• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅನಂತ್‌‌ನಾಗ್‌ಗೆ ರಾಷ್ಟ್ರಪತಿಗಳಿಂದ ‘ಫಾಲ್ಕೆ’ ಪ್ರಶಸ್ತಿ ಪ್ರದಾನ

ಕಳೆದ ವರ್ಷ ಪದ್ಮಭೂಷಣ.. ಈ ವರ್ಷ ದಾದಾ ಸಾಹೇಬ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 23, 2026 - 2:24 pm
in ಸಿನಿಮಾ
0 0
0
ಅಲರ್ಟ್ (17)

ಡಾ. ಅನಂತ್‌‌ನಾಗ್ ಅವರು ಮೊದಲು ಪದ್ಮಭೂಷಣ ಅನಂತ್ ನಾಗ್ ಆದ್ರು. ಇದೀಗ ದಾದಾ ಸಾಹೇಬ್ ಅನಂತ್ ನಾಗ್ ಆಗಿ ರಾರಾಜಿಸ್ತಿದ್ದಾರೆ. ಯೆಸ್.. ಕನ್ನಡ ಚಿತ್ರರಂಗದ ಸೇವೆಗಾಗಿ ಅವರಿಗೆ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ ಕೇಂದ್ರ ಸರ್ಕಾರ. ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಎವರ್‌‌ಗ್ರೀನ್ ಹೀರೋ ಅನಂತ್‌‌ನಾಗ್.. ಜನ್ಮ, ಕರ್ಮ ಹಾಗೂ ಧರ್ಮ ಭೂಮಿಗಳನ್ನ ನೆನೆದರು. ಆದಿ ಶಂಕರಾಚಾರ್ಯ, ಕನಕದಾಸರ ಮಾತುಗಳನ್ನ ಸ್ಮರಿಸಿದರು. ಆ ಹೆಮ್ಮೆಯ, ಅಪರೂಪದ ಅವಿಸ್ಮರಣೀಯ ಕ್ಷಣದ ಫುಲ್‌ ಡಿಟೇಲ್ಸ್‌ ಇಲ್ಲಿದೆ..

  • ಅನಂತ್‌‌ನಾಗ್‌ಗೆ ರಾಷ್ಟ್ರಪತಿಗಳಿಂದ ‘ಫಾಲ್ಕೆ’ ಪ್ರಶಸ್ತಿ ಪ್ರದಾನ
  • ಕಳೆದ ವರ್ಷ ಪದ್ಮಭೂಷಣ.. ಈ ವರ್ಷ ದಾದಾ ಸಾಹೇಬ್
  • ಇದು ಕನ್ನಡದ ಕಲಾ ಸಂತನಿಗೆ ಸಿಕ್ಕ ಸರ್ವ ಶ್ರೇಷ್ಠ ಗೌರವ..!
  • ಪತ್ನಿ ಗಾಯತ್ರಿ ಮುಂದೆ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್

ಯೆಸ್.. ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುವಲ್ಲಿ ಹಿರಿಯನಟ ಪದ್ಮಭೂಷಣ ಡಾ. ಅನಂತ್‌‌ನಾಗ್ ಅವರ ಪಾತ್ರ ಬಹಳ ದೊಡ್ಡದಿದೆ. ಬಾಲ್ಯದಲ್ಲಿ ರಂಗಭೂಮಿಯ ಬೆನ್ನ ಹತ್ತಿ ಮುಂಬೈಗೆ ತೆರಳಿದ ದಿನದಿಂದ ಇಲ್ಲಿಯ ತನಕ ಸುಮಾರು 7 ದಶಕಗಳ ಕಾಲ ನಿರಂತರವಾಗಿ ಕಲಾಸೇವೆ ಮಾಡ್ತಾ ಬರ್ತಿದ್ದಾರೆ. ತನ್ನ ಪಾಲಿಗೆ ಬಂದ ಪಾತ್ರಗಳಿಗೆ ಜೀವ ತುಂಬುತ್ತಾ.. ಯಾವುದೇ ಅಭಿಮಾನಿ ಸಂಘಗಳಿಲ್ಲದೆ, ವಿಶ್ವದ ಮೂಲೆ ಮೂಲೆಯಲ್ಲಿ ಅಭಿಮಾನಿಗಳನ್ನ ಸಂಪಾದಿಸಿದ ಏಕೈಕ ನಟ ಅನ್ನೋ ಗರಿಮೆ ಇವರಿಗಿದೆ.

RelatedPosts

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಹಿರಿಯ ನಟ ಅನಂತ್ ನಾಗ್‌

ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್

ದುನಿಯಾ ವಿಜಯ್ ಸಿನಿಮಾಗಳೆಲ್ಲಾ ಈ ಸಮಾಜದ ಕೈಗನ್ನಡಿ

‘ರಾಕಾ’ ಮೇಕಿಂಗ್‌‌ನಲ್ಲಿ ಕ್ರಾಂತಿ..ಅಲ್ಲು-ಅಟ್ಲಿ ಗಿನ್ನೆಸ್ ರೆಕಾರ್ಡ್

ADVERTISEMENT
ADVERTISEMENT

78 ವರ್ಷದ ಈ ಹಿರಿಜೀವ ಮಕ್ಕಳಿಂದ ಮುದುಕರ ವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಸಹಜ ನಟನೆಗೆ ಹೆಸರುವಾಸಿಯಾಗಿರೋ ಅನಂತ್‌‌ನಾಗ್‌‌ರಿಗೆ ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ನೀಡಿ, ಗೌರವಿಸಿದ್ರು. ಆದ್ರೆ ಈ ಸಲ ಕನ್ನಡ ಚಿತ್ರರಂಗದ ಸೇವೆಗಾಗಿ 2024ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್‌ನಾಗ್‌‌ಗೆ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮುರ್ಮು ಅವರು ಅನಂತ್‌ನಾಗ್ ಪಾಲಿಗೆ ಒಂಥರಾ ಲಕ್ಕಿ ಹ್ಯಾಂಡ್ ಕೂಡ ಹೌದು.

ಗುಜರಾತ್‌ನ ಏಕ್ತಾ ನಗರ್‌‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್‌ನಾಗ್ ಜೊತೆ ಅವರ ಪತ್ನಿ, ಹಿರಿಯ ನಟಿ ಗಾಯತ್ರಿ ಕೂಡ ಭಾಗಿಯಾಗಿದ್ದರು. ಇದು ಕನ್ನಡಿಗರಾದ ನಮಗೆ ಸಿಕ್ಕಾಪಟ್ಟೆ ಹೆಮ್ಮೆ ತರಿಸುವ ವಿಷಯ. ಯಾಕಂದ್ರೆ ಇಲ್ಲಿಯ ತನಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದವರು ನಟಸಾರ್ವಭೌಮ ಡಾ ರಾಜ್‌‌ಕುಮಾರ್ ಒಬ್ಬರೇ. ಅದಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ಆ ಗರಿಮೆಗೆ ಅನಂತ್‌ನಾಗ್ ಪಾತ್ರರಾಗಿರೋದು ಖುಷಿಯ ವಿಷಯ.

  • ಆದಿ ಶಂಕರಾಚಾರ್ಯರನ್ನ ನೆನೆದು ವಂದೇ ಮಾತರಂ ಎಂದ ದಾದಾ ಸಾಹೇಬ್ ಅನಂತ್
  • ಜನ್ಮ ಭೂಮಿ, ಕರ್ಮ ಭೂಮಿ, ಧರ್ಮ ಭೂಮಿ.. ‘ಅನಂತ’ 7 ದಶಕ..!
  • ಬಾಲ್ಯ, ರಂಗಭೂಮಿ, ಭಿನ್ನ ಅಲೆಯ ಸಿನಿಮಾ.. ಗುರುಹಿರಿಯರ ಸ್ಮರಣೆ
  • ಫಾಲ್ಕೆ ಪ್ರಶಸ್ತಿ ಸಿಗಲು ಕೇವಲ ಕರ್ನಾಟಕ & ಕನ್ನಡಿಗರು ಮಾತ್ರ ಕಾರಣ

ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ್‌ನಾಗ್ ಅವರು.. ಸಾಕಷ್ಟು ವಿಷಯಗಳನ್ನ ಮೆಲುಕು ಹಾಕಿದ್ರು. ದಕ್ಷಿಣ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿಯಲ್ಲಿ ಜನಿಸಿದ ಅನಂತ್‌ನಾಗ್, ತನ್ನ ಬಾಲ್ಯ, ಮುಂಬೈನ ರಂಗಭೂಮಿ, ಗುರುಗಳು, ದಾಸ ಶ್ರೇಷ್ಠರು, ಅವರುಗಳ ಪದಗಳು, ಕನ್ನಡಿಗರು, ದೇಶ.. ಹೀಗೆ ಎಲ್ಲವುಗಳ ಬಗ್ಗೆಯೂ ಚುಟುಕಾಗಿ, ಅರ್ಥಪೂರ್ಣವಾಗಿ, ಭಾವಪೂರ್ಣವಾಗಿ ಮಾತನಾಡಿದ್ರು.

ಅನಂತ್ ಆಡಿದ ಮಾತುಗಳನ್ನ ರಾಷ್ಟ್ರಪತಿಗಳಿಂದ ಹಿಡಿದು, I & B ಮಿನಿಸ್ಟ್ರಿ, ಮಮ್ಮುಟ್ಟಿ, ಧನುಷ್, ಯಾಮಿ ಗೌತಮ್, ಆದಿತ್ಯ ಧಾರ್, ರಣ್‌ದೀಪ್ ಹೂಡ ಹೀಗೆ ಸಾಕಷ್ಟು ಮಂದಿ ಆಲಿಸಿದ್ದು ವಿಶೇಷ. ಅಂದಹಾಗೆ ಅನಂತ್‌‌ನಾಗ್ ತಮ್ಮ ಬಾಲ್ಯವನ್ನ ನೆನೆದರು. ಆರಂಭದಲ್ಲಿ 12-13 ವರ್ಷಗಳ ಕಾಲ ಚಿತ್ರಾಪುರ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದನ್ನ ಸ್ಮರಿಸಿದ್ರು. ನಂತ್ರ ಮುಂಬೈಗೆ ರಂಗಭೂಮಿ ಹರಸಿ ತೆರಳಿದರು. ಆಗ ಅಲ್ಲಿ ಚೈತನ್ಯ ಮಹಾಪ್ರಭು ಸ್ವಾಮೀಜಿ ಕುರಿತ ತಮ್ಮ ವೃತ್ತಿ ಬದುಕಿನ ಮೊಟ್ಟ ಮೊದಲ ನಾಟಕ ಆಡಿದ್ದನ್ನ ಕೂಡ ನೆನಪಿಸಿಕೊಂಡರು.

ಮಠದಲ್ಲಿದ್ದಾಗ ಆದಿ ಶಂಕರಾಚಾರ್ಯರ ಭಜಗೋವಿಂದಂ ಓದಿದ್ದೆ. ಉದರ ನಿಮಿತ್ತಂ ಬಹುಕೃತ ವೇಷಂ ಅಂತಾರೆ. ಅದನ್ನೇ ಕನಕದಾಸರು ಕನ್ನಡದಲ್ಲಿ ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಂದಿದ್ರು. ನಾನು ಕೂಡ ಅಂದು ಉದರ ನಿಮಿತ್ತಂ ವೃತ್ತಿ ಆರಂಭಿಸಿದೆ ಅಂತ ದಾಸರ ಪದಗಳನ್ನ ಇಡೀ ಭಾರತ ದೇಶಕ್ಕೆ ಆ ಬೃಹತ್ ವೇದಿಕೆಯಲ್ಲಿ ಸಾರಿದರು ಅನಂತ್.

ಮುಂಬೈನಲ್ಲಿ ಇದ್ದಾಗ ಐದು ವರ್ಷದಲ್ಲಿ ಸುಮಾರು 50 ನಾಟಕಗಳಲ್ಲಿ ಬಣ್ಣ ಹಚ್ಚಿದ್ದನ್ನ ನೆನೆದರು. ನಂತ್ರ ಕನ್ನಡದಲ್ಲಿ ನಟಿಸುವ ಅವಕಾಶ ಸಿಕ್ತು. ಅದಾದ ಬಳಿಕ ಶ್ಯಾಮ್ ಬೆನೆಗಲ್, ಎಂ ಎಸ್ ಸತ್ಯು ಸೇರಿದಂತೆ ಹಲವರೊಟ್ಟಿಗೆ ಕೆಲಸ ಮಾಡಿದೆ. ಆಗ ಹೊಸ ಅಲೆಯ ಸಿನಿಮಾಗಳ ಜೊತೆ ಆರ್ಟ್ ಸಿನಿಮಾಗಳಲ್ಲೂ ಅವಕಾಶ ಇತ್ತು ಅಂತ ಸೆಲ್ಯುಲಾಯ್ಡ್‌‌ನ ಆ ದಿನಗಳನ್ನ ಮೆಲುಕು ಹಾಕಿದ್ರು.

ಆದ್ರೆ ಕರ್ನಾಟಕದಲ್ಲಿ ನನಗೆ ಅವಕಾಶ ಹೆಚ್ಚಾಯ್ತು. ಹಾಗಾಗಿ ಮತ್ತೆ ಕರ್ನಾಟಕಕ್ಕೆ ಮರಳಿದೆ. ಬೆಂಗಳೂರಿನಲ್ಲಿ ಸೆಟಲ್ ಆಗಿದ್ದೀನಿ. ಕರ್ನಾಟಕವೇ ನನ್ನ ಕರ್ಮ ಭೂಮಿ ಆಯ್ತು ಅಂತ ತಮ್ಮ ಜನ್ಮ ಭೂಮಿ, ಕರ್ಮ ಭೂಮಿಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದರು.

ಕಳೆದ 55 ವರ್ಷಗಳಿಂದ ನನ್ನ ಪ್ರೀತಿಯಿಂದ ಸಲುಹಿದ ಸಮಸ್ತ ಕರ್ನಾಟಕದ ಪ್ರೇಕ್ಷಕರಿಗೆ, ಚಿತ್ರರಂಗದ ತಂತ್ರಜ್ಞರಿಗೆ ಹಾಗೂ ನಿರ್ದೇಶಕರುಗಳಿಗೆ ನಾನು ಈ ಅತ್ಯುನ್ನತ ಗೌರವವನ್ನ ಅರ್ಪಿಸುತ್ತೇನೆ ಎಂದರು ಅನಂತ್. ಅಷ್ಟೇ ಅಲ್ಲ.. ಈ ಪ್ರಶಸ್ತಿ ಸಿಗಲು ಕೇವಲ ಕರ್ನಾಟಕ ಹಾಗೂ ಕನ್ನಡಿಗರು ಮಾತ್ರ ಕಾರಣ ಅಂತ ಹೆಮ್ಮೆಯಿಂದ ಹೇಳಿದ್ದು ಖುಷಿಯ ವಿಚಾರ.

ವಂದೇ ಮಾತರಂ ಕೂಡ ನೆನೆಯುತ್ತಾ.. ದೇಶದ ಮೇಲೆ ಅವರಿಗಿರುವ ಅಭಿಮಾನ, ಗೌರವ ಎಂಥದ್ದು ಅನ್ನೋದಕ್ಕೂ ಅನಂತ್‌ನಾಗ್ ಸಾಕ್ಷಿ ಆದರು. ಒಟ್ಟಾರೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್‌ನಾಗ್ ಅವರಿಗೆ ನಮ್ಮ ಗ್ಯಾರಂಟಿ ನ್ಯೂಸ್ ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು. ನೀವು ಮತ್ತೆ ನಟನೆಗೆ ಮರಳಿ ಬರಬೇಕು ಅನ್ನೋದಷ್ಟೇ ನಮ್ಮ ಆಶಯ ಅನಂತ್ ಸರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (20)

ಮೈಸೂರಲ್ಲಿ ಮೂರು ವರ್ಷದ ಹೆಣ್ಣು ಹುಲಿ ಸಾವು

by ಕವಿತಾ
September 23, 2026 - 3:25 pm
0

ಅಲರ್ಟ್ (18)

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಅನಂತ್ ನಾಗ್‌ಗೆ ಡಿಸಿಎಂ ಪರಮೇಶ್ವರ್‌‌ ಅಭಿನಂದನೆ

by ಶಾಲಿನಿ ಕೆ. ಡಿ
September 23, 2026 - 2:35 pm
0

ಅಲರ್ಟ್ (17)

ಅನಂತ್‌‌ನಾಗ್‌ಗೆ ರಾಷ್ಟ್ರಪತಿಗಳಿಂದ ‘ಫಾಲ್ಕೆ’ ಪ್ರಶಸ್ತಿ ಪ್ರದಾನ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 23, 2026 - 2:24 pm
0

ಅಲರ್ಟ್ (16)

ಮದ್ಯ-ಸಿಗರೇಟ್ ಬಳಿಕ ಉಪ್ಪಿನ ಪ್ಯಾಕೆಟ್​​ ಮೇಲೂ ಬರಲಿದೆ ಎಚ್ಚರಿಕೆ ಸ್ಟಿಕರ್

by ಶಾಲಿನಿ ಕೆ. ಡಿ
September 23, 2026 - 2:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text
    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಹಿರಿಯ ನಟ ಅನಂತ್ ನಾಗ್‌
    September 22, 2026 | 0
  • Untitled design (10)
    ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್
    September 22, 2026 | 0
  • Untitled design (9)
    ದುನಿಯಾ ವಿಜಯ್ ಸಿನಿಮಾಗಳೆಲ್ಲಾ ಈ ಸಮಾಜದ ಕೈಗನ್ನಡಿ
    September 22, 2026 | 0
  • Your paragraph text 2026 09 22T134833.478
    ‘ರಾಕಾ’ ಮೇಕಿಂಗ್‌‌ನಲ್ಲಿ ಕ್ರಾಂತಿ..ಅಲ್ಲು-ಅಟ್ಲಿ ಗಿನ್ನೆಸ್ ರೆಕಾರ್ಡ್
    September 22, 2026 | 0
  • Untitled design 2026 09 22T103007.137
    “ರಾಮರಸ” ಚಿತ್ರದ ಪ್ರಮುಖಪಾತ್ರದಲ್ಲಿ ಅದಾ ಶರ್ಮಾ
    September 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version