ಬೆಂಗಳೂರಿನ ಬೀದಿ ನಾಯಿಗಳ ದಿನಗಳು ಬದಲಾಗುತ್ತಿವೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇನ್ಮುಂದೆ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಬಾರಿ ಚಿಕನ್ ರೈಸ್ ನೀಡಲು ಮುಂದಾಗಿದೆ. ಒಂದು ನಾಯಿಗೆ ಪ್ರತಿದಿನ 102 ರೂ. ಹಾಗೂ ತಿಂಗಳಿಗೆ 3,035 ರೂ. ಖರ್ಚು ಮಾಡಲು ತೀರ್ಮಾನಿಸಲಾಗಿದೆ.
ಪ್ರತಿ ಬಾರಿ ಆಹಾರದಲ್ಲಿ:
- 150 ಗ್ರಾಂ ಅಕ್ಕಿ
- 100 ಗ್ರಾಂ ಚಿಕನ್
- 100 ಗ್ರಾಂ ತರಕಾರಿ
- 10 ಗ್ರಾಂ ಎಣ್ಣೆ
- ಉಪ್ಪು, ಅರಿಶಿನ ಸೇರಿ ಒಟ್ಟು 600 ಗ್ರಾಂ ರುಚಿಕರ ಚಿಕನ್ ರೈಸ್!
ಚಿಕನ್ ರೈಸ್ಗೆ ಮಾತ್ರ ಒಂದು ಬಾರಿಗೆ 50 ರೂ. ಇತರ ವೆಚ್ಚ (ಲಸಿಕೆ, ಔಷಧಿ, ನಿರ್ವಹಣೆ) 52 ರೂ. = ಒಟ್ಟು 102 ರೂ. ಪ್ರತಿದಿನ.
ಎಷ್ಟು ಖರ್ಚು? ಎಷ್ಟು ನಾಯಿಗಳು?
- ಸದ್ಯಕ್ಕೆ 2,206 ಬೀದಿ ನಾಯಿಗಳ ಮಾಹಿತಿ ಸಂಗ್ರಹವಾಗಿದೆ.
- ಪ್ರತಿ ತಿಂಗಳು 66.95 ಲಕ್ಷ ರೂ.
- ವಾರ್ಷಿಕ 8.03 ಕೋಟಿ ರೂ. ಖರ್ಚು.
- ನಾಯಿಗಳ ಸಂಖ್ಯೆ ಹೆಚ್ಚಾದಷ್ಟೂ ಖರ್ಚು ಹೆಚ್ಚಳ.
ಪಾಲಿಕೆ ವಲಯಗಳಲ್ಲಿ ಬೀದಿ ನಾಯಿಗಳ ಸಂಖ್ಯೆ:
- ಉತ್ತರ ವಲಯ – 1,623
- ಕೇಂದ್ರ ವಲಯ – 222
- ಪೂರ್ವ ವಲಯ – 193
- ದಕ್ಷಿಣ ವಲಯ – 131
- ಪಶ್ಚಿಮ ವಲಯ – 37
ಎಲ್ಲೆಲ್ಲಿ ಶೆಲ್ಟರ್?
- ಕೇಂದ್ರ ವಲಯ – ಕಂಟೋನ್ಮೆಂಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣ
- ಪೂರ್ವ ವಲಯ – ಸಾದಮಂಗಲ & ವರ್ತೂರು
- ಪಶ್ಚಿಮ ವಲಯ – ಕೊಟ್ಟಿಗೆಪಾಳ್ಯ
- ಉತ್ತರ ವಲಯ – ಅಂಬೇಡ್ಕರ್ ನಗರ
- ದಕ್ಷಿಣ ವಲಯ – ಎಸ್. ಬಿಂಗಿಪುರ
ಹೇಗೆ ಆರಂಭವಾಯ್ತು?
ಸುಪ್ರೀಂ ಕೋರ್ಟ್ 2023ರಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರಿಸಿ, ಆಶ್ರಯ ಕೇಂದ್ರಗಳಲ್ಲಿ ಸಾಕಿ, ಉತ್ತಮ ಆಹಾರ-ಔಷಧಿ ನೀಡುವಂತೆ ಆದೇಶಿಸಿತ್ತು. ಅದರಂತೆ BBMP ಈಗ ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸಿದೆ. ಆಯುಕ್ತ ರಾಜೇಂದ್ರ ಚೋಳನ್ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆಯಾಗಿದ್ದು, ನಾಯಿಗಳ ಸ್ಥಳಾಂತರ, ಆಹಾರ, ಲಸಿಕೆ, ನಿರ್ವಹಣೆಗೆ ವಿವರವಾದ ಮಾರ್ಗಸೂಚಿ ತಯಾರಿಸಲಾಗುತ್ತಿದೆ.
ಶಾಲೆ-ಕಾಲೇಜು, ಬಸ್ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆ, ಪಾರ್ಕ್ಗಳಲ್ಲಿರುವ ಬೀದಿ ನಾಯಿಗಳ ಮಾಹಿತಿ ಸಂಗ್ರಹಿಸಲು ಸಂಬಂಧಿಸಿದ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿನ ಬೀದಿ ನಾಯಿಗಳ ಜೀವನ ಈಗ ಬದಲಾಗುತ್ತಿದೆ. “ಚಿಕನ್ ರೈಸ್” ತಿನ್ನುವ ಬೀದಿ ನಾಯಿಗಳು ಇನ್ಮುಂದೆ ಬೆಂಗಳೂರಿನ ಹೊಸ ಆಕರ್ಷಣೆಯಾಗಬಹುದು, ನಗರದ ಜನತೆ ಈ ಯೋಜನೆಗೆ ಶುಭ ಹಾರೈಸುತ್ತಿದ್ದಾರೆ.





