ಮಾಜಿ ಸಂಸದೆ , ನಟಿ ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ಇಂದು (ಮಾರ್ಚ್ 16) ಹಬ್ಬದ ಸಂಭ್ರಮ. ಅವರ ಮೊಮ್ಮಗನ ನಾಮಕರಣ ಮಹೋತ್ಸವವನ್ನು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಆಚರಿಸಲಾಗುತ್ತಿದೆ. ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಸೊಸೆ ಅವಿವಾ ಬಿದಪ್ಪ ಅವರ ಗಂಡು ಮಗುವಿಗೆ ‘ಅ’ ಅಕ್ಷರದಿಂದ ಹೆಸರಿಡಲಾಗುವುದು. ನಟ ದರ್ಶನ್ ಸಹ ಆಗಮಿಸುವ ನಿರೀಕ್ಷೆ ಇದೆ.
ಕಳೆದ ಕೆಲವು ದಿನಗಳಿಂದ ಸುಮಲತಾ ಮತ್ತು ದರ್ಶನ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದು, ಇಬ್ಬರೂ ಸೇರಿದಂತೆ ಹಲವರನ್ನು ಇನ್ಸ್ಟಾಗ್ರಾಂನಿಂದ ಅನ್ಫಾಲೋ ಮಾಡಿದ್ದರು.ಅದಕ್ಕೆ ಪ್ರತಿಯಾಗಿ, ಸುಮಲತಾ ಸಹ ಇನ್‌ಸ್ಟಾಗ್ರಾಂನಲ್ಲಿ ಪರೋಕ್ಷವಾದ ಸುಭಾಷಿತಗಳ ಪೋಸ್ಟ್‍ಗಳುನ್ನು ಹಂಚಿಕೊಂಡು ಪರೋಕ್ಷವಾಗಿ ದರ್ಶನ್‌ಗೆ ಟಾಂಗ್ ನೀಡಿದ್ದರು. ದರ್ಶನ್ ಹಾಗೂ ಸುಮಲತಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗೆ ಈ ಬೆಳವಣಿಗೆ ಪುಷ್ಟಿ ನೀಡಿತ್ತು.ಆದರೆ, ಸುಮಲತಾ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದರು, “ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ. ದರ್ಶನ್ ಇನ್ನೂ ನನ್ನ ಮಗನೇ” ಎಂದು.
ದರ್ಶನ್ ಅವರ ‘ಡೆವಿಲ್’ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಮುಗಿದಿದ್ದು, ಇಂದು ಅವರಿಗೆ ಯಾವುದೇ ಶೂಟಿಂಗ್ ಇಲ್ಲ. ಹಿಂದಿನ ಸಂದರ್ಭಗಳಲ್ಲಿ, ಸುಮಲತಾ ಅವರ ಕುಟುಂಬದ ಎಲ್ಲಾ ಮುಖ್ಯ ಕಾರ್ಯಕ್ರಮಗಳಿಗೆ ದರ್ಶನ್ ಹಾಜರಾಗಿದ್ದರು. ಅಭಿಷೇಕ್-ಅವಿವಾ ಮದುವೆ, ರಾಜಕೀಯ ಸಭೆಗಳು, ಮತ್ತು ಸುಮಲತಾ ಅವರ ಮಂಡ್ಯ ಲೋಕಸಭೆ ಚುನಾವಣಾ ಪ್ರಚಾರದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. “ದರ್ಶನ್ ಇಲ್ಲದೆ ನಮ್ಮ ಮನೆಯ ಶುಭಕಾರ್ಯಗಳು ಪೂರ್ಣವಾಗುವುದಿಲ್ಲ” ಎಂದು ಸುಮಲತಾ ಹೇಳಿದ್ದ ಉದಾರಣೆಗಳು ಇಂದು ಪುನಃ ಸ್ಮರಣೆಗೆ ಬಂದಿವೆ.
ದರ್ಶನ್ ಸಮಾರಂಭಕ್ಕೆ ಬಂದರೆ, ಇಬ್ಬರ ನಡುವಿನ ಸಂಬಂಧದಲ್ಲಿ ಯಾವುದೇ ಮನಸ್ಥಾಪ ಇಲ್ಲವೆಂದು ಊಹಿಸಬಹುದು. ಆದರೆ ದರ್ಶನ್, ನಾಮಕರಣಕ್ಕೆ ಗೈರುಹಾಜರಿಯಾದಲ್ಲಿ, ವೈಮನಸ್ಯದ ಸುದ್ದಿಗಳು ಬಲಪಡುವ ಸಾಧ್ಯತೆ ಇದೆ.
ಸುಮಲತಾ ಅಂಬರೀಶ್ ಅವರ ಮೊಮ್ಮಗನ ಹೆಸರು ಅಧಿಕೃತವಾಗಿ ಇಂದೇ ಪ್ರಕಟವಾಗಲಿದೆ. ಕುಟುಂಬದ ಪರಂಪರೆಯಂತೆ ‘ಅ’ ಅಕ್ಷರದಿಂದ ಹೆಸರಿಡಲಾಗುವುದು. ಅಂಬರೀಶ್ ಮತ್ತು ಸುಮಲತಾ ಅವರ ಪರಿವಾರವು ಕನ್ನಡ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗಣ್ಯ ಸ್ಥಾನವನ್ನು ಹೊಂದಿದೆ.
ನಾಮಕರಣ ಮಹೋತ್ಸವದ ಹಿಂದೆ ಸುಮಲತಾ ಮತ್ತು ದರ್ಶನ್‍ರ ಸಂಬಂಧದ ಸ್ಥಿತಿ ಎಲ್ಲರ ಆಸಕ್ತಿಯ ಕೇಂದ್ರವಾಗಿದೆ. ಸುಮಲತಾ ಅವರು ಮಂಡ್ಯ ಲೋಕಸಭೆ ಚುನಾವಣೆ ಗೆಲುವಿನಲ್ಲಿ ದರ್ಶನ್ ಪಾತ್ರ ಮಹತ್ವದ್ದಾಗಿದೆ. ಒಂದೊಮ್ಮೆ ಸುಮಲತಾ ಹಾಗೂ ದರ್ಶನ್ ದೂರದಲ್ಲಿ, ಅದು ಸುಮಲತಾಗೆ ರಾಜಕೀಯವಾಗಿ ನಷ್ಟವಾಗುವ ಸಾಧ್ಯತೆ ಇದೆ.