ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಬೇಗುದಿ ತಾರಕಕ್ಕೇರಿದೆ. ಒಂದೆಡೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಒಂದು ಗುಂಪು.. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಮತ್ತೊಂದು ಗುಂಪು. ಆದರೆ ಈ ಗುಂಪಿಗಳಲ್ಲಿ ಇರುವ ಸಾಮ್ಯತೆ ಏನೇಂದರೆ ಅವೆರಡೂ ಸಹ ಸಿಎಂ ಸಿದ್ದರಾಮಯ್ಯ ನವರ ಶಿಷ್ಯರೇ ಆಗಿದ್ದಾರೆ. ಹೌದು.. ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ನಾಯಕರು ಸಿದ್ದರಾಮಯ್ಯ ನವರಿಂದ ಅಧಿಕಾರ ಕಿತ್ತುಕೊಳ್ಳಬೇಕು ಅಂತ ಅಲ್ಲ.. ಬದಲಾಗಿ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಸಿಗಬಾರದು ಎಂದು. ಅರೆ ಇದೆಂತಾ ವೈಶಿಷ್ಟ್ಯಾ ಅಂತೀರಾ.. ಇಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆದರೆ ಡಿಕೆ ಶಿವಕುಮಾರ್ ಅವರನ್ನ ಹೊರತುಪಡಿಸಿ ಯಾರಿಗೂ ಪ್ರಾಬ್ಮಂ ಇಲ್ಲ. ಆದರೆ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿದ್ದೇ ಆದರೆ ರಾಜ್ಯದ ಬಹುತೇಕ ಶಾಸಕರು, ಸಚಿವರಿಗೆ ಬಿಗ್ ಪ್ರಾಬ್ಮಂ ಅಂತನೇ ಹೇಳಲಾಗ್ತಿದೆ.
ಹಾಗಾದ್ರೆ ಸಿದ್ದು ಬದಲಾಗಿ ಡಿಕೆ ಶಿವಕುಮಾರ್ ಸಿಎಂ ಆಗಲು ಏನು ಪ್ರಾಬ್ಲಂ ಅನ್ನೋದನ್ನ ನಾವಿಲ್ಲಿ ನೋಡೋಣ:
ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮಾಸ್ ಲೀಡರ್, ಅಹಿಂದ ವರ್ಗದ ನಾಯಕ.. ಸಿದ್ದರಾಮಯ್ಯನವರ ಹೆಸರಿನ ಮೇಲೆಯೇ ಅನೇಕ ಜನರು ಇಂದು ಶಾಸಕರಾಗಿದ್ದಾರೆ. ಅಂತಹ ವರ್ಚಸ್ಸು ಇರುವ ನಾಯಕ ಸಿಎಂ ಸಿದ್ದರಾಮಯ್ಯ. ಇಂತಹ ಬಹು ದೊಡ್ಡ ಹಿಂಬಾಲಕರನ್ನ ಹೊಂದಿರುವ ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯ ನವರೇ ಸಾಟಿ.
ಸಿದ್ದರಾಮಯ್ಯ ನವರ ಸ್ಥಾನಕ್ಕೆ ಬರಲು ಡಿಕೆ ಶಿವಕುಮಾರ್ ಪ್ರಯತ್ನಪಟ್ಟರೂ ಸಹ ಜನ ಒಪ್ಪಿಕೊಳ್ಳಲು ತಯಾರಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಡಿಕೆ ಶಿವಕುಮಾರ್ ಅವರ ಹವಾ ಇಲ್ಲ. ಇದು ಒಂದು ಕಡೆ ಆದರೇ ಮತ್ತೊಂದು ಕಡೆ ಡಿಕೆ ಶಿವಕುಮಾರ್ ಅವರನ್ನ ಬೆಂಬಲಿಸೋ ಶಾಸಕರ ಸಂಖ್ಯೆ ತೀರಾ ಕಡಿಮೆ ಅಂತನೇ ಹೇಳಬಹುದು.
ಕಾಂಗ್ರೆಸ್ ಪಾರ್ಟಿಯಲ್ಲಿ ಸಿಎಂ ಆಯ್ಕೆ ಹೈಕಮಾಂಡ್ ನಿರ್ದಾರವೇನೋ ಸರಿ. ಆದರೇ ಇಲ್ಲಿ ಪ್ರಮುಖವಾಗಿ ಸಂಖ್ಯಾಬಲ ಮೇಜರ್ ರೋಲ್ ಪ್ಲೇ ಮಾಡುತ್ತೆ. ಕೇವಲ ಹೈಕಮಾಂಡ್ ಕೃಪಾಕಟಾಕ್ಷ ಇದ್ದ ಮಾತ್ರಕ್ಕೆ ಸಿಎಂ ಆಗಲು ಸಾಧ್ಯವಿಲ್ಲ. ಶಾಸಕರ ಬೆಂಬಲವೂ ಸಹ ಮುಖ್ಯ ಪಾತ್ರ ವಹಿಸುತ್ತದೆ. ಹೀಗಿರುವಾಗ ಸಿಎಂ ಆಗುವ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್‌ಗೆ ಪ್ರಮುಖವಾಗಿ ಬೇಕಾಗಿರುವುದು ಶಾಸಕರ ಬೆಂಬಲದ ಜೊತೆಗೆ ಜನರ ವಿಶ್ವಾಸ.
ಡಿಕೆ ಶಿವಕುಮಾರ್ ಗೆ ಟಕ್ಕರ್ ಕೊಟ್ಟ ಸಿದ್ದು ಬಣ:
ಹೌದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಸಿಎಂ ಆಗಲು ಬಿಡಬಾರದು ಎಂದು ಸಿದ್ದು ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರಾದ ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ಸೇರಿದಂತೆ ಹಲವು ದಲಿತ ನಾಯಕರು ದೆಹಲಿಗೆ ದಂಡಯಾತ್ರೆ ನಡೆಸಿದ್ದರು. ಹೈಕಮಾಂಡ್ ಬಳಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿ, ಡಿಕೆ ಶಿವಕುಮಾರ್ ವಿರುದ್ಧ ಹಲವು ಆರೋಪಗಳ ಸುರಿಮಳೆಗೈದಿದ್ದಾರೆ.
ದೆಹಲಿಯಿಂದ ಬಳಿಕ ಸಾಹುಕಾರ್ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಚಿವ ರಾಜಣ್ಣ ಅಂತೂ ಸಿಕ್ಕಾಪಟ್ಟೆ ರಾಂಗ್ ಆಗಿದ್ದರು. ಕಾಂಗ್ರೆಸ್ ಒಳ ಜಗಳ ಬೀದಿಗೆ ಬಿದ್ದಿದ್ದರೂ ಬ್ರೇಕ್ ಹಾಕದೇ ಕೈಕಟ್ಟಿ ಕೂತಿದ್ದು ಕಾಂಗ್ರೆಸ್ ಹೈಕಮಾಂಡ್.
ಇಷ್ಟೆಲ್ಲಾ ಮೇಜರ್ ಡೆವಲಪ್‌ಮೆಂಟ್ ಆಗ್ತಿದ್ರೂ ಸಹ ಸಿಎಂ ಸಿದ್ದರಾಮಯ್ಯ ಮಾತ್ರ ಇದರ ಬಗ್ಗೆ ಯಾವ ಸ್ಪಷ್ಟನೆಯನ್ನೂ ನೀಡಿಲ್ಲ. ನಮ್ಮದು ಹೈಕಮಾಂಡ್ ಪಕ್ಷ, ಅವರ ಮಾತೇ ಫೈನಲ್ ಎನ್ನುವ ಮೂಲಕ ಸೈಲೆಂಟ್ ಗೇಮ್ ಕಾರ್ಡ್ ಪ್ಲೇ ಮಾಡಿದ್ರೂ ಸಿಎಂ ಸಿದ್ದರಾಮಯ್ಯ. ಒಟ್ಟಾರೆ ಸಿಎಂ ಆಗಲು ಯಾರು ಸಮರ್ತರು ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ನಿರ್ದಾರ ಮಾಡುತ್ತೋ ಅಥವ ಶಾಸಕರು ತೀರ್ಮಾನ ಮಾಡ್ತಾರೋ.. ಅಥವ ಜನರು ನಿರ್ದಾರ ಮಾಡ್ತಾರೋ ಅನ್ನುವುದು ಇನ್ನೂ ಗೊಂದಲದಲ್ಲೇ ಇದೆ.