ಚಿತ್ರರಂಗ ಬಿಟ್ಟು ರಾಜಕಾರಣದತ್ತ ಮುಖ ಮಾಡಿರೋ ದಳಪತಿ ವಿಜಯ್, ತಮ್ಮ 25 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ಸ್ಟಾಪ್ ಇಟ್ಟಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಲಂಡನ್ನಿಂದ ಚೆನ್ನೈಗೆ ಆಗಮಿಸಿದ್ದ ವಿಜಯ್ ಪತ್ನಿ ಸಂಗೀತಾ, ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿರೋ ಫೋಟೋಸ್ ಸಖತ್ ವೈರಲ್ ಆಗ್ತಿವೆ. ಈ ಕುರಿತ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.
- ದಳಪತಿ ವಿಜಯ್ಗೆ ಪತ್ನಿ ಶಾಕ್.. ಡಿವೋರ್ಸ್ ಕನ್ಫರ್ಮ್..?
- ಲಂಡನ್ನಿಂದ ಚೆನ್ನೈಗೆ ಬಂದಿದ್ದ ವಿಜಯ್ ಪತ್ನಿ ಸಂಗೀತಾ..!
- ರಾಜಕೀಯಕ್ಕೆ ವಿಜಯ್.. ಇಂಡಸ್ಟ್ರಿಗೆ ಮಗ.. ಲಂಡನ್ನತ್ತ ಪತ್ನಿ
- ಪವನ್ ಕಲ್ಯಾಣ್ ರೀತಿ ಸಿ.ಎಂ. ಕನಸು ಕಂಡಿದ್ದಾರೆ ದಳಪತಿ..!!
ಸಣ್ಣ ವಯಸ್ಸಿನಲ್ಲೇ ಮಾಸ್ ಸಿನಿಮಾಗಳಿಂದ ಬಹುದೊಡ್ಡ ಅಭಿಮಾನಿ ಬಳಗ ಪಡೆದು ಸ್ಟಾರ್ ಆದ್ರು ವಿಜಯ್. ದಳಪತಿ ಅನ್ನೋ ಬಿರುದಿನಿಂದ ತಲೈವಾ ಆಗೋಕೆ ಹೊರಟಿದ್ದ ವಿಜಯ್, ಚಿತ್ರರಂಗಕ್ಕೆ ಗುಡ್ ಬೈ ಹೇಳಿ, ಪಾಲಿಟಿಕ್ಸ್ಗೆ ಧುಮುಕಿದ್ದಾರೆ. ಹೌದು, ಪಕ್ಕದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ರೀತಿ ತಾನೂ ತಮಿಳುನಾಡು ಸಿಎಂ ಆಗುವ ಕನಸು ಕಂಡಿದ್ದಾರೆ. ಅದೇ ಕಾರಣದಿಂದ ಟಿವಿಕೆ ಅನ್ನೋ ಪಕ್ಷ ಕಟ್ಟಿ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ತಿದ್ದಾರೆ.
ದಳಪತಿ ವಿಜಯ್ರ 69ನೇ ಸಿನಿಮಾ ಜನ ನಾಯಗನ್ 2026ರ ಪೊಂಗಲ್ಗೆ ಜನವರಿಯಲ್ಲಿ ರಿಲೀಸ್ ಆಗ್ತಿದೆ. ಇದಕ್ಕೆ ನಮ್ಮ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಇದೇ ವಿಜಯ್ ಕಟ್ಟ ಕಡೆಯ ಚಿತ್ರವಾಗ್ತಿದೆ. ಇದಾದ ಬಳಿಕ ವಿಜಯ್ ಪಾಲಿಟಿಕ್ಸ್ಗೆ ಮಾತ್ರ ಸೀಮಿತ ಆಗಲಿದ್ದಾರಂತೆ. ಇದೆಲ್ಲಾ ಓಕೆ. ಆದ್ರೆ ಸದ್ಯ ರಾಜಕೀಯವಾಗಿ ಮಹತ್ವದ ಕನಸು ಕಂಡು, ಅದನ್ನ ಸಾಕಾರಗೊಳಿಸಲು ಮುಂದಾಗಿರೋ ವಿಜಯ್ಗೆ ಪತ್ನಿಯಿಂದ ಸಂಕಷ್ಟ ಎದುರಾಗಿದೆ.
ಹೌದು, 1999ರಲ್ಲಿ ಲಂಡನ್ನಿಂದ ಅಭಿಮಾನಿ ಅಂತ ಬಂದಂತಹ ಸಂಗೀತಾರನ್ನ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು ವಿಜಯ್. ಇದೀಗ ಬರೋಬ್ಬರಿ 25 ವರ್ಷಗಳ ನಂತ್ರ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅದಕ್ಕೆ ಕಾರಣ ನಾನಾ ರೀತಿ ಮಾತಾಡಿಕೊಳ್ತಿದ್ದಾರೆ. ಮದುವೆಯಾದ ಆರಂಭದ ದಿನಗಳಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಪತಿ ವಿಜಯ್ ಜೊತೆ ಪತ್ನಿ ಸಂಗೀತಾ ಕೂಡ ಕಾಣಿಸಿಕೊಳ್ತಿದ್ರು. ಆದ್ರೆ ಇತ್ತೀಚೆಗೆ ಸಂಗೀತಾ ಮತ್ತೆ ಲಂಡನ್ ಫ್ಲೈಟ್ ಹತ್ತಿದ್ರು. ಎಲ್ಲಿಯೂ ಇವರುಗಳು ಒಟ್ಟೊಟ್ಟಿಗೆ ಕಾಣಿಸಿಕೊಳ್ತಿರಲಿಲ್ಲ.
ಡಿವೋರ್ಸ್ ಪಡೆಯುತ್ತಿರೋದಾಗಿ ಅಂತೆ ಕಂತೆಗಳು ಕೂಡ ಹರಿದಾಡಿದ್ದವು. ಆದ್ರೀಗ ಅದಕ್ಕೆ ಪುಷ್ಠಿ ನೀಡುವಂತೆ ಲಂಡನ್ನಿಂದ ಚೆನ್ನೈಗೆ ಬಂದು ಹೋಗಿದ್ದಾರೆ ಸಂಗೀತಾ. ಹೌದು, ಏರ್ಪೋರ್ಟ್ನಲ್ಲಿ ಮಗ ಜೇಸನ್ ಜೊತೆಗೆ ಸಂಗೀತಾ ಕಾಣಿಸಿಕೊಂಡಿದ್ದು, ಫೋಟೋಸ್ ಸಖತ್ ವೈರಲ್ ಆಗ್ತಿವೆ. ಸದ್ಯ ಮಗಳು ದಿವ್ಯಾ ಲಂಡನ್ನಲ್ಲೇ ವ್ಯಾಸಂಗ ಮಾಡ್ತಿದ್ದು, ಅಮ್ಮ-ಮಗಳು ಅಲ್ಲೇ ಇರೋಕೆ ಯೋಜನೆ ರೂಪಿಸಿದ್ದಾರೆ ಎನ್ನಲಾಗ್ತಿದೆ.
ಇನ್ನು ಮಗ ಜೇಸನ್ ನಿರ್ದೇಶಕನಾಗುವ ಕನಸು ಕಂಡಿದ್ದು, ಅದಕ್ಕಾಗಿ ಸಾಕಷ್ಟು ಹೋಮ್ ವರ್ಕ್ ಮಾಡ್ತಿದ್ದಾರೆ. ಚೊಚ್ಚಲ ನಿರ್ದೇಶನದ ಸಿನಿಮಾ ಮಾಡೋಕೆ ಸಜ್ಜಾಗಿದ್ದು, ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರು ಮಾಡಲಿದ್ದಾರಂತೆ. ತಂದೆ ಪಾಲಿಟಿಕ್ಸ್ಗೆ, ತಾಯಿ ಲಂಡನ್ಗೆ ಮರಳಿದ್ದು, ತಾನು ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ ದಳಪತಿ ವಿಜಯ್ ಮಗ ಜೇಸನ್. ಇದೆಲ್ಲಾ ಕಂಡು ಫ್ಯಾನ್ಸ್ ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರೆ. 





