ಆಸ್ತಿ ವಿಚಾರಕ್ಕೆ ಇಬ್ಬರು ಲಾಯರ್ ಸಹೋದರರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆ ಯ ಕೋಡಿಚಿಕ್ಕನಹಳ್ಳಿಯಲ್ಲಿ ಘಟನೆ ನಡೆದಿದೆ.
ಶ್ರೀಕಾಂತ್ ಎಂಬ ವ್ಯಕ್ತಿಯನ್ನು ತಮ್ಮ ನಾಗೇಂದ್ರ ಹತ್ಯೆಗೈದಿದ್ದಾನೆ. ಶ್ರೀಕಾಂನತ್ ಅಡ್ವಕೇಟ್ ಆಗಿದ್ದನು. ತಮ್ಮ ಕೂಡ ಲಾಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಇಂದು ಕೂಡ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಅಣ್ಣ ಶ್ರೀಕಾಂತ್ ಗೆ ತಮ್ಮ ನಾಗೇಂದ್ರ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾನೆ. ನಂತರ ತೀವ್ರ ರಕ್ತಸ್ರಾವದಿಂದ ಶ್ರೀಕಾಂತ್ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹ ಸಂಟ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗೇಂದ್ರ ಶರಣಾಗಿದ್ದಾನೆ.