ಚಳಿಗಾಲ ಆರಂಭವಾಗುತ್ತಲೇ ತ್ವಚೆ ಒಣಗಿ, ಹಿಮ್ಮಡಿ ಬಿರುಕು ಬಿಡುವುದು ತುಂಬಾ ಸಾಮಾನ್ಯ. ಈ ಸಮಸ್ಯೆಯಿಂದ ನೋವು, ಕಾಲು ಊತ ಕೂಡ ಉಂಟಾಗಬಹುದು ಮತ್ತು ಪಾದದ ಸೌಂದರ್ಯ ಕೆಡುತ್ತದೆ. ಅನೇಕರು ಪಾರ್ಲರ್‌ಗೆ ಹೋಗಿ ಅಥವಾ ದುಬಾರಿ ಕ್ರೀಮ್‌ಗಳನ್ನು ಖರೀದಿಸುತ್ತಾರೆ. ಆದರೆ ನಿಮ್ಮ ಅಡುಗೆ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು. ಅದು ಯಾವುದು ಎಂದು ತಿಳಿಯಲು ಈ ಸ್ಟೋ ಒಮ್ಮೆ ನೋಡಿ.
1. ನಿಂಬೆ + ಗ್ಲಿಸರಿನ್ + ಗುಲಾಬಿ ನೀರು (ಅತ್ಯುತ್ತಮ ಕಾಂಬಿನೇಷನ್) ಅರ್ಧ ಬಕೆಟ್ ಬಿಸಿ ನೀರಿನಲ್ಲಿ 2 ಚಮಚ ನಿಂಬೆ ರಸ, 1 ಚಮಚ ಗ್ಲಿಸರಿನ್, 1 ಚಮಚ ಗುಲಾಬಿ ನೀರು ಹಾಕಿ. ಪಾದಗಳನ್ನು15-20 ನಿಮಿಷ ನಿಮ್ಮ ಪಾದವನ್ನ ನೀರಿನಲ್ಲೇ ಬಿಡಿ. ನಂತರ ಪ್ಯೂಮಿಕ್ ಸ್ಟೋನ್ ಅಥವಾ ಹೀಲ್ ಸ್ಕ್ರಬ್ಬರ್‌ನಿಂದ ಒಣ ಚರ್ಮವನ್ನು ತೆಗೆಯಿರಿ. ಸ್ನಾನ ಮುಗಿಸಿ, 1 ಚಮಚ ಗ್ಲಿಸರಿನ್ + 1 ಚಮಚ ಗುಲಾಬಿ ನೀರು + 1 ಚಮಚ ನಿಂಬೆ ರಸ ಬೆರೆಸಿ ನಿಮ್ಮ ಪಾದಕ್ಕೆ ಹೆಚ್ಚಾಗಿ ಈ ಪೇಸ್ಟ್ ಹಚ್ಚಿ, ಸಾಕ್ಸ್ ಧರಿಸಿ ಮಲಗಿ. ಬೆಳಗ್ಗೆ ತೊಳೆಯಿರಿ. ವಾರಕ್ಕೆ ಹೀಗೆ 3-4 ಬಾರಿ ಮಾಡಿದ್ರೆ 10-15 ದಿನದಲ್ಲೇ ಬಿರುಕುಗಳು ಮಾಯವಾಗುತ್ತವೆ.
2. ಜೇನುತುಪ್ಪ (Honey Foot Soak) ಒಂದು ಬಕೇಟ್ ಬಿಸಿ ನೀರಿನಲ್ಲಿ 1 ಕಪ್ ಜೇನುತುಪ್ಪ ಬೆರೆಸಿ. ಪಾದಗಳನ್ನು 20 ನಿಮಿಷ ನೀರಿನಲ್ಲಿ ಬಿಡಿ. ಜೇನುತುಪ್ಪದಲ್ಲಿರುವ ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ & ಮಾಯಿಶ್ಚರೈಸಿಂಗ್ ಗುಣಗಳು ಬಿರುಕುಗಳನ್ನು ಗುಣಪಡಿಸುತ್ತವೆ ಮತ್ತು ಚರ್ಮವನ್ನು ಮೃದುವಾಗಿಸುತ್ತವೆ.
3. ತೆಂಗಿನ ಎಣ್ಣೆ (ಅತಿ ಸರಳ & ಅತ್ಯಂತ ಪರಿಣಾಮಕಾರಿ) ರಾತ್ರಿ ಮಲಗುವ ಮುಂಚೆ ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಉಗುರು ಬೆಚ್ಚಗಿನ ತೆಂಗಿನ ಎಣ್ಣೆಯಿಂದ 5-7 ನಿಮಿಷ ಮಸಾಜ್ ಮಾಡಿ, ಸಾಕ್ಸ್ ಧರಿಸಿ ಮಲಗಿ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲ ಮತ್ತು ವಿಟಮಿನ್ E ಒಡೆದ ಚರ್ಮವನ್ನು ತುಂಬಾ ಬೇಗ ಗುಣಪಡಿಸುತ್ತದೆ. ಕೇವಲ 1 ವಾರದಲ್ಲೇ ಇದರ ರಿಸಲ್ಟ್ ನೋಡಬಹುದು.
4. ಅಲೋವೆರಾ ಜೆಲ್ ತಾಜಾ ಅಲೋವೆರಾ ಎಲೆಯಿಂದ ಜೆಲ್ ತೆಗೆದು ರಾತ್ರಿ ಪಾದಗಳಿಗೆ ದಪ್ಪವಾಗಿ ಹಚ್ಚಿ, ಸಾಕ್ಸ್ ಧರಿಸಿ ಮಲಗಿ. ಅಲೋವೆರಾದ ೭೫+ ಪೋಷಕಾಂಶಗಳು ಆಳವಾದ ಗುಣವನ್ನು ನೀಡುತ್ತವೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ.
5. ಮಾಗಿದ ಬಾಳೆಹಣ್ಣು ಪಾಕವಾದ ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಬಿರುಕುಗಳ ಮೇಲೆ 15-20 ನಿಮಿಷ ಪಾದಕ್ಕೆ ಹಚ್ಚಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಮಾಯಿಶ್ಚರೈಸರ್ ಹಚ್ಚಿ. ಬಾಳೆಹಣ್ಣಿನಲ್ಲಿರುವ ವಿಟಮಿನ್ A, B6, C ಮತ್ತು ಪೊಟ್ಯಾಸಿಯಂ ಚರ್ಮವನ್ನು ಪೋಷಣೆ ಮಾಡುತ್ತವೆ.
ಈ ಮನೆಮದ್ದುಗಳನ್ನು ನಿಯಮಿತವಾಗಿ ಅನುಸರಿಸಿದರೆ ಚಳಿಗಾಲದಲ್ಲೂ ನಿಮ್ಮ ಪಾದಗಳು ಮೃದುವಾಗಿ, ಇದರ ಜೊತೆಗೆ ಸಾಕಷ್ಟು ನೀರು ಕುಡಿಯಿರಿ.ಇದರಿಂದ ನಿಮ್ಮ ದೇಹ ಯಾವಾಗಲೂ ಹೈಡ್ರೈಟ್ ಆಗಿರುತ್ತದೆ. ಆಗ ಹಿಮ್ಮಡಿ ಬಿರುಕು ಬಿಡುವುದು ಕಡಿಮೆಯಾಗುತ್ತದೆ. ದುಬಾರಿ ಕ್ರೀಮ್‌ಗಳ ಅವಶ್ಯಕತೆಯೇ ಇರುವುದಿಲ್ಲ.





