ಸಮೀರ್‌ಗೆ ಯಾಕೊ ಇನ್ಮುಂದೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ಯಾಕಂದ್ರೆ ಇಷ್ಟು ದಿನಗಳ ಕಾಲ ವಿಚಾರಣೆ ಅಂತ ಪೊಲೀಸರು ಕರೆಸಿ ಡ್ರಿಲ್ ಮಾಡಿದ್ರು. ಆದ್ರೆ ಇದೀಗ ಪೊಲೀಸರೇ ಸಮೀರ್ ಮನೆಗೆ ಬಂದಿದ್ದಾರೆ. ಹಾಗಾದರೆ ಸಮೀರ್ ಮನೆಗೆ ಬಂದಿದ್ದ ಪೊಲೀಸರು ಏನೆಲ್ಲಾ ವಿಚಾರಗಳನ್ನು ಪ್ರಸ್ತಾಪ ಮಾಡಿದ್ರು ಏನೆಲ್ಲಾ ಹುಡುಕಾಟ ಮಾಡಿದ್ರು.
ಯಾವಾಗಲು ತನ್ನ ಯೂಟಬ್ ಖಾತೆಯಿಂದ ಬರುಡೆ ಬಿಡ್ಕೊಂಡು ಜನರ ತಲೆಗೆ ಸುಳ್ಳಿನ ಹುಳವನ್ನು ಬಿಡುತ್ತಿದ್ದ ಸಮೀರ್ ನನ್ನು ಇಷ್ಟು ದಿನ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆಸಿ ಡ್ರಿಲ್ ಮಾಡುತ್ತಿದ್ರು. ಆದ್ರೆ ಇದೀಗ ಬೆಳ್ತಂಗಡಿ ಪೊಲೀಸರೇ ಸ್ವತಃ ಬನ್ನೇರುಘಟ್ಟದ ಸಮೀರ್ ಮನೆಗೆ ಬಂದಿದ್ದಾರೆ. ಸಮೀರ್ ವಿಡಿಯೋ ಮಾಡಿ ಎಡಿಟ್ ಮಾಡಿತ್ತಿದ್ದ ಕಂಪ್ಯೂಟರ್ ಲ್ಯಾಪ್ ಟಾಪ್ ಎಲ್ಲಾವನ್ನು ಪರಿಶೀಲನೆ ಮಾಡಿದ್ದಾರೆ. ಸಮೀರ್ ಮಾಡುತ್ತಿದ್ದ ವಿಡಿಯೋಗಳಿಗೆ ಬನ್ನೇರುಘಟ್ಟದ ಮನೆಯಲ್ಲಿ ಎಡಿಟ್ ಮಾಡುತ್ತಿದ್ದ ಎಂದು ಗೊತ್ತಾಗಿ ಆ ಸಿಸ್ಟಮ್‌ಗಳನ್ನು ಪರಿಶೀಲನೆ ಮಾಡೋದಕ್ಕೆ ಬಂದಿದ್ರು.
ಮನೆಯಲ್ಲಿದ್ದ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್, ಸಿಮ್, ಪೇನ್ ಡ್ರೈವ್ ಮತ್ತು ಇನ್ನಿತರೆ ಟೆಕ್ನಿಕಲ್ ಎವಿಡೆನ್ಸ್ ಗಳನ್ನು ಕಲೆ ಹಾಕೋದಕ್ಕೆ ಪೊಲೀಸರು ಮುಂದಾಗಿದ್ರು. ಇನ್ನು ಫಾರಿನ್ ಫಂಡ್ ವಿಚಾರ ಸಹ ಇದೀಗ ಪ್ರಸ್ತಾಪಲಾಗಿದ್ದು. ಅದರ ವಿಚಾರವಾಗಿ ಏನಾದರೂ ಮಾಹಿತಿ ಸಿಗುತ್ತಾ ಎಂದು ಪೊಲೀಸರು ಹುಡುಕಾಡಿದ್ದಾರೆ. ಇನ್ನು ಮನೆಯಲ್ಲಿ ಸಮೀರ್ ಇದ್ದರು ಸಹ ಮೊದಲಿಗೆ ಬಾಗಿಲು ತೆಗೆದಿಲ್ಲ. ಆದ್ರೆ ಪೊಲೀಸರು ಮತ್ತೆ ಕರೆ ಮಾಡಿ ನಿಮ್ಮ ಮನೆ ಬಳಿ ಇದ್ದೀವಿ ಬಾಗಿಲು ತೆಗೆಯಿಸಿ ಎಂದ ನಂತರ ಸಮೀರ್ ಬಾಗಿಲನ್ನು ತೆಗೆದಿದ್ದಾನೆ.
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ಸಂಬಂಧ ಎಸ್ಐಟಿ ವಿಚಾರಣೆಗೆ ಒಳಗಾದ ಉದಯ್ ಕುಮಾರ್ ಜೈನ್, ವಿಚಾರಣೆ ನಂತರ ತಮ್ಮ ಹೇಳಿಕೆ ನೀಡಿದ್ದಾರೆ.ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ. ಎಸ್ ಐ ಟಿ , ಸೌಜನ್ಯ ಪ್ರಕರಣ ಹಾಗೂ ಆರೋಪಿ ಚಿನ್ನಯ್ಯ ಬಗ್ಗೆ ಯಾವುದೇ ಪ್ರಶ್ನೆ ಕೇಳಲೇ ಇಲ್ಲ ಎಂದು ಸ್ಪಷ್ಟಪಡಿಸಿದ್ರು. ಕೇವಲ ವಿದ್ಯಾಭ್ಯಾಸ, ಉದ್ಯೋಗ, ವೈಯಕ್ತಿಕ ವಿಚಾರವನ್ನು ಕೇಳಿದ್ದ ಎಸ್ ಐ ಟಿ ,ಧರ್ಮಸ್ಥಳ ಸುತ್ತಮುತ್ತ ಶವ ಹೂತಿರೋ ಬಗ್ಗೆ ಪ್ರಶ್ನಿಸಿದ್ರು, ಆದರೆ “ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ” ಅಂತಾ ಉತ್ತರ ಉದಯ್ ಜೈನ್ ಉತ್ತರ ನೀಡಿದ್ದಾರೆ.
“ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡ್ತಾ ಇದ್ದರೆ, ಅಣ್ಣಪ್ಪನೇ ಶಿಕ್ಷೆ ಕೊಡ್ತಾನೆ” ಎಂದು ಜೈನ್ ಅಪಪ್ರಚಾರ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಮಾಡಿದ್ದುಣ್ಣೋ ಮಾರಾಯ ಎನ್ನುವ ಹಾಗೆ ಇದೀಗ ಸಮೀರ್ ಸುಳ್ಳು ವಿಡಿಯೋಗಳನ್ನು ಮಾಡಿದ್ದಕ್ಕೆ ಇದೀಗ ಪಶ್ಚಾತ್ತಾಪ ಪಡುವಂತಹ ಪರಿಸ್ಥಿತಿ ಎದುರಾಗಿರೊದಂತು ಸುಳ್ಳಲ್ಲ.





