• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ಫ್ಯಾನ್ಸ್‌ಗೆ ನಿರಾಸೆ.. ರಾಮಾಯಣ ದರ್ಶನ ಮುಂದಕ್ಕೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 24, 2026 - 5:12 pm
in ಸಿನಿಮಾ
0 0
0
ಕೈಗೊಳ್ಳಲಿರುವ (5)

ಟಾಕ್ಸಿಕ್ ಹಾಗೂ ರಾಮಾಯಣ ಟ್ರೈಲರ್‌‌ಗಳು ಬ್ಯಾಕ್ ಟು ಬ್ಯಾಕ್ ಕಮಾಲ್ ಮಾಡೋಕೆ ಸಜ್ಜಾಗಿದ್ದವು. ಆ ಪೈಕಿ ರಾಮಾಯಣ ಟ್ರೈಲರ್ ಅಮೆರಿಕಾದಲ್ಲಿ ಗ್ಲೋಬಲ್ ಲಾಂಚ್ ಆಗಬೇಕಿತ್ತು. ಆದ್ರೆ ಪೋಸ್ಟ್‌ಪೋನ್ ಆಗೋ ಮೂಲಕ ಯಶ್ ಫ್ಯಾನ್ಸ್‌ಗೆ ಭಾರೀ ನಿರಾಸೆ ಮೂಡಿಸಿದೆ. ಆದಾಗ್ಯೂ ಸಹ ಭುವನಹಳ್ಳಿ ಹುಡ್ಗ ಯಶ್ ಅಮೆರಿಕಾದಲ್ಲಿ ಮಾಡ್ತಿರೋ ಹಂಗಾಮ ಅಷ್ಟಿಷ್ಟಲ್ಲ. ಸ್ಯಾನ್ ಡಿಯಾಗೋನಲ್ಲಿ ಆಗಿದ್ದೇನು..? ರಾಕಿಂಗ್ ರಹದಾರಿ ಎಂಥದ್ದು..? ಇಲ್ಲಿದೆ ನೋಡಿ.

  • ಭುವನಹಳ್ಳಿ to ಅಮೆರಿಕ.. ಇದು ರಾಕಿಂಗ್ ಸ್ಟಾರ್ ರಹದಾರಿ
  • ಯಶ್ ಫ್ಯಾನ್ಸ್‌ಗೆ ನಿರಾಸೆ.. ರಾಮಾಯಣ ದರ್ಶನ ಮುಂದಕ್ಕೆ

ಹಾಸನದ ಭುವನಹಳ್ಳಿಯ ಹೈದನೊಬ್ಬ ಅಮೆರಿಕದ ಸ್ಯಾನ್ ಡಿಯಾಗೋನಲ್ಲಿ ತನ್ನ ಸಿನಿಮಾದ ಟ್ರೈಲರ್‌‌ನ ಗ್ಲೋಬಲ್ ಲಾಂಚ್ ಮಾಡೋದು ಸಾಮಾನ್ಯದ ಮಾತಲ್ಲ. ಯೆಸ್.. ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಏನೇ ಮಾಡಿದ್ರೂ ಡಿಫರೆಂಟ್. ಸದಾ ದೂರದೃಷ್ಟಿ ಇಟ್ಕೊಂಡು ಮುಂದೆ ಹೆಜ್ಜೆ ಇಡೋ ರಾಕಿಭಾಯ್, ಕೆಜಿಎಫ್ ಬಳಿಕ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

RelatedPosts

ಹಾಲಿವುಡ್‌ನತ್ತ ‘ಮಹಾರಾಜ’ ಸೇತುಪತಿ ದಂಡಯಾತ್ರೆ

ಸಿಟಿಲೈಟ್ಸ್..ಹ್ಯಾಟ್ರಿಕ್ ಡೈರೆಕ್ಟರ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌‌ಕುಮಾರ್ ಬಲ

ತಲಾ ಅಜಿತ್ ಡೇರ್ ಡೆವಿಲ್‌‌ನಲ್ಲಿ ಬಾದ್‌ಷಾ ಸುದೀಪ್..?

ಡಿಬಾಸ್‌‌ ದಚ್ಚುಗೆ ರಿಲೀಫ್ : ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಲು ಹೈಕೋರ್ಟ್‌ ಗ್ರೀನ್‌ ಸಿಗ್ನಲ್

ADVERTISEMENT
ADVERTISEMENT

ಕನಸು ಕಾಣೋದನ್ನ ದೊಡ್ಡದಾಗೇ ಕಾಣ್ಬೇಕು ಅಂತ ಹೇಳ್ತಿದ್ದ ಯಶ್, ಕನ್ನಡದ ವೇದಿಕೆಗಳು ಹಾಗೂ ಅವಾರ್ಡ್ ಫಂಕ್ಷನ್‌‌ಗಳಲ್ಲಿ ಹೇಳಿದ್ದನ್ನ ಮಾಡಿ ತೋರಿಸಿದ್ದಾರೆ. ಇಟ್ಟ ಗುರಿಯತ್ತ ದಿಟ್ಟವಾಗಿ ಪಯಣ ಬೆಳೆಸುವ ಛಲದಂಕಮಲ್ಲ ಯಶ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ವರ್ಲ್ಡ್ ಕ್ಲಾಸ್ ಸಿನಿಮಾಗಳನ್ನ ಮಾಡೋದು, ಅವುಗಳನ್ನ ಗ್ಲೋಬಲ್ ಲೆವೆಲ್‌‌ನಲ್ಲಿ ಪ್ರಮೋಟ್ ಮಾಡೋದು, ಗ್ಲೋಬಲ್ ಆಡಿಯೆನ್ಸ್‌ಗೆ ನಮ್ಮ ಕಥೆ, ಸಂಸ್ಕೃತಿಯನ್ನ ಪರಿಚಯಿಸೋದು ತಮಾಷೆಯ ಮಾತಲ್ಲ. ಆದ್ರೆ ಯಶ್ ಅದನ್ನ ಸಾಧ್ಯವಾಗಿಸ್ತಿದ್ದಾರೆ.

ಟಾಕ್ಸಿಕ್ ಟ್ರೈಲರ್ ಲಾಂಚ್ ಇವೆಂಟ್‌ಗೆ ಡೇಟ್ ಹಾಗೂ ಟೈಮ್ ಫಿಕ್ಸ್ ಆಗಬೇಕಿದೆ. ಇದೇ ಜುಲೈ 8 ಅಥ್ವಾ 15ನೇ ತಾರೀಖು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಆ ಕಾರ್ಯಕ್ರಮ ನಡೆಯಲಿದೆ. ಆದ್ರೆ ಅದಕ್ಕೂ ಮುನ್ನ ರಾಮಾಯಣ ಚಿತ್ರದ ಟ್ರೈಲರ್ ಲಾಂಚ್ ಫಂಕ್ಷನ್‌ಗೆ ಮುಹೂರ್ತ ಫಿಕ್ಸ್ ಆಗಿತ್ತು. ಜುಲೈ 18ರಂದು ಭಾರತೀಯ ಮಾಧ್ಯಮಗಳೊಂದಿಗೆ ಡೆಲ್ಲಿಯ ಭಾರತ್ ಮಂಟಪದಲ್ಲಿ ಟ್ರೈಲರ್ ಲಾಂಚ್ ಆಗಿತ್ತು. ಅಂದು ಯಶ್, ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಡೈರೆಕ್ಟರ್ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಡೆಲ್ಲಿಯಲ್ಲಿ ತ್ರೀಡಿ ಟ್ರೈಲರ್‌‌ನ ತೋರಿಸಿದರಾದ್ರೂ, ಅದನ್ನ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿರಲಿಲ್ಲ. ಯಾಕಂದ್ರೆ ಜುಲೈ 24ರಂದು ಅಮೆರಿಕಾದ ಸ್ಯಾನ್ ಡಿಯಾಗೋದ ಕಾಮಿಕ್ ಕಾನ್‌‌ನಲ್ಲಿ ಗ್ರ್ಯಾಂಡ್ ಗ್ಲೋಬಲ್ ಲಾಂಚ್ ಮಾಡೋಕೆ ಯೋಜನೆ ರೂಪಿಸಿತ್ತು ಚಿತ್ರತಂಡ. ಅದ್ರಂತೆ ಯಶ್, ರಣ್‌ಬೀರ್, ನಿರ್ದೇಶಕ, ನಿರ್ಮಾಪಕರ ತಂಡ ಅಮೆರಿಕದಲ್ಲಿ ಬೀಡುಬಿಟ್ಟಿದೆ. ಇನ್‌ಫ್ಯಾಕ್ಟ್ ಟ್ರೈಲರ್ ಕೂಡ ಅಲ್ಲಿ ಪ್ರದರ್ಶನಗೊಂಡಿದೆ. ಆದ್ರೆ ಯೂಟ್ಯೂಬ್‌‌ಗೆ ಬಿಡುಗಡೆ ಆಗಿಲ್ಲ. ಇದ್ರಿಂದ ಯಶ್ ಫ್ಯಾನ್ಸ್ ಭಾರೀ ನಿರಾಸೆಗೊಂಡಿದ್ದಾರೆ.

  • ಅಮೆರಿಕನ್ ಮೀಡಿಯಾ ಮುಂದೆ ಹೆಮ್ಮೆಯ ಕನ್ನಡಿಗ
  • ಸರಳ ಭಾಷೆಯಲ್ಲಿ ರಾಮಾಯಣ ವಿವರಿಸಿದ ಯಶ್..!

ಟ್ರೈಲರ್ ಇಲ್ಲದಿದ್ರೆ ಏನಂತೆ..? ರಾಕಿಂಗ್ ಸ್ಟಾರ್ ಯಶ್ ಅಲ್ಲಿ ಕೂಡ ಬೇರೆಯದ್ದೇ ಕಂಟೆಂಟ್‌‌ ನೀಡೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ನಮ್ಮ ಭಾರತೀಯ ಕಥೆಗಳನ್ನ ಗ್ಲೋಬಲ್ ಆಡಿಯೆನ್ಸ್‌ಗೆ ತಲುಪಿಸೋ ನಿಟ್ಟಿನಲ್ಲಿ ಒಂದೊಳ್ಳೆ ಪ್ರಯತ್ನ ಇದಾಗಿದೆ. ಇಡೀ ತಂಡ ಸಾಕಷ್ಟು ಕಷ್ಟ ಪಟ್ಟು ಮಾಡಿದ್ದೀವಿ. ಎಲ್ಲಾ ಪಾತ್ರಗಳು ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಅವುಗಳನ್ನ ಪ್ರೆಸೆಂಟ್ ಮಾಡಿರೋ ಪರಿ ವಿಭಿನ್ನ. ಆ ನಿಟ್ಟಿನಲ್ಲಿ ರಾಮಾಯಣ ಸಿನಿಮಾದ ಕಥೆ ನಮ್ಮ ಕಣ್ಮುಂದೆ ಪ್ರತಿ ದಿನ ನಡೆಯೋ ಅಂತಹ ವಿಚಾರಗಳಿಂದಲೇ ಕೂಡಿದೆ ಅಂತ ಸರಳ ಭಾಷೆಯಲ್ಲಿ ಅಮೆರಿಕನ್ನರಿಗೆ ಅರ್ಥವಾಗುವಂತೆ ನಿಧಾನವಾಗಿ ವಿವರಿಸಿದ್ರು ಯಶ್. ಅಮೆರಿಕಾದ ಮೀಡಿಯಾಗಳ ಜೊತೆ ಯಶ್ ಮಾತುಗಳನ್ನ ಕೇಳೋದೇ ಒಂಥರಾ ಚೆಂದ.

ಯಶ್ ಎಂಟ್ರಿಗೆ ಸಿಕ್ಕಾಪಟ್ಟೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಕೂಡ ಆಗಿದ್ದು ವಿಶೇಷ. ಸುಮಾರು 4800 ಆಸನಗಳಿರೋ ಸ್ಯಾನ್ ಡಿಯಾಗೋನ ಕಾಮಿಕ್ ಕಾನ್‌‌ನ ಬಾಲ್‌ರೂಮ್‌‌ 20ರಲ್ಲಿ ಈ ಭವ್ಯ ಕಾರ್ಯಕ್ರಮ ನೆರವೇರಿತು. ಸುಮಾರು 4 ಸಾವಿರ ಕೋಟಿ ವೆಚ್ಚದಲ್ಲಿ 2 ಭಾಗಗಳಲ್ಲಿ ತಯಾರಾಗಿರೋ ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಒಂದು ಭಾಗ, ಮುಂದಿನ ವರ್ಷದ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ತೆರೆಗಪ್ಪಳಿಸಲಿದೆ. ರಾಮನಾಗಿ ರಣ್‌‌ಬೀರ್, ಸೀತೆಯಾಗಿ ಸಾಯಿಪಲ್ಲವಿ ಹಾಗೂ ರಾವಣನಾಗಿ ಯಶ್ ಅಬ್ಬರಿಸಿದ್ದಾರೆ. ವಿಶೇಷ ಅಂದ್ರೆ ನಮಿತ್ ಮಲ್ಹೋತ್ರಾ ಜೊತೆಗೆ ಯಶ್ ಸಹ ನಿರ್ಮಾಪಕರು ಕೂಡ ಹೌದು.

  • ಸೋನಿ ಪಿಕ್ಚರ್ಸ್ ಎಂಟರ್‌‌ಟೈನ್ಮೆಂಟ್ ಜೊತೆ ಟೈಯಪ್
  • ಗ್ಲೋಬಲ್ ಆಡಿಯೆನ್ಸ್‌ಗೆ ಇದು ಬಹುದೊಡ್ಡ ವೇದಿಕೆ..!!

ನಮಿತ್ ಮಲ್ಹೋತ್ರಾ ರಾಮಾಯಣ ಚಿತ್ರದ ಟ್ರೈಲರ್‌ನ ಪ್ರದರ್ಶನದ ಬಳಿಕ ಅದ್ಯಾಕೆ ಡಿಜಿಟಲಿ ರಿಲೀಸ್ ಮಾಡಲಿಲ್ಲ ಅನ್ನೋದಕ್ಕೆ ಸ್ಪಷ್ಟ ಕಾರಣ ಗೊತ್ತಿಲ್ಲ. ಆದ್ರೆ ಸೋಮನಿ ಪಿಕ್ಚರ್ಸ್ ಎಂಟರ್‌ಟೈನ್ಮೆಂಟ್ ಜೊತೆ ಟೈಯಪ್ ಆಗಿರೋದನ್ನ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ. ಇದು ಸಿನಿಮಾ ಗ್ಲೋಬಲ್ ಆಡಿಯೆನ್ಸ್‌ಗೆ ರೀಚ್ ಆಗೋಕೆ ಬಹುದೊಡ್ಡ ವೇದಿಕೆ ಆಗಲಿದ್ದು, ಇಡೀ ಭಾರತೀಯ ಚಿತ್ರರಂಗ ಖುಷಿ ಪಡುವಂತಾಗಿದೆ.

ಬಹುಶಃ ಟಾಕ್ಸಿಕ್ ಸಿನಿಮಾದ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿರೋದೇ ರಾಮಾಯಣ ಟ್ರೈಲರ್ ಬಿಡುಗಡೆ ಪೋಸ್ಟ್‌ಪೋನ್ ಆಗೋಕೆ ಕಾರಣವಾಯ್ತಾ ಅನ್ನೋ ಮಾತುಗಳು ಕೇಳಿಬರ್ತಿವೆ. ಯಾಕಂದ್ರೆ ಒಂದು ದೊಡ್ಡ ಸಿನಿಮಾ ಬರ್ತಿರುವಾಗ ರಾಮಾಯಣ ಟ್ರೈಲರ್ ಹೊರಬಂದ್ರೆ ಅದು ಬೇರೆ ರೂಪ ಪಡೆಯುತ್ತೆ. ಟಾಕ್ಸಿಕ್‌‌ ಹಾಗೂ ರಾಮಾಯಣ ಚಿತ್ರಗಳ ನಡುವೆ ಜನ ಕನ್ಫ್ಯೂಸ್ ಆಗಬಾರದು ಅನ್ನೋ ವಿಷಯದಿಂದಲೂ ಮುಂದೂಡಿರೋ ಸಾಧ್ಯತೆಗಳಿವೆ ಅಂತಿದ್ದಾರೆ ಸಿನಿ ಪಂಡಿತರು.

ಒಟ್ಟಾರೆ ನಮ್ಮ ಕನ್ನಡಿಗನೊಬ್ಬ ಇಂದು ಹಾಲಿವುಡ್ ಚಿತ್ರರಂಗಕ್ಕೆ ಸ್ಪರ್ಧೆಯೊಡ್ಡುವಂತಹ ಹಾಗೂ ಸಲಾಲೊಡ್ಡುವಂತಹ ಚಿತ್ರಗಳನ್ನ ಮಾಡಿ, ಅವುಗಳನ್ನ ಅವ್ರ ಮುಂದೆಯೇ ಕೊಂಡೊಯ್ದು, ಪ್ರಮೋಷನ್ಸ್ ಮಾಡ್ತಿರೋದು ಹೆಮ್ಮೆಯ ವಿಷಯ. ರಾಮಾಯಣ ಹಾಗೂ ಟಾಕ್ಸಿಕ್ ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌‌ನಲ್ಲಿ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡಲಿ, ಗ್ಲೋಬಲಿ ಸೌಂಡ್ ಮಾಡಲಿ ಅನ್ನೋದಷ್ಟೇ ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 19T192255.811

ರಾಯಚೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ; ಅಮ್ಮನ ಎದೆ ಮೇಲೆ ಮಲಗಿದ್ದ 2 ವರ್ಷದ ಕಂದಮ್ಮ

by ಶಾಲಿನಿ ಕೆ. ಡಿ
September 19, 2026 - 7:23 pm
0

Untitled design 2026 09 19T181256.745

ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಬದ್ಧ: ಡಿಸಿಎಂ ಡಾ.ಜಿ. ಪರಮೇಶ್ವರ

by ಶಾಲಿನಿ ಕೆ. ಡಿ
September 19, 2026 - 6:13 pm
0

Untitled design 2026 09 19T175841.845

ಹಾಲಿವುಡ್‌ನತ್ತ ‘ಮಹಾರಾಜ’ ಸೇತುಪತಿ ದಂಡಯಾತ್ರೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 19, 2026 - 5:59 pm
0

Untitled design 2026 09 19T174416.837

ನಕಲಿ ದಾಖಲೆ ನೀಡಿ ಭಾರತೀಯ ನೌಕಾ ಅಕಾಡೆಮಿಯಲ್ಲಿ ಕೆಲಸ ಮಾಡ್ತಿದ್ದ ಬಾಂಗ್ಲಾ ಪ್ರಜೆ ಬಂಧನ

by ಶಾಲಿನಿ ಕೆ. ಡಿ
September 19, 2026 - 5:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 19T175841.845
    ಹಾಲಿವುಡ್‌ನತ್ತ ‘ಮಹಾರಾಜ’ ಸೇತುಪತಿ ದಂಡಯಾತ್ರೆ
    September 19, 2026 | 0
  • ಸಿಟಿಲೈಟ್ಸ್..ಹ್ಯಾಟ್ರಿಕ್ ಡೈರೆಕ್ಟರ್ ಗೆ
    ಸಿಟಿಲೈಟ್ಸ್..ಹ್ಯಾಟ್ರಿಕ್ ಡೈರೆಕ್ಟರ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌‌ಕುಮಾರ್ ಬಲ
    September 19, 2026 | 0
  • Untitled design 2026 09 19T160342.421
    ತಲಾ ಅಜಿತ್ ಡೇರ್ ಡೆವಿಲ್‌‌ನಲ್ಲಿ ಬಾದ್‌ಷಾ ಸುದೀಪ್..?
    September 19, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (34)
    ಡಿಬಾಸ್‌‌ ದಚ್ಚುಗೆ ರಿಲೀಫ್ : ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಲು ಹೈಕೋರ್ಟ್‌ ಗ್ರೀನ್‌ ಸಿಗ್ನಲ್
    September 19, 2026 | 0
  • WhatsApp Image 2026 09 17 at 8.18.27 AM
    ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ
    September 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version