ನವದೆಹಲಿ: ಸಾಮಾಜಿಕ ಜಾಲತಾಣಗಳಿಗಾಗಿ “ರೀಲ್ಸ್” ಮಾಡುವ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೆಲವರು ಅದಕ್ಕಾಗಿ ದೊಡ್ಡ ಮಟ್ಟದ ಸಾಹಸ ಮಾಡಲು ಸಿದ್ಧರಾಗಿರುತ್ತಾರೆ. ಇತ್ತೀಚೆಗೆ ಭಾರತೀಯ ರೈಲ್ವೆಯ ಬೋಗಿಯೊಂದರಲ್ಲಿ ನಡೆದ ಅಸಹ್ಯಕರ ಘಟನೆ ಈ ಸಮಸ್ಯೆಗೆ ಮತ್ತೊಂದು ಉದಾಹರಣೆಯಾಗಿದೆ. ಕೆಲ ಯುವಕರು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ಸಾರ್ವಜನಿಕ ಆಸ್ತಿಯನ್ನೇ ಧ್ವಂಸಗೊಳಿಸಿರುವ ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಗುಲಾಬಿ ಬಣ್ಣದ ಶರ್ಟ್ ಹಾಗೂ ನೀಲಿ ಜೀನ್ಸ್ ಧರಿಸಿದ ವ್ಯಕ್ತಿಯೊಬ್ಬನು ರೈಲ್ವೆ ಬೋಗಿಯಲ್ಲಿ ಕುಳಿತುಕೊಂಡು ಸೀಟ್ ಕವರ್ ಅನ್ನು ಹರಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆತ ತನ್ನ ಕೃತ್ಯವನ್ನು ಕ್ಯಾಮೆರಾ ಮುಂದೆ ಪ್ರದರ್ಶಿಸುತ್ತಿದ್ದರೆ, ಅವನ ಸ್ನೇಹಿತರು ನಗುತ್ತಾ ಅದನ್ನು ಪ್ರೋತ್ಸಾಹಿಸುವಂತೆ ಕಾಣುತ್ತಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ತೀವ್ರ ಅಸಮಾಧಾನ ಹುಟ್ಟಿಸಿವೆ.
ಈ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಇನ್ನಿಬ್ಬರು ವ್ಯಕ್ತಿಗಳು ಚಲಿಸುತ್ತಿರುವ ರೈಲಿನೊಳಗೆ ಫಿಟ್ಟಿಂಗ್‌ಗಳನ್ನು ಹಿಡಿದು ನೇತಾಡುತ್ತರುವಉದನ್ನು ಕಾಣಬಹುದು. ಈ ರೀತಿಯ ನಡೆ ಕೇವಲ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದಲ್ಲದೆ, ಇತರ ಪ್ರಯಾಣಿಕರ ಸುರಕ್ಷತೆಯ ಮೇಲೂ ಗಂಭೀರ ಪ್ರಶ್ನೆ ಎಬ್ಬಿಸುತ್ತದೆ.
How stupid one has to be to do this?
See his smile while his friend is tearing the train seat cover apart. They think they achieved something here.
This goes beyond civic sense. This is a punishable offense. pic.twitter.com/t2Sq1MJtpH
— Tarun Gautam (@TARUNspeakss) May 2, 2026
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದ್ದಂತೆ, ಹಲವರು ಈ ವ್ಯಕ್ತಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಗುರುತಿಸಿದ್ದು, ‘ಅಂಕಿತ್ ಟೊಪ್ಪೊ’ ಎಂಬ ಹೆಸರಿನ ಬಳಕೆದಾರನಾಗಿ ಪತ್ತೆಹಚ್ಚಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದರಿಂದಾಗಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
ನೆಟ್ಟಿಗರು ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, “ಇಂತಹ ಕೃತ್ಯಗಳನ್ನು ಮಾಡುವವರು ಸಮಾಜಕ್ಕೆ ಕೆಟ್ಟ ಉದಾಹರಣೆ. ಸಾರ್ವಜನಿಕ ಆಸ್ತಿ ಎಲ್ಲರದ್ದೂ ಆಗಿರುವುದರಿಂದ, ಅದನ್ನು ಹಾನಿಗೊಳಿಸುವುದು ಕಾನೂನುಬದ್ಧವಾಗಿ ಅಪರಾಧ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬ ಬಳಕೆದಾರ, “ಇವರು ಕೂಲ್ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸುತ್ತಾರೆ, ಆದರೆ ವಾಸ್ತವದಲ್ಲಿ ತಮ್ಮ ಅಜ್ಞಾನವನ್ನೇ ಪ್ರದರ್ಶಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.





