• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಅಪಾರ್ಥ ಮಾಡ್ಕೋಬೇಡಿ’ ಎಂದು ರಂಜಿಸಿದ್ದ ನಟ ಉಮೇಶ್ ಇನ್ನು ನೆನಪು ಮಾತ್ರ.!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 30, 2025 - 6:44 pm
in ಸಿನಿಮಾ
0 0
0
Untitled design 2025 11 30T184257.823

ನೀವೇನೂ ಬೇಜಾರ್‌ ಮಾಡ್ಕೊಂಡಿಲ್ಲ ಅಂದ್ರೆ…?, ಅಯ್ಯಯ್ಯೋ ಅಪಾರ್ಥ ಮಾಡ್ಕೋಂಡ್‌ ಬಿಟ್ರೋ ಏನೋ?, ಅಪಾರ್ಥ ಮಾಡ್ಕೋಬೇಡಿ… ಈ ಸಾಲುಗಳನ್ನು ಕೇಳಿದಾಕ್ಷಣ ನೆನಪಾಗೋದೇ ಕನ್ನಡ ನಟ ಎಂ.ಎಸ್‌.ಉಮೇಶ್‌. ವಿಭಿನ್ನ ಹಾವಭಾವ, ಹಾಸ್ಯಭರಿತ ಸಂಭಾಷಣೆಗಳ ಮೂಲಕ ಚಿರಪರಿಚಿತರಾಗಿದ್ದ ಎಂ.ಎಸ್‌.ಉಮೇಶ್‌ ಇಹಲೋಕ ತ್ಯಜಿಸಿದ್ದಾರೆ. ಉಮೇಶ್ ಕೊನೆ ದಿನಗಳು ಹೇಗಿದ್ದವು?ಆರೋಗ್ಯ ನಿರ್ಲಕ್ಷೆ ಮಾಡಿದ್ಯಾಕೆ..?ಅವರ 6 ದಶಕಗಳ ಸಿನಿಜರ್ನಿ ಇಲ್ಲಿದೆ ನೋಡಿ.

  • ಲಿವರ್ ಕ್ಯಾನ್ಸರ್ ನಿಂದ ಹಿರಿಯ ನಟ ಉಮೇಶ್ ನಿಧನ
  • 4ನೇ ಹಂತದ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ನಟ..!
  • ನಿಧನಕ್ಕೂ ಮುನ್ನ ಹೇಗಿತ್ತು ಉಮೇಶ್ ಪರಿಸ್ಥಿತಿ..?

ಸ್ಯಾಂಡಲ್​ವುಡ್ ಹಿರಿಯ ನಟ ಎಂ.ಎಸ್. ಉಮೇಶ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 80 ವರ್ಷ ವಯಸ್ಸಿನ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ. ಸುಮಾರು 359ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಎಂ.ಎಸ್. ಉಮೇಶ್ ಅವರು ಜನಪ್ರಿಯತೆ ಪಡೆದಿದ್ದರು. ಉಮೇಶ್​ 4ನೇ ಹಂತದ ಲಿವರ್ ಕ್ಯಾನ್ಸರ್ ವಿರುದ್ಧ ಓರಾಡುತ್ತಿದ್ದರು. ಕಳೆದ ತಿಂಗಳು ಮನೆಯಲ್ಲಿ ಕಾಲು ಜಾರಿ ಬಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಎಂಆರ್​ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಲಿವರ್​ನಲ್ಲಿ ದೊಡ್ಡ ಗಾತ್ರದ ಗಡ್ಡೆ ಇರುವುದು ಪತ್ತೆಯಾಗಿತ್ತು. ಲಿವರ್ ಕ್ಯಾನ್ಸರ್ ಆಗಿ ಅದು ಬೇರೆ ಬೇರೆ ಅಂಗಗಳಿಗೆ ಹರಡಿದೆ ಎಂಬುದು ತಿಳಿದುಬಂದಿತ್ತು. ಆದ್ರೆ ಚಿಕಿತ್ಸೆ ಫಲಕಾರಿ ಆಗದೇ  ನಿಧನರಾಗಿದ್ದಾರೆ.

RelatedPosts

ಯಶ್‌ಗೆ ತೃಪ್ತಿ ದಿಮ್ರಿ ನಾಯಕಿ..ನರ್ತನ್ ಶಾಕಿಂಗ್ ಸ್ಟೇಟ್ಮೆಂಟ್

ಶ್ರದ್ಧಾಗೆ ಸಂಕಷ್ಟ.. ವಿಘ್ನ ತಂದಿಟ್ಟ ಈಥಾ ಚಿತ್ರದ ಟೈಟಲ್

ವಿಜಯಂ ಸಿನಿಮಾ ಮೂಲಕ ಮತ್ತೆ ಒಂದಾದ ಪ್ರೇಮಂ ಹೀರೋ-ಡೈರೆಕ್ಟರ್

ಶರ್ಮಿಳಾ-ಸುಧನ್ ಎಂಗೇಜ್: ಸೇತುವೆಯಾದ ಸಂಯುಕ್ತಾ

ADVERTISEMENT
ADVERTISEMENT

ಇನ್ನು ಉಮೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅನೇಕ ಕಲಾವಿದರು ಹೋಗಿ ಮಾತನಾಡಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಮೈಸೂರಿನಲ್ಲಿ  ಜನಿಸಿದ ಉಮೇಶ್ 1945 ರ ಏಪ್ರಿಲ್ 24 ರಂದು ಎ.ಎಲ್. ಶ್ರೀಕಂಠಯ್ಯ ಮತ್ತು ನಂಜಮ್ಮ ದಂಪತಿ ಮಗನಾಗಿ ಹುಟ್ಟಿ ಬೆಳೆದು ರಂಗಭೂಮಿ ಸೆಳೆತಕ್ಕೆ ಒಳಗಾಗಿದ್ದರು. 4 ನೇ ವಯಸ್ಸಿನಲ್ಲಿ ಕೆ. ಹಿರಣ್ಣಯ್ಯ ನಡೆಸುತ್ತಿದ್ದ ಜನಪ್ರಿಯ ರಂಗಭೂಮಿ ತಂಡ ಸೇರಿ ಬಾಲ ಕಲಾವಿದರ ಪಾತ್ರಗಳಲ್ಲಿ ನಟಿಸಿದ್ದರು. ಬಳಿಕ ಗುಬ್ಬಿ ವೀರಣ್ಣ ಅವರ ಕಂಪನಿ ಸೇರಿದ ಮೇಲೆ ಸಿನಿಮಾ ಅವಕಾಶಗಳು ಬರಲು ಆರಂಭವಾಗಿತ್ತು. ಅದೇ ಸಮಯದಲ್ಲಿ ಬಿ. ಆರ್ ಪಂತುಲು ಅವರ ‘ಮಕ್ಕಳರಾಜ್ಯ’ ಚಿತ್ರದ ಅವಕಾಶ ಸಿಕ್ಕಿತ್ತು.

ಅದಾದ ಬಳಿಕ 1976ರಲ್ಲಿ ತೆರೆಕಂಡ ಮೂರು ಕಥೆಗಳನ್ನೊಳಗೊಂಡ ಕಥಾಸಂಗಮ ಸಿನಿಮಾದಲ್ಲಿ ಮುನಿತಾಯಿ ಎನ್ನುವ ಕಥೆಯಲ್ಲಿ ಉಮೇಶ್ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದರು.ಅನುಪಮಾ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ, ಮೇಘ ಮಂದಾರ, ಆಕಸ್ಮಿಕ, ಸರ್ವರ್ ಸೋಮಣ್ಣ, ಮೇಘಮಾಲೆ, ನನ್ನಾಸೆಯ ಹೂವೆ, ಜಾಕಿ, ರ್‍ಯಾಂಬೊ, ಮುಸ್ಸಂಜೆ ಮಾತು, ಗೋಲ್‌ಮಾಲ್‌ ರಾಧಾಕೃಷ್ಣ, ಡೇರ್ ಡೆವಿಲ್ ಮುಸ್ತಫಾ, ಹಗಲುವೇಷ ಸೇರಿದಂತೆ ಇತ್ತೀಚಿನ ಸಿನಿಮಾಗಳಲ್ಲೂ ಉಮೇಶ್‌ ನಟಿಸಿದ್ದಾರೆ.

  • ಮಕ್ಕಳರಾಜ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ..!
  • ‘ಅಪಾರ್ಥ ಮಾಡ್ಕೋಬೇಡಿ’ ಎನ್ನುತ್ತಾ ರಂಜಿಸಿದ್ದ ಉಮೇಶ್
  • ಗೋಲ್ಮಾಲ್‌ ರಾಧಾಕೃಷ್ಣ ಚಿತ್ರದ ಸೀತಾಪತಿ ಇನ್ನು ನೆನಪು ಮಾತ್ರ..!
  • ಉಮೇಶ್​ ಅಗಲಿಕೆಗೆ ಕಂಬನಿ ಮಿಡಿದ ಚಿತ್ರರಂಗದ ಗಣ್ಯರು

350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಉಮೇಶ್‌ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು. ರಮೇಶ್‌ ಅರವಿಂದ ನಟನೆಯ ‘ವೆಂಕಟ ಇನ್ ಸಂಕಟ’ ಸಿನಿಮಾದಲ್ಲಿ ಹಳೆಯ ಕಾಲದ ಅಜ್ಜಿಯ ಪಾತ್ರದ ಮೂಲಕ ಉಮೇಶ್‌ ಪ್ರೇಕ್ಷಕರನ್ನು ರಂಜಿಸಿದ್ದರು. ಹಾಸ್ಯ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ರು. ಉಮೇಶ್‌ 60 ವರ್ಷಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದಾರೆ ಅಂದ್ರೆ ನಿಜಕ್ಕೂ ರೋಚಕ ಜರ್ನಿ

ಅಂದಹಾಗೆ ಉಮೇಶ್ ಸಾವಿನ ಸುದ್ದಿ ಕೇಳುತಿದ್ದಂತೆ ಸಿನಿಮಾ ರಂಗದ ಕಲಾವಿದರು ಉಮೇಶ್ ಅಂತಿಮ ದರ್ಶನಕ್ಕೆ ಆಗಮಿಸಿದ್ರು. ರವೀಂದ್ರ ಕಲಾಕ್ಷೇತ್ರದಲ್ಲಿ ಉಮೇಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಅಭಿಮಾನಿಗಳು, ಆಪ್ತರು ಮತ್ತು ಚಿತ್ರರಂಗದವರು ಬಂದು ಅಂತಿಮ ದರ್ಶನ ಪಡೆದರು. ಇದೆ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಹಿರಿಯ ನಟಿ ಶೃತಿ, ಸುಂದರ್ ರಾಜ್, ಸಾರಾ ಗೋವಿಂದ್, ನಟ ರಾಜವರ್ಧನ್, ಕರಿಸುಬ್ಬು ಸೇರಿದಂತೆ ಹಲವರು ಆಗಮಿಸಿ ಉಮೇಶ್ ಅವರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಇನ್ನು ದ್ವಾರಕೀಶ್ ನಿರ್ಮಿಸಿ, ನಟಿಸಿದ್ದ ‘ಗುರು ಶಿಷ್ಯರು’ ಚಿತ್ರದಲ್ಲಿ ಖ್ಯಾತ ಹಾಸ್ಯನಟರ ದಂಡೇ ಇತ್ತು. ರಾಜಗುರು ಪೂರ್ಣಾನಂದಯ್ಯ ಶಿಷ್ಯರ ಗುಂಪಿನಲ್ಲಿ ಉಮೇಶ್ ಕೂಡ ಒಬ್ಬರಾಗಿದ್ದರು. ಸೋಮೇಶ್ವರ ಪಾತ್ರದಲ್ಲಿ ನಟಿಸಿ ಕಮಾಲ್ ಮಾಡಿದ್ದರು. ಈ ಚಿತ್ರದ ಎಲ್ಲಾ ಸನ್ನಿವೇಶಗಳು ಸೂಪರ್. ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಉಮೇಶ್  ಅಭಿನಯಿಸಿದ್ದ ‘ಕಮಲ್ ಶ್ರೀದೇವಿ’, ‘ಐ ಆ್ಯಮ್ ಗಾಡ್’ ಸಿನಿಮಾಗಳು ಇತ್ತೀಚೆಗೆ ಬಿಡುಗಡೆ ಆಗಿದ್ದವು. ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು.

ಒಟ್ನಲ್ಲಿ ಉಮೇಶ್​ ಅವರ ಅಗಲಿಗೆ ಕನ್ನಡ ಚಿತ್ರರಂಗದ ಪಾಲಿಗೆ ತುಂಬಲಾರದ ನಷ್ಟವಾಗಿದೆ. ಬನಶಂಕರಿ ಚಿತಾಗಾರದಲ್ಲಿ ಉಮೇಶ್ ಅಂತ್ಯಕ್ರಿಯೆ ನೆರವೇರಿದೆ. ಉಮೇಶ್​ ನಿಧನದಿಂದ ಅವರ ಕುಟುಂಬಕ್ಕೆ ಆಘಾತ ಆಗಿದೆ. ಮುಂದೆ ನಮ್ಮ ಜೀವನ ಹೇಗೆ ಅಂತ ನಾನು ಮತ್ತು ನನ್ನ ಮಗಳು ಯೋಚನೆ ಮಾಡುತ್ತಿದ್ದೇವೆ ಅಂತ ಉಮೇಶ್​ ಪತ್ನಿ ಕಣ್ಣೀರಾಕ್ಕಿದ್ದಾರೆ

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್.

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಸಿ (8)

ಯಶ್‌ಗೆ ತೃಪ್ತಿ ದಿಮ್ರಿ ನಾಯಕಿ..ನರ್ತನ್ ಶಾಕಿಂಗ್ ಸ್ಟೇಟ್ಮೆಂಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 30, 2026 - 1:46 pm
0

ಸಿ (6)

ಅಡ್ಡ ಮತದಾನ ಮಾಡಿಲ್ಲ, ಪಕ್ಷಕ್ಕೆ ದ್ರೋಹ ಬಗೆದಿಲ್ಲ: ಆಣೆ ಪ್ರಮಾಣ ಮಾಡಿದ BJP ಶಾಸಕ H.K ಸುರೇಶ್

by ಶಾಲಿನಿ ಕೆ. ಡಿ
June 30, 2026 - 1:16 pm
0

ಸಿ (5)

ವಿಧಾನಸೌಧದ ಮುಂದೆ ನೇಪಾಳಿಗರ ಪುಂಡಾಟ: ಎರಡು ಗುಂಪುಗಳ ನಡುವೆ ಹೊಡೆದಾಟ

by ಶಾಲಿನಿ ಕೆ. ಡಿ
June 30, 2026 - 12:22 pm
0

ಸಿ (3)

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆ ಭಾರೀ ಇಳಿಕೆ, ಬೆಳ್ಳಿ ದರವೂ ಕುಸಿತ

by ಶಾಲಿನಿ ಕೆ. ಡಿ
June 30, 2026 - 12:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸಿ (8)
    ಯಶ್‌ಗೆ ತೃಪ್ತಿ ದಿಮ್ರಿ ನಾಯಕಿ..ನರ್ತನ್ ಶಾಕಿಂಗ್ ಸ್ಟೇಟ್ಮೆಂಟ್
    June 30, 2026 | 0
  • Untitled design 2026 06 29T230855.874
    ಶ್ರದ್ಧಾಗೆ ಸಂಕಷ್ಟ.. ವಿಘ್ನ ತಂದಿಟ್ಟ ಈಥಾ ಚಿತ್ರದ ಟೈಟಲ್
    June 29, 2026 | 0
  • Untitled design 2026 06 29T213205.814
    ವಿಜಯಂ ಸಿನಿಮಾ ಮೂಲಕ ಮತ್ತೆ ಒಂದಾದ ಪ್ರೇಮಂ ಹೀರೋ-ಡೈರೆಕ್ಟರ್
    June 29, 2026 | 0
  • Untitled design 2026 06 29T193314.897
    ಶರ್ಮಿಳಾ-ಸುಧನ್ ಎಂಗೇಜ್: ಸೇತುವೆಯಾದ ಸಂಯುಕ್ತಾ
    June 29, 2026 | 0
  • Untitled design 2026 06 29T181428.860
    3 ದಿನದಲ್ಲೇ 93 ಕೋಟಿ ರೂ. ಕಲೆಕ್ಷನ್ ಮಾಡಿದ ‘ವೆಲ್ಕಮ್ ಟು ದಿ ಜಂಗಲ್’
    June 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version