ಆಸ್ತಿಗಾಗಿ ಅಣ್ಣ-ತಮ್ಮಂದಿರ ನಡುವೆ ಕಾದಾಟ ಕೊ*ಲೆಯಲ್ಲಿ ಅಂತ್ಯ

ಆಸ್ತಿ ವಿಚಾರಕ್ಕೆ ಅಣ್ಣ-ತಮ್ಮಂದಿರ ನಡುವೆ ಕಾದಾಟ.. ಕೊಲೆಯಲ್ಲಿ ಅಂತ್ಯ

ಮೃತ ಶ್ರೀಕಾಂತ್

ಆಸ್ತಿ ವಿಚಾರಕ್ಕೆ ಇಬ್ಬರು ಲಾಯರ್‌ ಸಹೋದರರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ಬೊಮ್ಮನಹಳ್ಳಿ ಪೊಲೀಸ್‌ ಠಾಣೆ ಯ ಕೋಡಿಚಿಕ್ಕನಹಳ್ಳಿಯಲ್ಲಿ ಘಟನೆ ನಡೆದಿದೆ.

ಶ್ರೀಕಾಂತ್‌ ಎಂಬ ವ್ಯಕ್ತಿಯನ್ನು ತಮ್ಮ ನಾಗೇಂದ್ರ ಹತ್ಯೆಗೈದಿದ್ದಾನೆ. ಶ್ರೀಕಾಂನತ್‌ ಅಡ್ವಕೇಟ್‌ ಆಗಿದ್ದನು. ತಮ್ಮ ಕೂಡ ಲಾಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಇಂದು ಕೂಡ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಅಣ್ಣ ಶ್ರೀಕಾಂತ್‌ ಗೆ ತಮ್ಮ ನಾಗೇಂದ್ರ  ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾನೆ. ನಂತರ ತೀವ್ರ ರಕ್ತಸ್ರಾವದಿಂದ ಶ್ರೀಕಾಂತ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹ ಸಂಟ್‌ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗೇಂದ್ರ ಶರಣಾಗಿದ್ದಾನೆ.

ADVERTISEMENT
ADVERTISEMENT
Exit mobile version