ಬೇಬಿ ರೀಷ್ಮಾ ಜೊತೆ ಡಾಲಿ ಧನಂಜಯ ಹೋಗೋಣು ಬಾರ ಮೆಕ್ಸಿಕೋ ಅಂದಿದ್ದಾರೆ. ಯೆಸ್.. ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಮತ್ತೊಂದು ಕಲರ್‌ಫುಲ್ ಡ್ಯಾನ್ಸಿಂಗ್ ನಂಬರ್ ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಪುಟ್ಟಮಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಈ ಸಾಂಗ್ ಕೂಡ ಅಂಥದ್ದೇ ಓಪನಿಂಗ್ ಪಡೆದುಕೊಂಡಿದೆ. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ..
- ಹೋಗೋಣು ಬಾರ ಮೆಕ್ಸಿಕೋ.. ಡಾಲಿ-ರೀಷ್ಮಾ ಬೇಬಿ ಮಸ್ತ್
- ಭಟ್ರ ಸಾಹಿತ್ಯ.. ವಾಸುಕಿ ಟ್ಯೂನ್.. ಮಾಳು ನಿಪನಾಳ್ ಕಂಠ..!
- ವಿಯೆಟ್ನಾಂ, ಕಾಂಬೋಡಿಯಾ ಬೀದಿಗಳಲ್ಲಿ ಮಸ್ತ್ ಡ್ಯಾನ್ಸ್..!
- ಪುಟ್ಟಮಲ್ಲಿಗೆ 16 ಮಿಲಿಯನ್.. ಈಗ ಮತ್ತೊಂದು ಮ್ಯಾಜಿಕ್
ಇದು ನಟರಾಕ್ಷಸ ಡಾಲಿ ಧನಂಜಯ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಅಣ್ಣ ಫ್ರಮ್ ಮೆಕ್ಸಿಕೋ ಮೂವಿಯ ಮತ್ತೊಂದು ಕಲರ್‌ಫುಲ್ ಸಾಂಗ್. ಹೋಗೋಣು ಬಾರ ಮೆಕ್ಸಿಕೋ ಅನ್ನೋ ಈ ಹಾಡು ಒಂದೊಳ್ಳೆ ಡ್ಯಾನ್ಸಿಂಗ್ ನಂಬರ್ ಆಗಿದ್ದು.. ಜವಾರಿ ಸ್ಟೈಲ್ ಸಾಂಗ್‌ಗೆ ಫಾರಿನ್ ಬೀದಿಗಳಲ್ಲಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ ಡಾಲಿ ರ್ನಂಜಯ ಹಾಗೋ ರೀಷ್ಮಾ ನಾಣಯ್ಯ ಬೇಬಿ.
ಇದೇ ಡಿಸೆಂಬರ್ 24ಕ್ಕೆ ಅಣ್ಣ ಫ್ರಮ್ ಮೆಕ್ಸಿಕೋ ತೆರೆಗೆ ಬರ್ತಿದ್ದು.. ಈಗಾಗ್ಲೇ ಬಿಡುಗಡೆ ಆಗಿರೋ ಟೀಸರ್ ಝಲಕ್ ಹಾಗೂ ಎರಡು ಸಾಂಗ್ಸ್ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡ್ತಿವೆ. ಅದ್ರಲ್ಲೂ ಪುಟ್ಟಮಲ್ಲಿ ಗೀತೆ 16 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದಿದ್ದು, ಸಾವಿರಾರು ರೀಲ್ಸ್‌ನಿಂದ ಎಲ್ಲರ ದಿಲ್ ದೋಚಿದೆ. ಅದರ ಬೆನ್ನಲ್ಲಿ ಬಂದ ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೇ ಸಾಂಗ್ ಕೂಡ ಸಿನಿಮಾದ ತೂಕ ಹೆಚ್ಚಿಸಿತ್ತು. ಇದೀಗ ಮೂರನೇ ಸಾಂಗ್ ಮ್ಯಾಜಿಕ್ ಮಾಡ್ತಿದೆ.
ವಿಕಟಕವಿ ಯೋಗರಾಜ್ ಭಟ್ ಲೇಖನಿಯಲ್ಲಿ ಮೂಡಿಬಂದಿರೋ ಈ ಹಾಡು.. ತನ್ನ ವಿಶಿಷ್ಟ ಪದಬಳಕೆಯಿಂದ ಗಮನ ಸೆಳೆಯುತ್ತಿದೆ. ಬಾರಾ ಬೇಬಿ ಬಾರಾ ಬೇಬಿ.. ಪ್ಯಾರು ಮಾಡೋಣು. ತುಟಿಗೆ ತುಟಿ ತಾಕಿಸೋಣು.. ನೌವ್ನ್ ಆಗಿದ್ದು ಆಗೋಗ್ಲಿ.. ಬಾರಾ ಬಾಬು ಬಾರಾ ಬಾಬು ಸೇರಿ ಹಾಡೋಣು. ಕೊಟಿಗಿ ಕತ್ಲಾಗ ಮೀಟ್ ಆಗೋಣು.. ಅನ್ನೋ ಭಟ್ರ ಮಜಬೂತಾದ ಸಾಲುಗಳಿಗೆ ವಾಸುಕಿ ವೈಭವ್ ಅಷ್ಟೇ ಲವಲವಿಕೆಯ ಸಂಗೀತ ನೀಡಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಗಾಯಕ ಮಾಳು ನಿಪನಾಳ್ ಜೊತೆ ಮಾಧುರಿ ಶೇಷಾದ್ರಿ ಮತ್ತು ಅಭಿಷೇಕ್ ನಗರ್ಕರ್ ಈ ಹಾಡಿಗೆ ಧ್ವನಿಯಾಗಿದ್ದು, ಹಾಡಿನ ಎನರ್ಜಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಈ ಹಾಡಿನಲ್ಲಿ ನಾಯಕ ಡಾಲಿ ಧನಂಜಯ ಮತ್ತು ನಾಯಕಿ ರೀಷ್ಮಾ ನಾಣಯ್ಯ ಜೋಡಿ ಸಖತ್ ಮೋಡಿ ಮಾಡಿದೆ. ಇಬ್ಬರ ಕೆಮಿಸ್ಟ್ರಿ ಹಾಗೂ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಅಭಿಮಾನಿಗಳಿಗೆ ಹಬ್ಬದೂಟ ನೀಡುವಂತಿದೆ. ಲಿರಿಕಲ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಡವ ರಾಸ್ಕಲ್ ಖ್ಯಾತಿಯ ಶಂಕರ್ ಗುರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಕಮರ್ಷಿಯಲ್ ಅಂಶಗಳ ಜೊತೆಗೆ ಮನರಂಜನೆಯ ಪ್ಯಾಕೇಜ್ ನೀಡಲು ಸಜ್ಜಾಗಿದ್ದಾರೆ.
ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಲೂಸ್‌ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಐರಾ ಫಿಲಂಸ್ ಬ್ಯಾನರ್‌ನಡಿ ಚನ್ನರಾಜ್ ಬಿ ಹಟ್ಟಿಹೊಳಿ ಮತ್ತು ಮೃಣಾಲ್ ಹಾಗೂ ರಾಯಲ ಸ್ಟುಡಿಯೋಸ್ ಬ್ಯಾನರ್‌ನಡಿ ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಈ ಚಿತ್ರವನ್ನು ನಿರ್ಮಿಸಿದ್ದಾರೆ. AJ ಶೆಟ್ಟಿ ಮತ್ತು ಎಸ್.ಕೆ. ರಾವ್ ಕ್ಯಾಮೆರಾ ಕೈಚಳಕ, ನಿರಂಜನ್ ದೇವರಮನೆ ಸಂಕಲನ ಚಿತ್ರಕ್ಕಿದ್ದು.. ವರ್ಷಾಂತ್ಯಕ್ಕೆ ಅಂದ್ರೆ.. ಕ್ರಿಸ್‌ಮಸ್ ವಿಶೇಷ ಡಿಸೆಂಬರ್ 24ಕ್ಕೆ ಬಿಗ್‌ಸ್ಕ್ರೀನ್‌ಗೆ ಬರ್ತಿದೆ ಸಿನಿಮಾ. ಸಾಂಗ್ ಲಾಂಚ್ ಇವೆಂಟ್‌ನಲ್ಲಿ ಕೊರಿಯೋಗ್ರಾಫರ್ ಮೋಹನ್ ಮಾಸ್ಟರ್ ಹೇಳಿಕೊಟ್ಟಂತೆ ರೀಷ್ಮಾ-ಡಾಲಿ ವೇದಿಕೆ ಮೇಲೆ ಸ್ಟೆಪ್ ಹಾಕಿದ್ದು ವಿಶೇಷ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





