ಬೆಂಗಳೂರು: ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸುವ ಮಹತ್ವದ ಸರ್ಕಾರಿ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆ ಕೂಡ ಒಂದು. ಈ ಯೋಜನೆಯಡಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ 3 ಲಕ್ಷ ರೂ. ವರೆಗೆ ಸಾಲ ಹಾಗೂ ಶೇ.50ರಷ್ಟು ಸಬ್ಸಿಡಿ ದೊರಕಲಿದೆ.
ಏನಿದು ಉದ್ಯೋಗಿನಿ ಯೋಜನೆ?
ಮುಖ್ಯವಾಗಿ ನಿರುದ್ಯೋಗಿ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು ಈ ಯೋಜನೆ ಅನೂಕೂಲ. 2015-16ರಲ್ಲಿ ಪ್ರಾರಂಭವಾದ ಈ ಯೋಜನೆಯು ಮಹಿಳೆಯರಿಗೆ ತಮ್ಮದೇ ಆದ ಉದ್ಯಮ ಆರಂಭಿಸಲು ಸಹಾಯ ಮಾಡುತ್ತದೆ. ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುವುದನ್ನು ತಪ್ಪಿಸಲು, ಈ ಯೋಜನೆಯಡಿ ಬಡ್ಡಿರಹಿತ ಹಾಗೂ ಮೇಲಾಧಾರ ರಹಿತ ವ್ಯಾಪಾರ ಸಾಲವನ್ನು ನೀಡಲಾಗುತ್ತದೆ.
ಯೋಜನೆಯ ಪ್ರಮುಖ ಅಂಶಗಳು
- ಗರಿಷ್ಠ ಸಾಲ ಮೊತ್ತ: 3,00,000 ರೂ.
- ಸಬ್ಸಿಡಿ ಪ್ರಮಾಣ: SC/ST ಮಹಿಳೆಯರಿಗೆ 50%, ಸಾಮಾನ್ಯ ವರ್ಗದವರಿಗೆ 30%
- ನಿಗಮ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC)
- ವಯೋಮಿತಿ: 18 ರಿಂದ 55 ವರ್ಷ
- ವಾರ್ಷಿಕ ಆದಾಯ ಮಿತಿ: SC/ST – 2,00,000 ರೂ., ಸಾಮಾನ್ಯ ವರ್ಗ – 1,50,000 ರೂ.
- ವಿಧವೆ ಮತ್ತು ಅಂಗವಿಕಲ ಮಹಿಳೆಯರಿಗೆ ಆದಾಯ ಮಿತಿ ಇಲ್ಲ.
- 3 ರಿಂದ 6 ದಿನಗಳ ಇಡಿಪಿ ತರಬೇತಿ (Entrepreneurial Development Training)
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಜನನ ಪ್ರಮಾಣಪತ್ರ
- ವಿಳಾಸ ಮತ್ತು ಆದಾಯ ಪುರಾವೆ
- ಬಿಪಿಎಲ್ ಕಾರ್ಡ್ / ಪಡಿತರ ಚೀಟಿ
- ಜಾತಿ ಪ್ರಮಾಣಪತ್ರ (ಅನ್ವಯವಾಗಿದ್ದರೆ)
- ಬ್ಯಾಂಕ್ ಖಾತೆ ವಿವರಗಳು
- ಮೊಬೈಲ್ ಸಂಖ್ಯೆ
- ಬ್ಯಾಂಕ್/ಎನ್ಸಿಎಸ್ಸಿಗೆ ಅಗತ್ಯವಿರುವ ಇತರ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ನಮೂನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ (KSWDC) ಜಿಲ್ಲಾ ಕಚೇರಿಯಿಂದ ಉಚಿತವಾಗಿ ಪಡೆದುಕೊಳ್ಳಬಹುದು.
- ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಅರ್ಜಿಯನ್ನು ಭರ್ತಿ ಮಾಡಿ.
- ಸಮರ್ಪಕವಾಗಿ ಭರ್ತಿಯಾದ ಅರ್ಜಿಯನ್ನು ಜಿಲ್ಲಾ ಕಚೇರಿಯಲ್ಲಿ ಸಲ್ಲಿಸಿ.
- ಅರ್ಜಿ ಪರಿಶೀಲನೆಯ ಬಳಿಕ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕಿಗೆ ಕಳುಹಿಸಲಾಗುತ್ತದೆ.
- ಆಯ್ಕೆಯಾದ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಸಾಲದ ಮೊತ್ತವನ್ನು ವರ್ಗಾಯಿಸಲಾಗುತ್ತದೆ.
- ಸಾಲ ಬಿಡುಗಡೆಗೆ ಮುನ್ನ 3-6 ದಿನಗಳ ಇಡಿಪಿ ತರಬೇತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಕೆಗೆ: kswdc.karnataka.gov.in
ಈ ಯೋಜನೆಯು ಮಹಿಳೆಯರಿಗೆ ಸ್ವಾವಲಂಬಿ ಜೀವನದ ದಾರಿ ತೋರಲು ದೊಡ್ಡ ಪ್ಲಾಟ್‌ಫಾರ್ಮ್ ಆಗಿದೆ. ಅರ್ಹ ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.