ನವದೆಹಲಿ: ಟೋಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಫಾಸ್ಟ್ಯಾಗ್ ಖಾತೆಯಲ್ಲಿ ಹಣ ಇಲ್ಲದಿದ್ದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ, ಈಗಾಗಲೇ ಇರುವ ಟೋಲ್ ಶುಲ್ಕದ ಎರಡು ಪಟ್ಟು ದಂಡ ವಿಧಿಸಲಾಗುತ್ತದೆ. ಈ ನಿಯಮಗಳು ಫೆಬ್ರವರಿ 17, ಸೋಮವಾರದಿಂದ ಅನ್ವಯವಾಗಲಿವೆ.
ಹೊಸ ನಿಯಮಗಳು ಏನು?
ನಿಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರಲಿ
- ಟೋಲ್ ದಾಟುವ ಕನಿಷ್ಠ 1 ಗಂಟೆ ಮುಂಚಿನೇ ಅಗತ್ಯ ಹಣ ಖಾತೆಯಲ್ಲಿ ಜಮೆಯಾಗಿರಬೇಕು.
ಫಾಸ್ಟ್ಯಾಗ್ ಸಕ್ರಿಯವಾಗಿರಬೇಕು
- ಟೋಲ್ ದಾಟುವ 60 ನಿಮಿಷ ಮುನ್ನ ಮತ್ತು ಕನಿಷ್ಠ 10 ನಿಮಿಷದವರೆಗೆ ಫಾಸ್ಟ್ಯಾಗ್ ಆ್ಯಕ್ಟಿವ್ ಆಗಿರಬೇಕು. ಇಲ್ಲವಾದರೆ “ಎರರ್ ಕೋಡ್ 176” ತೋರಿಸಲಾಗುತ್ತದೆ ಮತ್ತು ದಪ್ಪಟ್ಟು ದಂಡ ವಿಧಿಸಲಾಗುತ್ತದೆ.
ಕೆವೈಸಿ (KYC) ಅಪ್ಡೇಟ್ ಮಾಡಲೇಬೇಕು
- ಫಾಸ್ಟ್ಯಾಗ್ ಖಾತೆಯ KYC ಅಪ್ಡೇಟ್ ಮಾಡದೇ ಇದ್ದರೆ, ಅದನ್ನು “ಕಪ್ಪುಪಟ್ಟಿಗೆ” (Blacklist) ಸೇರಿಸಲಾಗುತ್ತದೆ.
- ಈ ಖಾತೆಯಿಂದ ಪಾವತಿ ಮಾಡಲು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ದಪ್ಪಟ್ಟು ಟೋಲ್ ಶುಲ್ಕ ಕಟ್ಟಬೇಕಾಗುತ್ತದೆ.
ಟೋಲ್ ಪಾವತಿ ವಿಳಂಬ – ಹೆಚ್ಚುವರಿ ಶುಲ್ಕ
- ಟೋಲ್ ದಾಟಿದ 15 ನಿಮಿಷಗಳ ನಂತರ ಹಣ ಕಡಿತವಾದರೆ, ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ದೂರಿನ ನಿರ್ವಹಣೆ – 15 ದಿನಗಳ ಗಡುವು
- ತಪ್ಪಾಗಿ ಕಡಿತಗೊಂಡ ಹಣ ಸಂಬಂಧ 15 ದಿನಗಳೊಳಗೆ ದೂರು ಸಲ್ಲಿಸಬಹುದು.
ಸಿಗ್ನಲ್ ಬಂದ ತಕ್ಷಣ ಹಣ ಜಮೆ ಮಾಡಿದರೆ ದಂಡ ಇಲ್ಲ!
- ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೆ, ಟೋಲ್‌ಗೇಟ್‌ನಲ್ಲಿ ಪ್ರವೇಶ ನಿಷೇಧಿಸಲಾಗುವುದಿಲ್ಲ. ಆದರೆ “ನಿಮ್ಮ ಖಾತೆಯಲ್ಲಿ ಅಗತ್ಯ ಹಣ ಇಲ್ಲ” ಎಂಬ ಸಂದೇಶ ಮೊಬೈಲ್‌ಗೆ ಬರುತ್ತದೆ.
- ಈ ಸಂದೇಶ ಬಂದ 10 ನಿಮಿಷಗಳ ಒಳಗಾಗಿ ಹಣ ಜಮೆ ಮಾಡಿದರೆ ದಂಡ ವಿಧಿಸಲಾಗುವುದಿಲ್ಲ.
- ಈ ಅವಧಿಯಲ್ಲಿ ಹಣ ಜಮೆ ಮಾಡದೇ ಹೋದಲ್ಲಿ, ಟೋಲ್ ಶುಲ್ಕದ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.
ಹೀಗಾಗಿ, ಪ್ರಯಾಣಕ್ಕೂ ಮುನ್ನ ನಿಮ್ಮ ಫಾಸ್ಟ್ಯಾಗ್ ಖಾತೆಯನ್ನು ಚೆಕ್ ಮಾಡಿ.