ಕಳೆದ ವಾರವಿಡೀ ಕುಸಿತದ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಾರಾಂತ್ಯದಲ್ಲಿ ದಿಢೀರ್ ಎಂದು ಏರಿಕೆಯಾಗಿವೆ. ಸೋಮವಾರವೂ ಈ ಏರಿಕೆ ಮುಂದುವರಿದಿದ್ದು, ಹೂಡಿಕೆದಾರರು ಮತ್ತು ಆಭರಣ ಪ್ರಿಯರನ್ನು ದಿಗ್ಭ್ರಮೆಗೊಳಿಸಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿಯ ದರಗಳು ಗಣನೀಯವಾಗಿ ಜಿಗಿದಿವೆ.
ಏರಿಕೆಗೆ ಇದೇ ಕಾರಣ
ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಮಾತುಕತೆಯೇ ಈ ಏರಿಕೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಾರದ ಕೊನೆಯಲ್ಲಿ ಜರ್ಮನಿಯಲ್ಲಿ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಘೋಷಿಸಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿಯಿತು. ಪರಿಣಾಮ, ಸುರಕ್ಷಿತ ಹೂಡಿಕೆಯೆಂದೇ ಪರಿಗಣಿತವಾಗಿರುವ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಜೊತೆಗೆ, ಕಚ್ಚಾ ತೈಲ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯೂ ಚಿನ್ನದ ವಹಿವಾಟಿಗೆ ಸಹಕಾರಿಯಾಗಿದೆ.
ಇಂದಿನ ಚಿನ್ನದ ದರ (ಜೂನ್ 15, ಸೋಮವಾರ)
ಬೆಂಗಳೂರಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶನಿವಾರದ ಸಂಜೆಗೆ ಹೋಲಿಸಿದರೆ ಪ್ರತಿ ಗ್ರಾಮಿಗೆ ₹245 ರೂಪಾಯಿ ಹೆಚ್ಚಾಗಿದೆ. ಹೀಗಾಗಿ, ಹತ್ತು ಗ್ರಾಂ ಚಿನ್ನದ ಬೆಲೆ ಈಗ ₹1,51,530 ಆಗಿದೆ. 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ ಗ್ರಾಂಗೆ ₹225 ಏರಿಕೆಯಾಗಿ ಹತ್ತು ಗ್ರಾಂಗೆ ₹1,38,900 ತಲುಪಿದೆ. 18 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹184 ಏರಿಕೆಯಾಗಿ ಹತ್ತು ಗ್ರಾಂಗೆ ₹1,13,650 ಆಗಿದೆ.
ಮಂಗಳೂರಿನಲ್ಲಿ ಚಿನ್ನದ ಬೆಲೆ
ಮಂಗಳೂರಿನಲ್ಲಿಯೂ ಸಹ ಚಿನ್ನದ ಬೆಲೆ ಏರಿಕೆಯಾಗಿದೆ.
-
24 ಕ್ಯಾರೆಟ್ (1 ಗ್ರಾಂ): ₹15,153 (+ ₹245)
-
22 ಕ್ಯಾರೆಟ್ (1 ಗ್ರಾಂ): ₹13,890 (+ ₹225)
-
18 ಕ್ಯಾರೆಟ್ (1 ಗ್ರಾಂ): ₹11,365 (+ ₹184)
ಇತರ ಪ್ರಮುಖ ನಗರಗಳ ದರ (1 ಗ್ರಾಂಗೆ)
-
ದೆಹಲಿ: 24 ಕ್ಯಾರೆಟ್ ₹15,168, 22 ಕ್ಯಾರೆಟ್ ₹13,905
-
ಮುಂಬೈ, ಕೋಲ್ಕತ್ತಾ, ಹೈದರಾಬಾದ್: 24 ಕ್ಯಾರೆಟ್ ₹15,153, 22 ಕ್ಯಾರೆಟ್ ₹13,890
-
ಚೆನ್ನೈ: 24 ಕ್ಯಾರೆಟ್ ₹15,349, 22 ಕ್ಯಾರೆಟ್ ₹14,070 (ಇಲ್ಲಿ ಸ್ವಲ್ಪ ಹೆಚ್ಚಿನ ದರವಿದೆ)
-
ಅಹಮದಾಬಾದ್: 24 ಕ್ಯಾರೆಟ್ ₹15,158, 22 ಕ್ಯಾರೆಟ್ ₹13,895
ಬೆಳ್ಳಿಯ ದರದಲ್ಲೂ ಜಿಗಿತ
ಬೆಳ್ಳಿಯ ಬೆಲೆ ಕೂಡ ತೀವ್ರ ಏರಿಳಿತ ಕಂಡಿದೆ. ಮಾರ್ಚ್-ಏಪ್ರಿಲ್ನಲ್ಲಿ ಪ್ರತಿ ಕೆಜಿಗೆ ₹2,55,000 ಸುತ್ತಿದ್ದ ಬೆಳ್ಳಿ ಮೇ ಆರಂಭದಲ್ಲಿ ₹2,90,000ವರೆಗೂ ಏರಿತ್ತು. ನಂತರ ಸ್ಥಿರವಾಗಿದ್ದ ಬೆಲೆ, ಕಳೆದ ವಾರ ಕುಸಿಯಲಾರಂಭಿಸಿತು. ಆದರೆ ವಾರಾಂತ್ಯದ ವೇಳೆಗೆ ಮತ್ತೆ ಚೇತರಿಸಿಕೊಂಡಿದೆ. ಸೋಮವಾರ ಬೆಳ್ಳಿ ಪ್ರತಿ ಕೆಜಿಗೆ ₹2,65,000 (ಗ್ರಾಂಗೆ ₹265) ಮಾರಾಟವಾಗುತ್ತಿದೆ. ಕಳೆದ ಶನಿವಾರದ ₹2,60,000 ಗೆ ಹೋಲಿಸಿದರೆ ಪ್ರತಿ ಕೆಜಿಗೆ ₹5,000 ಏರಿಕೆಯಾಗಿದೆ.





