ಸರ್ಕಾರದಿಂದ ಗುಡ್ ನ್ಯೂಸ್ : ಮಹಿಳೆಯರಿಗೆ ಶೇ. 50ರಷ್ಟು ಸಬ್ಸಿಡಿಯಲ್ಲಿ 3 ಲಕ್ಷ ಸಾಲ

ಮಹಿಳೆಯರಿಗೆ ಶೇ. 50ರಷ್ಟು ಸಬ್ಸಿಡಿಯಲ್ಲಿ 3 ಲಕ್ಷ ಸಾಲ

Untitled design 2025 02 21T154920.668

ಬೆಂಗಳೂರು: ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸುವ ಮಹತ್ವದ ಸರ್ಕಾರಿ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆ ಕೂಡ ಒಂದು. ಈ ಯೋಜನೆಯಡಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ 3 ಲಕ್ಷ ರೂ. ವರೆಗೆ ಸಾಲ ಹಾಗೂ ಶೇ.50ರಷ್ಟು ಸಬ್ಸಿಡಿ ದೊರಕಲಿದೆ.

ಏನಿದು ಉದ್ಯೋಗಿನಿ ಯೋಜನೆ?

ಮುಖ್ಯವಾಗಿ ನಿರುದ್ಯೋಗಿ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು ಈ ಯೋಜನೆ ಅನೂಕೂಲ. 2015-16ರಲ್ಲಿ ಪ್ರಾರಂಭವಾದ ಈ ಯೋಜನೆಯು ಮಹಿಳೆಯರಿಗೆ ತಮ್ಮದೇ ಆದ ಉದ್ಯಮ ಆರಂಭಿಸಲು ಸಹಾಯ ಮಾಡುತ್ತದೆ. ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುವುದನ್ನು ತಪ್ಪಿಸಲು, ಈ ಯೋಜನೆಯಡಿ ಬಡ್ಡಿರಹಿತ ಹಾಗೂ ಮೇಲಾಧಾರ ರಹಿತ ವ್ಯಾಪಾರ ಸಾಲವನ್ನು ನೀಡಲಾಗುತ್ತದೆ.

ಯೋಜನೆಯ ಪ್ರಮುಖ ಅಂಶಗಳು
ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ
  1. ಅರ್ಜಿ ನಮೂನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ (KSWDC) ಜಿಲ್ಲಾ ಕಚೇರಿಯಿಂದ ಉಚಿತವಾಗಿ ಪಡೆದುಕೊಳ್ಳಬಹುದು.
  2. ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಅರ್ಜಿಯನ್ನು ಭರ್ತಿ ಮಾಡಿ.
  3. ಸಮರ್ಪಕವಾಗಿ ಭರ್ತಿಯಾದ ಅರ್ಜಿಯನ್ನು ಜಿಲ್ಲಾ ಕಚೇರಿಯಲ್ಲಿ ಸಲ್ಲಿಸಿ.
  4. ಅರ್ಜಿ ಪರಿಶೀಲನೆಯ ಬಳಿಕ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕಿಗೆ ಕಳುಹಿಸಲಾಗುತ್ತದೆ.
  5. ಆಯ್ಕೆಯಾದ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಸಾಲದ ಮೊತ್ತವನ್ನು ವರ್ಗಾಯಿಸಲಾಗುತ್ತದೆ.
  6. ಸಾಲ ಬಿಡುಗಡೆಗೆ ಮುನ್ನ 3-6 ದಿನಗಳ ಇಡಿಪಿ ತರಬೇತಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಕೆಗೆ: kswdc.karnataka.gov.in

ಈ ಯೋಜನೆಯು ಮಹಿಳೆಯರಿಗೆ ಸ್ವಾವಲಂಬಿ ಜೀವನದ ದಾರಿ ತೋರಲು ದೊಡ್ಡ ಪ್ಲಾಟ್‌ಫಾರ್ಮ್ ಆಗಿದೆ. ಅರ್ಹ ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

Exit mobile version