ಹೊಸ ಸಿನಿಮೋತ್ಸಾಹಿ ಟೀಂ ಆಲ್ಫಾ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದ್ದು, ಮೇಕಿಂಗ್‌ನಿಂದ ಎಲ್ಲರ ಹುಬ್ಬೇರಿಸಿದೆ. ಅನೂಪ್ ಸೀಳಿನ್ ಸಂಗೀತ, ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡು ಹೇಗಿದೆ..? ಮಂತ್ರಿ ಮಾಲ್‌ನ ದೊಡ್ಡ ವೇದಿಕೆಯಲ್ಲಿ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದಾಗ ಸಾಥ್ ನೀಡಿದ್ದು ಯಾರು ಅನ್ನೋದ್ರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.
ಕಲೆ ಯಾರಪ್ಪನ ಸ್ವತ್ತೂ ಅಲ್ಲ. ಟ್ಯಾಲೆಂಟ್ ಇದ್ದವನಿಗೆ ಒಳ್ಳೆಯ ವೇದಿಕೆ ಸಿಕ್ರೆ ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ಆಗ್ತಾನೆ. ಅದ್ರಲ್ಲೂ ಹೊಸದಾಗಿ ಬರೋ ಸಿನಿಮೋತ್ಸಾಹಿಗಳಲ್ಲಿ ಹಸಿವು ಕೊಂಚ ಜಾಸ್ತಿನೇ ಇರಲಿದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಇಲ್ಲಿರೋ ಆಲ್ಫಾ-ಮೆನ್ ಲವ್ ವೆಂಜನ್ಸ್ ಅನ್ನೋ ಚಿತ್ರತಂಡ. ಇತ್ತೀಚೆಗೆ ಟೀಸರ್ ಲಾಂಚ್ ಮಾಡಿದ್ದ ಚಿತ್ರತಂಡ ಇದೀಗ ಟೈಟಲ್ ಸಾಂಗ್ ಲಾಂಚ್ ಮಾಡಿದೆ. ಮಂತ್ರಿ ಮಾಲ್‌ನಲ್ಲಿ ಇತ್ತೀಚೆಗೆ ಸಾಕಷ್ಟು ಚಿತ್ರಪ್ರೇಮಿಗಳ ಜೊತೆ ಸಾಂಗ್ ಬಿಡುಗಡೆ ಮಾಡಲಾಯಿತು.
ಟೀಸರ್ ಹಿಟ್.. ಟೈಟಲ್ ಸಾಂಗ್ ಸಖತ್ ಇಂಪ್ರೆಸ್ಸೀವ್
ಹಣ, ಅಧಿಕಾರ.. ರಾಕ್ಷಸರ ಕಾಳಗ.. ಆಲ್ಫಾ ಟೀಂ ವೆಂಜನ್ಸ್
LA ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಆನಂದ್ ಕುಮಾರ್ ನಿರ್ಮಾಣದ, ವಿಜಯ್ ನಿರ್ದೇಶನದ ಚಿತ್ರ ಈ ಆಲ್ಫಾ. ಹೇಮಂತ್ ಕುಮಾರ್ ಅನ್ನೋ ನ್ಯೂ ಟ್ಯಾಲೆಂಟ್ ನಾಯಕನಟನಾಗಿ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಆಗ್ತಿದ್ದು, ಸಖತ್ ಪ್ರಾಮಿಸಿಂಗ್ ಆಗಿ ಅಪಿಯರೆನ್ಸ್ ನೀಡಿದ್ದಾರೆ. ಅನೂಪ್ ಸೀಳನ್ ಸಂಗೀತ, ನಾಗಾರ್ಜುನ ಶರ್ಮಾ ಸಾಹಿತ್ಯ ರಚಿನೆಯ ಗೀತೆ ಇದಾಗಿದ್ದು, ವ್ಯಾಸರಾಜ ಸೋಸಲೆ ಕಂಠದಲ್ಲಿ ಮೂಡಿಬಂದಿದೆ.
ನಾನು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದಿರುವವನು. ಆದರೆ ಮೊದಲಿನಿಂದಲೂ ನಟನಾಗಬೇಕು ಎಂಬ ಕನಸನ್ನು ಹೊತ್ತವನು. ನಾಯಕನಾಗುವ ಮೊದಲು ನಟನೆಗೆ ಬೇಕಾದ ಎಲ್ಲಾ ಅಭ್ಯಾಸವನ್ನು ಕಲಿತು ಬಂದಿದ್ದೇನೆ. ಜನರು ನಮ್ಮ ಚಿತ್ರವನ್ನು ಮುಚ್ಚಿಕೊಳ್ಳುವ ಭರವಸೆ ಇದೆ ಅಂದ್ರು ನಾಯಕನಟ ಹೇಮಂತ್.
ನೆಗಟಿವ್ ಶೇಡ್‌ನಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ನಟಿಸಿದ್ದು, ನಾಯಕಿಯರಾಗಿ ಆಯನಾ, ಗೋಪಿಕಾ ಸುರೇಶ್ ಬಣ್ಣ ಹಚ್ಚಿದ್ದಾರೆ. ಇದಲ್ಲದೆ ನಟ ಬಾಲು ನಾಗೇಂದ್ರ, ಅಚ್ಯುತ್, ರಮೇಶ್ ಇಂದಿರಾ ರಂತಹ ಅದ್ಭುತ ಕಲಾವಿದರು ಈ ಸಿನಿಮಾದ ತಾರಾಗಣದಲ್ಲಿದ್ದಾರೆ. ವಿಜಯ್ ನಿರ್ದೇಶನದ ಆಲ್ಫಾ ಸಿನಿಮಾದ ಮೇಕಿಂಗ್ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದ್ದು, ಹೇಮಂತ್ ಚಿತ್ರರಂಗದ ಭರವಸೆಯ ನಾಯಕನಟನಾಗುವ ಸೂಚನೆ ನೀಡಿದ್ದಾರೆ.
ಈ ಟೈಟಲ್ ಟ್ರ್ಯಾಕ್ ಜೊತೆ ಮೇಕಿಂಗ್ ವಿಡಿಯೋ ಕೂಡ ರಿವೀಲ್ ಆಗಿದ್ದು, ಇಡೀ ಟೀಂ ಸಿಕ್ಕಾಪಟ್ಟೆ ಎಫರ್ಟ್ ಹಾಕಿ ಚಿತ್ರಿಸಿದೆ. ಹೀರೋ, ಡೈರೆಕ್ಟರ್ ಅಷ್ಟೇ ಇಲ್ಲಿ ಹೊಸಬರು. ಉಳಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಸಾಕಷ್ಟು ಅನುಭವ ಹೊಂದಿದ್ದು, ಸಿನಿಮಾದ ಗೆಲುವಿಗೆ ಬೆಂಬಲವಾಗಿ ನಿಂತಿದ್ದಾರೆ. ಸಿನಿಮಾ ಇದೇ ಫೆಬ್ರವರಿ 20ಕ್ಕೆ ತೆರೆಗೆ ಬರ್ತಿದೆ.





