ಬೆಂಗಳೂರು: ಮೇ ತಿಂಗಳ ಮೊದಲ ದಿನದಿಂದಲೇ ಸಾಮಾನ್ಯ ಜನರ ಜೀವನದ ಮೇಲೆ ಮತ್ತೊಂದು ಆರ್ಥಿಕ ಒತ್ತಡ ಬಿದ್ದಿದೆ. ವಾಣಿಜ್ಯ ಬಳಕೆಯ 19 ಕೆ.ಜಿ. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಒಂದು ಸಿಲಿಂಡರ್‌ಗೆ 991 ರೂಪಾಯಿ ಹೆಚ್ಚಳವಾಗಿದ್ದು, ಈಗ ಅದರ ಬೆಲೆ 3152 ರೂಪಾಯಿಗೆ ಏರಿದೆ.ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿ, ಚಿಕ್ಕ ತಿಂಡಿ ಗಾಡಿಗಳು ಮತ್ತು ಕ್ಯಾಟರಿಂಗ್ ವ್ಯವಹಾರಗಳು ತಮ್ಮ ಬೆಲೆಯನ್ನು ಹೆಚ್ಚುಮಾಡುವ ಸಾಧ್ಯತೆ ಇದೆ.
ಟೀ, ಕಾಫಿ, ತಿಂಡಿ ಮತ್ತು ಊಟದ ರೇಟ್‌ಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೋಟೆಲ್ ಮಾಲೀಕರು ಈಗಾಗಲೇ “ಗ್ಯಾಸ್ ಬಳಸೋಹಾಗಿಲ್ಲ” ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೊಲ್ಲಿ ಯುದ್ಧ ಆರಂಭವಾದ ನಂತರ ಇದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮೂರನೇ ಬಾರಿಯ ಏರಿಕೆ ಎಂದು ವರದಿಯಾಗಿದೆ. ಆದರೆ ಗೃಹ ಬಳಕೆಯ 14.2 ಕೆ.ಜಿ. ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಲಾಗಿದೆ.
ಮೇ ತಿಂಗಳಲ್ಲಿ ಇನ್ನೂ ಏನೆಲ್ಲಾ ಹೆಚ್ಚಳ?
- ಕೆಲವು ಖಾಸಗಿ ಬ್ಯಾಂಕ್‌ಗಳಲ್ಲಿ ಬಡ್ಡಿ ದರ ಏರಿಕೆಯ ಸಾಧ್ಯತೆ
- ಎಟಿಎಂನಲ್ಲಿ ಹಣ ತೆಗೆಯುವುದಕ್ಕೆ ಶುಲ್ಕ ಹೆಚ್ಚಳ
- ಕಚ್ಚಾ ತೈಲ ಬೆಲೆ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಹೈಕ್ ಸಾಧ್ಯತೆ
- ಮೇ ಮೊದಲ ವಾರದಿಂದಲೇ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ದರ ಏರಿಕೆಯ ಆತಂಕ
ಈಗಾಗಲೇ ಜನಸಾಮಾನ್ಯರು ಮತ್ತು ವ್ಯವಹಾರಿಗಳು ತೀವ್ರ ಆರ್ಥಿಕ ಒತ್ತಡದಲ್ಲಿದ್ದಾರೆ. ಗ್ಯಾಸ್, ಕರೆಂಟ್, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ದೈನಂದಿನ ವೆಚ್ಚ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಮೇ ತಿಂಗಳು ಆರಂಭದಿಂದಲೇ ಸಾಮಾನ್ಯ ಜನರ ಜೀಬಿಗೆ “ಮೇ ಶಾಕ್” ಆಗುತ್ತಿದೆ.
ಸರ್ಕಾರ ಮತ್ತು ತೈಲ ಕಂಪನಿಗಳು ಜನಸ್ನೇಹಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. ವ್ಯವಹಾರಿಗಳು ಮತ್ತು ಗ್ರಾಹಕರು ಮೇ 1ರಿಂದ 10ರೊಳಗೆ ಈ ಬದಲಾವಣೆಗಳಿಗೆ ಸಿದ್ಧರಾಗಬೇಕಾಗಿದೆ. ಕಳೆದ ಬಾರಿ ಹೊಸ ಆರ್ಥಿಕ ವರ್ಷ ಬರುವಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತ್ತು ಆದರೆ ಈಗ ಮೇ ಶಾಕ್ ಎಲ್ಲರಲ್ಲೂ ಆತಂಕ ಮೂಡಿಸಿದೆ..





