ಬೆಂಗಳೂರು: ಮಹಿಳಾ ಐಪಿಎಲ್ (TATA WPL 2024) ಪಂದ್ಯಾವಳಿ ಫೆಬ್ರವರಿ 21 ರಿಂದ ಮಾರ್ಚ್ 1, 2025 ರವರೆಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಸಂಚಾರ ನಿರ್ಬಂಧಗಳು ಜಾರಿಗೊಂಡಿವೆ.
ಬೆಂಗಳೂರು ಸಂಚಾರ ಪೊಲೀಸರು ಅಧಿಕೃತ ಪ್ರಕಟಣೆ ನೀಡಿದ್ದು, ಕ್ರೀಡಾಂಗಣದ ಸುತ್ತಮುತ್ತ ಕೆಲವು ಪ್ರಮುಖ ರಸ್ತೆಗಳ ಮೇಲೆ ವಾಹನ ನಿಲುಗಡೆ ನಿಷೇಧವನ್ನು ಹೇರಲಾಗಿದೆ. ಇದೇ ವೇಳೆ ವಾಹನ ಸವಾರರು ಬಳಸಬಹುದಾದ ಪರ್ಯಾಯ ಮಾರ್ಗಗಳ ಮಾಹಿತಿ ನೀಡಲಾಗಿದೆ.
ವಾಹನ ನಿಲುಗಡೆ ನಿಷೇಧಿತ ರಸ್ತೆಗಳು (3PM – 11PM)
ಈ ಕೆಳಕಂಡ ರಸ್ತೆಗಳ ಎರಡೂ ಕಡೆ ಪಾರ್ಕಿಂಗ್ ನಿಷೇಧ
1. ಕೀನ್ಸ್ ರಸ್ತೆ – ಬಾಳೇಕುಂದ್ರಿ ವೃತ್ತದಿಂದ ಕೀನ್ಸ್ ವೃತ್ತದ ವರೆಗೆ
2. ಎಂ.ಜಿ. ರಸ್ತೆ – ಅನಿಲ್ ಕುಂಬ್ಳೆ ವೃತ್ತದಿಂದ ಕೀನ್ಸ್ ವೃತ್ತದ ವರೆಗೆ
3. ಲಿಂಕ್ ರಸ್ತೆ – ಎಂ.ಜಿ. ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ
4. ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ
5. ಸೆಂಟ್ರಲ್ ಸ್ಟ್ರೀಟ್ – ಎರಡೂ ಬದಿಯಲ್ಲೂ ನಿಲುಗಡೆ ನಿಷೇಧ
6. ಕಬ್ಬನ್ ರಸ್ತೆ – ಸಿ.ಟಿ.ಒ ವೃತ್ತದಿಂದ ಡಿಕೆನ್ಸ್ ರಸ್ತೆ ಜಂಕ್ಷನ್ ವರೆಗೆ
7. ಸೆಂಟ್ ಮಾರ್ಕ್ಸ್ ರಸ್ತೆ – ಕ್ಯಾಶ್ ಫಾರ್ಮಸಿ ಜಂಕ್ಷನ್ ನಿಂದ ಅನಿಲ್ ಕುಂಬ್ಳೆ ವೃತ್ತದ ವರೆಗೆ
8. ಮ್ಯೂಸಿಯಂ ರಸ್ತೆ – ಎಂ.ಜಿ. ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆ ಮತ್ತು ಆಶಿರ್ವಾದಂ ವೃತ್ತದ ವರೆಗೆ
9. ಕಸ್ತೂರಬಾ ರಸ್ತೆ – ಕೀನ್ಸ್ ವೃತ್ತದಿಂದ ಹಡನ್ ವೃತ್ತದವರೆಗೆ
10. ಕಬ್ಬನ್ ಪಾರ್ಕ್ ಒಳಭಾಗ – ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ, ಪೌಂಟೇನ್ ರಸ್ತೆ
11. ಲ್ಯಾವೆಲ್ಲಿ ರಸ್ತೆ – ಕೀನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ವರೆಗೆ
12. ವಿಠಲ್ ಮಲ್ಯ ರಸ್ತೆ – ಸಿದ್ದಲಿಂಗಯ್ಯ ವೃತ್ತದಿಂದ ಬಿಷಪ್ ಕಾಟನ್ ಬಾಲಕಿಯರ ಶಾಲೆಯವರೆಗೆ
ವಾಹನ ನಿಲುಗಡೆಗೆ ಪರ್ಯಾಯ ಸ್ಥಳಗಳು (11 AM – 9 PM)
1. ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ & ಯು.ಬಿ.ಸಿಟಿ – ಸಾರ್ವಜನಿಕ ವಾಹನ ಪಾರ್ಕಿಂಗ್
2. ಶಿವಾಜಿನಗರ ಬಸ್ ನಿಲ್ದಾಣ (1ನೇ ಮಹಡಿ) – ವಾಹನ ನಿಲುಗಡೆಗೆ ಅನುಮತಿ
3. ಸೆಂಟ್ ಜೋಸೆಫ್ (ಯೂರೋಪಿಯನ್) ಬಾಲಕರ ಶಾಲೆ ಮೈದಾನ (ಮ್ಯೂಸಿಯಂ ರಸ್ತೆ) – ಕೆ.ಎಸ್.ಸಿ.ಎ ಸದಸ್ಯರ ವಾಹನ ಪಾರ್ಕಿಂಗ್
4. ಪೋಲಿಸ್ ವಾಹನಗಳು – ಕಬ್ಬನ್ ಪಾರ್ಕ್ ಒಳಭಾಗದ ಕೆ.ಜಿ.ಐ.ಡಿ ಬಿಲ್ಡಿಂಗ್ ಮುಂಭಾಗ
ಚಿನ್ನಸ್ವಾಮಿ ಕ್ರೀಡಾಂಗಣ ಪ್ರವೇಶ ಮಾರ್ಗಗಳು
1. ಗೇಟ್ 1 – 6 → ಕಬ್ಬನ್ ರಸ್ತೆ (ಪಾದಚಾರಿ ಪ್ರವೇಶ)
2. ಗೇಟ್ 7 – 11 → ಲಿಂಕ್ ರಸ್ತೆ (ಅನಿಲ್ ಕುಂಬ್ಳೆ ವೃತ್ತ & ಬಿ.ಆರ್.ವಿ. ವೃತ್ತದಿಂದ)
3. ಗೇಟ್ 12 – 21 → ಕೀನ್ಸ್ ರಸ್ತೆ (ಪ್ರೇಕ್ಷಕರು ಮತ್ತು ಪಾದಚಾರಿ ಪ್ರವೇಶ)