• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕೊನೆಗೂ ರಿವೀಲ್ ಆಯ್ತು ರಾಜಮೌಳಿ ‘ವಾರಣಾಸಿ’ ವರ್ಲ್ಡ್‌

3 ಗಂಟೆ ಸಿನಿಮಾ.. 25 ನಿಮಿಷ ರಾಮಾಯಣ.. ನೋ ಸೀಕ್ವೆಲ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 5, 2026 - 2:37 pm
in ಸಿನಿಮಾ
0 0
0
ಸುಜಯೇಂದ್ರ (7)

ಬಾಹುಬಲಿ ಹಾಗೂ ತ್ರಿಬಲ್‌ ಆರ್ ಬಳಿಕ ರಾಜಮೌಳಿ ಕರಿಯರ್‌‌ನಲ್ಲೇ ಬಿಗ್ಗೆಸ್ಟ್ ಆ್ಯಂಡ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಅಂದ್ರೆ ಅದು ವಾರಣಾಸಿ. ಗ್ಲೋಬಲ್ ಮೂವಿಗೆ ಕೈ ಹಾಕಿರೋ ಮೌಳಿ, ಟೈಟಲ್ ಅನೌನ್ಸ್‌‌ಮೆಂಟ್ ಟೀಸರ್‌ನಿಂದ ಗ್ಲೋಬಲ್ ಮೂವಿಯ ಹಿಂಟ್ ನೀಡಿದ್ರು. ಆದ್ರೀಗ ಇನ್ನೂ ಮುಂದಿನ ವರ್ಷ ರಿಲೀಸ್ ಆಗಲಿರೋ ವಾರಣಾಸಿ ಚಿತ್ರದ ಸೀಕ್ರೆಟ್ಸ್‌‌ನ ಎಕ್ಸ್‌‌ಕ್ಲೂಸಿವ್ ಆಗಿ ತೆರೆದಿಟ್ಟಿದೆ ಟೀಂ. ರುದ್ರ ಮಹೇಶ್ ಬಾಬು, ಕುಂಭ ಪೃಥ್ವಿರಾಜ್, ಮಂದಾಕಿನಿ ಪ್ರಿಯಾಂಕಾ ಚೋಪ್ರಾ ಜೊತೆ ಕ್ಯಾಪ್ಟನ್ ರಾಜಮೌಳಿ ಏನೆಲ್ಲಾ ಹೈಲೈಟ್ಸ್ ಬಿಟ್ಟುಕೊಟ್ಟಿದ್ದಾರೆ ಎಂಬುದರ ಡಿಟೈಲ್ಸ್‌ ಇಲ್ಲಿದೆ..

  • ಕೊನೆಗೂ ರಿವೀಲ್ ಆಯ್ತು ರಾಜಮೌಳಿ ‘ವಾರಣಾಸಿ’ ವರ್ಲ್ಡ್‌
  • 3 ಗಂಟೆ ಸಿನಿಮಾ.. 25 ನಿಮಿಷ ರಾಮಾಯಣ.. ನೋ ಸೀಕ್ವೆಲ್

ಇದು ಕಳೆದ ವರ್ಷ ನವೆಂಬರ್ 15ರಂದು ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಲಾಂಚ್ ಆದಂತಹ ವಾರಣಾಸಿ ಚಿತ್ರದ ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಝಲಕ್. ಇಂಡಿಯನ್ ಸ್ಪೀಲ್‌‌ಬರ್ಗ್ ಅಂತಲೇ ಕರೆಯಲ್ಪಡುವ ಮಹಾನ್ ಮಾಂತ್ರಿಕ ರಾಜಮೌಳಿ ಬತ್ತಳಿಕೆಯಿಂದ ಬರ್ತಿರೋ ಸಿನಿಮಾ ಇದಾಗಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್, ಹಾಲಿವುಡ್ ಆ್ಯಕ್ಟರ್ ಪ್ರಿಯಾಂಕಾ ಚೋಪ್ರಾ ಅಂತಹ ಘಟಾನುಘಟಿ ಕಲಾವಿದರ ಸಮಾಗಮ ಈ ಚಿತ್ರಕ್ಕಾಗಿ ಆಗಿರೋದು ಪ್ರಮುಖ ಹೈಲೈಟ್.

RelatedPosts

ರಾಮಾಯಣ ಮೆಗಾ ಸೆಲೆಬ್ರೇಷನ್‌ಗೆ ಕೌಂಟ್‌ಡೌನ್..!

ಪ್ರಭಾಸ್ ಫ್ಯಾನ್ಸ್‌‌ಗೆ ಗುಡ್ ನ್ಯೂಸ್..ಬರ್ತಿದೆಯಾ ಬಾಹುಬಲಿ-3..?

ಪ್ರಜ್ವಲ್ ದೇವರಾಜ್-ರಾಜ್ ಬಿ. ಶೆಟ್ಟಿ ಕರಾವಳಿ ಜುಗಲ್‌ಬಂದಿ!

ಫ್ಯಾನ್ಸ್ ಗೆ ಡಾಲಿ ಕೊಟ್ಟ ಮದರ್ ಪ್ರಾಮಿಸ್ ಟ್ರೈಲರ್ ಗಿಫ್ಟ್‌‌

ADVERTISEMENT
ADVERTISEMENT

ಆ ಪರಮೇಶ್ವರ ಮುಕ್ತಿ ಕೊಡೋ ಅಂತಹ ಜಾಗ ಆಗಿರೋ ಕಾಶಿ ಅರ್ಥಾತ್ ವಾರಣಾಸಿ ಟಚ್ ಇರೋ ಸಿನಿಮಾ ಇದು. ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ, ನಂಬಿಕೆಗಳನ್ನ ಬಹಳ ಚೆನ್ನಾಗಿ ಬ್ಲೆಂಡ್ ಮಾಡಿ ಈ ಸಿನಿಮಾ ಕಟ್ಟುತ್ತಿದ್ದಾರೆ ರಾಜಮೌಳಿ. ರಾಮಾಯಣ ಕೂಡ ಈ ಸಿನಿಮಾದ ಒಂದು ಭಾಗವಾಗಿರಲಿದ್ದು, ವಾರಣಾಸಿ ವರ್ಲ್ಡ್‌ ಎಷ್ಟು ವಿಶಾಲ ಹಾಗೂ ವೈಷ್ಟ್ಯತೆಯಿಂದ ಕೂಡಿದೆ ಅನ್ನೋದು ರಿಲೀಸ್‌ಗೆ ಒಂದು ವರ್ಷ ಮೊದಲೇ ರಿವೀಲ್ ಆಗಿದೆ. ಯೆಸ್.. ವಿದೇಶಿ ಮಾಧ್ಯಮವೊಂದಕ್ಕೆ ನೀಡಿರೋ ಎಕ್ಸ್‌‌ಕ್ಲೂಸಿವ್ ಸಂದರ್ಶನದಲ್ಲಿ ರಾಜಮೌಳಿ ಹಾಗೂ ಬಾಬು, ಪೃಥ್ವಿ, ಪ್ರಿಯಾ ಮುಕ್ತವಾಗಿ ಮಾತನಾಡಿದ್ದಾರೆ.

ಬಾಹುಬಲಿ ಸಿನಿಮಾ ಮಾಡಿದಾಗ ಅದನ್ನ ಎರಡು ಭಾಗಗಳಲ್ಲಿ ಮಾಡಿ ಸುಮಾರು ಐದಾರು ವರ್ಷಗಳ ಕಾಲ ಒಂದೇ ಸಿನಿಮಾಗೆ ಆರ್ಟಿಸ್ಟ್‌‌ಗಳನ್ನ ಲಾಕ್ ಮಾಡಿದ್ದ ಮೌಳಿ, ಆ ನಂತ್ರ ಬಂದಂತಹ ತ್ರಿಬಲ್ ಆರ್ ಚಿತ್ರಕ್ಕೂ ಹಾಗೆಯೇ ಮಾಡಿದ್ರು. ಆದ್ರೆ ಮಹೇಶ್ ಬಾಬು ಸೇರಿದಂತೆ ಅವ್ರ ಫ್ಯಾನ್ಸ್‌ಗೆ ಒಂದು ಆತಂಕ ಎದುರಾಗಿತ್ತು. ಈ ವಾರಣಾಸಿಗಾಘಿ ಎನ್ನೆಷ್ಟು ವರ್ಷ ಲಾಕ್ ಮಾಡ್ತಾರೋ ಅನ್ನೋ ಪ್ರಶ್ನೆಯಿತ್ತು. ಆದ್ರೀಗ ಈ ಸಂದರ್ಶನದಲ್ಲಿ ಅದಕ್ಕೆ ಉತ್ತರ ಸಿಕ್ಕಿದೆ. ವಾರಣಾಸಿ ರನ್ ಟೈಂ 3 ಗಂಟೆ ಕಾಲ ಇರಲಿದೆ. ಇದರ ಯಾವುದೇ ಸೀಕ್ವೆಲ್ ಸಹ ಇರೋದಿಲ್ಲವಂತೆ.

ಅಂದಹಾಗೆ ಟೈಟಲ್ ಟೀಸರ್‌ನಲ್ಲಿ ಮಹೇಶ್ ಬಾಬು ಶ್ರೀರಾಮನ ಅವತಾರದಲ್ಲಿರೋ ದೃಶ್ಯವೊಂದು ವೈಡ್ ಆ್ಯಂಗಲ್‌ನಿಂದ ತೋರಿಸಲಾಗಿತ್ತು. ಆದ್ರೀಗ ರಾಮಾಯಣ ಎಪಿಸೋಡ್ ಬರೋಬ್ಬರಿ 25 ನಿಮಿಷಗಳ ಕಾಲ ಇರಲಿದೆ ಎನ್ನಲಾಗಿದೆ. ಅಲ್ಲಿಗೆ ಸಿನಿಮಾಗೆ ಕಂಪ್ಲೀಟ್‌‌ ಆಗಿ ಎಪಿಕ್ ಟಚ್ ಕೂಡ ಸಿಗ್ತಿದೆ. ಇದು ನವೆಂಬರ್‌ವರೆಗೂ ಚಿತ್ರಿಸಿರೋ 110 ದಿನಗಳ ಶೂಟಿಂಗ್ ಕುರಿತ ಸಂದರ್ಶನವಾಗಿದ್ದು, ಸಖತ್ ಇಂಪ್ರೆಸ್ಸೀವ್ ಅನಿಸಿದೆ.

  • 1300Cr ಬಜೆಟ್.. 2027 ಏಪ್ರಿಲ್ 7ಕ್ಕೆ ವರ್ಲ್ಡ್‌ ವೈಡ್ ತೆರೆಗೆ
  • 2027ರಿಂದ ಕ್ರಿಪೂ7000ಕ್ಕೆ ಟೈಮ್ ಟ್ರಾವೆಲ್.. AI ಇಲ್ವೇ ಇಲ್ಲ
  • ತ್ರೇತಾಯುಗದಿಂದ ಕಲಿಯುಗ.. ಆಫ್ರಿಕಾದಿಂದ ಅಂಟಾರ್ಟಿಕಾ
  • ರಾಜಮೌಳಿ ತಂದೆಯ ಕಥೆ.. ರಾಜಮೌಳಿ ಮಗನೇ ನಿರ್ಮಾಣ

ಯೆಸ್.. ವಾರಣಾಸಿ ಚಿತ್ರದ ಬಜೆಟ್ ಬರೋಬ್ಬರಿ 1300 ಕೋಟಿಗೂ ಅಧಿಕ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಬರೆದ ಕಥೆಗೆ ಸಿನಿಮಾ ರೂಪ ಕೊಡ್ತಿರೋ ತಂದೆಗೆ ಮೌಳಿ ಮಗ ಕಾರ್ತಿಕೇಯನೇ ಬಂಡವಾಳ ಹೂಡಿ ನಿರ್ಮಾಣ ಮಾಡ್ತಿರೋದು ವಿಶೇಷ. ವಾರಣಾಸಿ ಚಿತ್ರದ 2027ರ ಏಪ್ರಿಲ್ 7ಕ್ಕೆ ತೆರೆಗೆ ಬರೋದಾಗಿ ಡೇಟ್ ಅನೌನ್ಸ್ ಆಗಿದ್ದು, 2027ರಿಂದ ಕ್ರಿಸ್ತ ಪೂರ್ವ 7000ನೇ ಇಸವಿ ವರಗೆ ಟೈಮ್ ಟ್ರಾವೆಲ್ ಕೂಡ ಇರಲಿದೆಯಂತೆ.

ಈ ಸಿನಿಮಾದ ಪರಿಮಿತಿ ನೋಡೋದಾದ್ರೆ ಆಫ್ರಿಕಾ ಟು ಅಂಟಾರ್ಟಿಕಾ. ತ್ರೇತಾಯುಗದಿಂದ ಕಲಿಯುಗದವರೆಗೆ ಕವರ್ ಆಗಲಿದೆಯಂತೆ. ಆದ್ರೆ ಇಲ್ಲಿ ಯಾವುದೇ AI ಬಳಸಿಲ್ಲ ಅಂದ್ರೆ ನೀವು ನಂಬಲೇಬೇಕು. ಕಂಪ್ಲೀಟ್ ಆಗಿ ಸ್ಪೆಷಲ್ ಎಫೆಕ್ಟ್ಸ್‌‌ ಹಾಗೂ ಗ್ರಾಫಿಕ್ಸ್‌ನಿಂದ ಬರೋಬ್ಬರಿ ಒಂದು ವರ್ಷದ ಕಾಲ ಕೆಲಸ ಮಾಡಿ ತಯಾರಿಸಲಾಗಿದೆ ಈ ಟೀಸರ್ ಅನ್ನೋದು ಸದ್ಯ ಸಂದರ್ಶನದಲ್ಲಿ ಬಯಲಾಗಿದೆ.

  • ಮಹೇಶ್ v/s ಪೃಥ್ವಿರಾಜ್.. ರುದ್ರ-ಕುಂಭ ಟಗ್ ಆಫ್ ವಾರ್
  • ಪ್ರಪಂಚನ ಹಿಡಿತದಲ್ಲಿ ಇಟ್ಕೊಳ್ಳೋ ಮಾಸ್ಟರ್‌ಮೈಂಡ್ ಕುಂಭ
  • ನಿಗೂಢ ಕಳ್ಳಿ ಮಂದಾಕಿನಿಯಾಗಿ ಪ್ರಿಯಾಂಕಾ ಚೋಪ್ರಾ ನಟನೆ
  • ದ್ವಿಪಾತ್ರದಲ್ಲಿ ಮಹೇಶ್.. ರುದ್ರ & ರಾಮನಾಗಿ ಬಾಬು ಮಿಂಚು

ಮಹೇಶ್ ಬಾಬು ತ್ರಿಶೂಲ ಹಿಡಿದು ಗೂಳಿಯ ಮೇಲೆ ಬರುವ ಸನ್ನಿವೇಶ ಆ ಪರಮೇಶ್ವರ ನಂದಿಯ ಮೇಲೆ ಬರೋದ್ರ ಪ್ರತೀಕವಾಗಿದೆ. ಅಲ್ಲಿಗೆ ರುದ್ರನಾಗಿ ಕಾಣಸಿಗ್ತಾರೆ ಮಹೇಶ್ ಬಾಬು. ಇದಲ್ಲದೆ ಶ್ರೀರಾಮನಾಗಿಯೂ ಕಾಣ್ತಾರೆ. ಸೋ.. ಇಲ್ಲಿ ಬಾಬು ಒಂದಲ್ಲ ಎರಡೆರಡು ಪಾತ್ರಗಳನ್ನ ಪೋಷಿಸುತ್ತಿದ್ದಾರೆ. ಅಲ್ಲದೆ ಫಾದರ್ ಸನ್ ಎಮೋಷನ್ ಕೂಡ ಚಿತ್ರದಲ್ಲಿರಲಿದ್ದು, ಅದು 2027ರ ರುದ್ರ ಹಾಗೂ ತಂದೆಯದ್ದಾ ಅಥ್ವಾ 7000 ವರ್ಷಗಳ ಹಿಂದಿನ ಶ್ರೀರಾಮ-ದಶರಥನ ದೃಶ್ಯಗಳಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಕುಂಭ ಅನ್ನೋ ವಿಲನ್ ಪಾತ್ರ ಸಖತ್ ಪವರ್‌ಫುಲ್ ಆಗಿದ್ದು, ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ ಆ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವ್ರೊಂದು ವ್ಹೀಲ್ ಚೇರ್‌‌ನಲ್ಲಿ ಇಡೀ ದೇಹ ನಿತ್ರಾಣಗೊಂಡಂತೆ ಕಂಡರೂ ಸಹ ತುಂಬಾ ಬುದ್ಧಿವಂತ ಹಾಗೂ ಚಾಣಾಕ್ಷನ ಪಾತ್ರ ನಿಭಾಯಿಸಿದ್ದಾರೆ. ಅದಕ್ಕಾಗಿ ಅವ್ರು ಸಿಕ್ಕಾಪಟ್ಟೆ ಎಫರ್ಟ್ ಹಾಕಿದ್ದು, ಚೇರ್ ಕೂಡ ಅಟ್ರ್ಯಾಕ್ಷನ್ ಆಗಿರಲಿದೆ ಅಂತಿದ್ದಾರೆ. ಇಡೀ ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಕೊಳ್ಳೋ ಮಹದಾಸೆ ಇರೋ ಮಾಸ್ಟರ್‌ಮೈಂಡ್ ಈ ಕುಂಭ. ಆ ಕುಂಭನಿಂದ ಪ್ರಪಂಚವನ್ನ ಹೇಗೆ ಕಾಪಾಡ್ತಾನೆ ರುದ್ರ ಅನ್ನೋದೇ ಕಥೆ.

ಇನ್ನೂ ಬರೋಬ್ಬರಿ 6 ವರ್ಷಗಳ ನಂತ್ರ ಇಂಡಿಯನ್ ಸಿನಿಮಾ ಮಾಡ್ತಿರೋ ಪ್ರಿಯಾಂಕಾ ಚೋಪ್ರಾ, ತಮ್ಮ ಪಾತ್ರಕ್ಕೆ ಬಂದಂತಹ ಪ್ರಶಂಸೆ, ಪ್ರತಿಕ್ರಿಯೆಗಳಿಗೆ ಅಕ್ಷರಶಃ ಬೆರಗಾಗಿ ಹೋಗಿದ್ದಾರೆ. ಅಂದಹಾಗೆ ಇದೇ ಪ್ರಿಯಾಂಕಾರ ಚೊಚ್ಚಲ ಸೌತ್ ಇಂಡಿಯನ್ ಮೂವಿ. ಹಾಲಿವುಡ್ ಸೊಸೆ ಆದ ಬಳಿಕ ಹಾಲಿವುಡ್‌‌ನಲ್ಲೇ ಸೆಟಲ್ ಆಗಿದ್ದು, ರಾಜಮೌಳಿ ಚಿತ್ರಕ್ಕಾಗಿ ಮಂದಾಕಿನಿ ಅನ್ನೋ ನಿಗೂಢವಾದ ಕಳ್ಳಿಯ ಪಾತ್ರ ನಿಭಾಯಿಸಿದ್ದಾರಂತೆ.

  • ಒಂದೇ ಒಂದು ದೃಶ್ಯಕ್ಕೆ 94 ಟೇಕ್.. ಊಟಕ್ಕಿಲ್ಲ 5ನಿಮಿಷ ಬ್ರೇಕ್
  • ಮಸೈಮರಾದ ವೈಲ್ಡ್ ಅನಿಮಲ್ಸ್ ನಡುವೆ ರೋಚಕ ಶೂಟಿಂಗ್..!
  • ಬಾಂಗ್ ಜೂನ್ ಹೋ ರೀತಿ ರೂಟ್ಸ್‌ನ ಬಿಡದ ರಾಜಮೌಳಿ
  • ಸೆಟ್‌ಗೆ ನೋ ಫೋನ್ಸ್.. ಡ್ರೋಣ್‌‌ಗಳಿಂದ ಹದ್ದಿನ ಕಣ್ಗಾವಲು

ಒರಿಸ್ಸಾ, ಕೀನ್ಯಾ ಸೇರಿದಂತೆ ಆಫ್ರಿಕಾದ ದಟ್ಟವಾದ ಕಾಡುಗಳಲ್ಲಿ ವಾರಣಾಸಿ ಸಿನಿಮಾನ ಚಿತ್ರಿಸಲಾಗ್ತಿದೆಯಂತೆ. ಅಂದಹಾಗೆ ವಿಶ್ವದ ಬಹುದೊಡ್ಡ ವನ್ಯಜೀವಿ ಸಂರಕ್ಷಣಾಧಾಮ ಅಂತ ಕರೆಯಲ್ಪಡುವ ಮಸೈಮರಾದಲ್ಲಿ ವಾರಣಾಸಿ ಶೂಟಿಂಗ್ ಕಂಡಿದೆ. ಅಲ್ಲಿ ವೈಲ್ಡ್ ಅನಿಮಲ್ಸ್ ನಡುವೆ ಚಿತ್ರಿಸೋಕೆ ತುಂಬಾ ಕಷ್ಟ ಕೂಡ ಆಗಿದೆಯಂತೆ. ಅದ್ರಲ್ಲೂ ಆನೆಗಳ ಗುಂಪು ಅಲ್ಲಿಂದ ದೂರಕ್ಕೆ ಸರಿದ ಬಳಿಕ ಎಷ್ಟೋ ಸಲ ಡೈಲಾಗ್ಸ್ ಹೇಳಿರೋ ನಿದರ್ಶನ ಕೂಡ ಇದೆಯಂತೆ.

ಒಂದು ದಿನ ಒಂದು ದೃಶ್ಯಕ್ಕಾಗಿ ಒಂದಲ್ಲ ಎಡರಲ್ಲ ಬರೋಬ್ಬರಿ 74 ಟೇಕ್ಸ್ ತೆಗೆದುಕೊಳ್ಳಲಾಯಿತಂತೆ. ಆ ದಿನ ಅದು ಓಕೆ ಆಗದ ಕಾರಣ ಮರು ದಿನ ಕೂಡ ಚಿತ್ರಿಸಲಾಯಿತಂತೆ. ಅಷ್ಟೊಂದು ಪರ್ಫೆಕ್ಷನಿಸ್ಟ್ ಮಿಸ್ಟರ್ ರಾಜಮೌಳಿ. ಅಲ್ಲದೆ, ಒಂದು ವರ್ಷ ಕಾಲ ರಿಹರ್ಸಲ್‌‌‌ ನಡೆಸಿ ಚಿತ್ರೀಕರಣಕ್ಕೆ ಹೋದಾಗಲೂ ಹೀಗೆ ಆಗಿರೋದು ಅಚ್ಚರಿ. ಇನ್ನು ಮಹೇಶ್ ಬಾಬು ಹಾಗೂ ಪೃಥ್ವಿರಾಜ್‌ಗೆ ಎಷ್ಟೋ ಸಲ ಊಟಕ್ಕೆ ಅಂತ 5 ನಿಮಿಷ ಕೂಡ ಟೈಮ್ ಸಿಗ್ತಿರಲಿಲ್ಲವಂತೆ.

ರಾಜಮೌಳಿಗೆ ಜೇಮ್ಸ್ ಕ್ಯಾಮೆರಾನ್ ಒಂಥರಾ ಗುರುಗಳಿದ್ದಂತೆ. ಆದ್ರೆ ಮೌಳಿ ಪ್ರಭಾವಿತರಾಗಿರೋದು ಸೌತ್ ಕೊರಿಯನ್ ಡೈರೆಕ್ಟರ್ ಬಾಂಗ್ ಜೂನ್ ಹೋ ಸಿನಿಮಾಗಳಿಂದ ಅನ್ನೋದು ಇಂಟರೆಸ್ಟಿಂಗ್. ಯಾಕಂದ್ರೆ ಆತ ಅವ್ರ ಕಲ್ಚರ್ ರೂಟ್ಸ್‌ನ ಬಿಟ್ಟು ಸಿನಿಮಾ ಮಾಡಲ್ಲ. ಸದ್ಯ ರಾಜಮೌಳಿ ಕೂಡ ಅದೇ ಫಾರ್ಮುಲಾ ಅಪ್ಲೈ ಮಾಡಿರೋದು ವಿಶೇಷ. ಇನ್ನು ವಾರಣಾಸಿ ಸೆಟ್‌ಗೆ ಸೆಲ್ ಫೋನ್ಸ್ ಎಂಟ್ರಿ ನಿಷಿದ್ಧವಂತೆ. ಯಾರಾದ್ರೂ ಸಿನಿಮಾದ ಚಿತ್ರೀಕರಣವನ್ನ ಚಿತ್ರಿಸಿದ್ರೆ ಏನು ಗತಿ ಅಂತ ಅಂಥವ್ರ ಮೇಲೆ ಡ್ರೋಣ್ ಕ್ಯಾಮೆರಾಗಳು ಹದ್ದಿನ ಕಣ್ಣು ಇಟ್ಟಿವೆಯಂತೆ. ಒಟ್ಟಾರೆ ಮೌಳಿ ಈ ಬಾರಿ ತಮ್ಮ ಕರಿಯರ್‌‌ನಲ್ಲೇ ದಿ ಬೆಸ್ಟ್ ಪ್ರಾಡಕ್ಟ್ ಕೊಡೋ ಧಾವಂತದಲ್ಲಿರೋದು ಮಾತ್ರ ಸ್ಪಷ್ಟ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 27T190823.159

‘ನಿಮ್ಮ ಚೇಲಾಗಳಿಗೆ ಹೆದರಲ್ಲ’: ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಪ್ರದೀಪ್ ಈಶ್ವರ್ ಕಿಡಿ

by ಶಾಲಿನಿ ಕೆ. ಡಿ
June 27, 2026 - 7:09 pm
0

Untitled design 2026 06 27T181742.561

ರಾಮಾಯಣ ಮೆಗಾ ಸೆಲೆಬ್ರೇಷನ್‌ಗೆ ಕೌಂಟ್‌ಡೌನ್..!

by ಶಾಲಿನಿ ಕೆ. ಡಿ
June 27, 2026 - 6:19 pm
0

Untitled design 2026 06 27T180118.150

ಗಂಡ-ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಬಂದಿದ್ದ ಮಹಿಳೆ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

by ಶಾಲಿನಿ ಕೆ. ಡಿ
June 27, 2026 - 6:03 pm
0

Untitled design 2026 06 27T172714.549

ಪ್ರಭಾಸ್ ಫ್ಯಾನ್ಸ್‌‌ಗೆ ಗುಡ್ ನ್ಯೂಸ್..ಬರ್ತಿದೆಯಾ ಬಾಹುಬಲಿ-3..?

by ಶಾಲಿನಿ ಕೆ. ಡಿ
June 27, 2026 - 5:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 27T181742.561
    ರಾಮಾಯಣ ಮೆಗಾ ಸೆಲೆಬ್ರೇಷನ್‌ಗೆ ಕೌಂಟ್‌ಡೌನ್..!
    June 27, 2026 | 0
  • Untitled design 2026 06 27T172714.549
    ಪ್ರಭಾಸ್ ಫ್ಯಾನ್ಸ್‌‌ಗೆ ಗುಡ್ ನ್ಯೂಸ್..ಬರ್ತಿದೆಯಾ ಬಾಹುಬಲಿ-3..?
    June 27, 2026 | 0
  • Web Photo Editor (70)
    ಪ್ರಜ್ವಲ್ ದೇವರಾಜ್-ರಾಜ್ ಬಿ. ಶೆಟ್ಟಿ ಕರಾವಳಿ ಜುಗಲ್‌ಬಂದಿ!
    June 27, 2026 | 0
  • Web Photo Editor (72)
    ಫ್ಯಾನ್ಸ್ ಗೆ ಡಾಲಿ ಕೊಟ್ಟ ಮದರ್ ಪ್ರಾಮಿಸ್ ಟ್ರೈಲರ್ ಗಿಫ್ಟ್‌‌
    June 27, 2026 | 0
  • Web Photo Editor (62)
    ವಂಚನೆ ಕೇಸ್: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ಹಿಂಪಡೆದ ಜಾಕ್ವೆಲಿನ್ ಫರ್ನಾಂಡಿಸ್
    June 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version