ಟಾಲಿವುಡ್‌ನ ಟಾಪ್ ಫೈವ್ ಶ್ರೀಮಂತ ಸ್ಟಾರ್ಸ್ ಯಾಱರು ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದೇ ಇರುತ್ತೆ. ಇತ್ತೀಚೆಗೆ ನಡೆದ ಸರ್ವೆಯೊಂದರ ಪ್ರಕಾರ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ತಾರಕ್, ಪ್ರಿನ್ಸ್, ಪ್ರಭಾಸ್‌ನ ಕೂಡ ಹಿಂದಿಕ್ಕಿದ್ದಾರೆ. ಹಾಗಾದ್ರೆ ಯಾರ ಬಳಿ ಎಷ್ಟು ಕೋಟಿ ಇದೆ..? ಟಾಪ್ ಫೈವ್ ಟಾಲಿವುಡ್ ಸ್ಟಾರ್ಸ್ ಯಾರು ಅನ್ನೋದಕ್ಕೆ ಉತ್ತರ ಇಲ್ಲಿದೆ.
ಯಾವ ಸ್ಟಾರ್‌ಗೆ ಎಷ್ಟು ಜನ ಫ್ಯಾನ್ಸ್ ಇದ್ದಾರೆ ಅನ್ನೋದಕ್ಕಿಂತ ಯಾವ ಸ್ಟಾರ್ ಬಳಿ ಎಷ್ಟು ಕೋಟಿ ದುಡ್ಡಿದೆ ಅನ್ನೋದು ಹೆಚ್ಚಿನ ಚರ್ಚೆಗೆ ಗ್ರಾಸವಾಗುತ್ತದೆ. ಅದರಲ್ಲೂ ಫ್ಯಾನ್ಸ್ ಜೊತೆ ಶ್ರೀಸಾಮಾನ್ಯರಿಗೂ ಕೂಡ ಯಾವ ಸ್ಟಾರ್ ನಂಬರ್ ಒನ್ ಶ್ರೀಮಂತ ಅಂತ ತಿಳಿದುಕೊಳ್ಳುವ ಕೌತುಕತೆ ಇದ್ದೇ ಇರುತ್ತದೆ. ಅಂದಹಾಗೆ ಇತ್ತೀಚೆಗೆ ಟೈಮ್ಸ್ ಗ್ರೂಪ್ ನಡೆಸಿರೋ ಸರ್ವೆ ಒಂದರ ಪ್ರಕಾರ ತೆಲುಗು ಚಿತ್ರರಂಗದ ಟಾಪ್ ಫೈವ್ ಶ್ರೀಮಂತ ನಟರ ಪಟ್ಟಿ ಇಲ್ಲಿದೆ ನೋಡಿ.
ಆ ಸರ್ವೆ ಪ್ರಕಾರ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ನಂಬರ್ ಒನ್ ಶ್ರೀಮಂತ ಅನಿಸಿಕೊಂಡಿದ್ದಾರೆ. 2800 ಕೋಟಿ ರೂಪಾಯಿಗಳ ಒಡೆಯ ಈ ಚಿರು ತನಯ. ಅಪೋಲೋ ಗ್ರೂಪ್ ನ ವೈಸ್ ಚೇರ್ಮನ್ ಮಗಳು ಉಪಾಸನಾರನ್ನ ವರಿಸಿರೋ ಚರಣ್‌ಗೆ ಮಗಧೀರ ಚಿತ್ರದ ಬಳಿಕ ಲಕ್ಕೇ ಬದಲಾಯ್ತು. ಅದ್ರಲ್ಲೂ ತಂದೆ ಚಿರಂಜೀವಿ ಆಸ್ತಿ ಕೂಡ ಇವರಿಗೇ ಸಲ್ಲಲಿದೆ. ಹಾಗಾಗಿ ಆಂಧ್ರದ ಅತಿ ಶ್ರೀಮಂತ ಸ್ಟಾರ್ ನಟನ ಪಟ್ಟಿಯಲ್ಲಿ ಚರಣ್ ಹೆಸರು ರಾರಾಜಿಸ್ತಿದೆ.
ಹಾಗಾದ್ರೆ ಯಾವ್ಯಾವ ಸ್ಟಾರ್ ಎಷ್ಟೆಷ್ಟು ಕೋಟಿ ಹೊಂದಿದ್ದಾರೆ..? ಟಾಪ್ ಫೈವ್‌ನಲ್ಲಿರೋ ಸೂಪರ್ ಸ್ಟಾರ್ಸ್ ಯಾರು ಅಂತೀರಾ..? ಈ ಗ್ರಾಫಿಕಲ್ ಟೇಬಲ್ ಒಮ್ಮೆ ನೋಡಿ.
ಇವರೇ ನೋಡಿ ಟಾಲಿವುಡ್ ಶ್ರೀಮಂತ ಸ್ಟಾರ್ಸ್
ನಟನಹೆಸರು | ಒಟ್ಟುಆಸ್ತಿ | ಸ್ಥಾನ |
ರಾಮ್ ಚರಣ್ | 2800 ಕೋಟಿ | ಮೊದಲು |
ಜೂ. ಎನ್‌ಟಿಆರ್ | 821 ಕೋಟಿ | ಎರಡನೇ |
ಮಹೇಶ್ ಬಾಬು | 674 ಕೋಟಿ | ಮೂರನೇ |
ಅಲ್ಲು ಅರ್ಜುನ್ | 596 ಕೋಟಿ | ನಾಲ್ಕನೇ |
ಪ್ರಭಾಸ್ | 431 ಕೋಟಿ | ಐದನೇ |
ಎರಡನೇ ಸ್ಥಾನದಲ್ಲಿ ಜೂನಿಯರ್ ಎನ್‌ಟಿಆರ್, ಮೂರನೇ ಸ್ಥಾನದಲ್ಲಿ ಪ್ರಿನ್ಸ್ ಮಹೇಶ್ ಬಾಬು, ನಾಲ್ಕನೇ ಸ್ಥಾನವನ್ನು ಅಲ್ಲು ಅರ್ಜುನ್ ಅಲಂಕರಿಸಿದ್ದಾರೆ. ಪ್ರಭಾಸ್ ಇಷ್ಟೆಲ್ಲಾ ಸಿನಿಮಾಗಳನ್ನ ಮಾಡಿದ್ರೂ ಕೂಡ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಂದಹಾಗೆ ಇವರೆಲ್ಲಾ ಇದನ್ನು ಬರೀ ಸಿನಿಮಾಗಳಿಂದಲೇ ದುಡಿದದ್ದು ಅಲ್ಲ. ಸಿನಿಮೇತರ ಬ್ಯುಸಿನೆಸ್ ಕೂಡ ಇದೆ. ಹಾಗಾಗಿಯೇ ಟ್ಯಾಕ್ಸ್ ಕಟ್ಟುವ ಮೂಲಕ ಇಷ್ಟು ಬೃಹತ್ ಮೊತ್ತದ ಆಸ್ತಿ ಹೊಂದಿರೋದು ಇಂಟರೆಸ್ಟಿಂಗ್. ಆದ್ರೆ ಈ ಸರ್ವೆ ಎಷ್ಟರ ಮಟ್ಟಿಗೆ ಸರಿಯಿದೆ ಅನ್ನೋದು ಕೂಡ ಪ್ರಶ್ನೆಯಾಗಿ ಕಾಡಲಿದೆ.