ತಮಿಳುನಾಡು: ತಮಿಳುನಾಡಿನ ಅಚಂಪಟ್ಟಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ತೆಂಕಾಸಿ-ಮಧುರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಖಾಸಗಿ ಬಸ್ಸುಗಳು ಹೆಡ್-ಆನ್ ಡಿಕ್ಕಿಯಿಂದ ಈ ದುರಂತ ಸಂಭವಿಸಿದೆ.
ಅಪಘಾತವು ತೆಂಕಾಸಿ-ಮಧುರೆ ರಸ್ತೆಯಲ್ಲಿ ಸಂಭವಿಸಿದ್ದು, ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ದಿಕ್ಕಿನಿಂದ ಬರುತ್ತಾ ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಡಿಕ್ಕಿಯ ಪ್ರಭಾವವು ತೀವ್ರವಾಗಿದ್ದು, ಒಂದು ಬಸ್ಸಿನ ಮುಂಭಾಗವು ಸಂಪೂರ್ಣವಾಗಿ ನಾಶವಾಗಿದೆ.
ಅಪಘಾತದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ, ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, ರಕ್ಷಣಾ ದಳ ಮತ್ತು ವೈದ್ಯಕೀಯ ತಂಡಗಳು ಸ್ಥಳಕ್ಕೆ ಭೇಟಿ ನೀಡಿ. ಗಾಯಗೊಂಡ ಪ್ರಯಾಣಿಕರನ್ನು ತುರ್ತು ಪರಿಸ್ಥಿತಿಯ ವಾಹನಗಳ ಮೂಲಕ ತೆಂಕಾಸಿಯಲ್ಲಿರುವ ಸರ್ಕಾರಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಅಪಘಾತದ ಸಮಯದಲ್ಲಿ ಎರಡೂ ಬಸ್ಸುಗಳಲ್ಲಿ ಎಷ್ಟು ಮಂದಿ ಪ್ರಯಾಣಿಕರು ಇದ್ದರು ಎಂಬ ಅಧಿಕೃತ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಮೃತರ ಪಟ್ಟಿ ಮತ್ತು ಗಾಯಗೊಂಡವರ ನಿಖರ ಸಂಖ್ಯೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ. ಅಪಘಾತದ ನಿಖರ ಕಾರಣವನ್ನು ಕಂಡುಹಿಡಿಯಲು ಪೊಲೀಸರು ವಿವರವಾದ ತನಿಖೆ ನಡೆಸುತ್ತಿದ್ದಾರೆ.
ಕೆರೆಯಲ್ಲಿ ತೆಪ್ಪ ಮಗುಚಿ ಇಬ್ಬರು ನೀರು ಪಾಲು ದುರಂತ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ಕೆರೆಯಲ್ಲಿ ತೆಪ್ಪ ಮಗುಚಿ ಬಿದ್ದು ನೀರುಪಾಲಾಗಿರುವ ಘಟನೆ ನಡೆದಿದೆ. ಈ ದುರಂತದಲ್ಲಿ ಫಕೀರಸಾಬ್ (36) ಮತ್ತು ಶರಣಪ್ಪ ಎಮ್ಮೆರ್ (32) ಎಂಬ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದೇನೆಂದರೆ, ಫಕೀರಸಾಬ್ ಮತ್ತು ಶರಣಪ್ಪ ಸೋಮವಾರ ಮಲಕಸಮುದ್ರ ಗ್ರಾಮದ ಕೆರೆಗೆ ಮೀನು ಹಿಡಿಯಲು ಹೋಗಿದ್ದರು. ಕೆರೆಯ ನೀರು ಅಭಸವಾಗಿ ಹರಿಯುತ್ತಿತ್ತು ಜೊತೆಗೆ ಗಾಳಿಯ ರಭಸವೂ ಹೆಚ್ಚಿದ್ದರಿಂದ ತೆಪ್ಪ ಮಗುಚಿ ಬಿದ್ದಿದೆ. ನೀರಿನ ರಭಸ ಹೆಚ್ಚಿದ್ದರಿಂದ ಈಜಲು ಆಗದೇ ನೀರಿನಲ್ಲಿ ಮುಲುಗಿ ಸಾವನ್ನಪ್ಪಿದ್ದಾರೆ.
ಗಟನೆ ಬಗ್ಗೆ ತಿಳಿದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಲು ಕೂಡಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಮೃತ ದೇಹಗಳನ್ನ ಹೊರತೆಗೆದಿದ್ದಾರೆ.
ಈ ದುರಂತದಲ್ಲಿ ಸಾವನ್ನಪ್ಪಿದ ಫಕೀರಸಾಬ್ (36) ಮತ್ತು ಶರಣಪ್ಪ ಎಮ್ಮೆರ್ (32) ಅವರು ಮಲಕಸಮುದ್ರ ಗ್ರಾಮದ ಸ್ಥಳೀಯ ನಿವಾಸಿಗಳು ಎಂದೂ ತಿಳಿದುಬಂದಿದೆ. ಈ ಸಂಬಂಧಿತ ಘಟನೆಯನ್ನು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಸಹಜ ಸಾವಿನ ಪ್ರಕರಣ (UDR) ಎಂದು ದಾಖಲಿಸಲಾಗಿದೆ. ಪೊಲೀಸರು ಮೃತರ ಕುಟುಂಬ ಮತ್ತು ಸ್ನೇಹಿತರಿಂದ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಬಳಿಕ ಮೃತ ದೇಹವನ್ನ ಕುಟುಂಬದವರಿಗೆ ಕೊಡುವುದಾಗಿ ಹೇಳಿದ್ದಾರೆ.





