ಸಮಂತಾ ಈಸ್ ಬ್ಯಾಕ್.. ಆರು ವರ್ಷಗಳು, ಬ್ಯಾಕ್ ಟು ಬ್ಯಾಕ್ ಸೋಲುಗಳು. ಇದೀಗ ಮಾ ಇಂಟಿ ಬಂಗಾರಂ ಆಗಿ ಪ್ರೇಕ್ಷಕರ ಮುಂದೆ ಡಬಲ್ ಶೇಡ್‌ನಲ್ಲಿ ಡಬಲ್ ಧಮಾಕ ಮಾಡೋಕೆ ಬರ್ತಿದ್ದಾರೆ ಬಹುಭಾಷಾ ನಟಿ. ಆ ಬಂಗಾರಂ ಜೊತೆ ನಮ್ ಕನ್ನಡದ ದೂದ್‌ಪೇಡಾ ದಿಗಂತ್ ಎಂಟ್ರಿ ಬಿಗ್ ಸರ್‌ಪ್ರೈಸಿಂಗ್ ಆಗಿದೆ.
ಇದು ಮಾ ಇಂಟಿ ಬಂಗಾರಂ ಅನ್ನೋ ತೆಲುಗು ಸಿನಿಮಾದ ಲೇಟೆಸ್ಟ್ ಟ್ರೈಲರ್ ಝಲಕ್. ಇತ್ತೀಚೆಗೆ ದಿ ಫ್ಯಾಮಿಲಿ ಮ್ಯಾನ್ ಡೈರೆಕ್ಟರ್ ರಾಜ್ ನಿಡಿಮೋರುನ ಎರಡನೇ ಮದ್ವೆಯಾದ ಬಳಿಕ ಸಮಂತಾ ಬಣ್ಣ ಹಚ್ಚಿರೋ ಮೊದಲ ಸಿನಿಮಾ. ಓ ಬೇಬಿ ಸಿನಿಮಾದ ಬಳಿಕ ಸತತ ಆರು ವರ್ಷಗಳಿಂದ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನೇ ಕಂಡಿರೋ ಸ್ಯಾಮ್ ಈ ಚಿತ್ರದಿಂದ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ಬಂಗಾರಂ ಸಮಂತಾ ಜೊತೆ ನಮ್ ದೂದ್‌ಪೇಡಾ ದಿಗಂತ್
ಅತ್ತೆ ಮನೆಯಲ್ಲಿ ಸೊಸೆ ಡೆಡ್ಲಿ & ಡೇರಿಂಗ್ ಆ್ಯಕ್ಷನ್ ಝಲಕ್
ಯೆಸ್.. ಈ ಹಿಂದೆ ಟೀಸರ್ ಬಿಡುಗಡೆ ಮಾಡಿದ್ದ ಟೀಂ, ಇದೀಗ ವೆರಿ ವೆರಿ ಪ್ರಾಮಿಸಿಂಗ್ ಟ್ರೈಲರ್‌ನ ರಿವೀಲ್ ಮಾಡಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಸಿನಿಮಾಗೆ ಸಮಂತಾ ಪತಿ ರಾಜ್ ನಿಡಿಮೋರು ಅವ್ರೇ ಕಥೆ ಬರೆದಿರೋದು ಇಂಟರೆಸ್ಟಿಂಗ್. ಸಮಂತಾನೇ ತಮ್ಮ ಹೋಮ್ ಬ್ಯಾನರ್ ಮೂಲಕ ಮಾ ಇಂಟಿ ಬಂಗಾರಂ ಚಿತ್ರ ನಿರ್ಮಾಣ ಕೂಡ ಮಾಡಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.
ಅಂದಹಾಗೆ ಈ ಚಿತ್ರದ ಟ್ರೈಲರ್ ಸಾಕಷ್ಟು ಸರ್‌ಪ್ರೈಸ್‌ಗಳಿಗೆ ಕಾರಣವಾಗಿದೆ. ಮೊದಲನೆಯದ್ದು ನಮ್ಮ ಕನ್ನಡದ ಹ್ಯಾಂಡ್ಸಮ್ ಹೀರೋ, ದೂದ್‌ಪೇಡಾ ದಿಗಂತ್. ಹೌದು.. ದಿಗಂತ್ ಇಲ್ಲಿ ಸಮಂತಾ ಪತಿ ಪಾತ್ರದಲ್ಲಿ ತುಂಬಾ ಕಾಮ್ ಅ್ಯಂಡ್ ಕೂಲ್ ಆಗಿ ಕಾಣ್ತಾರೆ. ಆದ್ರೆ ಟ್ರೈಲರ್‌ನಲ್ಲಿ ಇದ್ದಷ್ಟು ಕೂಲ್ ಪರ್ಸನ್ ಆಗಿರ್ತಾರಾ ಅನ್ನೋದು ಮಾತ್ರ ಹಂಡ್ರೆಡ್ ಪರ್ಸೆಂಟ್ ಡೌಟ್ ಇದೆ. ಸ್ಯಾಮ್ ಜೊತೆ ದಿಗ್ಗಿ ನೋಡೋಕೆ ಸಖತ್ ಆಗಿದ್ದು, ಕನ್ನಡಿಗರ ಜೊತೆ ದಿಗಂತ್-ಐಂದ್ರಿತಾ ರೇ ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಸಮಂತಾ ಈಸ್ ಬ್ಯಾಕ್.. 6 ವರ್ಷಗಳ ಸೋಲಿಗೆ ಸೇಡು..?
2ನೇ ಮದ್ವೆ ಬಳಿಕ ಮೊದಲ ಸಿನಿಮಾ.. ಗಂಡನೇ ಬರೆದ ಕಥೆ
2008ರಲ್ಲಿ ವಾನ ಚಿತ್ರದಿಂದ ಟಾಲಿವುಡ್‌ಗೆ ಕಾಲಿಟ್ಟಿದ್ದ ದಿಗಂತ್, ಇದೀಗ ದೊಡ್ಡದೊಂದು ಲಾಂಗ್ ಗ್ಯಾಪ್ ಬಳಿಕ ಸಮಂತಾ ನಟಿಸಿ, ನಿರ್ಮಿಸ್ತಿರೋ ಮಾ ಇಂಟಿ ಬಂಗಾರಂ ಚಿತ್ರದಿಂದ ರೀ-ಎಂಟ್ರಿ ಕೊಟ್ಟಿದ್ದಾರೆ. ಇದಲ್ಲದೆ, ಸಮಂತಾ ಡಬಲ್ ಶೇಡ್ ರೋಲ್ ನೆಕ್ಸ್ಟ್ ಲೆವೆಲ್ ಕಿಕ್ ಕೊಡಲಿದೆ. ಯೆಸ್.. ಹಳ್ಳಿಯಲ್ಲಿರೋ ಅತ್ತೆ ಮನೆಗೆ ಗಂಡನ ಜೊತೆ ಕೆಂಪು ಬಸ್ ಹತ್ತಿ ಬರೋ ಸಮಂತಾ, ಹತ್ತೇ ದಿನದಲ್ಲಿ ಅವರೊಟ್ಟಿಗೆ ಬೆರೆತು ಬಿಡ್ತೀನಿ ಅನ್ನೋ ಕಾನ್ಫಿಡೆನ್ಸ್ ವ್ಯಕ್ತಪಡಿಸ್ತಾರೆ. ಆದ್ರೆ ಅಸಲಿ ಕಥೆ ಬೇರೇನೇ ಇದೆ.
ಸಭ್ಯವಾಗಿ ಸೀರೆಯುಟ್ಟು, ಬಿಂದಿ ಇಟ್ಟು, ಬಳೆ ಹಾಕಿರೋ ಟಿಪಿಕಲ್ ಆರ್ಥೋಡಾಕ್ಸ್ ಫ್ಯಾಮಿಲಿ ಕ್ಲಾಸಿಕಲ್ ಬ್ಯೂಟಿ ಅಂದುಕೊಳ್ತಿದ್ದವ್ರಿಗೆ ತಮ್ಮ ಎರಡನೇ ಮುಖ ತೋರಿಸಿದ್ದಾರೆ ಸಮಂತಾ. ಪವರ್‌ಫುಲ್ ಆ್ಯಕ್ಷನ್ ಝಲಕ್‌ಗಳಿಂದ ಡೆಡ್ಲಿ ಅಂಡ್ ಡೇರಿಂಗ್ ವುಮನ್ ಅನ್ನೋದನ್ನ ತೋರಿಸ್ತಾರೆ. ಈ ಸಿನಿಮಾ ಚಿತ್ರಪ್ರೇಮಿಗಳಿಗೆ ದೊಡ್ಡ ಭರವಸೆ ಮೂಡಿಸಿದ್ದು, ಕುಟುಂಬದ ಜೊತೆ ಜೊತೆಗೆ ಶತ್ರುಗಳನ್ನ ಚೆಂಡಾಡೋ ಆಕೆಯ ಖದರ್‌ಗೆ ಹ್ಯಾಟ್ಸಾಫ್ ಹೇಳಲೇಬೇಕು.





