ದಕ್ಷಿಣ ಭಾರತೀಯ ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ರಿಯಲ್ ಲೈಫ್ ಕಪಲ್ ಸೂರ್ಯ ಮತ್ತು ಜ್ಯೋತಿಕಾ ದಾಂಪತ್ಯಕ್ಕೆ ಈಗ 20 ವರ್ಷಗಳ ಸಂಭ್ರಮ. ಹಿಂದೂ ಸಂಪ್ರದಾಯದ ಸೂರ್ಯ ಹಾಗೂ ಮುಸ್ಲಿಂ ಮೂಲದ ಜ್ಯೋತಿಕಾ, ಅಂದು ಸಂಪ್ರದಾಯಬದ್ಧವಾಗಿ ಮದುವೆಯಾಗಿದ್ದರು. ಆದ್ರೆ, 20 ವರ್ಷಗಳ ಯಶಸ್ವಿ ದಾಂಪತ್ಯದ ನಂತರ ಈ ಜೋಡಿ ಈಗ ಚರ್ಚ್ನಲ್ಲಿ ಮತ್ತೊಮ್ಮೆ ಮದುವೆಯಾಗುವ ಮೂಲಕ ಪ್ರೀತಿ ಶಾಶ್ವತ ಅನ್ನೋ ಸಂದೇಶ ಸಾರಿದ್ದಾರೆ.
ಸೂರ್ಯ-ಜ್ಯೋತಿಕಾ ‘ದಿ ಸೀಕ್ವೆಲ್’.. ಮಕ್ಕಳ ಮುಂದೆ ಮರುಮದುವೆ
ಧರ್ಮದ ಗಡಿ ಮೀರಿ 20 ವರ್ಷಗಳ ಪ್ರೀತಿಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕಾರ
1999ರಲ್ಲಿ ಶುರುವಾದ ಪ್ರೀತಿ.. 20 ವರ್ಷಗಳ ಬಳಿಕವೂ ಬದಲಾಗಿಲ್ಲ
ಲವ್ And ವಾರ್ ಚರ್ಚ್ ನಲ್ಲಿ ಸೂರ್ಯ-ಜ್ಯೋತಿಕಾ ಕಲ್ಯಾಣ..!
7 ಸೂಪರ್ಹಿಟ್ ಸಿನಿಮಾಗಳಲ್ಲಿ ಒಂದಾಗಿ ನಟಿಸಿ ಬೆಳ್ಳಿತೆರೆಯನ್ನು ರಂಜಿಸಿದ್ದ ಸೂರ್ಯ ಜ್ಯೋತಿಕ ಜೋಡಿ, ಸೆಪ್ಟೆಂಬರ್ 11, 2006 ರಂದು ಹಿಂದೂ ಸಂಪ್ರದಾಯಬದ್ಧವಾಗಿ ಮದುವೆಯಾಗಿದ್ದರು. ಆದರೆ, 20 ವರ್ಷಗಳ ಈ ಯಶಸ್ವಿ ಪಯಣಕ್ಕೆ ಈಗ ಚರ್ಚ್ನಲ್ಲಿ ಮತ್ತೊಮ್ಮೆ ಮದುವೆಯಾಗುವ ಮೂಲಕ ಹೊಸ ಮೆರುಗು ನೀಡಿದ್ದಾರೆ. ಎಸ್, 1999ರಲ್ಲಿ ಸಿನಿಮಾವೊಂದರ ಸೆಟ್ನಲ್ಲಿ ಶುರುವಾದ ಸೂರ್ಯ-ಜ್ಯೋತಿಕಾ ಪ್ರೇಮಕಥೆಗೆ ಇಂದಿಗೆ 20 ವರ್ಷಗಳ ಸಂಭ್ರಮ. ಧರ್ಮ ಬೇರೆ ಆದರೂ ಪ್ರೀತಿಸಿ ಮದುವೆ ಆದ ಈ ಸುಂದರ ಬಂಧಕ್ಕೆ 20 ವರ್ಷ ತುಂಬಿದ ಶುಭಸಮಯದಲ್ಲಿ ಈ ಜೋಡಿ ‘ದಿ ಸೀಕ್ವೆಲ್’ ಹೆಸರಿನಲ್ಲಿ ಚರ್ಚ್ ಒಂದರಲ್ಲಿ ಪ್ರಮಾಣವಚನಗಳನ್ನು ನವೀಕರಿಸಿಕೊಂಡಿದೆ. ಬಿಳಿ ಟಕ್ಸಿಡೋ ಸೂಟ್ನಲ್ಲಿ ಸೂರ್ಯ ಕಾಯುತ್ತಿದ್ದರೆ, ವೈಟ್ ವೆಡ್ಡಿಂಗ್ ಗೌನ್ ಧರಿಸಿ ಬಂದ ಜ್ಯೋತಿಕಾರನ್ನು ನೋಡಿ ಸೂರ್ಯ ಕ್ಷಣಕಾಲ ಭಾವುಕರಾದರು. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ಪ್ರೀತಿಸಿದ್ರೆ ಹೀಗೆ ಪ್ರೀತಿಸಬೇಕು ಎಂದು ನೆಟ್ಟಿಗರು ಹೇಳ್ತಿದ್ದಾರೆ
ಹೂಮಳೆಯ ನಡುವೆ ಮಕ್ಕಳಾದ ದಿಯಾ ಮತ್ತು ದೇವ್ ಸಾಕ್ಷಿಯಾಗಿ ಈ ಮರು ಮದುವೆ ನಡೆದಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಜ್ಯೋತಿಕಾ, “ಇದು ಪರಿಪೂರ್ಣ ದಾಂಪತ್ಯದ ಸಂಭ್ರಮವಲ್ಲ, ಬದಲಿಗೆ ನಮ್ಮ ನಡುವಿನ ಅಪೂರ್ಣತೆ, ತ್ಯಾಗ, ಹೊಂದಾಣಿಕೆ ಮತ್ತು ನಿಸ್ವಾರ್ಥ ಪ್ರೀತಿಯ ಆಚರಣೆ. ಪ್ರತಿದಿನ ಬೆಳಿಗ್ಗೆ ನನ್ನನ್ನು ರಕ್ಷಿಸುವ ವ್ಯಕ್ತಿಯ ತೋಳುಗಳಲ್ಲಿ ಎಚ್ಚರಗೊಳ್ಳುವುದು ನನ್ನ ಭಾಗ್ಯ” ಎಂದು ಪತಿ ಸೂರ್ಯಗೆ ರೊಮ್ಯಾಂಟಿಕ್ ಸಂದೇಶ ರವಾನಿಸಿದ್ದಾರೆ.
ವೈಯಕ್ತಿಕ ಜೀವನದಲ್ಲಿ 20 ವರ್ಷಗಳ ಪ್ರೀತಿಯ ಬಂಧವನ್ನು ಸಂಭ್ರಮಿಸುತ್ತಿರುವ ಸೂರ್ಯ, ವೃತ್ತಿಜೀವನದಲ್ಲೂ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಜಿತು ಮಾಧವನ್ ಅವರ ‘ಸೀನ್’ ಚಿತ್ರ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಟಿ.ಜೆ. ಜ್ಞಾನವೇಲ್ ಸಿನಿಮಾಗಳಿಗೆ ಸೂರ್ಯ ಕೈಜೋಡಿಸಿದ್ದಾರೆ. ಮತಾಂತರ ಅಥವಾ ಧರ್ಮಗಳ ಗಡಿ ಮೀರಿ ತಮ್ಮ ದಾಂಪತ್ಯದ ‘ದಿ ಸೀಕ್ವೆಲ್’ ಬರೆದ ಈ ಜೋಡಿಗೆ ಪ್ರಪಂಚದಾದ್ಯಂತ ಇರುವ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಪ್ರೀತಿ, ತ್ಯಾಗ ಮತ್ತು ಪರಸ್ಪರ ಗೌರವವಿದ್ದರೆ ಯಾವುದೇ ಧರ್ಮ, ಯಾವುದೇ ವ್ಯತ್ಯಾಸ ದಾಂಪತ್ಯಕ್ಕೆ ಅಡ್ಡಿಯಾಗಲ್ಲ ಅನ್ನೋದಕ್ಕೆ ಸೂರ್ಯ-ಜ್ಯೋತಿಕಾ ಜೋಡಿಯೇ ಬೆಸ್ಟ್ ಎಕ್ಸಾಂಪಲ್. ಈ ಮುದ್ದಾದ ಜೋಡಿಗೆ ನಮ್ಮ ಕಡೆಯಿಂದಲೂ ಹ್ಯಾಪಿ 20ತ್ ವೆಡ್ಡಿಂಗ್ ಆ್ಯನಿವರ್ಸರಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





