ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಕಳೆದ 10 ವರ್ಷಗಳಿಂದ ಕುಚಿಕು ಗೆಳೆಯರಾಗಿದ್ದು, ಇವರ ಮಧ್ಯೆ ಒಂದೇ ಒಂದು ರೀಲ್ಸ್ ರಾದ್ಧಾಂತವೇ ಸೃಷ್ಟಿಸಿದೆ. ಇವರಿಬ್ಬರ ಸ್ನೇಹಕ್ಕೆ ಈಗ ತುಕ್ಕು ಹಿಡಿದಿದ್ದು, ಈಗ ಬೇರೆ, ಬೇರೆಯಾಗಿದ್ದಾರೆ. ವಿನಯ್ ಗೌಡ ಅವರ ಮೇಲೆ ರಜತ್ ಬುಜ್ಜಿ ಇವತ್ತು ತಮ್ಮ ಬೇಸರವನ್ನು ಬಹಿರಂಗವಾಗಿ ಹೊರ ಹಾಕಿದ್ದಾರೆ.
ಬಾಯ್ಸ್ ಆ್ಯಂಡ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಒಂದು ಭಾಗವಾಗಿ ನಾವು ಡ್ರೆಸ್ ಹಾಕಿಕೊಂಡಿದ್ವಿ. ಆಗ ಒಂದು ರೀಲ್ಸ್ ಮಾಡಬೇಕು ಅಂದುಕೊಂಡು ಮಾಡಿದ್ದೇವೆ. ಆದ್ರೆ, ಅದು ಇಷ್ಟೊಂದು ದೊಡ್ಡದಾಗಿ ಕೇಸ್ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಈಗ ವಿನಯ್ ಅದನ್ನು ನನ್ನ ಮೇಲೆ ತಿರುಗಿಸಿದ್ದು ಚೆನ್ನಾಗಿ ಕಾಣಿಸ್ತಿಲ್ಲ ಅಂತ ರಜತ್ ಹೇಳಿದ್ದಾರೆ.
ರಿಯಾಲಿಟಿ ಶೋನಲ್ಲಿ ಮಚ್ಚನ್ನು ಬಳಸಿದ್ವಿ, ಅದೇ ಫೈಬರ್ ಮಚ್ಚಿನಲ್ಲಿ ನಾವು ರೀಲ್ಸ್ ಮಾಡಿದ್ದೇವೆ. ಬಳಿಕ ಆ ಮಚ್ಚು ನನ್ನ ಕಾರಿನಲ್ಲಿತ್ತು. ಅದು ಕಾರಿನಲ್ಲಿ ಇರೋದು ಬೇಡ ಅಂತ ನಾನೇ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಎಸೆದಿದ್ದೆ ಎಂದು ರಜತ್ ಒಪ್ಪಿಕೊಂಡಿದ್ದಾರೆ. ಹೌದು ನನ್ನ ಹಾಗೂ ವಿನಯ್ ಗೌಡ ಮಧ್ಯೆ ಈಗ ಮನಸ್ತಾಪ ಆಗಿದೆ. ನಾನು ಯಾವತ್ತೂ ಅವನನ್ನು ಬಿಟ್ಟು ಕೊಟ್ಟಿಲ್ಲ. ಬಿಟ್ಟು ಕೊಡೋದು ಇಲ್ಲ. ಆದ್ರೆ ಅವನಿಗೆ ಅರ್ಥ ಆಗಬೇಕಿತ್ತು. ವಿನಯ್ ತುಂಬಾ ಒಳ್ಳೆಯವನು ಎಂದು ರಜತ್ ಹೇಳಿದ್ದಾರೆ.
ರಜತ್ ಹೇಳಿದ್ದೇನು?
ವಿನಯ್ ನನಗಿಂತ 10 ವರ್ಷ ದೊಡ್ಡವನು. ದೊಡ್ಡವರಿಗೆ ಚೆನ್ನಾಗಿ ಗೊತ್ತಿರುತ್ತೆ ಏನು ಮಾತಾಡಬೇಕು. ಏನು ಮಾತಾಡಬಾರದು ಅಂತ. ನಮ್ಮ ಅಣ್ಣ ತಾನೇ ಮಾತನಾಡಲಿ ಬಿಡಿ. ಆಮೇಲೆ ರೀಲ್ಸ್ ಮಾಡಲೇಬೇಕು ಅನ್ನೋ ಅವಶ್ಯಕತೆ ನನಗಿಲ್ಲ. ವಿನಯ್ ಜೊತೆ ರೀಲ್ಸ್ ಮಾಡೋಕೆ ಇಲ್ಲಿ ಯಾರು ಕಾಯಿಕೊಂಡು ಕೂತಿಲ್ಲ. ಅವನ ಪಾಡಿಗೆ ಅವನು ನೆಮ್ಮದಿಯಾಗಿ ಇರಲಿ. ನನ್ನ ಪಾಡಿಗೆ ನಾನು ಇರ್ತೀನಿ.
ಸೋಷಿಯಲ್ ಮೀಡಿಯಾದಲ್ಲಿ ವಿನಯ್‌ಗೆ ರಜತ್ ಅವರ ಸಹವಾಸ ಬಿಟ್ಟು ಬಿಡಿ ಅನ್ನೋ ಕಾಮೆಂಟ್‌ಗಳನ್ನ ಹಾಕುತ್ತಾರೆ. ಆ ಕಾಮೆಂಟ್‌ಗಳಿಗೆ ವಿನಯ್ ಅವರು ಲೈಕ್ ಮಾಡಿದ್ದಾರೆ. ಅದು ನನಗೆ ತುಂಬಾ ನೋವಾಗುವಂತೆ ಮಾಡಿದೆ. ಆ ರೀತಿಯ ಕಾಮೆಂಟ್‌ಗಳಿಗೆ ವಿನಯ್ ಪ್ರೋತ್ಸಾಹ ಕೊಡಬಾರದಿತ್ತು.
ಯಾಕಂದ್ರೆ ನಂದು, ವಿನಯ್‌ದು 10-11 ವರ್ಷದ ಸ್ನೇಹ. ನನ್ನ ಬಗ್ಗೆ ವಿನಯ್‌ಗೆ ಚೆನ್ನಾಗಿ ಗೊತ್ತು. ವಿನಯ್ ಬಗ್ಗೆ ನನಗೂ ಚೆನ್ನಾಗಿ ಗೊತ್ತಿದೆ. ನಾನು ವಿನಯ್‌ನ ಕರೆದುಕೊಂಡು ಹೋಗಿ ಕೊಲೆ, ದರೋಡೆ ಮಾಡಿಸಿಲ್ಲ.
ಒಂದು ರೀಲ್ಸ್ ಮಾಡಿದ್ದೇವೆ ಅಷ್ಟೇ. ನಾನು ಹೆದರಿಸಿ, ಬೆದರಿಸಿ ರೀಲ್ಸ್ ಮಾಡಿಸಿಲ್ಲ. ವಿನಯ್ ಕೂಡ ಚಿಕ್ಕ ಹುಡುಗ ಅಲ್ಲ. ಹೆದರಿಸಿ, ಬೆದರಿಸಿ ರೀಲ್ಸ್ ಮಾಡೋಕೆ ಆಗಲ್ಲ. ಇದರಿಂದ ಇಷ್ಟು ದೊಡ್ಡ ಇಶ್ಯೂ ಆಗುತ್ತೆ ಅನ್ನೋದು ನಮಗೂ ಗೊತ್ತಿರಲಿಲ್ಲ. ಈ ರೀಲ್ಸ್‌ನಲ್ಲಿ ನಮ್ಮ ಫ್ರೆಂಡ್‌ಶಿಪ್‌ನ ಬಿಟ್ಟು ಕೊಡಬಾರದಿತ್ತು.
ರೀಲ್ಸ್ ಮಾಡಿದ ಮೇಲೂ ವಿನಯ್ ನನ್ನ ಜೊತೆ ಮಾತನಾಡುತ್ತಾ ಇದ್ದ. ರಾತ್ರಿ ಹೊತ್ತು ಕಾಲ್ ಮಾಡಿ ತುಂಬಾ ವಿಚಾರಗಳನ್ನು ಮಾತನಾಡುತ್ತಾ ಇದ್ದ. ನನಗೆ ಈ ವಿಚಾರ ಎಲ್ಲಾ ಕಿವಿಗೆ ಬಿದ್ದಾಗ ನಾನೇ ಕೇಳಿದ್ದೇನೆ. ನೀನು ಈ ರೀತಿ ಮಾಡಬಾರದಿತ್ತು ಅಂದಾಗ ವಿನಯ್ ಮಾತನಾಡುವುದನ್ನ ನಿಲ್ಲಿಸಿದ್ದಾನೆ ಎಂದು ರಜತ್ ಸ್ಪಷ್ಟಪಡಿಸಿದ್ದಾರೆ.





