ಬಿಗ್ ಬಾಸ್ ನ ಮಾಜಿ ಸ್ಪರ್ಧಿ ವಿನಯ್ ಗೌಡ ಮತ್ತು ರಜತ್ ಇತ್ತೀಚೆಗೆ ಮಚ್ಚು ಹಿಡಿದು ಮಾಡಿದ ರೀಲ್ಸ್ ವಿಡಿಯೋ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರಿಂದ ರಜತ್ ಮತ್ತು ವಿನಯ್‌ಗೌಡ ಅವರ ಮೇಲೆ ಕೇಸ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಜೈಲಿನಿಂದ ಹೊರಬಂದ ವಿನಯ್‌ಗೌಡ, ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ್ದು ಒಂದು ಮಚ್ಚಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ವಿನಯ್ ಗೌಡ ತಮ್ಮ ರೀಲ್ಸ್ ವೀಡಿಯೋಗೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸಿದ್ದು, ಅದರ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜೈಲಿನಿಂದ ಹೊರಬರೋಕೆ ನಟ ಸುದೀಪ್ ಅವರು ಸಹಾಯ ಮಾಡಿದ್ದಾರೆ ಎಂದು ಹೇಳಿದ್ದು, ನಾನು ಡಿ ಗ್ಯಾಂಗ್ ಅಲ್ಲ.. ಸುದೀಪ್ ಅಭಿಮಾನಿ ಎಂದಿದ್ದಾರೆ.
ವಿನಯ್ ಅವರು “ಡೆವಿಲ್” ಮತ್ತು “ಬಿಲ್ಲ ರಂಗ ಭಾಷ” ಸಿನಿಮಾಗಳಲ್ಲಿ ನಟಿಸುತ್ತಿದ್ದು, “ಡೆವಿಲ್” ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವರೊಂದಿಗೆ ಫೈಟ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. “ಬಿಲ್ಲ ರಂಗ ಭಾಷ” ಚಿತ್ರದ ಶೂಟಿಂಗ್ ಜೂನ್‌ನಲ್ಲಿ ಪ್ರಾರಂಭವಾಗಲಿದೆ. ಇದರ ಜೊತೆಗೆ, “ಕೋಣ” ಮತ್ತು “ಫ್ಲರ್ಟ್” ಚಿತ್ರಗಳಲ್ಲೂ ಅವರು ನಟಿಸುತ್ತಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ರಜತ್, ವಿನಯ್‌ಗೌಡ ಮಾಡಿದ ರೀಲ್ಸ್ ವೀಡಿಯೊಗಳು ವಿವಾದಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ಮಾತನಾಡಿದ್ದು “ಇನ್ನು ಮುಂದೆ ರಜತ್ ಜೊತೆ ರೀಲ್ಸ್ ಮಾಡುವುದಿಲ್ಲ. ಸ್ನೇಹ ಬೇಕು, ಆದರೆ ಜವಾಬ್ದಾರಿ ಹಂಚಿಕೊಳ್ಳಲು ಸಿದ್ಧನಿಲ್ಲ” ಎಂದು ತಿಳಿಸಿದ್ದಾರೆ. ರಜತ್ ಯಾಕೆ ಕ್ಷಮೆ ಕೇಳಿಲ್ಲ ಅಂತ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ನಾನು ಜೈಲಿಗೆ ಹೋಗಿದ್ದು ನನ್ನ ಕರಿಯರ್ ಗೆ ಪ್ಲಸ್ ಪಾಯಿಂಟ್ ಆಗ್ತಿದೆ. ಈಗ ನನಗೆ ಮತ್ತಷ್ಟು ಸಿನಿಮಾ ಆಫರ್ ಗಳು ಹುಡುಕಿ ಬರ್ತಿವೆ ಎಂದರು. ನಂತರ ಟೈಸನ್ ಬಲರಾಮನ ದಿನಗಳು ಚಿತ್ರದ ಬಗ್ಗೆ ಮಾತನಾಡಿದ ಅವರು, ಚಂದನ್ ನಿರ್ದೇಶನದ ಫ್ಲರ್ಟ್ ಚಿತ್ರ ಹಾಗೂ ಕೋಣ ಚಿತ್ರದಲ್ಲೂ ವಿನಯ್ ಗೌಡ ನಟಿಸುತ್ತಿದ್ದು, ಪರಭಾಷೆಗಳಿಂದ ಡಿಮ್ಯಾಂಡ್ ಹೆಚ್ಚಾಗುವ ಸಾಧ್ಯತೆ ಇದ್ದು, ಸದ್ಯದಲ್ಲೇ ನ್ಯೂಸ್ ಬರಲಿದೆ ಎಂದಿದ್ದಾರೆ. ಹಾಗೆಯೇ ಜೈಲಿಂದ ಬಂದ್ಮೇಲೆ ಧ್ರುವ ಸರ್ಜಾ ಅವರು ಕೂಡ ಕರೆ ಮಾಡಿದ್ರು ಎಂದು ವಿನಯ್ ಗೌಡ ಗ್ಯಾರಂಟಿ ನ್ಯೂಸ್ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.





