ನಟಿ ಅಭಿನಯ ಅವರು ಕನ್ನಡ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಹುಡುಗರು’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ತಂಗಿ ಪಾತ್ರದಲ್ಲಿ ಮಿಂಚಿದ ಅವರು, ತಮ್ಮ ಬಾಲ್ಯದ ಸ್ನೇಹಿತನೊಂದಿಗೆ 15 ವರ್ಷಗಳ ಪ್ರೀತಿಯ ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅಭಿನಯ ಎಂಗೇಜ್‌ಮೆಂಟ್
ಅಭಿನಯ ಇತ್ತೀಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೇವಾಲಯದ ಗಂಟೆಯ ಮುಂದೆ ಕೈ ಹಿಡಿದು ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಆದರೆ ಅವರು ನಿಶ್ಚಿತಾರ್ಥ ಮಾಡಿಕೊಂಡ ವ್ಯಕ್ತಿಯ ಹೆಸರು ಮತ್ತು ವಿವರವನ್ನು ಬಹಿರಂಗಪಡಿಸಿಲ್ಲ.

15 ವರ್ಷಗಳ ಪ್ರೀತಿಯಲ್ಲಿದ್ದ ನಟಿ
ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಅಭಿನಯ ಅವರು, “ನಾನು ನನ್ನ ಬಾಲ್ಯದ ಸ್ನೇಹಿತನೊಂದಿಗೆ 15 ವರ್ಷಗಳಿಂದ ಬಾಂಧವ್ಯ ಹೊಂದಿದ್ದೇನೆ. ಅವರೊಂದಿಗೆ ಯಾವುದೇ ವಿಚಾರವನ್ನು ಮುಕ್ತವಾಗಿ ಚರ್ಚಿಸಬಹುದು. ಆದರೆ ಮದುವೆ ಬಗ್ಗೆ ತಕ್ಷಣ ಯೋಚಿಸಿಲ್ಲ” ಎಂದು ಹೇಳಿದ್ದರು. ಇದೀಗ ಎಂಗೇಜ್‌ಮೆಂಟ್ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ವಿಶಾಲ್ ಮತ್ತು ಅಭಿನಯ ಸಂಬಂಧ ಗಾಸಿಪ್?
ನಟಿ ಅಭಿನಯ ಮತ್ತು ತಮಿಳು ನಟ ವಿಶಾಲ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹಲವು ಬಾರಿ ಹಬ್ಬಿದರೂ, ನಟಿ ಈ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಈಗ ತಮ್ಮ ಬಾಲ್ಯದ ಸ್ನೇಹಿತನೊಂದಿಗೆ ಹೊಸ ಜೀವನ ಆರಂಭಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಅಭಿನಯ ನಟನಾ ಕಾರಿಯರ್
ಅಭಿನಯ 2009ರಲ್ಲಿ ತಮಿಳಿನ ‘ನಾಡೋಡಿಗಳ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಕನ್ನಡದಲ್ಲಿ ‘ಹುಡುಗರು’ ಮತ್ತು ‘ಕಿಚ್ಚು’ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ‘ಮೂಕುತಿ ಅಮ್ಮನ್ 2’ ಸಿನಿಮಾಕ್ಕೆ ಸಹ ಆಯ್ಕೆಯಾಗಿದ್ದಾರೆ. ಮಲಯಾಳಂ ಚಿತ್ರ ‘ಪಾನಿ’ ಸಹ ಅಭಿಮಾನಿಗಳ ಮೆಚ್ಚುಗೆ ಪಡೆದಿತ್ತು.





