• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಚಳಿಗಾಲದಲ್ಲಿ ಸ್ನಾನಕ್ಕೆ ಬಿಸಿನೀರು ಒಳ್ಳೆಯದೇ? ತಣ್ಣೀರು ಒಳ್ಳೆಯದೇ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 23, 2025 - 7:10 am
in ಆರೋಗ್ಯ-ಸೌಂದರ್ಯ
0 0
0
Untitled design 2025 11 23T070026.518

ಚಳಿಗಾಲ ಆರಂಭವಾಗುತ್ತಿದ್ದಂತೆ ದೇಹದ ಆರೈಕೆ, ವಿಶೇಷವಾಗಿ ಚರ್ಮದ ಆರೈಕೆ ಬಹಳ ಮುಖ್ಯವಾಗುತ್ತದೆ. ಈ ಋತುವಿನಲ್ಲಿ ತಂಪು ಗಾಳಿ ಮತ್ತು ಒಣ ವಾತಾವರಣದ ಕಾರಣ ಚರ್ಮ ಶೀಘ್ರವಾಗಿ ಒಣಗುವುದು ಸಾಮಾನ್ಯ. ಹಾಗಾಗಿ ಯಾವ ನೀರಿನಿಂದ ಸ್ನಾನ ಮಾಡುವುದು ದೇಹಕ್ಕೆ ಮತ್ತು ಚರ್ಮಕ್ಕೆ ಉತ್ತಮ ಎಂಬ ಪ್ರಶ್ನೆ ಬಹುತೇಕ ಎಲ್ಲರ ಮನದಲ್ಲೂ ಮೂಡುತ್ತದೆ.

ಕೆಲವರು ಬೆಳಿಗ್ಗೆ ಸ್ನಾನಕ್ಕೆ ಬಿಸಿನೀರನ್ನು ಬಳಸುವುದರಿಂದ ದೇಹ ವಿಶ್ರಾಂತಿ ಪಡೆಯುತ್ತದೆ. ಸ್ನಾಯುಗಳ ಒತ್ತಡ ಕಡಿಮೆಯಾಗುತ್ತದೆ ಮತ್ತು ಚಳಿಯಿಂದ ಉಂಟಾಗುವ ಗಟ್ಟಿತನ ದೂರವಾಗುತ್ತದೆ ಎಂದು ನಂಬುತ್ತಾರೆ. ಮತ್ತೊಂದೆಡೆ, ವೈದ್ಯರು ಮತ್ತು ಚರ್ಮ ತಜ್ಞರು ಹೆಚ್ಚಾಗಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಚರ್ಮದ ನೈಸರ್ಗಿಕ ಎಣ್ಣೆ ಪದರ ಕಡಿಮೆಯಾಗುತ್ತದೆ. ಚರ್ಮ ಇನ್ನಷ್ಟು ಒಣಗುತ್ತದೆ ಮತ್ತು ಚರ್ಮದ ಕಿರಿಕಿರಿಗಳು ಹೆಚ್ಚಾಗುತ್ತವೆ ಎಂದು ಸೂಚಿಸುತ್ತಾರೆ. ಇದರಿಂದ ‘ಬಿಸಿ ನೀರು ಸೂಕ್ತವೇ? ಅಥವಾ ತಣ್ಣೀರು ಉತ್ತಮವೇ?’ ಎಂಬ ಗೊಂದಲ ಎಲ್ಲರಲ್ಲೂ ಕಾಣುತ್ತದೆ.

RelatedPosts

ಚಹಾ ಕುಡಿಯುತ್ತಾ ‘ಸಿಗರೇಟ್’ ಸೇದುವ ಅಭ್ಯಾಸ ಇದೆಯೇ?: ಈ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ!

ರಾತ್ರಿ ನಿದ್ರೆ ಬರ್ತಿಲ್ಲವೇ? ಮಲಗುವ ಮುನ್ನ ಈ ಅಭ್ಯಾಸಗಳನ್ನು ತಪ್ಪಿಸಿ.!

ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ ‘ಟೀ’ ರಾಜಧಾನಿ!

ಜೂನ್‌ 21 ರಂದೇ ಯೋಗ ದಿನಾಚರಣೆ ಆಚರಿಸುವುದರ ಹಿಂದಿದೆ ಅಚ್ಚರಿ ಕಾರಣ, ಏನಿದರ ಮಹತ್ವ?

ADVERTISEMENT
ADVERTISEMENT
ಬಿಸಿ ನೀರಿನ ಸ್ನಾನದ ಲಾಭ–ನಷ್ಟ

ಚಳಿಗಾಲದಲ್ಲಿ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ತಕ್ಷಣದ ವಿಶ್ರಾಂತಿ ಮತ್ತು ಆರಾಮದ ಅನುಭವ ಸಿಗುವುದು ನಿಜ. ದೇಹದ ಸ್ನಾಯುಗಳು ಶೀತದಿಂದ ಗಟ್ಟಿಯಾಗಿರುವಾಗ ಬಿಸಿ ನೀರು ಅವುಗಳನ್ನು ಸಡಿಲಿಸಲು ಸಹಾಯ ಮಾಡುತ್ತದೆ.

ಆದರೆ ಅತಿಯಾದ ಬಿಸಿ ನೀರು ಚರ್ಮಕ್ಕೆ ಹಾನಿಕಾರಕ. ಇದು ಚರ್ಮದ ಮೇಲೆ ಇರುವ ನೈಸರ್ಗಿಕ ತೈಲ ಪದರವನ್ನು ಕಡಿಮೆ ಮಾಡುತ್ತದೆ. ಅದರ ಪರಿಣಾಮವಾಗಿ ಚರ್ಮ ಒಣಗುವುದು, ಬಿರುಕು ಬಿದ್ದಂತೆ ಕಾಣುವುದು, ತುರುಕು ಅಥವಾ ಕೆಂಪಾಗುವುದು, ಚರ್ಮದಲ್ಲಿ ಉರಿ-ಕಿರಿಕಿರಿ ಹೆಚ್ಚಾಗುತ್ತದೆ. ಕೂದಲಿಗೂ ಅತಿಯಾದ ಬಿಸಿ ನೀರಿನ ತೊಂದರೆ ಇದೆ. ಕೂದಲು ಒಣಗುವುದು, ಸ್ಪ್ಲಿಟ್ ಎಂಡ್ಸ್ ಹೆಚ್ಚಾಗುವುದು ಮತ್ತು ನೈಸರ್ಗಿಕ ಶೈನ್ ಕಡಿಮೆಯಾಗುತ್ತದೆ.

ತಣ್ಣೀರು ಸ್ನಾನ

ತಣ್ಣೀರು ರಕ್ತಸಂಚಾರವನ್ನು ಚುರುಕುಗೊಳಿಸಿ ದೇಹಕ್ಕೆ ಚೈತನ್ಯ ನೀಡುತ್ತದೆ ಎನ್ನುವುದು ನಿಜ. ಆದರೆ ಚಳಿಗಾಲದ ತೀವ್ರ ಶೀತದಲ್ಲಿ ಸಂಪೂರ್ಣ ತಣ್ಣೀರು ನೀರಿನಿಂದ ಸ್ನಾನ ಮಾಡುವುದು ಆರೋಗ್ಯಕ್ಕೆ ಸದಾ ಒಳ್ಳೆಯದೇನಲ್ಲ. ಏಕೆಂದರೆ ದೇಹ ಇದ್ದಕ್ಕಿದ್ದಂತೆ ತಣ್ಣೀರಿನ ಸಂಪರ್ಕಕ್ಕೆ ಬಂದಾಗ ರಕ್ತನಾಳಗಳು ತಕ್ಷಣ ಸಂಕುಚಿತಗೊಳ್ಳುತ್ತವೆ. ಇದು ಕೆಲವೊಮ್ಮೆ ರಕ್ತದೊತ್ತಡ ಏರಿಕೆ, ಹೃದಯ ಬಡಿತ ಹೆಚ್ಚಳ, ತಲೆ ಸುತ್ತು, ಶೀತ, ಜ್ವರ ಮುಂತಾದ ಸಮಸ್ಯೆಗಳ ಅಪಾಯಕ್ಕೆ ಕಾರಣವಾಗಬಹುದು. ಹೀಗಾಗಿ ಚಳಿಗಾಲದಲ್ಲಿ ತಣ್ಣೀರು ಸ್ನಾನವು ಎಲ್ಲರಿಗೂ ಸೂಕ್ತವಲ್ಲ.

ಹಾಗಾದರೆ ಯಾವ ನೀರು ಉತ್ತಮ?

ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಮಿತವಾದ ಬೆಚ್ಚಗಿನ ನೀರು (lukewarm water) ಸ್ನಾನಕ್ಕೆ ಅತ್ಯಂತ ಉತ್ತಮ. ಇದು ದೇಹ ಬಿಸಿಯಾಗುವಂತೆ ಮಾಡುತ್ತದೆ. ಸ್ನಾನ ಆರಾಮಕರವಾಗಿರುತ್ತದೆ ಮತ್ತು ಚರ್ಮದ ನೈಸರ್ಗಿಕ ಎಣ್ಣೆ ಪದರಕ್ಕೂ ಹೆಚ್ಚು ಹಾನಿ ಆಗುವುದಿಲ್ಲ.

ಇದಲ್ಲದೆ ಸ್ನಾನದ ಬಳಿಕ ಮಾಯಿಶ್ಚರೈಸರ್ ಹಚ್ಚುವುದು ಬಹಳ ಮುಖ್ಯ. ಇದು ಚರ್ಮದ ಮೇಲೆ ಒಂದು ರಕ್ಷಣಾತ್ಮಕ ಪದರವನ್ನು ನಿರ್ಮಿಸಿ ಒಣಗುವಿಕೆಯನ್ನು ತಡೆಯುತ್ತದೆ.

ಹ್ಯಾಂಡ್ ಪಂಪ್ ಅಥವಾ ಬೋರ್‌ವೆಲ್ ನೀರಿನ ಬಳಕೆ

ಗ್ರಾಮೀಣ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಹ್ಯಾಂಡ್ ಪಂಪ್ ಅಥವಾ ಬೋರ್‌ವೆಲ್ ನೀರು ಸ್ವಲ್ಪ ಬಿಸಿಯಾಗಿಯೇ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ನೀರನ್ನು ನೇರವಾಗಿ ಸ್ನಾನಕ್ಕೆ ಬಳಸಬಹುದಾದರೂ, ಕೆಲವೇಳೆ ಈ ನೀರಿನಲ್ಲಿ ಖನಿಜ ಅಂಶಗಳು ಹೆಚ್ಚು ಇರುವುದರಿಂದ ಚರ್ಮಕ್ಕೆ ಉರಿ, ತುರಿಕೆ, ಒಣಗುವುದು ಇಂತಹ ಮುಂತಾದ ಸಮಸ್ಯೆಗಳು ಕಾಣಿಸಬಹುದು. ಹೀಗಾಗಿ ಸಾಧ್ಯವಾದರೆ ಈ ನೀರನ್ನು ಸ್ವಲ್ಪ ತಾಪಮಾನ ಸಮತೋಲನಕ್ಕೆ ತಂದು ಬಳಸುವುದು ಉತ್ತಮ.

ಚಳಿಗಾಲದಲ್ಲಿ ಸ್ನಾನಕ್ಕೆ ಮಂದಬಿಸಿ ನೀರು ಅತ್ಯುತ್ತಮ ಆಯ್ಕೆ. ಅತಿಯಾದ ಬಿಸಿ ನೀರಲ್ಲ, ತಣ್ಣೀರಲ್ಲ ಮಧ್ಯಮ ಬಿಸಿಪಟ್ಟೆಯ ನೀರು ದೇಹಕ್ಕೂ, ಚರ್ಮಕ್ಕೂ, ಕೂದಲಿಗೂ ಉತ್ತಮ. ಸ್ನಾನದ ನಂತರ ಚರ್ಮದ ಆರೈಕೆ ಮಾಡಿದರೆ ಚಳಿಗಾಲದಲ್ಲೂ ಆರೋಗ್ಯಕರ, ಮೃದುವಾದ ಚರ್ಮವನ್ನು ಕಾಪಾಡಿಕೊಳ್ಳಬಹುದು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಸಿ (3)

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆ ಭಾರೀ ಇಳಿಕೆ, ಬೆಳ್ಳಿ ದರವೂ ಕುಸಿತ

by ಶಾಲಿನಿ ಕೆ. ಡಿ
June 30, 2026 - 12:01 pm
0

ಸಿ (2)

ರಾಮಮಂದಿರದ ದೇಣಿಗೆ ಕಳ್ಳತನಕ್ಕೆ ಕರ್ನಾಟಕ ನಂಟು: ಅಖಿಲೇಶ್ ಯಾದವ್ ಗಂಭೀರ ಆರೋಪ

by ಶಾಲಿನಿ ಕೆ. ಡಿ
June 30, 2026 - 11:45 am
0

ಸಿ (1)

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ

by ಶಾಲಿನಿ ಕೆ. ಡಿ
June 30, 2026 - 11:18 am
0

ಸಿ

ಪತಿಯ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯ ಹತ್ಯೆ

by ಶಾಲಿನಿ ಕೆ. ಡಿ
June 30, 2026 - 10:54 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 30T071420.862
    ಚಹಾ ಕುಡಿಯುತ್ತಾ ‘ಸಿಗರೇಟ್’ ಸೇದುವ ಅಭ್ಯಾಸ ಇದೆಯೇ?: ಈ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ!
    June 30, 2026 | 0
  • Untitled design 2026 06 29T070313.194
    ರಾತ್ರಿ ನಿದ್ರೆ ಬರ್ತಿಲ್ಲವೇ? ಮಲಗುವ ಮುನ್ನ ಈ ಅಭ್ಯಾಸಗಳನ್ನು ತಪ್ಪಿಸಿ.!
    June 29, 2026 | 0
  • Web Photo Editor (26)
    ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ ‘ಟೀ’ ರಾಜಧಾನಿ!
    June 22, 2026 | 0
  • Untitled design 2026 06 21T110143.049
    ಜೂನ್‌ 21 ರಂದೇ ಯೋಗ ದಿನಾಚರಣೆ ಆಚರಿಸುವುದರ ಹಿಂದಿದೆ ಅಚ್ಚರಿ ಕಾರಣ, ಏನಿದರ ಮಹತ್ವ?
    June 21, 2026 | 0
  • Untitled design 2026 06 19T174859.199
    ಶವರ್ಮಾ, ಕಬಾಬ್ ಪ್ರಿಯರೇ ಎಚ್ಚರ: ಕ್ಯಾನ್ಸರ್ ಕಾರಕ ಅಂಶ ಪತ್ತೆ!
    June 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version