ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಎಸ್‍ಬಿಐ ಬ್ಯಾಂಕ್‌ನ ಎಟಿಎಂ ಹೊತ್ತಿ ಉರಿದ ಘಟನೆ ನಡೆದಿದೆ.
ನಗರದ ಸರ್ಕಾರಿ ಕಾಲೇಜು ರಸ್ತೆಯ ಫರ್ವಾಜ್ ಪ್ಲಾಜಾ ಸಮೀಪದಲ್ಲಿರುವ ಎಟಿಎಂನಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು, ಅಗ್ನಿ ನಿಯಂತ್ರಣಕ್ಕೆ ಬಂದಿದೆ.
ಎಟಿಎಂ ಒಳಗೆ ಅಂದಾಜು 16 ಲಕ್ಷ ರೂಪಾಯಿ ನಗದು ಇತ್ತು ಎಂದು ಹೇಳಲಾಗಿದ್ದು, ಜೊತೆಗೆ ಮಳಿಗೆಯ ಒಟ್ಟು ಹಾನಿ 40 ರಿಂದ 50 ಲಕ್ಷ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್‍ಬಿಐ ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.