• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಮೆಟ್ರೋ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸಮಾನವಾಗಿ ಹಂಚಿಕೊಳ್ಳಬೇಕು: ಸಿಎಂ ಡಿಕೆಶಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 13, 2026 - 4:45 pm
in ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
ಮೆಟ್ರೋ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸಮಾನವಾಗಿ ಹಂಚಿಕೊಳ್ಳಬೇಕು ಸಿಎಂ ಡಿಕೆಶಿ

ಬೆಂಗಳೂರು, ನ.13: “ದೆಹಲಿಯಂತೆ ಬೆಂಗಳೂರಿಗೂ ಆದ್ಯತೆ ನೀಡಿ. ಮೆಟ್ರೋ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ 50:50 ಅನುಪಾತ ಎಂದು ಹೇಳಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಆರ್ಥಿಕ ಹೊರೆ ರಾಜ್ಯ ಸರ್ಕಾರದ ಮೇಲೆ ಹೆಚ್ಚಾಗಿದೆ. ಭೂಸ್ವಾಧೀನ ವೆಚ್ಚ, ವಿದೇಶಿ ಸಾಲ ಮರುಪಾವತಿ, ಕೇಂದ್ರ ಹಾಗೂ ರಾಜ್ಯ ತೆರಿಗೆ ಸೇರಿದಂತೆ ಎಲ್ಲವೂ ರಾಜ್ಯ ಸರ್ಕಾರಗಳ ಮೇಲೆ ಬಿದ್ದಿವೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಜೊತೆಗೆ ಮೆಟ್ರೋ ಯೋಜನೆಯ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನಾಗಿ ಹಂಚಿಕೊಳ್ಳಬೇಕಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಐಐಎಂಬಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

RelatedPosts

ಮೈಸೂರಿನಲ್ಲಿ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ: ಪ್ರಧಾನಿ ಮೋದಿ

ಕರ್ನಾಟಕದ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಚಾಲನೆ

ADVERTISEMENT
ADVERTISEMENT
ಮೆಟ್ರೋ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಿ

“ನಮ್ಮ ಇಂಜಿನಿಯರ್ ಗಳು ಈ ನಗರವನ್ನು ಕಟ್ಟಿದ್ದಾರೆ. ಬೆಂಗಳೂರಿನಲ್ಲಿ 103 ಕಿ.ಮೀ ಮೆಟ್ರೋ ಸಂಪರ್ಕ ನಿರ್ಮಿಸಲಾಗಿದೆ. ನಮ್ಮ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 500 ಕಿ.ಮೀ ನಷ್ಟು ಮೆಟ್ರೋ ಸಂಪರ್ಕ ಹೊಂದುವ ಗುರಿ ಇದೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ನಾವು ಅನೇಕ ಮಹತ್ತರ ಯೋಜನೆಗಳನ್ನು ಕೈಗೊಂಡಿದ್ದು, ಮೆಟ್ರೋ ಕೂಡ ಅದರ ಒಂದು ಪ್ರಮುಖ ಭಾಗವಾಗಿದೆ. ಇನ್ನು ಕಳೆದ ಎರಡು ವರ್ಷಗಳಿಂದ ಮೆಟ್ರೋ ಯೋಜನಾ ಅನುಮತಿ ಬಾಕಿ ಉಳಿದಿದ್ದು, ಕೆಂಪು ಮಾರ್ಗದ ಕಾಮಗಾರಿಯನ್ನು ನಾವು ಕೈಗೆತ್ತಿಕೊಳ್ಳಬೇಕಿದ್ದು, ಇದಕ್ಕೆ ಅನುಮತಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮಾರ್ಗದರ್ಶನ ನೀಡಿ. ಈ ಯೋಜನೆಗಳಿಗೆ ನಾವು ಕೆಲವು ವರ್ಷಗಳ ಹಿಂದೆಯೇ ವಿಸ್ತೃತ ವರದಿ ಸಿದ್ಧಪಡಿಸಿದ್ದು, ಈ ವಿಳಂಬದಿಂದಾಗಿ ಯೋಜನಾ ವೆಚ್ಚ ಹೆಚಾಗಿದೆ. ಈಗ ಪರಿಷ್ಕೃತ ಡಿಪಿಆರ್ ಗೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಈ ಅಭಿವೃದ್ಧಿ ಯೋಜನೆಗಳಿಗೆ ತ್ವರಿತ ಅನುಮತಿ ಸಿಗಬೇಕು. ಈ ವಿಳಂಬದಿಂದ ಹೆಚ್ಚುವ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನಾಗಿ ಹಂಚಿಕೆ ಮಾಡಿಕೊಳ್ಳಬೇಕು. ಜತೆಗೆ ಕಾರ್ಯಾಚರಣೆ ವೆಚ್ಚದ ನಷ್ಟವನ್ನು ಎರಡೂ ಸರ್ಕಾರಗಳು ಸಮಾನವಾಗಿ ಭರಿಸಬೇಕಿದೆ. ದೆಹಲಿ ಮೆಟ್ರೋ ಮಾದರಿಯಲ್ಲೇ ವಿದೇಶಿ ಸಾಲ ಮರುಪಾವತಿಯಲ್ಲೂ ಎರಡೂ ಸರ್ಕಾರಗಳು ಸಮಾನ ಹಂಚಿಕೆ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.

“ಇಡೀ ವಿಶ್ವ ಭಾರತವನ್ನು ಬೆಂಗಳೂರು ಮುಖೇನ ನೋಡುತ್ತಿದೆ. ಮೆಟ್ರೋಗಾಗಿ ನಮಗೆ ಒಂದು ತಾಂತ್ರಿಕ ಸಂಸ್ಥೆ ಅಗತ್ಯವಿದ್ದು, ಇದರಿಂದ ಭಾರತದಲ್ಲಿರುವ ಎಲ್ಲಾ ಮೆಟ್ರೋ ನಗರಗಳಿಗೂ ನೆರವಾಗಲಿದೆ. ಮೆಟ್ರೋ ಯೋಜನೆಗಳನ್ನು ಈ ತಾಂತ್ರಿಕ ಸಮಿತಿ ಶಿಫಾರಸ್ಸಿನ ಅನುಸಾರ ಅನುಮತಿ ನೀಡಬಹುದು. ಇದರಿಂದ ಯೋಜನೆಗೆ ಅನುಮತಿಗೆ ವೇಗ ಸಿಗಲಿದೆ” ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಮೆಟ್ರೋ ಸಂಪರ್ಕವನ್ನು 500 ಕಿ.ಮೀ.ಗೆ ವಿಸ್ತರಿಸುವ ಗುರಿ ಇದೆ

“ನಿಮ್ಮ ಸಹಕಾರದೊಂದಿಗೆ ಬೆಂಗಳೂರು ಮೆಟ್ರೋ ಸಂಪರ್ಕವನ್ನು 500 ಕಿ.ಮೀ.ಗೆ ವಿಸ್ತರಿಸುವ ಗುರಿ ಇದೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ 50% ಇಳಿಮುಖವಾಗಲಿದೆ. ಅಬ್ದುಲ್ ಕಲಾಂ ಅವರು ಕನಸು ಕಾಣಿ ಎಂದು ಹೇಳಿದ್ದಾರೆ. ನಾವು ಕನಸು ಕಾಣುವುದರ ಜತೆಗೆ ಕಂಡ ಕನಸನ್ನು ಸೂಕ್ತ ಯೋಜನೆ ಮೂಲಕ ಕಾರ್ಯಗತಗೊಳಿಸುತ್ತೇವೆ. ಇದಕ್ಕೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಉತ್ತಮ ಮೆಟ್ರೋ ಕೆಲಸದಿಂದ ಜನಸಾಮಾನ್ಯರು ಸಂಚಾರ ದಟ್ಟಣೆಯಲ್ಲಿ ಕಡಿಮೆ ಸಮಯ ಹಾಗೂ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬಹುದಾಗಿದೆ. ಬೆಂಗಳೂರಿನಲ್ಲಿ ಜನ ನಿತ್ಯ 2-3 ತಾಸು ಸಂಚಾರ ದಟ್ಟಣೆಯಲ್ಲಿ ಕಾಲ ಕಳೆಯುವಂತಾಗಿದೆ. ಹೀಗಾಗಿ ನಾವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದೇವೆ” ಎಂದರು.

ಬರ ಪರಿಹಾರ ನೀಡಿ ರೈತರಿಗೆ ನೆರವಾಗಿ

“ಮಾನ್ಯ ಪ್ರಧಾನಮಂತ್ರಿಗಳೇ ನಮ್ಮ ರಾಜ್ಯ ತೀವ್ರ ಬರಗಾಲದಿಂದ ತತ್ತರಿಸಿದೆ. ಬರ ವಿಚಾರವಾಗಿ ನೀವು ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ನೀಡಿದ್ದೀರಿ. ಈ ವರ್ಷ ಕಳೆದ 70 ವರ್ಷಗಳಲ್ಲೇ ಅತಿ ಕಡಿಮೆ ಮಳೆಯನ್ನು ಪಡೆದಿದ್ದೇವೆ. 240 ತಾಲ್ಲೂಕುಗಳಲ್ಲ್ಲಿ 226 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. 85 ಲಕ್ಷ ಹೆಕ್ಟೇರ್ ನಷ್ಟು ಬೆಳೆ ನಷ್ಟವಾಗಿದೆ. 62 ಸಾವಿರ ಕೋಟಿ ನಷ್ಟ ಅನುಭವಿಸಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮೂಲಕ 22 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ. ರೈತರಿಗೆ ತ್ವರಿತ ಸಹಾಯ ನೀಡಲು ಪರಿಹಾರ ಮೊತ್ತವನ್ನು ಬೇಗ ಬಿಡುಗಡೆ ಮಾಡಿ ನಮಗೆ ಸಹಕಾರ ನೀಡಿ. ಈ ವಿಚಾರವಾಗಿ ನಮ್ಮ ರಾಜ್ಯದಿಂದ ಸರ್ವಪಕ್ಷ ನಿಯೋಗವನ್ನು ನಿಮ್ಮ ಮುಂದೆ ಕರೆತಂದು ಪರಿಸ್ಥಿತಿ ವಿವರಿಸಲು ಬಯಸುತ್ತೇವೆ. ನಾವು ಕೂತು ಚರ್ಚೆ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸಬಹುದು” ಎಂದು ವಿವರಿಸಿದರು.

ಕಬ್ಬು ಬೆಳೆಗಾರರಿಗೆ ನೆರವು ನೀಡಿ

ಎಥೆನಾಲ್ ಅನುದಾನದಲ್ಲಿ ಕರ್ನಾಟಕ್ಕೆ ನ್ಯಾಯಯುತ ಪಾಲು ನೀಡಿ

“ಕಬ್ಬು ಬೆಳೆಗಾರರ ಸಮಸ್ಯೆ ಕೂಡ ಹೆಚ್ಚಾಗಿದ್ದು ರೈತರು ಪ್ರತಿ ಟನ್ ಕಬ್ಬಿಗೆ 5500 ರೂ. ಬೇಡಿಕೆ ಇಡುತ್ತಿದ್ದಾರೆ. 2019ರಿಂದ ದೇಶದಲ್ಲಿ ಸಕ್ಕರೆ ಎಂಎಸ್ ಪಿ (ಕನಿಷ್ಠ ಮಾರಾಟ ದರ) 31 ರೂ.ಗೆ ಉಳಿದಿದೆ. ಇನ್ನು ಎಥೆನಾಲ್ ಅನುದಾನದಲ್ಲಿ ಕರ್ನಾಟಕ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗಬೇಕಿದೆ” ಎಂದರು.

ರಾಜಕೀಯದಲ್ಲಿ ಸ್ಪರ್ಧೆ ಮಾಡೋಣ ಆದರೆ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಸಾಧಿಸೋಣ

“ಪ್ರಧಾನಮಂತ್ರಿಗಳೇ ನಾವು ಜತೆಯಾಗಿ ಮುನ್ನಡೆಯೋಣ. ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡಲು ಸಿದ್ಧವಿದೆ. ಭಾರತದ ಪ್ರಗತಿಯಲ್ಲಿ ಕರ್ನಾಟಕ ಪಯಣ ಸಾಗಲಿದೆ. ಮೆಟ್ರೋ ಎರಡು ಸ್ಥಳಗಳ ಮಧ್ಯೆ ಸಂಪರ್ಕ ಸಾಧಿಸಿರೆ, ಸಹಕಾರವು ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಸಾಧಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಸಾಗಿದರೆ ದೇಶ ಮುನ್ನಡೆಯುತ್ತದೆ” ಎಂದು ತಿಳಿಸಿದರು.

“ಪ್ರಧಾನಮಂತ್ರಿಗಳೇ ಚುನಾವಣೆಗಳು ವಿಭಿನ್ನ ರಾಜಕೀಯ ಜನಾದೇಶ ನೀಡಬಹುದು. ಆದರೆ ಜನರ ಆಶೋತ್ತರಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಾವು ರಾಜಕೀಯದಲ್ಲಿ ಸ್ಪರ್ಧೆ ಮಾಡೋಣ ಆದರೆ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಸಾಧಿಸೋಣ. ಕರ್ನಾಟಕ ಹಾಗೂ ಬೆಂಗಳೂರು ಬಲಿಷ್ಠವಾದಷ್ಟು ಭಾರತ ಪ್ರಗತಿ ಸಾಧಿಸುತ್ತದೆ. ಕರ್ನಾಟಕ ರಾಜ್ಯ ವಿಕಸಿತ ಭಾರತದಿಂದ ಹೊರತಾಗಿಲ್ಲ. ವಿಕಸಿತ ಭಾರತದ ಆಧಾರಸ್ತಂಭಗಳಲ್ಲಿ ಕರ್ನಾಟವೂ ಒಂದು. ನೀವು ನಮ್ಮ ಭಾವನೆ ಅರಿಯುವ ಭರವಸೆ ಇದೆ. ಭಾರತದ ಪ್ರಗತಿಗೆ ಕರ್ನಾಟ ಬದ್ಧವಾಗಿದ್ದು, ಅದಕ್ಕಾಗಿ ನಾವು ಸಹಕಾರ ನೀಡಲು ಸಿದ್ಧವಿದ್ದೇವೆ” ಎಂದರು.

ಅನೇಕ ಮೊದಲುಗಳ ರಾಜ್ಯ ಕರ್ನಾಟಕ

“ಕರ್ನಾಟಕ ಅತ್ಯಂತ ಮಹತ್ವದ ಪರಂಪರೆಯನ್ನು ಹೊಂದಿದೆ. 1902ರಲ್ಲಿ ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಿದ ರಾಜ್ಯ ಕರ್ನಾಟಕ. ಮೊದಲು ವಿದ್ಯುತ್ ಸಂಪರ್ಕ ಪಡೆದ ಮೊದಲ ನಗರ ಎಂದರೆ ಅದು ಬೆಂಗಳೂರು. ಭಾರತದ ಮೊದಲ ವಿಮಾನಯಾನ ಉತ್ಪಾದನಾ ಘಟಕ ಎಚ್ಎಎಲ್ ಆರಂಭವಾಗಿದ್ದು ಬೆಂಗಳೂರು. ಇಂತಹ ಅನೇಕ ಮೊದಲುಗಳನ್ನು ಕಂಡ ರಾಜ್ಯ ಕರ್ನಾಟಕ. ಕರ್ನಾಟಕ ಈ ಹಿಂದೆಯೇ ಕೈಗಾರಿಕಾ ನೀತಿಯೊಂದಿಗೆ ರಾಜ್ಯದಲ್ಲಿ ಕೈಗಾರಿಕಾ ಪ್ರಗತಿ ಸಾಧಿಸಲಾಗಿದೆ. ಮೊದಲ ಜಾಗತಿಕ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಆರಂಭವಾಗಿದ್ದು ಬೆಂಗಳೂರಿನಲ್ಲಿ. ದೇಶದಲ್ಲೇ ಮೊದಲ ಐಫೋನ್ ತಯಾರಿಕಾ ಘಟಕ ಸ್ಥಾಪನೆಯಾಗಿದ್ದು ನಮ್ಮ ರಾಜ್ಯದಲ್ಲೇ. ಭಾರತದ ಮೊದಲ ಕಂಪ್ಯೂಟರ್ ತಯಾರಾಗಿದ್ದು ಬೆಂಗಳೂರಿನಲ್ಲೇ” ಎಂದು ತಿಳಿಸಿದರು.

“ದೇಶದಲ್ಲಿ ನವೋದ್ಯಮ ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ. ಕರ್ನಾಟಕದಿಂದ ಅನೇಕ ಉದ್ಯಮಿಗಳು ಬೆಳೆದಿದ್ದಾರೆ. ಬೆಂಗಳೂರು ಜಗತ್ತಿನ ಎರಡನೇ ಎಐ ಪ್ರತಿಭೆಗಳ ತವರೂರಾಗಿದೆ. ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ 1.50 ಲಕ್ಷ ಇಂಜಿನಿಯರಿಂಗ್ ಪದವಿಧರರು ಹೊರಬರುತ್ತಿದ್ದು, ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, 13,940 ವೈದ್ಯರು ಪ್ರತಿ ವರ್ಷ ತಯಾರಾಗುತ್ತಿದ್ದಾರೆ. ಉದ್ಯಮಗಳಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣ ರಾಷ್ಟ್ರ ಮಟ್ಟದಲ್ಲಿ 18% ಇದ್ದರೂ ನಮ್ಮ ರಾಜ್ಯದಲ್ಲಿ 37% ಇದೆ. ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನಲ್ಲಿವೆ. ಭಾರತದ ಚಿಪ್ ವಿನ್ಯಾಸದಲ್ಲಿ ಬೆಂಗಳೂರು ಅಗ್ರಸ್ಥಾನಿಯಾಗಿದೆ. ಇನ್ನು ಏಷ್ಯಾದಲ್ಲಿ ಬೀಜಿಂಗ್ ನಂತರ ಎರಡನೇ ಅತಿ ದೊಡ್ಡ ಎಐ ಕ್ಲಸ್ಟರ್ ಆಗಿದೆ. ಬೆಂಗಳೂರು ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಮುನ್ನಡೆಸುತ್ತಿದೆ” ಎಂದು ವಿವರಿಸಿದರು.

“ಮಾನವ ಸಂಪನ್ಮೂಲದಲ್ಲಿ ನಮ್ಮ ರಾಜ್ಯ ಅಗ್ರಸ್ಥಾನದಲ್ಲಿದ್ದು, ಜಿಎಸ್ ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ಅಗ್ರಸ್ಥಾನದಲ್ಲಿದೆ. ಹೀಗಾಗಿ ನಮಗೆ ನಿಮ್ಮ ಸಹಕಾರ ಅಗತ್ಯವಿದೆ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಭಗವದ್ಗೀತೆಯಲ್ಲಿ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬ ಸಂದೇಶ ನೀಡಲಾಗಿದೆ. ಅಂದರೆ ನಾವು ನಮ್ಮ ಪ್ರಯತ್ನ ಮಾಡಬೇಕು, ಅದರ ಫಲಾಫಲವನ್ನು ಭಗವಂತನಿಗೆ ಬಿಡಬೇಕು. ನಮ್ಮ ಪರಿಶ್ರಮ ಪ್ರತಿಬಿಂಬಿಸುವ ಕ್ಷಣ ಇದಾಗಿದೆ” ಎಂದರು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 13T165636.843

ಪ್ರಮೋದ್ ಶೆಟ್ರ ಹುಬ್ಬಳ್ಳಿ ಹಂಟರ್ಸ್..ರಕ್ಷಿತ್ ಶೆಟ್ಟಿ ಜಾದೂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2026 - 4:57 pm
0

ಮೆಟ್ರೋ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸಮಾನವಾಗಿ ಹಂಚಿಕೊಳ್ಳಬೇಕು ಸಿಎಂ ಡಿಕೆಶಿ

ಮೆಟ್ರೋ ಆರ್ಥಿಕ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸಮಾನವಾಗಿ ಹಂಚಿಕೊಳ್ಳಬೇಕು: ಸಿಎಂ ಡಿಕೆಶಿ

by ಶಾಲಿನಿ ಕೆ. ಡಿ
November 13, 2026 - 4:45 pm
0

4 ತಿಂಗಳಲ್ಲಿ ಜಡ್ಜ್ ಚೇಂಜ್.. ದರ್ಶನ್ ಪವಿತ್ರಾ ಜೈಲ್ ಟಾಕ್

4 ತಿಂಗಳಲ್ಲಿ ಜಡ್ಜ್ ಚೇಂಜ್..ದರ್ಶನ್-ಪವಿತ್ರಾ ಜೈಲ್ ಟಾಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2026 - 4:23 pm
0

Untitled Design 2026 11 13T160421.879

ಮೈಸೂರಿನಲ್ಲಿ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
November 13, 2026 - 4:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 13T160421.879
    ಮೈಸೂರಿನಲ್ಲಿ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ
    November 13, 2026 | 0
  • ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ ಪ್ರಧಾನಿ ಮೋದಿ
    ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
    November 13, 2026 | 0
  • ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ ಪ್ರಧಾನಿ ಮೋದಿ
    ಹೊಸ ಮೆಟ್ರೋ ಮಾರ್ಗದಿಂದ ಬೆಂಗಳೂರಿಗೆ ದೊಡ್ಡ ಕೊಡುಗೆ: ಪ್ರಧಾನಿ ಮೋದಿ
    November 13, 2026 | 0
  • Untitled Design 2026 11 13T140339.492
    ಕರ್ನಾಟಕದ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಚಾಲನೆ
    November 13, 2026 | 0
  • Untitled Design 2026 11 13T133610.389
    ಬೆಂಗಳೂರಿನಲ್ಲಿ ಹಾಡಹಗಲೇ ಉದ್ಯಮಿ ಭೀಕರ ಹತ್ಯೆ: ಪತ್ನಿ ಎದುರೇ ಕೊಚ್ಚಿ ಕೊಂದ ದುಷ್ಕರ್ಮಿಗಳು
    November 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version