ಕರ್ನಾಟಕದಲ್ಲಿ ಒಣಹವೆ ಮುಂದುವರಿದಿದ್ದು, ಕೆಲವು ಕಡೆ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ. ಚಾಮರಾಜನಗರದಲ್ಲಿ 13.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಾಗಿದ್ದರೆ, ಕಲಬುರಗಿಯಲ್ಲಿ ಗರಿಷ್ಠ 37.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ ಮತ್ತು ಕಲಬುರಗಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಕಂಡುಬಂದಿದೆ.
ಕರ್ನಾಟಕದ ಪ್ರಾದೇಶಿಕ ಉಷ್ಣಾಂಶ
ಕರಾವಳಿ: 33-34 ಡಿಗ್ರಿ ಸೆಲ್ಸಿಯಸ್
ಉತ್ತರ ಒಳನಾಡು: 34-37 ಡಿಗ್ರಿ ಸೆಲ್ಸಿಯಸ್
ಆಗುಂಬೆ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಚಿಂತಾಮಣಿ, ಮಡಿಕೇರಿಯಲ್ಲಿ: 31-33 ಡಿಗ್ರಿ ಸೆಲ್ಸಿಯಸ್
ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಶಿವಮೊಗ್ಗದಲ್ಲಿ: 34-37 ಡಿಗ್ರಿ ಸೆಲ್ಸಿಯಸ್
ಕಳೆದ 24 ಗಂಟೆಗಳಲ್ಲಿ ಕೊಪ್ಪಳ (3.2 ಡಿಗ್ರಿ), ಗದಗ (2.2 ಡಿಗ್ರಿ), ಚಿತ್ರದುರ್ಗ (2.5 ಡಿಗ್ರಿ), ಮಡಿಕೇರಿ (2.2 ಡಿಗ್ರಿ)ಗಳಲ್ಲಿ ತಾಪಮಾನ ಏರಿಕೆಯಾಗಿದೆ.
ಮಂಜು ಕವಿದ ಪ್ರದೇಶಗಳು:
ಮಂಗಳೂರು, ಪಣಂಬೂರು, ಧಾರವಾಡ, ಶಿವಮೊಗ್ಗ
ಬೆಂಗಳೂರು ಉಷ್ಣಾಂಶ:
ಹೆಚ್ಎಎಲ್: ಗರಿಷ್ಠ 32.0°C, ಕನಿಷ್ಠ 16.9°C
ನಗರ: ಗರಿಷ್ಠ 32.8°C, ಕನಿಷ್ಠ 17.8°C
ಕೆಐಎಲ್: ಗರಿಷ್ಠ 32.8°C, ಕನಿಷ್ಠ 17.3°C
ಜಿಕೆವಿಕೆ: ಗರಿಷ್ಠ 32.6°C, ಕನಿಷ್ಠ 17.0°C
ಮಳೆಯ ಸಾಧ್ಯತೆ
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ನಿರ್ಮಾಣವಾಗಿದ್ದು, ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ, ಸಿಕ್ಕಿಂ, ಜಮ್ಮು-ಕಾಶ್ಮೀರ, ದೆಹಲಿ, ಪಂಜಾಬ್, ಬಿಹಾರ, ಕೇರಳದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಭಾರಿ ಮಳೆಯಾದರೆ ಅದರ ಪ್ರಭಾವ ಬೆಂಗಳೂರಿಗೂ ತಲುಪಬಹುದು. ಮಾರ್ಚ್ ಮಧ್ಯಭಾಗದಲ್ಲಿ ಕರ್ನಾಟಕದಲ್ಲಿ ಮಳೆಯಾಗಬಹುದು.