚೆನ್ನೈನಲ್ಲಿ ಅದ್ಧೂರಿಯಾಗಿ ಸೆಟ್ಟೇರಿದ MS-ಎ ಲೆಗಸಿ ಆನ್‌ಸ್ಕ್ರೀನ್
- ಭಾರತ ರತ್ನ, ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರ್ತಿ
ದೇವರ ಹಾಡುಗಳಿಗೆ ಕೇರ್ ಆಫ್ ಅಡ್ರೆಸ್ ಎಂ ಎಸ್ ಸುಬ್ಬುಲಕ್ಷ್ಮೀ. ದಶಕಗಳ ಕಾಲ ಸಾವಿರಾರು ಹಾಡುಗಳಿಗೆ ಕಂಠದಾನ ಮಾಡಿದ ಗರಿಮೆ ಇವರಿಗಿದೆ. ಅಂತಹ ಲೆಜೆಂಡ್ ಕುರಿತ ಬಯೋಪಿಕ್ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ. ಯೆಸ್.. ಸಂಗೀತ ಸಾರಸತ್ವ ಲೋಕದ ದಂತಕಥೆ, ಕರ್ನಾಟಿಕ್ ಸಂಗೀತದ ಮೇರು ಶಿಖರ, ಭಾರತೀಯ ಕ್ಲಾಸಿಕಲ್ ಮ್ಯೂಸಿಕ್‌ನ ಯೂನಿವರ್ಸಿಟಿ ಅಂತಲೇ ಕರೆಯಲ್ಪಡುವ ಎಂ ಎಸ್ ಸುಬ್ಬುಲಕ್ಷ್ಮೀ ಜೀವನಗಾಥೆ ಸಿನಿಮಾ ರೂಪ ಪಡೆಯುತ್ತಿದೆ. ಅವರ 110ನೇ ಜನ್ಮ ಜಯಂತಿ ವಿಶೇಷ ಚೆನ್ನೈನಲ್ಲಿ ಸಿನಿಮಾ ಸೆಟ್ಟೇರಿದೆ.
ಎಂ. ಎಸ್.- ಎ ಲೆಗಸಿ ಆನ್ ಸ್ಕ್ರೀನ್ ಅನ್ನೋ ಟೈಟಲ್‌ನಲ್ಲಿ ಸಿನಿಮಾ ಸೆಟ್ಟೇರಿದ್ದು, ಸುಬ್ಬುಲಕ್ಷ್ಮೀ ಅಮ್ಮನ ಲೈಫ್ ಸ್ಟೋರಿಗೆ ಸಿನಿಮಾ ರೂಪ ಕೊಡಲು ಇಡೀ ಸೌತ್ ಸಿನಿದುನಿಯಾನೇ ಒಂದಾಗಿದೆ. ಹೌದು.. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್, ನಮ್ಮ ಧೀರ ರಾಕ್‌ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ಮೂವರೂ ಸೇರಿ ಈ ಬಯೋಪಿಕ್ ಚಿತ್ರವನ್ನ ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ನಿರ್ಮಿಸಲು ಮುಂದಾಗಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಎಂ ಎಸ್ ಸುಬ್ಬುಲಕ್ಷ್ಮೀ ಪಾತ್ರಕ್ಕೆ ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣ ಜೀವ ತುಂಬುತ್ತಿದ್ದಾರೆ.
ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಈ ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದು ವಿಶೇಷ. ಅಷ್ಟೇ ಅಲ್ಲ.. ಸುಮಾರು 7 ವರ್ಷಗಳ ಕನಸು, ಸಂಶೋಧನೆ ಈ ಸಿನಿಮಾ ಆಗೋಕೆ ಕಾರಣೀಬೂತವಾಗಿದೆ ಎಂದ ಕನ್ನಡಿಗ ರಾಕ್‌ಲೈನ್ ವೆಂಕಟೇಶ್, ಆ ಎಂ ಎಸ್ ಅಮ್ಮನವರೇ ಕಲಾವಿದರು ಹಾಗೂ ಡೈರೆಕ್ಟರ್‌ನ ಹುಡುಕಿಕೊಟ್ಟಂತಿದೆ ಎಂದರು. ಜೆರ್ಸಿ ಚಿತ್ರದ ನಿರ್ದೇಶಕ ಗೌತಮ್ ತಿನ್ನನೂರಿ ಈ ಸಿನಿಮಾಗಾಗಿ ಮತ್ತೊಂದು ಸಿನಿಮಾನೇ ಬಿಟ್ಟು ಬಂದ ವಿಚಾರ ಕೂಡ ನೆನೆದರು.
ಒಟ್ಟಾರೆ ಸಂಗೀತ ಕ್ಷೇತ್ರದ ಸಾಧನೆಗಾಗಿ ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ ಹಾಗೂ ಮಾಗ್ಸೆಸೆ ಅವಾರ್ಡ್ ಪಡೆದ ಮೊದಲ ಮ್ಯುಸಿಷಿಯನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ಎಂ ಎಸ್ ಸುಬ್ಬುಲಕ್ಷ್ಮೀ ಅವರ ಲೈಫ್ ಸ್ಟೋರಿಗೆ ಜೀವ ಕೊಡ್ತಿರೋದು ಖುಷಿಯ ವಿಚಾರ. ಮಹಾನಟಿ, ಎಂ ಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾಗಳಂತೆ ಇದು ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





